ಅನಾವರಣವಾಯ್ತು ಹೋಂಡಾ ಕಂಪನಿಯ ಮ್ಯಾಕ್ಸಿ ಸ್ಕೂಟರ್
ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ 2020ರ ಪಿಸಿಎಕ್ಸ್ 150 ಮ್ಯಾಕ್ಸಿ ಸ್ಕೂಟರ್ ಅನ್ನು ಥೈಲ್ಯಾಂಡ್‌ನಲ್ಲಿ ನಾಲ್ಕು ಹೊಸ ಬಣ್ಣಗಳಲ್ಲಿ ಅನಾವರಣಗೊಳಿಸಿದೆ.

ಹೋಂಡಾ ಕಂಪನಿಯ 2020 ಪಿಸಿಎಕ್ಸ್ 150 ಮಾದರಿಯ ಸ್ಕೂಟರ್ ಕಪ್ಪು ಬಣ್ಣವನ್ನು ಹೊಂದಿದೆ. ಇದರ ಜೊತೆಗೆ ಸ್ಕೂಟರ್‌ನ ಮುಂಭಾಗದಲ್ಲಿರುವ ಫಾಸ್ಕಿಯಾ ಹಾಗೂ ಸೀಟಿನ ತುದಿ ಕೆಂಪು ಬಣ್ಣವನ್ನು ಹೊಂದಿದೆ. 2020ರ ಮ್ಯಾಕ್ಸಿ ಸ್ಕೂಟರ್ ಅನ್ನು ಕಪ್ಪು ಬಣ್ಣ ಹಾಗೂ ಬಿಳಿ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಬಿಳಿ ಹಾಗೂ ಕೆಂಪು ಬಣ್ಣವನ್ನು ಸ್ಕೂಟರ್‌ನ ಕೆಲವು ಭಾಗಗಳಲ್ಲಿ ನೀಡಲಾಗುವುದು. ಇದರ ಜೊತೆಗೆ, ಹೊಸ ಪಿಸಿಎಕ್ಸ್ 150 ಸ್ಕೂಟರ್ ಅನ್ನು ಹೋಂಡಾ ಗ್ರೇ ಹಾಗೂ ಫುಲ್ ರೆಡ್ ಎಂಬ ಎರಡು ಹೊಸ ಬಣ್ಣಗಳಲ್ಲಿಯೂ ಮಾರಾಟ ಮಾಡಲಾಗುವುದು.

ಈ ಎರಡು ಬಣ್ಣದ ಸ್ಕೂಟರ್ ಗಳಲ್ಲಿರುವ ಅಲಾಯ್ ವ್ಹೀಲ್ ಗಳು ಗೋಲ್ಡ್ ಕೋಟಿಂಗ್ ಹೊಂದಿರಲಿವೆ. ಈ ಹೊಸ ಬಣ್ಣಗಳ ಹೊರತಾಗಿ, ಹೋಂಡಾ ಕಂಪನಿಯು ಈ 2020 ಸ್ಕೂಟರ್ ಮಾದರಿಯಲ್ಲಿ ಯಾವುದೇ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿಲ್ಲ.

ಹೆಡ್ ಲೈಟ್, ಸ್ಟೈಲಿಶ್ ಬಾಡಿವರ್ಕ್ ಹಾಗೂ ಎಲ್ಇಡಿ ಲ್ಯಾಂಪ್ ಗಳನ್ನು ಹೊಂದಿರುವ ಹೊಸ ಸ್ಕೂಟರ್, ಹಳೆಯ ಸ್ಕೂಟರಿನಂತೆಯೇ ಕಾಣುತ್ತದೆ. ಹೋಂಡಾ ಕಂಪನಿಯ ಸ್ಮಾರ್ಟ್ ಕಂಟ್ರೋಲರ್ ಅನ್ನು ಈ ಮ್ಯಾಕ್ಸಿ ಸ್ಕೂಟರ್‌ನಲ್ಲಿ ಅಳವಡಿಸಲಾಗಿದೆ.

ಬ್ಲೂ ಬ್ಯಾಕ್‌ಲಿಟ್ ಎಲ್ಇಡಿ ನ್ಯಾಪ್ ಹೊಂದಿರುವ ಈ ಸ್ಮಾರ್ಟ್ ಕಂಟ್ರೋಲರ್, ಸೀಟ್ ಹಾಗೂ ಪೆಟ್ರೋಲ್ ಟ್ಯಾಂಕ್ ಮುಚ್ಚಳವನ್ನು ತೆರೆಯುತ್ತದೆ ಹಾಗೂ ಲಾಕ್ ಮಾಡುತ್ತದೆ. ಈ ಫೀಚರ್ ಅನ್ನು ಇಗ್ನಿಷನ್ ಸ್ವಿಚ್ ಆಗಿಯೂ ಸಹ ಆಕ್ಟಿವೇಟ್ ಮಾಡಬಹುದು.

ಈ ಮ್ಯಾಕ್ಸಿ ಸ್ಕೂಟರ್ ಅನ್ನು ಹೋಂಡಾ ಕಂಪನಿಯು ಸ್ಮಾರ್ಟ್ ಕೀ ಸಿಸ್ಟಂ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ಯುಎಸ್‌ಬಿ ಚಾರ್ಜಿಂಗ್ ಸಾಕೆಟ್‌ಗಳೊಂದಿಗೆ ನೀಡುತ್ತದೆ. ಈ ಸ್ಕೂಟರ್ ನಲ್ಲಿರುವ ವೆಲ್ ಕಮ್ ಲೈಟ್ ಗಳನ್ನು ಹೆಚ್ಚಿನ ಟೆಕ್ನಾಲಜಿಯನ್ನು ಹೊಂದಿರುವ ಕಾರುಗಳಲ್ಲಿ ಕಾಣಬಹುದು.

ಹೋಂಡಾ ಪಿಸಿಎಕ್ಸ್ ಸ್ಕೂಟರ್ ನಲ್ಲಿ 149 ಸಿಸಿಯ ಲಿಕ್ವಿಡ್-ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 13.3 ಬಿಹೆಚ್‌ಪಿ ಪವರ್ ಹಾಗೂ 14 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ ಸಿವಿಟಿ ಗೇರ್‌ಬಾಕ್ಸ್ ಟ್ರಾನ್ಸ್ ಮಿಷನ್ ನೀಡಲಾಗಿದೆ.

ಶೀಘ್ರದಲ್ಲಿಯೇ ಈ ಹೊಸ ಹೋಂಡಾ ಪಿಸಿಎಕ್ಸ್ 150 ಸ್ಕೂಟರ್ ಅನ್ನು ದಕ್ಷಿಣ ಏಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಭಾರತದಲ್ಲಿ ಈ ಸ್ಕೂಟರ್ ಅನ್ನು ಯಾವಾಗ ಬಿಡುಗಡೆಗೊಳಿಸಲಾಗುವುದು ಎಂಬ ಮಾಹಿತಿ ಬಹಿರಂಗವಾಗಿಲ್ಲ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಈ ಸೆಗ್ ಮೆಂಟಿನಲ್ಲಿರುವ ಇತರ ಕಂಪನಿಯ ಸ್ಕೂಟರ್ ಗಳು ಹೊಂದಿರುವ ಬೆಲೆಯನ್ನು ಹೊಂದಿರಲಿದೆ.


Click it and Unblock the Notifications