ಹೋಂಡಾ ದ್ವಿಚಕ್ರ ವಾಹನಗಳ ಖರೀದಿಸುವ ಗ್ರಾಹಕರಿಗೆ ಶೇ.5ರಷ್ಟು ಕ್ಯಾಶ್‌ಬ್ಯಾಕ್ ಆಫರ್
ಹೊಸ ವಾಹನಗಳ ಮಾರಾಟ ಪ್ರಮಾಣವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಆಟೋ ಕಂಪನಿಗಳು ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿರುವುದಲ್ಲದೆ ಗ್ರಾಹಕರಿಗೆ ವಿವಿಧ ಮಾದರಿಯ ಹಲವು ಸುಲಭ ಸಾಲಸೌಲಭ್ಯಗಳನ್ನು ಒದಗಿಸುತ್ತಿರುವ ಗ್ರಾಹಕರ ಪ್ರಮುಖ ಆಕರ್ಷಣೆಯಾಗುತ್ತಿವೆ.

ಲಾಕ್‌ಡೌನ್ ತೆರವುಗೊಂಡ ನಂತರವು ಹೊಸ ವಾಹನ ಮಾರಾಟ ಪ್ರಮಾಣದಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡುಬಂದಿದ್ದು, ಹೋಂಡಾ ಹಲವಾರು ಆಟೋ ಕಂಪನಿಗಳು ಗ್ರಾಹಕರನ್ನು ಸೆಳೆಯಲು ವಿವಿಧ ಆಫರ್‌ಗಳನ್ನು ಸೇರಿದಂತೆ ಸುಲಭ ಸಾಲ ಸೌಲಭ್ಯಗಳನ್ನು ನೀಡುತ್ತಿವೆ. ಹೋಂಡಾ ಕಂಪನಿಯು ಹೊಸದಾಗಿ ಘೋಷಣೆ ಮಾಡಿರುವ ಹೊಸ ಸಾಲ ಸೌಲಭ್ಯವು ಲಾಕ್‌ಡೌನ್ ಸಂಕಷ್ಟದಿಂದಾಗಿ ವಾಹನ ಖರೀದಿ ಮುಂದೂಡಿರುವ ಗ್ರಾಹಕರಿಗೆ ಸಾಕಷ್ಟು ಸಹಕಾರಿಯಾಗಲಿದೆ.

ಮಾಹಿತಿ ಪ್ರಕಾರ, ಹೆಚ್‌ಡಿಎಫ್‌ಪಿ, ಎಸ್‌ಬಿಐ ಮತ್ತು ಐಡಿಎಫ್‌ಸಿ ಬ್ಯಾಂಕ್‌ಗಳ ಜೊತೆಗೂಡಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಶೇ.95 ರಷ್ಟು ಆನ್ ರೋಡ್ ಸಾಲಸೌಲಭ್ಯಗಳನ್ನು ಒದಗಿಸುತ್ತಿದ್ದು, ಎಸ್‌ಬಿಐ ಕ್ರೆಡಿಕ್ ಕಾರ್ಡ್ ಮೂಲಕ ಹೊಸ ದ್ವಿಚಕ್ರ ವಾಹನ ಖರೀದಿಸುವ ಗ್ರಾಹಕರಿಗೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿದೆ.

ಜೊತೆಗೆ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಸೀಮಿತ ಅವಧಿಯೊಳಗೆ ಸ್ಕೂಟರ್ ಮತ್ತು ಬೈಕ್ ಖರೀದಿಸುವ ಗ್ರಾಹಕರಿಗೆ ಅತಿ ಸರಳವಾಗ ಇಎಂಐ ಆಫರ್ ಸಹ ನೀಡುತ್ತಿದ್ದು, ಗ್ರಾಹಕರು ಹೊಸ ವಾಹನ ಖರೀದಿ ಮಾಡಿದ ಮೊದಲ 3 ತಿಂಗಳು ಕೇವಲ ಶೇ.50ರಷ್ಟು ಐಎಂಐ ಮಾತ್ರ ಮರುಪಾವತಿಗೆ ಅವಕಾಶ ನೀಡಲಾಗಿದೆ.

ಮೂರು ತಿಂಗಳ ನಂತರ ವಿನಾಯ್ತಿ ನೀಡಲಾದ ಸಾಲ ಮೊತ್ತವು ಕೂಡಾ ಸೇರ್ಪಡೆಯಾಗುವುದರೊಂದಿಗೆ ಇಎಂಐ ದರಗಳನ್ನು ವಿಧಿಸಲಿದ್ದು, ಲಾಕ್‌ಡೌನ್ ಸಮಯದಲ್ಲಿ ಹೊಸ ವಾಹನ ಖರೀದಿಸಿ ಇಎಂಐ ಮರುಪಾವತಿ ಸಾಧ್ಯವಿಲ್ಲ ಎನ್ನುವ ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗಿದೆ.
MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಇದಲ್ಲದೆ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಕರೋನಾ ವೈರಸ್‌ನಿಂದಾಗಿ ಇಳಿಕೆಯಾಗಿರುವ ವಾಹನ ಮಾರಾಟ ಪ್ರಮಾಣವನ್ನು ಸುಧಾರಣೆಗೊಳಿಸಲು ಪ್ರಮುಖ ದ್ವಿಚಕ್ರ ವಾಹನ ಮಾದರಿಗಳ ಖರೀದಿ ಮೇಲೆ ಹೆಚ್ಚುವರಿ ವಾರಂಟಿ ಅವಧಿಯ ಆಫರ್ ನೀಡುತ್ತಿದೆ.

ಆಯ್ದ ದ್ವಿಚಕ್ರ ವಾಹನ ಖರೀದಿ ಮೇಲೆ ವಿಸ್ತರಿತ ವಾರಂಟಿ ಘೋಷಣೆ ಮಾಡಿದ್ದು, ಸೀಮಿತ ಅವಧಿಯಲ್ಲಿ ದ್ವಿಚಕ್ರ ವಾಹನ ಖರೀದಿಸುವ ಗ್ರಾಹಕರಿಗೆ 2 ವರ್ಷಗಳ ಜೊತೆಗೆ ಹೆಚ್ಚುವರಿಯಾಗಿ 1 ವರ್ಷದ ವಾರಂಟಿ ಅವಧಿಯ ಆಫರ್ ಲಭ್ಯವಾಗಲಿದೆ.
MOST READ: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳಿವು..!

ಸದ್ಯ ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿಯು ಬಿಎಸ್-6 ನಿಯಮ ಅನುಸಾರವಾಗಿ ಹೊಸ ವಾಹನಗಳನ್ನು ಮಾರಾಟ ಮಾಡುತ್ತಿದ್ದು, ಆಕ್ಟಿವಾ 6ಜಿ, ಆಕ್ಟಿವಾ 125 ಎಫ್ಐ, ಡಿಯೋ, ಗ್ರಾಜಿಯಾ, ಎಸ್‌ಪಿ 125 ಮತ್ತು ಶೈನ್ ಬೈಕ್ ಮಾದರಿಗಳು ಬಿಎಸ್-6 ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿವೆ.


Click it and Unblock the Notifications