ಬಿ‌ಎಸ್ 4 ವಾಹನಗಳನ್ನು ರಿಕಾಲ್ ಮಾಡುತ್ತಿದೆ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ಸ್ ಕಂಪನಿಯು ತನ್ನ ಡೀಲರ್‌ಗಳ ಬಳಿಯಿರುವ ಬಿಎಸ್ 4 ಎಂಜಿನ್ ಹೊಂದಿರುವ ಆಕ್ಟಿವಾ, ಸಿಬಿ ಶೈನ್ ಹಾಗೂ ಡಿಯೊ ವಾಹನಗಳನ್ನು ರಿಕಾಲ್ ಮಾಡುತ್ತಿದೆ. ಲಾಕ್‌ಡೌನ್ ಆಗಿರುವುದರಿಂದ ಬಿಎಸ್ 4 ವಾಹನಗಳ ಸ್ಟಾಕ್ ಮಾರಾಟವಾಗುತ್ತಿಲ್ಲ.

ಬಿ‌ಎಸ್ 4 ವಾಹನಗಳನ್ನು ರಿಕಾಲ್ ಮಾಡುತ್ತಿದೆ ಹೋಂಡಾ

ಏಪ್ರಿಲ್ 1ರಿಂದ ಭಾರತದಲ್ಲಿ ಬಿಎಸ್ 6 ಮಾಲಿನ್ಯ ನಿಯಮಗಳು ಜಾರಿಗೆ ಬಂದಿವೆ. ಈಗ ಬಿಎಸ್ 4 ವಾಹನಗಳ ಉತ್ಪಾದನೆ ಹಾಗೂ ಮಾರಾಟವನ್ನು ಕಾನೂನುಬಾಹಿರ ಎಂದು ಹೇಳಲಾಗಿದೆ.

ಬಿ‌ಎಸ್ 4 ವಾಹನಗಳನ್ನು ರಿಕಾಲ್ ಮಾಡುತ್ತಿದೆ ಹೋಂಡಾ

ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಲಾಕ್‌ಡೌನ್ ಮುಗಿದ ನಂತರ 10 ದಿನಗಳ ಹೆಚ್ಚುವರಿ ಸಮಯವನ್ನು ಬಿಎಸ್ 4 ವಾಹನಗಳನ್ನು ಮಾರಾಟ ಮಾಡಲು ನೀಡಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಬಿ‌ಎಸ್ 4 ವಾಹನಗಳನ್ನು ರಿಕಾಲ್ ಮಾಡುತ್ತಿದೆ ಹೋಂಡಾ

ಭಾರತದಲ್ಲಿರುವ ವಾಹನ ಡೀಲರ್‌ಗಳು ಸುಮಾರು ರೂ.10,000 ಕೋಟಿ ಮೌಲ್ಯದ ಬಿಎಸ್ 4 ವಾಹನಗಳನ್ನು ಹೊಂದಿದ್ದಾರೆ. ಇದರಲ್ಲಿ ದ್ವಿಚಕ್ರ ವಾಹನಗಳ ಮೌಲ್ಯವೇ ರೂ.3,400 ಕೋಟಿಗಳಾಗುತ್ತದೆ.

ಬಿ‌ಎಸ್ 4 ವಾಹನಗಳನ್ನು ರಿಕಾಲ್ ಮಾಡುತ್ತಿದೆ ಹೋಂಡಾ

2020ರ ಆರಂಭದಿಂದಲೂ, ವಾಹನ ವಿತರಕರು ಬಿಎಸ್ 4 ವಾಹನಗಳ ಮಾರಾಟದ ಮೇಲೆ ರಿಯಾಯಿತಿಗಳನ್ನು ನೀಡುತ್ತಿದ್ದಾರೆ. ಆದರೂ ಸಹ ಮಾರಾಟದಲ್ಲಿ ಏರಿಕೆಯಾಗಿಲ್ಲ.

MOST READ: ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಬಿ‌ಎಸ್ 4 ವಾಹನಗಳನ್ನು ರಿಕಾಲ್ ಮಾಡುತ್ತಿದೆ ಹೋಂಡಾ

ವಾಹನ ಮಾರಾಟಗಾರರು ತಮಗೆ ಉಂಟಾಗಿರುವ ನಷ್ಟವನ್ನು ಸರಿದೂಗಲು ವಿಶೇಷ ಪ್ಯಾಕೇಜ್ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಿದ್ದಾರೆ. ಇದರಲ್ಲಿ ಉತ್ಪಾದನಾ ಘಟಕಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿಮೆಗೊಳಿಸುವುದು, ಉದ್ಯೋಗಿಗಳ ವಾಣಿಜ್ಯ ತೆರಿಗೆ ಮುಂತಾದ ಬೇಡಿಕೆಗಳು ಸೇರಿವೆ.

ಬಿ‌ಎಸ್ 4 ವಾಹನಗಳನ್ನು ರಿಕಾಲ್ ಮಾಡುತ್ತಿದೆ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ಸ್ 2019-20ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಬಿಎಸ್ 6 ವಾಹನಗಳನ್ನು ಮಾರಾಟ ಮಾಡಿರುವ ಏಕೈಕ ದ್ವಿಚಕ್ರ ವಾಹನ ಕಂಪನಿಯಾಗಿದೆ. ಮಾರ್ಚ್ 31ಕ್ಕೂ ಮೊದಲು ಈ ಕಂಪನಿಯು 5.5 ಲಕ್ಷ ಬಿಎಸ್ 6 ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ.

MOST READ:ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಬಿ‌ಎಸ್ 4 ವಾಹನಗಳನ್ನು ರಿಕಾಲ್ ಮಾಡುತ್ತಿದೆ ಹೋಂಡಾ

ಹೋಂಡಾ ಕಂಪನಿಯ ಅಂಗ ಸಂಸ್ಥೆಯಾದ, ಹೋಂಡಾ ಇಂಡಿಯಾ ಫೌಂಡೇಶನ್ ಕರೋನಾ ವೈರಸ್ ವಿರುದ್ಧ ಹೋರಾಡಲು ಮುಂದಾಗಿದೆ. ಕರೋನಾ ವೈರಸ್‌ಗಾಗಿ ನಡೆಯುತ್ತಿರುವ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳಿಗಾಗಿ ಹೋಂಡಾ ಕಂಪನಿಯು ರೂ.11 ಕೋಟಿಗಳನ್ನು ಪರಿಹಾರ ನಿಧಿಗೆ ನೀಡಿದೆ.

Article Published On: Saturday, April 11, 2020, 15:03 [IST]
English summary
Honda Motorcycle to bring back BS4 Activa CB Shine Dio. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+