ವಿದೇಶಿ ಮಾರುಕಟ್ಟೆಗಳಲ್ಲೂ ಸದ್ದು ಮಾಡಲಿದೆ ಭಾರತದಲ್ಲಿ ನಿರ್ಮಾಣವಾದ ಹೋಂಡಾ ಹೈನೆಸ್ ಸಿಬಿ350

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಕಳೆದ ತಿಂಗಳ ಹಿಂದಷ್ಟೇ ತನ್ನ ಹೊಚ್ಚ ಹೊಸ ಕ್ಲಾಸಿಕ್ ಬೈಕ್ ಮಾದರಿಯಾದ ಹೈನೆಸ್ ಸಿಬಿ350 ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯನ್ನು ಭಾರತದಲ್ಲಿ ಮಾತ್ರವಲ್ಲ ವಿದೇಶಿ ಮಾರುಕಟ್ಟೆಗಳಲ್ಲೂ ಮಾರಾಟಕ್ಕೆ ಚಾಲನೆ ನೀಡಿದೆ.

ವಿದೇಶಿ ಮಾರುಕಟ್ಟೆಗಳಲ್ಲೂ ಸದ್ದು ಮಾಡಲಿದೆ ಭಾರತದಲ್ಲಿ ನಿರ್ಮಾಣದ ಹೋಂಡಾ ಹೈನೆಸ್ ಸಿಬಿ350

ಹೊಸ ಹೈನೆಸ್ ಸಿಬಿ350 ಕ್ಲಾಸಿಕ್ ಬೈಕ್ ಮಾದರಿಯನ್ನು ಭಾರತದಲ್ಲೇ ಉತ್ಪಾದನೆ ಕೈಗೊಳ್ಳುವ ಮೂಲಕ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ರಫ್ತು ಕೈಗೊಳ್ಳುತ್ತಿರುವ ಹೋಂಡಾ ಕಂಪನಿಯು ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಬೈಕ್ ಮಾದರಿಯು ಭಾರತದಲ್ಲಿ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಸದ್ಯ ಕಡಿಮೆ ಬೇಡಿಕೆ ಹೊಂದಿದ್ದರೂ ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಗ್ರಾಹಕರನ್ನು ಸೆಳೆಯವಲ್ಲಿ ಯಶಸ್ವಿಯಾಗಿದೆ.

ವಿದೇಶಿ ಮಾರುಕಟ್ಟೆಗಳಲ್ಲೂ ಸದ್ದು ಮಾಡಲಿದೆ ಭಾರತದಲ್ಲಿ ನಿರ್ಮಾಣದ ಹೋಂಡಾ ಹೈನೆಸ್ ಸಿಬಿ350

ಹೊಸ ಬೈಕ್ ಮಾದರಿಯಾದ ಬಿಡುಗಡೆಯಾದ ಮೊದಲ ತಿಂಗಳಿನಲ್ಲಿ ಕೇವಲ 1 ಸಾವಿರ ಯುನಿಟ್ ಮಾತ್ರ ಮಾರಾಟ ಮಾಡಿದ್ದ ಹೋಂಡಾ ಕಂಪನಿಗಳು ಈ ತಿಂಗಳ ಮಧ್ಯಂತರದಲ್ಲಿ ಭಾರೀ ಪ್ರಮಾಣದಲ್ಲಿ ಹೊಸ ಬೈಕ್ ವಿತರಣೆ ಮಾಡಿದ್ದು, ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿರುವ ಬೈಕ್ ಮಾರಾಟ ಪಟ್ಟಿಯಲ್ಲಿ ಹೊಸ ಬೈಕ್ ಮಾರಾಟ ಸಂಖ್ಯೆಯು ಬಹಿರಂಗವಾಗಲಿದೆ.

ವಿದೇಶಿ ಮಾರುಕಟ್ಟೆಗಳಲ್ಲೂ ಸದ್ದು ಮಾಡಲಿದೆ ಭಾರತದಲ್ಲಿ ನಿರ್ಮಾಣದ ಹೋಂಡಾ ಹೈನೆಸ್ ಸಿಬಿ350

ಬಿಡುಗಡೆಯಾದ ಸಂದರ್ಭದಲ್ಲಿ ನಿರಸವಾದ ಬೇಡಿಕೆ ಪಡೆದುಕೊಂಡಿದ್ದ ಹೈನೆಸ್ ಸಿಬಿ350 ಮಾದರಿಯು ಈ ತಿಂಗಳ ಆರಂಭದಲ್ಲಿ ಸಾಕಷ್ಟು ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡಿದ್ದು, ಮುಂಬರುವ ದಿನಗಳಲ್ಲಿ ಕ್ಲಾಸಿಕ್ ಬೈಕ್ ಖರೀದಿದಾರರು ಹೊಸ ಬೈಕ್ ಮಾದರಿಯತ್ತ ಗಮನಹರಿಸುವ ಸಾಧ್ಯತೆಗಳಿವೆ.

ವಿದೇಶಿ ಮಾರುಕಟ್ಟೆಗಳಲ್ಲೂ ಸದ್ದು ಮಾಡಲಿದೆ ಭಾರತದಲ್ಲಿ ನಿರ್ಮಾಣದ ಹೋಂಡಾ ಹೈನೆಸ್ ಸಿಬಿ350

ಜೊತೆಗೆ ಹೊಸ ಬೈಕಿನ ರಫ್ತು ಪ್ರಮಾಣವು ಹೆಚ್ಚಳವಾಗಿರುವುದು ಕೂಡಾ ಹೈನೆಸ್ ಸಿಬಿ350 ಬೈಕ್ ಮಾದರಿಗೆ ಮತ್ತಷ್ಟು ಬಲತುಂಬಿದ್ದು, ಮುಂಬರುವ ದಿನಗಳಲ್ಲಿ ರಾಯಲ್ ಎನ್‌ಫೀಲ್ಡ್ ಪ್ರಮುಖ ಬೈಕ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಿದೆ. ಹೈನೆಸ್ ಸಿಬಿ350 ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಡಿಲಕ್ಸ್ ಮತ್ತು ಡಿಲಕ್ಸ್ ಪ್ರೋ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಡಿಲಕ್ಸ್ ಮಾದರಿಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.85 ಲಕ್ಷ ಮತ್ತು ಡಿಲಕ್ಸ್ ಪ್ರೋ ಮಾದರಿಯು ರೂ. 1.90 ಲಕ್ಷ ಬೆಲೆ ಹೊಂದಿದೆ.

ವಿದೇಶಿ ಮಾರುಕಟ್ಟೆಗಳಲ್ಲೂ ಸದ್ದು ಮಾಡಲಿದೆ ಭಾರತದಲ್ಲಿ ನಿರ್ಮಾಣದ ಹೋಂಡಾ ಹೈನೆಸ್ ಸಿಬಿ350

ಸದ್ಯ ಹೋಂಡಾ ಪ್ರೀಮಿಯಂ ಬೈಕ್ ಮಾರಾಟ ವಿಭಾಗವಾದ ಬಿಗ್‌ವಿಂಗ್ ಮಾರಾಟ ಮಳಿಗೆಗಳಲ್ಲಿ ಮಾತ್ರ ಮಾರಾಟಗೊಳ್ಳುತ್ತಿರುವ ಹೊಸ ಬೈಕ್ ಮಾದರಿಯು 5-ಸ್ಪೀಡ್ ಗೇರ್‌ಬಾಕ್ಸ್ ಪ್ರೇರಣೆಯ 348.36 ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 20.8-ಬಿಎಚ್‌ಪಿ ಮತ್ತು 30-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ವಿದೇಶಿ ಮಾರುಕಟ್ಟೆಗಳಲ್ಲೂ ಸದ್ದು ಮಾಡಲಿದೆ ಭಾರತದಲ್ಲಿ ನಿರ್ಮಾಣದ ಹೋಂಡಾ ಹೈನೆಸ್ ಸಿಬಿ350

ಹೊಸ ಹೈನೆಸ್ ಸಿಬಿ350 ಬೈಕ್ ಮಾದರಿಯಲ್ಲಿ ಅಸಿಸ್ಟ್ ಸ್ಲಿಪ್ಪರ್-ಕ್ಲಚ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌, ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ ಸಿಸ್ಟಂ ಸೇರಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿವೆ.

ವಿದೇಶಿ ಮಾರುಕಟ್ಟೆಗಳಲ್ಲೂ ಸದ್ದು ಮಾಡಲಿದೆ ಭಾರತದಲ್ಲಿ ನಿರ್ಮಾಣದ ಹೋಂಡಾ ಹೈನೆಸ್ ಸಿಬಿ350

ಹೊಸ ಬೈಕಿನಲ್ಲಿ ಅನಲಾಗ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೋಂಡಾ ಸ್ಮಾರ್ಟ್‌ಫೋನ್ ವಾಯ್ಸ್ ಕಂಟ್ರೋಲ್ ಸಿಸ್ಟಂಗಳನ್ನು ಹೊಂದಿದ್ದು, ಸ್ಟೀಲ್ ಹಾಫ್ ಡ್ಯುಪ್ಲೆಕ್ಸ್ ಕ್ರೆಡಲ್ ಫ್ರೇಮ್ ಜೋಡಿಸಲಾಗಿದೆ. ಈ ಫ್ರೇಮ್ ಎಂಜಿನ್ ಅನ್ನು ಲೋ ಮೌಂಟ್ ಮಾಡಲು ನೆರವಾಗಲಿದ್ದು, ವೇಗದ ಸವಾರಿಯನ್ನು ಸರಳಗೊಳಿಸುತ್ತದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ವಿದೇಶಿ ಮಾರುಕಟ್ಟೆಗಳಲ್ಲೂ ಸದ್ದು ಮಾಡಲಿದೆ ಭಾರತದಲ್ಲಿ ನಿರ್ಮಾಣದ ಹೋಂಡಾ ಹೈನೆಸ್ ಸಿಬಿ350

ಹಾಗೆಯೇ ಹೋಂಡಾ ಹೈನೆಸ್ ಸಿಬಿ 350 ಬೈಕಿನ ಮುಂಭಾಗದಲ್ಲಿ ಸ್ಟ್ಯಾಂಡರ್ಡ್ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಶಾಕ್-ಅಬ್ಸಾವರ್ ಗಳನ್ನು ಅಳವಡಿಸಲಾಗಿದ್ದು, ಬ್ರೇಕಿಂಗ್ ಗಳಿಗಾಗಿ ಬೈಕಿನ ಮುಂಭಾಗದಲ್ಲಿ 310 ಎಂಎಂ ಡಿಸ್ಕ್ ಬ್ರೇಕ್, ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಜೊತೆಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

Most Read Articles

Kannada
English summary
Honda H’Ness CB350 Export Starts. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X