ಬಿಡುಗಡೆಯಾಯ್ತು ಹೊಸ ಹೋಂಡಾ ಸಿಬಿಆರ್ 250 ಆರ್‌ಆರ್ ಬೈಕ್

ಜನಪ್ರಿಯ ದ್ವಿಚಕ ವಾಹನ ತಯಾರಕ ಕಂಪನಿಯಾದ ಹೋಂಡಾ ತನ್ನ ಹೊಸ ಸಿಬಿಆರ್ 250 ಆರ್‌ಆರ್ ಸ್ಪೋರ್ಟ್ಸ್ ಬೈಕನ್ನು ಜಪಾನ್‌ನಲ್ಲಿ ಬಿಡುಗಡೆಗೊಳಿಸಿದೆ. ಹೊಸ ಹೋಂಡಾ ಸಿಬಿಆರ್ 250 ಆರ್‌ಆರ್ ಸ್ಪೋರ್ಟ್ಸ್ ಬೈಕನ್ನು ಹಲವಾರು ನವೀಕರಣಗಳನ್ನು ನಡೆಸಿ ಕೆಲವು ಹೊಸ ಫೀಚರ್‍‍ಗಳೊಂದಿಗೆ ಬಿಡುಗಡೆಗೊಳಿಸಿದೆ.

ಬಿಡುಗಡೆಯಾಯ್ತು ಹೊಸ ಹೋಂಡಾ ಸಿಬಿಆರ್ 250 ಆರ್‌ಆರ್ ಬೈಕ್

ಈ ಹೊಸ ಹೋಂಡಾ ಸಿಬಿಆರ್ 250 ಆರ್‌ಆರ್ ಬೈಕ್ ಮ್ಯಾಟ್ ಗನ್ ಪವರ್ ಬ್ಲ್ಯಾಕ್ ಮೆಟಾಲಿಕ್, ಪರ್ಲ್ ಗ್ಲೇರ್ ವೈಟ್, ಗ್ರ್ಯಾಂಡ್ ಪ್ರಿಕ್ಸ್ ರೆಡ್ ಮತ್ತು ಗ್ರ್ಯಾಂಡ್ ಪ್ರಿಕ್ಸ್ ರೆಡ್ ಎಂಬ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ. ಹೊಸ ಹೋಂಡಾ ಸಿಬಿಆರ್ 250 ಆರ್‌ಆರ್ ಬೈಕಿನ ಬೆಲೆಯು ಜಪಾನ್ ಎಕ್ಸ್ ಶೋರೂಂ ಪ್ರಕಾರ ರೂ.5.80 ಗಳಾಗಿದೆ. ಈ ಹೋಂಡಾ ಸಿಬಿಆರ್ 250 ಆರ್‌ಆರ್ ಮಾದರಿಯು ಯಮಹಾ ವೈಝೆಡ್-ಆರ್ 25 ಮತ್ತು ಕವಾಸಕಿ ನಿಂಜಾ 250 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಬಿಡುಗಡೆಯಾಯ್ತು ಹೊಸ ಹೋಂಡಾ ಸಿಬಿಆರ್ 250 ಆರ್‌ಆರ್ ಬೈಕ್

ಹೊಸ ಹೋಂಡಾ ಸಿಬಿಆರ್ 250 ಆರ್‌ಆರ್ ಬೈಕ್ 249 ಸಿಸಿ ಲಿಕ್ವಿಡ್-ಕೂಲ್ಡ್ ಡಿಒಹೆಚ್‌ಸಿ ಇನ್ ಲೈನ್-ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 13,000 ಆರ್‌ಪಿಎಂನಲ್ಲಿ 40 ಬಿಹೆಚ್‌ಪಿ ಪವರ್ ಹಾಗೂ 11,000 ಆರ್‌ಪಿಎಂನಲ್ಲಿ 25 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಬಿಡುಗಡೆಯಾಯ್ತು ಹೊಸ ಹೋಂಡಾ ಸಿಬಿಆರ್ 250 ಆರ್‌ಆರ್ ಬೈಕ್

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸಿಬಿಆರ್ 250 ಆರ್‌ಆರ್ ಬೈಕ್ 249 ಸಿಸಿ ಪ್ಯಾರೆಲಲ್-ಟ್ವಿನ್, 8-ವಾಲ್ವ್, ಡಿಒಸಿಹೆಚ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 12,500 ಆರ್‌ಪಿಎಂನಲ್ಲಿ 38 ಬಿಹೆಚ್‌ಪಿ ಪವರ್ ಹಾಗೂ 11,000 ಆರ್‌ಪಿಎಂನಲ್ಲಿ 23 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ.

ಬಿಡುಗಡೆಯಾಯ್ತು ಹೊಸ ಹೋಂಡಾ ಸಿಬಿಆರ್ 250 ಆರ್‌ಆರ್ ಬೈಕ್

249 ಸಿಸಿ ಎಂಜಿನ್‌ ಹೊಂದಿರುವ 2020ರ ಸಿಬಿಆರ್ 250 ಆರ್‌ಆರ್ ಬೈಕಿನಲ್ಲಿ ಹೊಸ ವಿನ್ಯಾಸದ ಪಿಸ್ಟನ್ ಅಳವಡಿಸಲಾಗಿದೆ. ಎಂಜಿನ್ ಪವರ್ ಉತ್ಪಾದನೆಯು 38 ಬಿಹೆಚ್‌ಪಿಯಿಂದ 40 ಬಿಹೆಚ್‌ಪಿಗೆ ಪವರ್ ಅನ್ನು ಏರಿಸಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಬಿಡುಗಡೆಯಾಯ್ತು ಹೊಸ ಹೋಂಡಾ ಸಿಬಿಆರ್ 250 ಆರ್‌ಆರ್ ಬೈಕ್

ಹೊಸ ಹೋಂಡಾ ಸಿಬಿಆರ್ 250 ಆರ್ಆರ್ ಬೈಕ್ ಸ್ಲಿಪ್ಪರ್ ಕ್ಲಚ್ ಹಾಗೂ ಬೈ-ಡೈರೆಕ್ಷನಲ್ ಕ್ವಿಕ್ ಶಿಫ್ಟರ್ ಗಳನ್ನು ಹೊಂದಿರಲಿದೆ. ಹೋಂಡಾದ ಈ ಹೊಸ ಕ್ವಾರ್ಟ್-ಲೀಟರ್ ಬೈಕ್ ಸ್ಮಾರ್ಟ್ ಕೀ ಸಿಸ್ಟಂ ಅನ್ನು ನೀಡುತ್ತದೆ. ಈ ಸಿಸ್ಟಂ ಕೀ ಲೆಸ್ ಇಗ್ನಿಷನ್ ಒದಗಿಸುತ್ತದೆ.

ಬಿಡುಗಡೆಯಾಯ್ತು ಹೊಸ ಹೋಂಡಾ ಸಿಬಿಆರ್ 250 ಆರ್‌ಆರ್ ಬೈಕ್

ಕೀ ಫ್ಯಾಬ್‌ನಲ್ಲಿರುವ ಲಾಕ್ ಬಟನ್ ಮೂಲಕ ಬೈಕ್ ಮಾಲೀಕರು ಹ್ಯಾಂಡಲ್‌ಬಾರ್‌ಗಳನ್ನು ಲಾಕ್ ಹಾಗೂ ಅನ್ಲಾಕ್ ಮಾಡಬಹುದು. ಹೋಂಡಾ ಸಿಬಿಆರ್ 250 ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಬೈಕುಗಳಲ್ಲಿ ಒಂದಾಗಿದೆ.

MOST READ: ಹೊಸ ಮಹೀಂದ್ರಾ ಮೊಜೊ 300 ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಬಿಡುಗಡೆಯಾಯ್ತು ಹೊಸ ಹೋಂಡಾ ಸಿಬಿಆರ್ 250 ಆರ್‌ಆರ್ ಬೈಕ್

ಈ ಹೊಸ ಹೋಂಡಾ ಸಿಬಿಆರ್ 250 ಆರ್ಆರ್ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 37 ಎಂಎಂ ಯುಎಸ್ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಪ್ರೊ-ಲಿಂಕ್ 5-ಹಂತದ ಮೊನೊಶಾಕ್ ಸಸ್ಪೆಂಕ್ಷ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಳಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಿದೆ.

ಬಿಡುಗಡೆಯಾಯ್ತು ಹೊಸ ಹೋಂಡಾ ಸಿಬಿಆರ್ 250 ಆರ್‌ಆರ್ ಬೈಕ್

ಹೋಂಡಾ ಕಂಪನಿಯು ಹೊಸ ಸಿಬಿಆರ್ 250 ಆರ್‌ಆರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ. ಹೊಸ ಸಿಬಿಆರ್ 250 ಆರ್ಆರ್ ಬೈಕಿನಲ್ಲಿ ಪವರ್‌ಫುಲ್ ಎಂಜಿನ್ ಮತ್ತು ಹೊಸ ತಂತ್ರಜ್ಞಾನವನ್ನು ಹೊಂದಿದೆ.

Article Published On: Saturday, July 25, 2020, 16:08 [IST]
English summary
2021 Honda CBR250RR launched in Japan Details In Kannada. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+