ಆಕ್ಟಿವಾ ಸ್ಕೂಟರ್ ಬಿಡುಗಡೆಯ 20ನೇ ವರ್ಷದ ಸಂಭ್ರಮಾಚರಣೆ ಕೈಗೊಂಡ ಹೋಂಡಾ ಮೋಟಾರ್‌ಸೈಕಲ್

ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಹೋಂಡಾ ನಿರ್ಮಾಣದ ಆಕ್ಟಿವಾ ಆವೃತ್ತಿಯು ಬಿಡುಗಡೆಯಾದ ಕಳೆದ 20 ವರ್ಷಗಳಲ್ಲಿ ಹಲವಾರು ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದು, ಗ್ರಾಹಕರ ಬೇಡಿಕೆಯೆಂತೆ ನಿರಂತರವಾಗಿ ಬದಲಾವಣೆಗೊಳ್ಳುತ್ತಲೇ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಆಕ್ಟಿವಾ ಬಿಡುಗಡೆಯ 20ನೇ ವರ್ಷದ ಸಂಭ್ರಮಾಚರಣೆ ಕೈಗೊಂಡ ಹೋಂಡಾ

ಸದ್ಯ ಮಾರುಕಟ್ಟೆಯಲ್ಲಿ ಬಿಎಸ್-6 ಎಮಿಷನ್ ಜಾರಿ ನಂತರ ಆಕ್ಟಿವಾ 6ಜಿ ಆವೃತ್ತಿಯಾಗಿ ಮಾರಾಟಗೊಳ್ಳುತ್ತಿದ್ದು, ಹೊಸ ಸ್ಕೂಟರ್ ಮಾದರಿಯು ಹೊಸ ಎಂಜಿನ್ ಆಯ್ಕೆಯೊಂದಿಗೆ ವಿವಿಧ ಮಾದರಿಯ ಬಣ್ಣಗಳ ಆಯ್ಕೆಗಳನ್ನು ಹೊಂದಿರುವುದು ಮತ್ತಷ್ಟು ಬೇಡಿಕೆ ಹರಿದುಬರುತ್ತಿದೆ. ಬೆಲೆ, ತಾಂತ್ರಿಕ ಅಂಶಗಳಲ್ಲಿ ಪ್ರತಿ ಸ್ಪರ್ಧಿ ಸ್ಕೂಟರ್ ಮಾದರಿಗಳಿಂತಲೂ ಅತ್ಯುತ್ತಮ ಫೀಚರ್ಸ್ ಹೊಂದಿರುವ ಆಕ್ಟಿವಾ ಸ್ಕೂಟರ್ ಮಾದರಿಯು ದೇಶದ ಜನಪ್ರಿಯ ಸ್ಕೂಟರ್ ಮಾದರಿಯಾಗಿ ಹೊರಹೊಮ್ಮಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ.

ಆಕ್ಟಿವಾ ಬಿಡುಗಡೆಯ 20ನೇ ವರ್ಷದ ಸಂಭ್ರಮಾಚರಣೆ ಕೈಗೊಂಡ ಹೋಂಡಾ

ಆಕ್ಟಿವಾ ಸ್ಕೂಟರ್ ಮಾರಾಟ ಯಶಸ್ವಿಯನ್ನು ಸಂಭ್ರಮಿಸುತ್ತಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಹೊಸ ಅಭಿಯಾನ ಆರಂಭಿಸಿದ್ದು, ಕಳೆದ 20 ವರ್ಷಗಳಲ್ಲಿ ಆಕ್ಟಿವಾ ಸ್ಕೂಟರ್ ಕೋಟ್ಯಾಂತರ ಗ್ರಾಹಕರ ಕನಸುಗಳನ್ನು ನನಸು ಮಾಡುವಲ್ಲಿ ಯಶಸ್ವಿಯಾಗಿದೆ.

ಆಕ್ಟಿವಾ ಬಿಡುಗಡೆಯ 20ನೇ ವರ್ಷದ ಸಂಭ್ರಮಾಚರಣೆ ಕೈಗೊಂಡ ಹೋಂಡಾ

ಇದೇ ಕಾರಣಕ್ಕೆ 20ನೇ ವರ್ಷದ ಸ್ಪೆಷಲ್ ಎಡಿಷನ್ ಆಕ್ಟಿವಾ 6ಜಿ ಮಾದರಿಯನ್ನು ಕೂಡಾ ಮಾರುಕಟ್ಟೆಗೆ ಪರಿಚಯಿಸಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ವಿಶೇಷ ಟಿವಿ ಜಾಹೀರಾತು ಬಿಡುಗಡೆ ಮಾಡಿದೆ.

ಆಕ್ಟಿವಾ ಬಿಡುಗಡೆಯ 20ನೇ ವರ್ಷದ ಸಂಭ್ರಮಾಚರಣೆ ಕೈಗೊಂಡ ಹೋಂಡಾ

ಆಕ್ಟಿವಾ ಸ್ಕೂಟರ್ ಮಾದರಿಯು ಇದುವರೆಗೆ ಬರೋಬ್ಬರಿ 20 ಮಿಲಿಯನ್(2 ಕೋಟಿ) ಯುನಿಟ್ ಮಾರಾಟ ಗುರಿಸಾಧನೆ ಹೊಂದಿದ್ದು, ಸ್ಕೂಟರ್ ಮಾರಾಟದಲ್ಲೇ ಅಗ್ರಸ್ಥಾನದೊಂದಿಗೆ ಹಲವಾರು ದಾಖಲೆಗಳಿಗೆ ಕಾಣವಾಗಿದೆ. ಕಾಲಕ್ಕೆ ತಕ್ಕಂತೆ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿರುವ ಆಕ್ಟಿವಾ ಸ್ಕೂಟರ್ ಮಾದರಿಯು ಕಳೆದ 20 ವರ್ಷಗಳಿಂದ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದ್ದು, ಮುಂಬರುವ ದಿನಗಳಲ್ಲೂ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿಯುವ ವಿಶ್ವಾಸದಲ್ಲಿದೆ.

ಆಕ್ಟಿವಾ ಬಿಡುಗಡೆಯ 20ನೇ ವರ್ಷದ ಸಂಭ್ರಮಾಚರಣೆ ಕೈಗೊಂಡ ಹೋಂಡಾ

ಇನ್ನು ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ಮಾದರಿಗಳಲ್ಲಿ ಮಾರಾಟಗೊಳ್ಳುತ್ತಿರುವ ಆಕ್ಟಿವಾ 6ಜಿ ಸ್ಕೂಟರ್ ಮಾದರಿಯು ಸ್ಪೆಷಲ್ ಎಡಿಷನ್‌ನೊಂದಿಗೆ ನಮ್ಮ ಬೆಂಗಳೂರಿನಲ್ಲಿ ಆನ್‌ರೋಡ್ ಪ್ರಕಾರ ಆರಂಭಿಕವಾಗಿ ರೂ. 84,414ಕ್ಕೆ ಮತ್ತು ಡಿಲಕ್ಸ್ ಮಾದರಿಯು ರೂ. 86,132 ಬೆಲೆ ಹೊಂದಿದೆ.

ಆಕ್ಟಿವಾ ಬಿಡುಗಡೆಯ 20ನೇ ವರ್ಷದ ಸಂಭ್ರಮಾಚರಣೆ ಕೈಗೊಂಡ ಹೋಂಡಾ

ಸೀಮಿತ ಅವಧಿಗಾಗಿ ಬಿಡುಗಡೆಯಾಗಿರುವ 20ನೇ ವರ್ಷದ ಸ್ಪೆಷಲ್ ಎಡಿಷನ್ ಮಾದರಿಯು ಆರಂಭಿಕವಾಗಿ ರೂ. 86,095ಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 87,819 ಬೆಲೆ ಹೊಂದಿದ್ದು, ಹೊಸ ಸ್ಕೂಟರ್‌ನಲ್ಲಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಒಟ್ಟು 8 ಬಣ್ಣಗಳ ಆಯ್ಕೆ ನೀಡಿದೆ.

ಆಕ್ಟಿವಾ ಬಿಡುಗಡೆಯ 20ನೇ ವರ್ಷದ ಸಂಭ್ರಮಾಚರಣೆ ಕೈಗೊಂಡ ಹೋಂಡಾ

ಸ್ಪೆಷಲ್ ಎಡಿಷನ್ ಸೇರಿದಂತೆ ಆಕ್ಟಿವಾ 6ಜಿ ಮಾದರಿಯಲ್ಲಿ ಗ್ಲಿಟೆರ್ ಬ್ಲ್ಯೂ ಮೆಟಾಲಿಕ್, ಪರ್ಲ್ ಸ್ಪಾರ್ಟನ್ ರೆಡ್, ಡ್ಯಾಜೆಲ್ ಯೆಲ್ಲೊ ಮೆಟಾಲಿಕ್, ಬ್ಲ್ಯಾಕ್, ಪರ್ಲ್ ಪ್ರಿಸಿಯಸ್ ವೈಟ್, ಮ್ಯಾಟೆ ಆಕ್ಸಿಸ್ ಗ್ರೇ ಮೆಟಾಲಿಕ್, ಬ್ರೌನ್ ಮೆಟಾಲಿಕ್ ಮತ್ತು ಪರ್ಲ್ ನೈಟ್ ಸ್ಟಾರ್ ಬ್ಲ್ಯಾಕ್ ಬಣ್ಣಗಳ ಆಯ್ಕೆ ಹೊಂದಿದೆ. ಸ್ಪೆಷಲ್ ಎಡಿಷನ್ ಮಾದರಿಯು ಮುಂದಿನ ಕೆಲ ದಿನಗಳವರೆ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಸಾಮನ್ಯ ಮಾದರಿಗಳ ಮಾರಾಟದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಆಕ್ಟಿವಾ ಬಿಡುಗಡೆಯ 20ನೇ ವರ್ಷದ ಸಂಭ್ರಮಾಚರಣೆ ಕೈಗೊಂಡ ಹೋಂಡಾ

ಬಿಎಸ್-6 ಎಂಜಿನ್ ಜೋಡಣೆ ನಂತರ ಗ್ರಾಹಕರ ಆಯ್ಕೆಯಲ್ಲಿ ಮತ್ತಷ್ಟು ಮುಂಚೂಣಿ ಸಾಧಿಸುತ್ತಿರುವ ಆಕ್ಟಿವಾ 6ಜಿ ಸ್ಕೂಟರ್ ಮಾದರಿಯು 109 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಪಡೆದುಕೊಂಡಿದ್ದು, 7.79-ಬಿಹೆಚ್‍ಪಿ ಮತ್ತು 8.79-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆಕ್ಟಿವಾ ಬಿಡುಗಡೆಯ 20ನೇ ವರ್ಷದ ಸಂಭ್ರಮಾಚರಣೆ ಕೈಗೊಂಡ ಹೋಂಡಾ

ಹೊಸ ಎಮಿಷನ್ ನಿಯಮದಿಂದಾಗಿ ಹೊಸ ಎಂಜಿನ್ ಕಾರ್ಯಕ್ಷಮತೆಯು ಹೆಚ್ಚಳವಾಗುವುದರ ಜೊತೆಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯುತ್ತಿದ್ದು, ಆಕ್ಟಿವಾ 6ಜಿ ಮಾದರಿಯು ಪ್ರತಿ ಲೀಟರ್‌ಗೆ ಸರಾಸರಿಯಾಗಿ 60 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಆಕ್ಟಿವಾ ಬಿಡುಗಡೆಯ 20ನೇ ವರ್ಷದ ಸಂಭ್ರಮಾಚರಣೆ ಕೈಗೊಂಡ ಹೋಂಡಾ

ಸದ್ಯ ಮಾರುಕಟ್ಟೆಯಲ್ಲಿ ಆಕ್ಟಿವಾ ನ್ಯೂ ಜನರೇಷನ್ ಮಾದರಿಯ ನಂತರ ಕಳೆದ 2 ವರ್ಷಗಳಿಂದ ಪ್ರತಿ ತಿಂಗಳು ಸರಾಸರಿಯಾಗಿ 3 ಲಕ್ಷ ಯುನಿಟ್ ಮಾರಾಟಗೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಹೆಚ್ಚಳವಾಗುವ ನೀರಿಕ್ಷೆಗಳಿವೆ.

Most Read Articles

Kannada
English summary
Honda Activa 20 Years Campaign. Read in Kannada.
Story first published: Friday, December 18, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X