ಅನಾವರಣವಾಯ್ತು ಹೋಂಡಾ ಗ್ರೊಮ್ 125 ಮಿನಿ ಬೈಕ್

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಗ್ರೊಮ್ 125 ಮಿನಿ ಬೈಕ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಕೆಲವು ದೇಶಗಳಲ್ಲಿ ಹೋಂಡಾ ಎಂಎಸ್‌ಎಕ್ಸ್‌125 ಎಂದೂ ಕರೆಯಲ್ಪಡುವ ಮಿನಿ ಬೈಕನ್ನು ಹಲವಾರು ಬದಲಾವಣೆಗಳನ್ನು ಮಾಡಿ ಗ್ರೊಮ್ 125 ಎಂಬ ಹೆಸರಿನಲ್ಲಿ ಅನಾವರಣಗೊಳಿಸಿದೆ.

ಅನಾವರಣವಾಯ್ತು ಹೋಂಡಾ ಗ್ರೊಮ್ 125 ಮಿನಿ ಬೈಕ್

ಹೋಂಡಾ ಗ್ರೊಮ್ ಮಿನಿ ಬೈಕ್ ಚೆರ್ರಿ ರೆಡ್, ಬ್ಲೂ ರಾಸ್ಪ್ಬೆರಿ, ಹ್ಯಾಲೋವೀನ್ ಆರೆಂಜ್ ಮತ್ತು ಇನ್ಕ್ರೆಡಿಬಲ್ ಗ್ರೀನ್ ಎಂಬ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಚೆರಿ ರೆಡ್ ಬಣ್ಣವು ಎಬಿಎಸ್ ಆವೃತ್ತಿಯಲ್ಲಿ ಮಾತ್ರ ಲಭ್ಯವಿರುತ್ತದೆ. ಈ ಮಿನಿಬೈಕಿನ ಪ್ರಾರಂಭಿಕ ಬೆಲೆಯು ರೂ.2.57 ಲಕ್ಷಗಳಾಗಿದೆ. ಹೋಂಡಾ ಕಂಪನಿಯ ಮಿನಿ ಬೈಕುಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ.

ಅನಾವರಣವಾಯ್ತು ಹೋಂಡಾ ಗ್ರೊಮ್ 125 ಮಿನಿ ಬೈಕ್

ಹೋಂಡಾ ಕಂಪನಿಯು ಮಿನಿಬೈಕ್ ವಿಭಾಗದಲ್ಲಿ ಮಿನಿಮೊಟೊ ಎಂಬ ಬೈಕುಗಳನ್ನು ಹೊಂದಿದೆ. ಮಿನಿಮೊಟೊ ಸರಣಿಯಲ್ಲಿರುವ ಮಂಕಿ ಎಂಬ ಬೈಕಿನ ಬೆಲೆಯು ರೂ. 3.02 ಲಕ್ಷಗಳಾಗಿದೆ. ಹೋಂಡಾ ಮಂಕಿ ಬೈಕ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಅನಾವರಣವಾಯ್ತು ಹೋಂಡಾ ಗ್ರೊಮ್ 125 ಮಿನಿ ಬೈಕ್

ಹೋಂಡಾ ಗ್ರೊಮ್ ಮಿನಿಬೈಕಿನಲ್ಲಿ 124.9 ಸಿಸಿ ಏರ್-ಕೂಲ್ಡ್ ಎಫ್‌ಐ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9.57 ಬಿಹೆಚ್‌ಪಿ ಮತ್ತು 10.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಹೋಂಡಾ ಗ್ರೋಮ್ ಮಿನಿ ಬೈಕ್ 103 ಕೆಜೆ ತೂಕವಿದೆ. ಈ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೋಂಡಾ ಗ್ರೊಮ್ 125 ಮಿನಿ ಬೈಕ್

ಹೋಂಡಾ ಗ್ರೊಮ್ ಮಿನಿ ಬೈಕಿನ ಸೀಟ್ 762 ಎಂಎಂ ಎತ್ತರವನ್ನು ಹೊಂದಿದೆ. ಈ ಮಿನಿಬೈಕ್ ಮುಂಭಾಗ ಮತ್ತು ಹಿಂಭಾಗದಲ್ಲಿ ಕ್ರಮವಾಗಿ 220 ಎಂಎಂ ಮತ್ತು 190 ಎಂಎಂ ಡಿಸ್ಕ್ ಬ್ರೇಕ್‌‍ಗಳನ್ನು ಅಳವಡಿಸಲಾಗಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಅನಾವರಣವಾಯ್ತು ಹೋಂಡಾ ಗ್ರೊಮ್ 125 ಮಿನಿ ಬೈಕ್

ಈ ಮಿನಿಬೈಕ್ 12 ಇಂಚಿನ ಟಯರ್ 31 ಎಂಎಂ ಯುಎಸ್‌ಡಿ ಫೋರ್ಕ್ಸ್ ಮತ್ತು ಹಿಂಭಾಗದ ಮೊನೊಶಾಕ್ ಅನ್ನು ಹೊಂದಿದೆ, ಈ ಮಿನಿಬೈಕ್ ಪ್ರತಿಲೀಟರ್ ಗೆ ಶೇ.50 ರಷ್ಟು ಮೈಲೇಜ್ ನೀಡುತ್ತದೆ. ಹೋಂಡಾ ಗ್ರೊಮ್ ಮಿನಿಬೈಕ್ 125 5.5 ಲೀಟರ್ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೋಂಡಾ ಗ್ರೊಮ್ 125 ಮಿನಿ ಬೈಕ್

ಹೋಂಡಾ ಗ್ರೊಮ್ ಬೈಕಿನಲ್ಲಿ ಪೂರ್ಣ-ಎಲ್ಇಡಿ ಲೈಟಿಂಗ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಎಬಿಎಸ್ ಅನ್ನು ಅಳವಡಿಸಿದ್ದಾರೆ. ಈ ಮಿನಿಬೈಕ್ ರೈಡ್ ಮಾಡವುದು ಹೆಚ್ಚಿನ ಫನ್ ಅನ್ನು ನೀಡುತ್ತದೆ.

ಅನಾವರಣವಾಯ್ತು ಹೋಂಡಾ ಗ್ರೊಮ್ 125 ಮಿನಿ ಬೈಕ್

ಹೋಂಡಾ ಕಂಪನಿಯು ಸಿಬಿ ಹಾರ್ನೆಟ್ 160 ಆರ್, ಎಕ್ಸ್‌ಬ್ಲೇಡ್ ಮತ್ತು ಸಿಬಿಆರ್ 250 ಆರ್ ಬೈಕುಗಳ ಹೆಸರನ್ನು ವೆಬ್‌ಸೈಟ್‍ ನಿಂದ ತೆಗೆದುಹಾಕಲಾಗಿದೆ. ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಬಹುದು ಎಂದು ನಿರೀಕ್ಷಿಸುತ್ತೇವೆ. ಉಳಿದ ಎರಡು ಮಾದರಿಗಳನ್ನು ಸ್ಥಗಿತಗೊಳಿಸಬಹುದು.

More from DriveSpark

Article Published On: Sunday, May 3, 2020, 13:00 [IST]
English summary
2020 Honda Grom revealed. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+