ರೆಟ್ರೋ ಮಾದರಿಯ ಕಾನ್ಸೆಪ್ಟ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಹೊಸ ಸ್ಕೂಟರ್‌ನ ಪೇಟೆಂಟ್ ಚಿತ್ರಗಳನ್ನು ಬಿಡುಗಡೆಗೊಳಿಸಿದೆ. ಹೊಸ ಸ್ಕೂಟರ್ ನಿಯೋ ರೆಟ್ರೊ ಸ್ಕೂಟರ್ ಆಗಿದ್ದು, ಮುಂಬರುವ ಹೊಸ ಸ್ಕೂಟರ್‌ಗೆ ಆಧಾರವಾಗಿರಲಿದೆ ಎಂದು ಹೋಂಡಾ ಹೇಳಿದೆ.

ರೆಟ್ರೋ ಮಾದರಿಯ ಕಾನ್ಸೆಪ್ಟ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಈ ವಿನ್ಯಾಸದ ಆಧಾರದ ಮೇಲೆ ಕಂಪನಿಯು ಹೊಸ ಸ್ಕೂಟರ್ ಅನ್ನು ಉತ್ಪಾದಿಸಲಿದೆ. ಸ್ಕೂಟರಿನ ವಿನ್ಯಾಸವು ತುಂಬಾ ಭಿನ್ನವಾಗಿರುವುದರಿಂದ ಇದನ್ನು ಭವಿಷ್ಯದ ಸ್ಕೂಟರ್ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಕಂಪನಿಯು ಈ ಸ್ಕೂಟರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಇದು ಕಾನ್ಸೆಪ್ಟ್ ಮಾದರಿ ಸ್ಕೂಟರ್ ಎಂದು ಕಂಪನಿ ಹೇಳಿದ್ದು, ಭವಿಷ್ಯದಲ್ಲಿ ಹೋಂಡಾ ಕಂಪನಿಯು ಈ ಸ್ಕೂಟರಿನ ಉತ್ಪಾದನೆಯನ್ನು ಆರಂಭಿಸಬಹುದು. ಪೇಟೆಂಟ್ ಚಿತ್ರಗಳಲ್ಲಿರುವ ಸ್ಕೂಟರ್ ಸ್ಲಿಮ್ ಆಗಿದ್ದು, ಹಲವಾರು ಫೀಚರ್ ಗಳನ್ನು ಹೊಂದಿರುವುದನ್ನು ಕಾಣಬಹುದು.

ರೆಟ್ರೋ ಮಾದರಿಯ ಕಾನ್ಸೆಪ್ಟ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಸ್ಕೂಟರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ದೊಡ್ಡ ಗಾತ್ರದ ವ್ಹೀಲ್ ಗಳಿವೆ. ಮುಂಭಾಗದ ವ್ಹೀಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಷನ್ ಗಳಿವೆ. ಸ್ಕೂಟರ್‌ನ ಅಲಾಯ್ ವ್ಹೀಲ್ ವಿನ್ಯಾಸವು ಸಾಕಷ್ಟು ವಿಭಿನ್ನವಾಗಿದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ರೆಟ್ರೋ ಮಾದರಿಯ ಕಾನ್ಸೆಪ್ಟ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಸ್ಕೂಟರಿನ ಎಕ್ಸಾಸ್ಟ್ ಅನ್ನು ಟ್ರಿಮ್ ಮಾಡಲಾಗಿದ್ದು, ವಿಭಿನ್ನವಾಗಿ ಕಾಣುತ್ತಿದೆ. ಈ ಸ್ಕೂಟರ್‌ನಲ್ಲಿ ಹೆಡ್‌ಲೈಟ್ ಬದಲಿಗೆ ದೊಡ್ಡ ವಿಂಡ್‌ಸ್ಕ್ರೀನ್ ನೀಡಲಾಗಿದೆ. ಈ ಸ್ಕೂಟರಿನಲ್ಲಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಸಹ ನೀಡಲಾಗಿದೆ.

ರೆಟ್ರೋ ಮಾದರಿಯ ಕಾನ್ಸೆಪ್ಟ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಈ ಸ್ಕೂಟರ್‌ನಲ್ಲಿ ದುಬಾರಿ ಬೆಲೆಯ ಕಾರುಗಳಲ್ಲಿ ಕಂಡುಬರುವಂತಹ ಫ್ಲೋಟಿಂಗ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ನೀಡುವ ಸಾಧ್ಯತೆಗಳಿವೆ. ಹೆಡ್‌ಲೈಟ್, ಇಂಡಿಕೇಟರ್ ಹಾಗೂ ಫೀಚರ್ ಗಳನ್ನು ಕಂಟ್ರೋಲ್ ಮಾಡಲು ಹ್ಯಾಂಡಲ್ ಬಾರ್‌ನ ಎರಡೂ ಬದಿಗಳಲ್ಲಿ ಕಂಟ್ರೋಲ್ ಬಟನ್ ಗಳನ್ನು ನೀಡಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ರೆಟ್ರೋ ಮಾದರಿಯ ಕಾನ್ಸೆಪ್ಟ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಈ ಸ್ಕೂಟರ್ ಹೆಕ್ಸಾಗನಲ್ ರೇರ್ ವೀವ್ ಮಿರರ್ ಹೊಂದಿದೆ. ಸ್ಕೂಟರ್‌ನ ಟೇಲ್ ಸೆಕ್ಷನ್ ಸ್ಲಿಮ್ ಆಗಿದೆ. ಈ ಸ್ಕೂಟರ್ ಕಾನ್ಸೆಪ್ಟ್ ಮಾದರಿಯಾಗಿರುವುದರಿಂದ ಟೇಲ್ ಲೈಟ್ ಹೊಂದಿಲ್ಲ. ಈ ಸ್ಕೂಟರ್‌ನಲ್ಲಿ ನೀಡಲಾದ ರೌಂಡ್ ಎಂಜಿನ್ ಅನ್ನು ಸಹ ನೀಡಲಾಗಿದೆ.

ರೆಟ್ರೋ ಮಾದರಿಯ ಕಾನ್ಸೆಪ್ಟ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಮಾಹಿತಿಗಳ ಪ್ರಕಾರ ಈ ಸ್ಕೂಟರ್‌ನಲ್ಲಿ 110 ಸಿಸಿ - 150 ಸಿಸಿ ನಡುವಿನ ಎಂಜಿನ್ ಅಳವಡಿಸುವ ಸಾಧ್ಯತೆಗಳಿವೆ. ಹೋಂಡಾ ಕಂಪನಿಯು ಮುಂಬರುವ ದಿನಗಳಲ್ಲಿ ಈ ಕಾನ್ಸೆಪ್ಟ್ ಸ್ಕೂಟರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸುವ ನಿರೀಕ್ಷೆಗಳಿವೆ.

Most Read Articles

Kannada
English summary
Honda motorcycles unveils concept retro scooter. Read in Kannada.
Story first published: Friday, July 31, 2020, 10:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X