ಭಾರತದಲ್ಲೇ ಮೊದಲ ಹೋಂಡಾ ಫೋರ್ಜಾ 300 ಸ್ಕೂಟರ್ ಮಾರಾಟಕ್ಕೆ ಅಧಿಕೃತ ಚಾಲನೆ

ಹೋಂಡಾ ಬಿಗ್‌ವಿಂಗ್ ವಿಭಾಗವು ಭಾರತದಲ್ಲಿ ಪ್ರೀಮಿಯಂ ಸ್ಕೂಟರ್‌ಗಳ ಮಾರಾಟವನ್ನು ಹೆಚ್ಚಿಸುತ್ತಿದ್ದು, ಯುರೋಪ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಫೋರ್ಜಾ 300 ಮ್ಯಾಕ್ಸಿ ಸ್ಕೂಟರ್ ಅನ್ನು ಭಾರತಕ್ಕೂ ಪರಿಚಯಿಸಿದೆ.

ಭಾರತದಲ್ಲೇ ಮೊದಲ ಹೋಂಡಾ ಫೋರ್ಜಾ 300 ಸ್ಕೂಟರ್ ಮಾರಾಟಕ್ಕೆ ಅಧಿಕೃತ ಚಾಲನೆ

ಹೊಸ ಫೋರ್ಜಾ 300 ಸ್ಕೂಟರ್ ಮಾದರಿಯು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿಲ್ಲವಾದರೂ ಗ್ರಾಹಕರ ಬೇಡಿಕೆಯ ಮೇರೆಗೆ ಸಿಬಿಯು ನೀತಿಯಡಿ ಆಮದು ಮಾಡಿಕೊಳ್ಳಲಾಗಿದ್ದು, ಮೊದಲ ಹಂತವಾಗಿ ಒಟ್ಟು 4 ಯುನಿಟ್ ಮಾರಾಟ ಮಾಡಲಾಗುತ್ತಿದೆ. ಹೊಸ ಸ್ಕೂಟರ್ ಮಾದರಿಯು ಸ್ಪೋರ್ಟ್ ಬೈಕ್‌ಗಳಿಂತಲೂ ಬಲಿಷ್ಠ ಎಂಜಿನ್ ಜೊತೆಗೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದ್ದು, ವಿನೂತನ ವಿನ್ಯಾಸದ ಮೂಲಕ ಇತರೆ ಸ್ಕೂಟರ್‌ಗಳಿಂತಲೂ ವಿಭಿನ್ನವಾಗಿದೆ.

ಭಾರತದಲ್ಲೇ ಮೊದಲ ಹೋಂಡಾ ಫೋರ್ಜಾ 300 ಸ್ಕೂಟರ್ ಮಾರಾಟಕ್ಕೆ ಅಧಿಕೃತ ಚಾಲನೆ

ದೆಹಲಿ ಮೂಲದ ಉದ್ಯಮಿಯೊಬ್ಬರು ಇದೀಗ ಫೋರ್ಜಾ 300 ಸ್ಕೂಟರಿನ ಮೊದಲ ಯುನಿಟ್ ಅನ್ನು ಖರೀದಿ ಮಾಡಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಸ್ಕೂಟರ್‌ಗಳನ್ನು ಮಾರಾಟ ಮಾಡುವ ಬಗ್ಗೆ ಹೋಂಡಾ ಮೋಟಾರ್‌ಸೈಕಲ್ ವಿಶ್ವಾಸ ವ್ಯಕ್ತಪಡಿಸಿದೆ.

ಭಾರತದಲ್ಲೇ ಮೊದಲ ಹೋಂಡಾ ಫೋರ್ಜಾ 300 ಸ್ಕೂಟರ್ ಮಾರಾಟಕ್ಕೆ ಅಧಿಕೃತ ಚಾಲನೆ

ಯುರೋ-5 ವೈಶಿಷ್ಟ್ಯತೆ ಹೊಂದಿರುವ ಫೋರ್ಜಾ 300 ಸ್ಕೂಟರ್ ಮಾದರಿಯು ಯುರೋಪಿನ್ ಪ್ರಮುಖ ಮಾರುಕಟ್ಟೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಯುರೋ-5 ಎಮಿಷನ್ ನಿಯಮವು ಭಾರತದಲ್ಲಿ ಏಪ್ರಿಲ್ 1ರಿಂದ ಜಾರಿಗೆ ಬರುತ್ತಿರುವ ಬಿಎಸ್-6 ನಿಯಮಕ್ಕೆ ಸರಿಸಮನಾಗಿದೆ.

ಭಾರತದಲ್ಲೇ ಮೊದಲ ಹೋಂಡಾ ಫೋರ್ಜಾ 300 ಸ್ಕೂಟರ್ ಮಾರಾಟಕ್ಕೆ ಅಧಿಕೃತ ಚಾಲನೆ

ಸದ್ಯ ಗ್ರಾಹಕರ ಬೇಡಿಕೆ ಮೇರೆಗೆ ಭಾರತದಲ್ಲಿ ಫೋರ್ಜಾ 300 ಮಾರಾಟಕ್ಕೆ ಚಾಲನೆ ನೀಡಿರುವ ಹೋಂಡಾ ಸಂಸ್ಥೆಯು ಮುಂಬರುವ 2021ಕ್ಕೆ ಅಧಿಕೃತವಾಗಿ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಪರ್ಫಾಮೆನ್ಸ್ ವಿಭಾಗದಲ್ಲೂ ಮ್ಯಾಕ್ಸಿ ಸ್ಕೂಟರ್‌ಗಳ ಬೇಡಿಕೆ ಹೆಚ್ಚಿಸುವ ವಿಶ್ವಾಸದಲ್ಲಿದೆ. ಇನ್ನು ಹೊಸ ಫೋರ್ಜಾ 300 ಸ್ಕೂಟರ್ ಮಾದರಿಯು 1,510ಎಂಎಂ ಉದ್ದಳತೆ ಹೊಂದಿದ್ದು, ಇದು ಅರಾಮದಾಯಕ ರೈಡಿಂಗ್‌ಗೆ ಸಹಕಾರಿಯಾಗಿರುವುಲ್ಲದೇ ಹಿಂಬದಿ ಸವಾರರಿಗೂ ಅನೂಕರ ಸ್ಥಳಾವಕಾಶ ಒದಗಿಸುತ್ತದೆ.

ಭಾರತದಲ್ಲೇ ಮೊದಲ ಹೋಂಡಾ ಫೋರ್ಜಾ 300 ಸ್ಕೂಟರ್ ಮಾರಾಟಕ್ಕೆ ಅಧಿಕೃತ ಚಾಲನೆ

ಈ ಮೂಲಕ ಸ್ಟ್ರೀಟ್ ಪರ್ಫಾಮೆನ್ಸ್ ಮಾತ್ರವಲ್ಲದೇ ಲಾಂಗ್ ರೈಡ್‌ಗೂ ಸಹಕಾರಿಯಾಗಿರುವ ಹೊಸ ಫೋರ್ಜಾ 300 ಸ್ಕೂಟರ್ ಮಾದರಿಯು ಸ್ಕೂಟರ್ ಸವಾರರಿಗೆ ಗರಿಷ್ಠ ಪ್ರಮಾಣದ ಸುರಕ್ಷತೆ ನೀಡುವ ವೈಶಿಷ್ಟ್ಯತೆ ಹೊಂದಿದೆ.

ಭಾರತದಲ್ಲೇ ಮೊದಲ ಹೋಂಡಾ ಫೋರ್ಜಾ 300 ಸ್ಕೂಟರ್ ಮಾರಾಟಕ್ಕೆ ಅಧಿಕೃತ ಚಾಲನೆ

ಎಂಜಿನ್ ಸಾಮಾರ್ಥ್ಯ ಮತ್ತು ಪರ್ಫಾಮೆನ್ಸ್

ಫೋರ್ಜಾ 300 ಸ್ಕೂಟರ್ ಮಾದರಿಯು 279-ಸಿಸಿ, ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಷಡ್, SOHC ಫೋರ್ ವ್ಲಾವೆ ಎಂಜಿನ್ ಹೊಂದಿದ್ದು, 24.8-ಬಿಎಚ್‌ಪಿ ಮತ್ತು 27.2-ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್ ನೀಡಬಲ್ಲದು.

ಭಾರತದಲ್ಲೇ ಮೊದಲ ಹೋಂಡಾ ಫೋರ್ಜಾ 300 ಸ್ಕೂಟರ್ ಮಾರಾಟಕ್ಕೆ ಅಧಿಕೃತ ಚಾಲನೆ

ಹೊಸ ಸ್ಕೂಟರ್ ಅನ್ನು ಟ್ಯಾಬ್ಯೂಲರ್ ಸ್ಟೀಲ್ ಫ್ರೆಮ್ ಚಾರ್ಸಿ ಮೇಲೆ ನಿರ್ಮಾಣ ಮಾಡಲಾಗಿದ್ದು, ಅಲ್ಯುಮಿನಿಯಂ ಪ್ರೇರಿತ 15-ಇಂಚಿನ ಮುಂಭಾಗ ಚಕ್ರ ಮತ್ತು 14-ಇಂಚಿನ ಹಿಂಭಾಗದ ಚಕ್ರದ ಜೊತೆಗೆ 256-ಎಂಎಂ ಮುಂಭಾದ ಡಿಸ್ಕ್ ಬ್ರೇಕ್ ಮತ್ತು 240-ಎಂಎಂ ಹಿಂಭಾಗದ ಡಿಸ್ಕ್ ಜೋಡಿಸಲಾಗಿದೆ.

ಭಾರತದಲ್ಲೇ ಮೊದಲ ಹೋಂಡಾ ಫೋರ್ಜಾ 300 ಸ್ಕೂಟರ್ ಮಾರಾಟಕ್ಕೆ ಅಧಿಕೃತ ಚಾಲನೆ

ಇದರೊಂದಿಗೆ ಪ್ರೀಮಿಯಂ ಫೀಚರ್ಸ್‌ಗಳಾದ ಟ್ರಾಕ್ಷನ್ ಕಂಟ್ರೋಲ್, ಫ್ರಂಟ್ ಎಲೆಕ್ಟ್ರಿಕ್ ವೀಂಡ್ ಸ್ಕೀನ್, ಎರಡು ಫುಲ್ ಫೇಸ್ ಹೆಲ್ಮೆಟ್ ಹಿಡಿಯುವಷ್ಟು ಅಂಡರ್ ಸೀಟ್ ಸ್ಟೋರೆಜ್, 12-ವಿ ಚಾರ್ಜಿಂಗ್ ಸಾಕೆಟ್, ಇಗ್ನಿಷನ್ ನಾಬ್ ಕಂಟ್ರೋಲ್ ಮಾಡಬಹುದಾದ ಸ್ಮಾರ್ಟ್ ಕೀ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್, ಸಿಂಗಲ್ ಪೀಸ್ ಅಲ್ಯುಮಿಯಂ ಸ್ವಿಂಗ್ ಆರ್ಮ್ ಪಡೆದುಕೊಂಡಿದೆ.

ಭಾರತದಲ್ಲೇ ಮೊದಲ ಹೋಂಡಾ ಫೋರ್ಜಾ 300 ಸ್ಕೂಟರ್ ಮಾರಾಟಕ್ಕೆ ಅಧಿಕೃತ ಚಾಲನೆ

ಫೋರ್ಜಾ 300 ಬೆಲೆ(ಅಂದಾಜು)

ಭಾರತದಲ್ಲಿ ವಿತರಣೆ ಆರಂಭಿಸಲಾಗಿರುವ ಫೋರ್ಜಾ 300 ಸ್ಕೂಟರಿನ ಅಧಿಕೃತ ಬೆಲೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲವಾದರೂ ಆಮದು ಸುಂಕ ಮತ್ತು ಮೂಲ ಬೆಲೆ ಸೇರಿ ರೂ. 6 ಲಕ್ಷದಿಂದ ರೂ. 6.50 ಲಕ್ಷ ಬೆಲೆ ನಿಗದಿ ಮಾಡಿರಬಹುದೆಂದು ಅಂದಾಜಿಸಲಾಗಿದೆ. ಆದರೆ ಭಾರತದಲ್ಲಿ ಈ ಸ್ಕೂಟರ್ ಅಧಿಕೃತವಾಗಿ ಬಿಡುಗಡೆಗೊಂಡಲ್ಲಿ ಸ್ಕೂಟರ್ ಬೆಲೆ ಇಳಿಕೆಯಾಗುವ ಸಾಧ್ಯತೆಗಳಿದ್ದು, ಸದ್ಯ ಆಸಕ್ತ ಗ್ರಾಹಕರಿಗಾಗಿ ಮಾತ್ರವೇ ದುಬಾರಿ ಬೆಲೆಯೊಂದಿಗೆ ಮಾರಾಟಕ್ಕೆ ಚಾಲನೆ ನೀಡಲಾಗಿದೆ.

Article Published On: Wednesday, February 19, 2020, 12:46 [IST]
English summary
Honda delivers its flagship scooter Forza 300 in India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+