ದೀಪಾವಳಿ ಆಫರ್: ಹೈನೆಸ್ ಸಿಬಿ350 ಖರೀದಿಸಿ ರೂ.43 ಸಾವಿರ ಉಳಿತಾಯ ಮಾಡಿ!

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಹೊಚ್ಚ ಹೊಸ ಕ್ಲಾಸಿಕ್ ಬೈಕ್ ಮಾದರಿಯ ಮೇಲೆ ಗರಿಷ್ಠ ಆಫರ್ ಘೋಷಣೆ ಮಾಡಿದ್ದು, ದೀಪಾವಳಿ ಸಂಭ್ರಮದಲ್ಲಿ ಹೊಸ ಬೈಕ್ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಸುವರ್ಣಾವಕಾಶ ಎನ್ನಬಹುದು.

ದೀಪಾವಳಿ ಆಫರ್: ಹೈನೆಸ್ ಸಿಬಿ350 ಖರೀದಿಸಿ ರೂ.43 ಸಾವಿರ ಉಳಿತಾಯ ಮಾಡಿ!

ದೀಪಾವಳಿ ಸಂಭ್ರಮದಲ್ಲಿ ಬಹುತೇಕ ಉದ್ಯಮ ವ್ಯವಹಾರಗಳಲ್ಲೂ ಗ್ರಾಹಕರ ಸೆಳೆಯಲು ವಿವಿಧ ಆಫರ್‌ಗಳನ್ನು ಘೋಷಣೆ ಮಾಡುವುದು ಸಾಮಾನ್ಯವಾಗಿದೆ. ಹಾಗೆಯೇ ಆಟೋ ಉದ್ಯಮದಲ್ಲೂ ಕೂಡಾ ದೀಪಾವಳಿ ಸಂದರ್ಭದಲ್ಲಿ ಗರಿಷ್ಠ ವಾಹನ ಮಾರಾಟದ ಗುರಿಯೊಂದಿಗೆ ವಿವಿಧ ಆಟೋ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿದ್ದು, ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಹೊಸ ಬೈಕ್ ಖರೀದಿಯ ಮೇಲೆ ಭರ್ಜರಿ ಉಳಿತಾಯಕ್ಕೆ ಅವಕಾಶ ನೀಡಿದೆ.

ದೀಪಾವಳಿ ಆಫರ್: ಹೈನೆಸ್ ಸಿಬಿ350 ಖರೀದಿಸಿ ರೂ.43 ಸಾವಿರ ಉಳಿತಾಯ ಮಾಡಿ!

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಹೊಸ ಹೈನೆಸ್ ಸಿಬಿ350 ಬೈಕ್ ಮಾದರಿಯ ಇದೇ ತಿಂಗಳ ಆರಂಭದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಡಿಲಕ್ಸ್ ಮತ್ತು ಡಿಲಕ್ಸ್ ಪ್ರೋ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ದೀಪಾವಳಿ ಆಫರ್: ಹೈನೆಸ್ ಸಿಬಿ350 ಖರೀದಿಸಿ ರೂ.43 ಸಾವಿರ ಉಳಿತಾಯ ಮಾಡಿ!

ಡಿಲಕ್ಸ್ ಮಾದರಿಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.85 ಲಕ್ಷ ಮತ್ತು ಡಿಲಕ್ಸ್ ಪ್ರೋ ಮಾದರಿಯು ರೂ. 1.90 ಲಕ್ಷ ಬೆಲೆಯೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಬೈಕ್ ಖರೀದಿಸುವ ಗ್ರಾಹಕರು ಗರಿಷ್ಠ ರೂ. 43 ಸಾವಿರ ಉಳಿತಾಯ ಮಾಡಬಹುದಾಗಿದೆ.

ದೀಪಾವಳಿ ಆಫರ್: ಹೈನೆಸ್ ಸಿಬಿ350 ಖರೀದಿಸಿ ರೂ.43 ಸಾವಿರ ಉಳಿತಾಯ ಮಾಡಿ!

ಹೈನೆಸ್ ಸಿಬಿ350 ಬೈಕ್ ಖರೀದಿಸುವ ಗ್ರಾಹಕರಿಗೆ ರೂ. 43 ಸಾವಿರದಷ್ಟು ಉಳಿತಾಯಕ್ಕೆ ಅವಕಾಶ ನೀಡಿರುವ ಹೋಂಡಾ ಕಂಪನಿಯು ನಿಗದಿತ ಅವಧಿಯಲ್ಲಿ ಬೈಕ್ ಖರೀದಿದಾರರಿಗೆ ಶೇ.5.6 ರಷ್ಟು ಬಡ್ಡಿದರದಲ್ಲಿ ನೂರರಷ್ಟು ಆನ್‍‌ರೋಡ್ ದರದ ಮೇಲೆ ಸಾಲ ಸೌಲಭ್ಯವನ್ನು ನೀಡುತ್ತಿದೆ. ಇದಲ್ಲದೆ ಹೊಸ ಬೈಕ್ ಖರೀದಿ ನಂತರ ಸಾಲ ಮರುಪಾವತಿಗಾಗಿ ಪ್ರತಿ ತಿಂಗಳು ಕನಿಷ್ಠ ರೂ. 4999 ಇಎಂಐ ದರ ನಿಗದಿ ಮಾಡಿದ್ದು, ಇದು ಬೆಸ್ಟ್ ಇನ್ ಕ್ಲಾಸ್ ಇಎಂಐ ಮೊತ್ತವಾಗಿದೆ.

ದೀಪಾವಳಿ ಆಫರ್: ಹೈನೆಸ್ ಸಿಬಿ350 ಖರೀದಿಸಿ ರೂ.43 ಸಾವಿರ ಉಳಿತಾಯ ಮಾಡಿ!

ಜೊತೆಗೆ ಹೊಸ ಹೈನೆಸ್ ಸಿಬಿ350 ಬೈಕ್ ಖರೀದಿಯ ಮೇಲೆ ಆಕ್ಸೆಸರಿಸ್‌ಗಳನ್ನು ಸಹ ಉಚಿತವಾಗಿ ನೀಡಲಿದ್ದು, ಗ್ರಾಹಕರು ಹೊಸ ಫೈನಾನ್ಸ್ ಆಯ್ಕೆಯ ಮೂಲಕ ಒಟ್ಟು ರೂ.43 ಸಾವಿರದಷ್ಟು ಉಳಿತಾಯ ಮಾಡಬಹುದಾಗಿದೆ.

ದೀಪಾವಳಿ ಆಫರ್: ಹೈನೆಸ್ ಸಿಬಿ350 ಖರೀದಿಸಿ ರೂ.43 ಸಾವಿರ ಉಳಿತಾಯ ಮಾಡಿ!

ಸದ್ಯ ಹೋಂಡಾ ಪ್ರೀಮಿಯಂ ಬೈಕ್ ಮಾರಾಟ ವಿಭಾಗವಾದ ಬಿಗ್‌ವಿಂಗ್ ಮಾರಾಟ ಮಳಿಗೆಗಳಲ್ಲಿ ಮಾತ್ರ ಮಾರಾಟಗೊಳ್ಳುತ್ತಿರುವ ಹೊಸ ಬೈಕ್ ಮಾದರಿಯು 5-ಸ್ಪೀಡ್ ಗೇರ್‌ಬಾಕ್ಸ್ ಪ್ರೇರಣೆಯ 348.36 ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 20.8-ಬಿಎಚ್‌ಪಿ ಮತ್ತು 30-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ದೀಪಾವಳಿ ಆಫರ್: ಹೈನೆಸ್ ಸಿಬಿ350 ಖರೀದಿಸಿ ರೂ.43 ಸಾವಿರ ಉಳಿತಾಯ ಮಾಡಿ!

ಈ ಮೂಲಕ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮತ್ತು ಜಾವಾ ಬೈಕ್‌ಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿರುವ ಹೊಸ ಹೈನೆಸ್ ಸಿಬಿ350 ಬೈಕ್ ಮಾದರಿಯಲ್ಲಿ ಅಸಿಸ್ಟ್ ಸ್ಲಿಪ್ಪರ್-ಕ್ಲಚ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌, ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ ಸಿಸ್ಟಂ ಸೇರಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿವೆ.

ದೀಪಾವಳಿ ಆಫರ್: ಹೈನೆಸ್ ಸಿಬಿ350 ಖರೀದಿಸಿ ರೂ.43 ಸಾವಿರ ಉಳಿತಾಯ ಮಾಡಿ!

ಹೊಸ ಬೈಕಿನಲ್ಲಿ ಅನಲಾಗ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೋಂಡಾ ಸ್ಮಾರ್ಟ್‌ಫೋನ್ ವಾಯ್ಸ್ ಕಂಟ್ರೋಲ್ ಸಿಸ್ಟಂಗಳನ್ನು ಹೊಂದಿದ್ದು, ಸ್ಟೀಲ್ ಹಾಫ್ ಡ್ಯುಪ್ಲೆಕ್ಸ್ ಕ್ರೆಡಲ್ ಫ್ರೇಮ್ ಜೋಡಿಸಲಾಗಿದೆ. ಈ ಫ್ರೇಮ್ ಎಂಜಿನ್ ಅನ್ನು ಲೋ ಮೌಂಟ್ ಮಾಡಲು ನೆರವಾಗಲಿದ್ದು, ವೇಗದ ಸವಾರಿಯನ್ನು ಸರಳಗೊಳಿಸುತ್ತದೆ.

MOST READ: ದೀಪಾವಳಿ ಆಫರ್: ಒಕಿನಾವ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್

ದೀಪಾವಳಿ ಆಫರ್: ಹೈನೆಸ್ ಸಿಬಿ350 ಖರೀದಿಸಿ ರೂ.43 ಸಾವಿರ ಉಳಿತಾಯ ಮಾಡಿ!

ಹಾಗೆಯೇ ಹೋಂಡಾ ಹೈನೆಸ್ ಸಿಬಿ 350 ಬೈಕಿನ ಮುಂಭಾಗದಲ್ಲಿ ಸ್ಟ್ಯಾಂಡರ್ಡ್ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಶಾಕ್-ಅಬ್ಸಾವರ್ ಗಳನ್ನು ಅಳವಡಿಸಲಾಗಿದ್ದು, ಬ್ರೇಕಿಂಗ್ ಗಳಿಗಾಗಿ ಬೈಕಿನ ಮುಂಭಾಗದಲ್ಲಿ 310 ಎಂಎಂ ಡಿಸ್ಕ್ ಬ್ರೇಕ್, ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಜೊತೆಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

Most Read Articles

Kannada
English summary
Honda H’ness CB 350 Offered With Festive Savings. Read in Kannada.
Story first published: Friday, October 30, 2020, 18:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X