ಥೈಲ್ಯಾಂಡ್‌ನಲ್ಲಿ ಬಿಡುಗಡೆಗೊಂಡ ಬಹುನೀರಿಕ್ಷಿತ ಹೋಂಡಾ ಫೋರ್ಜಾ 350 ಮ್ಯಾಕ್ಸಿ ಸ್ಕೂಟರ್

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಭಾರತದಲ್ಲಿ ತನ್ನ ಬಹುನೀರಿಕ್ಷಿತ ಫೋರ್ಜಾ 300 ಮ್ಯಾಕ್ಸಿ ಸ್ಕೂಟರ್ ಬಿಡುಗಡೆಗೂ ಮುನ್ನ ಥೈಲ್ಯಾಂಡ್ ಮಾರುಕಟ್ಟೆಯಲ್ಲಿ ಫೋರ್ಜಾ 350 ಹೊಸ ಮ್ಯಾಕ್ಸಿ ಸ್ಕೂಟರ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಬಿಡುಗಡೆಗೊಂಡ ಬಹುನೀರಿಕ್ಷಿತ ಫೋರ್ಜಾ 350 ಮ್ಯಾಕ್ಸಿ ಸ್ಕೂಟರ್

ಫೋರ್ಜಾ ಸ್ಕೂಟರ್ ಮಾದರಿಯು ಥೈಲ್ಯಾಂಡ್‌ನಲ್ಲಿ 350 ವರ್ಷನ್‌ನಲ್ಲಿ ಬಿಡುಗಡೆಗೊಂಡಿದ್ದು, ಭಾರತದಲ್ಲಿ ಫೋರ್ಜಾ 300 ಮಾದರಿಯು ಬಿಡುಗಡೆಯಾಗಲಿದೆ. ಎಂಟ್ರಿ ಲೆವೆಲ್ ಸೂಪರ್ ಬೈಕ್‌ಗಳಿಗೆ ಸಮನಾಗಿ ತಾಂತ್ರಿಕ ಅಂಶಗಳನ್ನು ಹೊಂದಿರುವ ಫೋರ್ಜಾ ಮ್ಯಾಕ್ಸಿ ಸ್ಕೂಟರ್ ಮಾದರಿಯು ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಬೆಲೆಯಲ್ಲೂ ದುಬಾರಿಯಾಗಿದ್ದು, ಜಪಾನ್ ನಂತರ ಇದೇ ಮೊದಲ ಬಾರಿಗೆ ಥೈಲ್ಯಾಂಡ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

ಬಿಡುಗಡೆಗೊಂಡ ಬಹುನೀರಿಕ್ಷಿತ ಫೋರ್ಜಾ 350 ಮ್ಯಾಕ್ಸಿ ಸ್ಕೂಟರ್

ಥೈಲ್ಯಾಂಡ್‌ನಲ್ಲಿ ಬಿಡುಗಡೆಯಾಗಿರುವ ಫೋರ್ಜಾ 350 ಮ್ಯಾಕ್ಸಿ ಸ್ಕೂಟರ್ ಮಾದರಿಯು ಎರಡು ವೆರಿಯೆಂಟ್‌ಗಳಲ್ಲಿ ಖರೀದಿ ಲಭ್ಯವಿದ್ದು, ಸ್ಟ್ಯಾಂಡರ್ಡ್ ಮತ್ತು ಟೂರರ್ ಆವೃತ್ತಿಗಳನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಬಹುನೀರಿಕ್ಷಿತ ಫೋರ್ಜಾ 350 ಮ್ಯಾಕ್ಸಿ ಸ್ಕೂಟರ್

ಸ್ಟ್ಯಾಂಡರ್ಡ್ ಫೋರ್ಜಾ 350 ಸ್ಕೂಟರ್ ಭಾರತೀಯ ರೂಪಾಯಿ ಬೆಲೆಯಲ್ಲಿ 4.15 ಲಕ್ಷ ಬೆಲೆ ಹೊಂದಿದ್ದು, ಟೂರರ್ ಮಾದರಿಯು ರೂ.4.38 ಲಕ್ಷ ಬೆಲೆಯೊಂದಿಗೆ ಬಿಡುಗಡೆಯಾಗಿದೆ. ಹೊಸ ಸ್ಕೂಟರ್‌ನಲ್ಲಿ ಹೊಸದಾಗಿ ಅಭಿವೃದ್ದಿಗೊಳಿಸಲಾದ 350 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಬಹುನೀರಿಕ್ಷಿತ ಫೋರ್ಜಾ 350 ಮ್ಯಾಕ್ಸಿ ಸ್ಕೂಟರ್

ಭಾರತದಲ್ಲಿ ಬಿಡುಗಡೆಗಾಗಿ ನಿರ್ಧರಿಸಿರುವ ಹೊಸ ಫೋರ್ಜಾ 300 ಮಾದರಿಯು 279-ಸಿಸಿ, ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಷಡ್, SOHC ಫೋರ್ ವ್ಲಾವೆ ಎಂಜಿನ್ ಹೊಂದಿದ್ದು, 24.8-ಬಿಎಚ್‌ಪಿ ಮತ್ತು 27.2-ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್ ನೀಡಬಲ್ಲದು.

ಬಿಡುಗಡೆಗೊಂಡ ಬಹುನೀರಿಕ್ಷಿತ ಫೋರ್ಜಾ 350 ಮ್ಯಾಕ್ಸಿ ಸ್ಕೂಟರ್

ಹೊಸ ಸ್ಕೂಟರ್ ಅನ್ನು ಟ್ಯಾಬ್ಯೂಲರ್ ಸ್ಟೀಲ್ ಫ್ರೆಮ್ ಚಾರ್ಸಿ ಮೇಲೆ ನಿರ್ಮಾಣ ಮಾಡಲಾಗಿದ್ದು, ಅಲ್ಯುಮಿನಿಯಂ ಪ್ರೇರಿತ 15-ಇಂಚಿನ ಮುಂಭಾಗ ಚಕ್ರ ಮತ್ತು 14-ಇಂಚಿನ ಹಿಂಭಾಗದ ಚಕ್ರದ ಜೊತೆಗೆ 256-ಎಂಎಂ ಮುಂಭಾದ ಡಿಸ್ಕ್ ಬ್ರೇಕ್ ಮತ್ತು 240-ಎಂಎಂ ಹಿಂಭಾಗದ ಡಿಸ್ಕ್ ಜೋಡಿಸಲಾಗಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಬಿಡುಗಡೆಗೊಂಡ ಬಹುನೀರಿಕ್ಷಿತ ಫೋರ್ಜಾ 350 ಮ್ಯಾಕ್ಸಿ ಸ್ಕೂಟರ್

ಇದರೊಂದಿಗೆ ಪ್ರೀಮಿಯಂ ಫೀಚರ್ಸ್‌ಗಳಾದ ಟ್ರಾಕ್ಷನ್ ಕಂಟ್ರೋಲ್, ಫ್ರಂಟ್ ಎಲೆಕ್ಟ್ರಿಕ್ ವೀಂಡ್ ಸ್ಕೀನ್, ಎರಡು ಫುಲ್ ಫೇಸ್ ಹೆಲ್ಮೆಟ್ ಹಿಡಿಯುವಷ್ಟು ಅಂಡರ್ ಸೀಟ್ ಸ್ಟೋರೆಜ್, 12-ವಿ ಚಾರ್ಜಿಂಗ್ ಸಾಕೆಟ್, ಇಗ್ನಿಷನ್ ನಾಬ್ ಕಂಟ್ರೋಲ್ ಮಾಡಬಹುದಾದ ಸ್ಮಾರ್ಟ್ ಕೀ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್, ಸಿಂಗಲ್ ಪೀಸ್ ಅಲ್ಯುಮಿಯಂ ಸ್ವಿಂಗ್ ಆರ್ಮ್ ಪಡೆದುಕೊಂಡಿದೆ.

ಬಿಡುಗಡೆಗೊಂಡ ಬಹುನೀರಿಕ್ಷಿತ ಫೋರ್ಜಾ 350 ಮ್ಯಾಕ್ಸಿ ಸ್ಕೂಟರ್

ಫೋರ್ಜಾ 300 ಸ್ಕೂಟರ್ ಬೆಲೆ(ಅಂದಾಜು)

ಭಾರತದಲ್ಲಿ ಫೋರ್ಜಾ ಸ್ಕೂಟರ್ ಅಧಿಕೃತವಾಗಿ ಬಿಡುಗಡೆಗೊಂಡಲ್ಲಿ ಸ್ಕೂಟರ್ ಬೆಲೆಯು ಇಳಿಕೆಯಾಗುವ ಸಾಧ್ಯತೆಗಳಿದ್ದು, ಸದ್ಯ ಆಸಕ್ತ ಗ್ರಾಹಕರಿಗಾಗಿ ಮಾತ್ರವೇ ದುಬಾರಿ ಬೆಲೆಯೊಂದಿಗೆ ಆಮದು ಮಾಡಿಕೊಂಡು ಮಾರಾಟಕ್ಕೆ ಚಾಲನೆ ನೀಡಲಾಗಿದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಬಿಡುಗಡೆಗೊಂಡ ಬಹುನೀರಿಕ್ಷಿತ ಫೋರ್ಜಾ 350 ಮ್ಯಾಕ್ಸಿ ಸ್ಕೂಟರ್

ಆಮದು ಸುಂಕ ಮತ್ತು ಮೂಲ ಬೆಲೆಯೊಂದಿಗೆ ಹೊಸ ಸ್ಕೂಟರ್ ಮಾದರಿಯು ಸುಮಾರು ರೂ. 3 ಲಕ್ಷದಿಂದ ರೂ. 3.50 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿದ್ದು, ಭಾರತದಲ್ಲಿ ಬಿಡುಗಡೆಯಾಗುವ ಮಾದರಿಯ ಬೆಲೆಯನ್ನು ತಗ್ಗಿಸುವುದಕ್ಕಾಗಿ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ತೆಗೆದುಹಾಕಬಹುದಾದ ಸಾಧ್ಯತೆಗಳಿವೆ.

More from DriveSpark

Article Published On: Tuesday, July 14, 2020, 21:52 [IST]
English summary
Honda Launched All New Forza 350 In Thailand. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+