ಹಾರ್ನೆಟ್ 2.0 ಮತ್ತು ಡಿಯೋ ರೆಪ್ಸೊಲ್ ಎಡಿಷನ್‌ಗಳು ಟಿವಿಸಿ ಬಿಡುಗಡೆ ಮಾಡಿದ ಹೋಂಡಾ

ಹೋಂಡಾ ಕಂಪನಿಯು ರೆಪ್ಸೊಲ್ ಎಡಿಷನ್ ಮೂಲಕ ರೇಸಿಂಗ್ ಪ್ರಿಯರ ಗಮನಸೆಳೆಯುತ್ತಿದ್ದು, ಕಂಪನಿಯು ಹಾರ್ನೆಟ್ 2.0 ಮತ್ತು ಡಿಯೋ ಮಾದರಿಗಳಲ್ಲಿ ರೆಪ್ಸೊಲ್ ಎಡಿಷನ್ ಬಿಡುಗಡೆಗೊಳಿಸುವ ಮೂಲಕ ಹೊಸ ಸಂಚಲನ ಕಾರಣವಾಗಿದೆ.

ಹಾರ್ನೆಟ್ 2.0 ಮತ್ತು ಡಿಯೋ ರೆಪ್ಸೊಲ್ ಎಡಿಷನ್‌ಗಳು ಟಿವಿಸಿ ಬಿಡುಗಡೆ ಮಾಡಿದ ಹೋಂಡಾ

800ನೇ ಮೊಟೊ ಜಿಪಿ ಗೆಲುವಿನ ಸಂಭ್ರಮಕ್ಕಾಗಿ ಹಾರ್ನೆಟ್ 2.0 ಮತ್ತು ಡಿಯೋ ಸ್ಕೂಟರ್ ಮಾದರಿಯಲ್ಲಿ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿ ಹೊಸ ದ್ವಿಚಕ್ರ ವಾಹನಗಳ ಟಿವಿ ಜಾಹೀರಾತು ಕೂಡಾ ಬಿಡುಗಡೆ ಮಾಡಿದೆ. ರೆಪ್ಸೊಲ್ ಎಡಿಷನ್ ಮಾದರಿಗಳ ಟಿವಿ ಜಾಹೀರಾತಿನಲ್ಲಿ ಮೊಟೊ ಜಿಪಿ ಚಾಂಪಿಯನ್ ಮಾರ್ಕ್ ಮಾರ್ಕ್ಯೂಜ್ ಸ್ಪೆಷಲ್ ಎಡಿಷನ್‌ಗಳ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಜಾಹೀರಾತು ಮೂಲಕ ಹೋಂಡಾ ಕಂಪನಿಯು ರೇಸಿಂಗ್ ಪ್ರಿಯರನ್ನು ಸೆಳೆಯಲು ಯತ್ನಿಸುತ್ತಿದೆ.

ಸ್ಪೆಷಲ್ ರೆಪ್ಸೊಲ್ ಹೋಂಡಾ ಹಾರ್ನೆಟ್ 2.0 ಮತ್ತು ಡಿಯೋ ಮಾದರಿಗಳು ಸೀಮಿತ ಅವಧಿಗಾಗಿ ಕೆಲವೇ ಯುನಿಟ್ ಉತ್ಪಾದನೆ ಮಾಡಲಿರುವ ಕಂಪನಿಯು ಸ್ಪೆಷಲ್ ಎಡಿಷನ್ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ರೂ. 69,757(ಡಿಯೋ) ಮತ್ತು ರೂ. 1.28 ಲಕ್ಷ(ಹಾರ್ನೆಟ್ 2.0)ಕ್ಕೆ ನಿಗದಿಪಡಿಸಲಾಗಿದೆ.

ಹಾರ್ನೆಟ್ 2.0 ಮತ್ತು ಡಿಯೋ ರೆಪ್ಸೊಲ್ ಎಡಿಷನ್‌ಗಳು ಟಿವಿಸಿ ಬಿಡುಗಡೆ ಮಾಡಿದ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ರೇಸಿಂಗ್ ವಿಭಾಗವನ್ನು ಪ್ರೋತ್ಸಾಹಿಸಲು ಹಲವು ಬೈಕ್ ಮಾದರಿಗಳಲ್ಲಿ ರೆಪ್ಸೊಲ್ ಎಡಿಷನ್ ಮಾರಾಟ ಹೊಂದಿದ್ದು, ಇದೀಗ ಹಾರ್ನೆಟ್ 2.0 ಮತ್ತು ಡಿಯೋ ಸ್ಕೂಟರ್ ಮಾದರಿಯಲ್ಲಿ ಹೊಸ ಗ್ರಾಫಿಕ್ಸ್ ಸೌಲಭ್ಯವನ್ನು ನೀಡಲಾಗಿದೆ.

ಕ್ಲಾಸಿಕ್ ಬೈಕ್ ಪ್ರಿಯರಿಗಾಗಿ ಬಿಡುಗಡೆಯಾದ ರಾಯಲ್ ಎನ್‌ಫೀಲ್ಡ್ ಹೊಸ ಮಿಟಿಯೊರ್ 350 ಹೇಗಿದೆ? ಈ ವಿಡಿಯೋ ನೋಡಿ..

ಹೋಂಡಾ ರೆಪ್ಸೊಲ್ ಸ್ಪೆಷಲ್ ಎಡಿಷನ್ ಮಾದರಿಗಳಲ್ಲಿ ರೇಸಿಂಗ್ ಬಾಡಿ ಗ್ರಾಫಿಕ್ಸ್ ಜೊತೆ ವೈಬ್ರಂಟ್ ಆರೇಂಜ್ ವೀಲ್ಹ್ ರಿಮ್ ಹೊಂದಿದ್ದು, ಹೊಸ ಗ್ರಾಫಿಕ್ಸ್ ಡಿಸೈನ್ ಸೌಲಭ್ಯವು ಸ್ಪೆಷಲ್ ಎಡಿಷನ್ ಸ್ಪೋರ್ಟಿ ಲುಕ್ ಹೆಚ್ಚಿಸಲಿವೆ.

ಸ್ಪೋರ್ಟಿ ಲುಕ್ ಇಷ್ಟಪಡುವ ಗ್ರಾಹಕರಿಗೆ ಸ್ಪೆಷಲ್ ಎಡಿಷನ್‌ಗಳು ಖರೀದಿಗೆ ಉತ್ತಮ ಆಯ್ಕೆಯಾಗಿದ್ದು, ಗ್ರಾಫಿಕ್ಸ್ ಸೌಲಭ್ಯ ಹೊಂದಿರುವ ಸ್ಪೆಷಲ್ ಎಡಿಷನ್‌ಗಳು ಸ್ಟ್ಯಾಂಡರ್ಡ್ ಮಾದರಿಗಿಂತ ತುಸು ದುಬಾರಿ ಬೆಲೆ ಪಡೆದುಕೊಂಡಿವೆ. ಮೊಟೊ ಜಿಪಿ ರೇಸ್‌ಗಳಲ್ಲಿ ಹಲವಾರು ಬಾರಿ ವಿಜಯಶಾಲಿಯಾಗಿರುವ ಹೋಂಡಾ ರೆಪ್ಸೊಲ್ ತಂಡವು ಭಾರತದಲ್ಲೂ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದು, ಹೋಂಡಾ ನಿರ್ಮಾಣದ ಆರ್‌ಸಿ 213ವಿ ಬೈಕ್ ಮಾದರಿಯೇ ಮೊಟೊ ಜಿಪಿ ಟ್ರ್ಯಾಕ್‌ಗಳಲ್ಲಿ ಅದ್ಬುತ ರೈಡಿಂಗ್ ಪ್ರದರ್ಶನ ಹೊಂದಿದೆ.

ಹಾರ್ನೆಟ್ 2.0 ಮತ್ತು ಡಿಯೋ ರೆಪ್ಸೊಲ್ ಎಡಿಷನ್‌ಗಳು ಟಿವಿಸಿ ಬಿಡುಗಡೆ ಮಾಡಿದ ಹೋಂಡಾ

ಇತ್ತೀಚೆಗೆ 800ನೇ ಮೊಟೊ ಜಿಪಿ ರೇಸ್‌ನಲ್ಲೂ ಕಮಾಲ್ ಮಾಡಿದ ಹೋಂಡಾ ರೆಪ್ಸೊಲ್ ತಂಡವು ಸತತ ಸರಣಿ ಗೆಲವು ತನ್ನದಾಗಿಸಿಕೊಂಡಿತ್ತು. ಇದೇ ಸಂಭ್ರಮಕ್ಕಾಗಾಗಿ ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ವಿಭಾಗವು ಹಾರ್ನೆಟ್ 2.0 ಮತ್ತು ಡಿಯೋ ಮಾದರಿಗಳಲ್ಲಿ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದೆ.

ಹಾರ್ನೆಟ್ 2.0 ಮತ್ತು ಡಿಯೋ ರೆಪ್ಸೊಲ್ ಎಡಿಷನ್‌ಗಳು ಟಿವಿಸಿ ಬಿಡುಗಡೆ ಮಾಡಿದ ಹೋಂಡಾ

ಗ್ರಾಫಿಕ್ಸ್ ಡಿಸೈನ್ ಹೊರತುಪಡಿಸಿ ಸ್ಪೆಷಲ್ ಎಡಿಷನ್‌ಗಳಲ್ಲಿನ ಇತರೆ ತಾಂತ್ರಿಕ ಅಂಶಗಳನ್ನು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ ಮುಂದುವರಿಸಲಾಗಿದ್ದು, ಹಾರ್ನೆಟ್ 2.0 ಮಾದರಿಯು 184 ಸಿಸಿ ಎಂಜಿನ್‌ನೊಂದಿಗೆ ಮತ್ತು ಡಿಯೋ ಮಾದರಿಯು 109ಸಿಸಿ ಎಂಜಿನ್ ಆಯ್ಕೆ ಹೊಂದಿವೆ.

Most Read Articles

Kannada
English summary
Honda Dio And Hornet 2.0 Repsol Edition TVC Release. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X