Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತಕ್ಕೆ ಲಗ್ಗೆ ಇಡಲಿವೆ ಹೊಸ ಹೋಂಡಾ 500ಸಿಸಿ ಬೈಕುಗಳು
ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನ ವಿಭಾಗದಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ಹೋಂಡಾ ಸಣ್ಣ-ಮಧ್ಯಮ ಸಾಮರ್ಥ್ಯ ಪರ್ಫಾಮೆನ್ಸ್ ಬೈಕುಗಳನ್ನು ಬಿಡುಗಡೆಗೊಳಿಸಲಿವೆ.

ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮೊದಲು ಸಿಬಿಆರ್250ಆರ್ ಮತ್ತು ನಂತರ ಸಿಬಿ300ಆರ್ ಬೈಕನ್ನು ಬಿಡುಗಡೆಗೊಳಿಸಿದ್ದರು. ನಂತರದ ದಿನಗಳಲ್ಲಿ ಹೋಂಡಾ ಕಂಪನಿಯು ಈ ಎರಡು ಬೈಕುಗಳನ್ನು ಸ್ಥಗಿತಗೊಳಿಸಿದರು. ಇದೀಗ ಜಪಾನ್ ಬೈಕ್ ತಯಾರಕ ಕಂಪನಿ ಹೋಂಡಾ 500ಸಿಸಿಯ ಬೈಕುಗಳನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಯೋಜಿಸುತ್ತಿದ್ದಾರೆ.

ವರದಿ ಪ್ರಕಾರ, ಹೋಂಡಾ ಸಿಬಿ500 ಸರಣಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಚಿಂತಿಸಿದೆ. ಈ ಸರಣಿಯಲ್ಲಿ ಸಿಬಿ500ಆರ್, ಸಿಬಿ500ಎಫ್ ಮತ್ತು ಸಿಬಿ500ಎಕ್ಸ್ ಎಂಬ ಮೂರು ಬೈಕುಗಳು ಒಳಗೊಂಡಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಇದರಲ್ಲಿ ಒಂದು ಬೈಕ್ ದೀಪಾವಳ ಹಬ್ಬದ ವೇಳೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಉಳಿದ ಎರಡು ಬೈಕುಗಳನ್ನು ಮುಂದಿನ ವರ್ಷಗಳಲ್ಲಿ ಬಿಡುಗಡೆಗೊಳಿಸಬಹುದು. ಈ ಹಿಂದೆ ಕಂಪನಿಯು ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿಯನ್ನು ಪರಿಚಯಿಸಲು ಆಸಕ್ತಿ ತೋರಿಸಿತ್ತು,

ಹೋಂಡಾ ಸಿಬಿ500ಆರ್ ಸಂಪೂರ್ಣ ಫೇರ್ಡ್ ಸ್ಪೋರ್ಟ್ಸ್ ಟೂರರ್ ಆಗಿದ್ದು, ಹಿಂಭಾಗದ ಸೆಟ್ ಫುಟ್‌ಪೆಗ್‌ಗಳು ಮತ್ತು ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳನ್ನು ಹೊಂದಿದೆ. ಇದು ಆರಾಮದಾಯಕ ರೈಡಿಂಗ್ ಅನುಭವ ನೀಡುವ ಸ್ಪೋಟ್ಸ್ ಬೈಕ್ ಆಗಿದೆ. ಹೋಂಡಾ ಸಿಬಿ500ಆರ್ ಬೈಕ್ ಡ್ಯುಯಲ್ ಎಲ್ಇಡಿ ಹೆಡ್ ಲ್ಯಾಂಪ್ ಜೊತೆಗೆ ಟೇಲ್ ಲೈಟ್ ಮತ್ತು ಎಲ್ಇಡಿ ಇಂಡೀಕೇಟರ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೋಂಡಾ ಸಿಬಿ500ಎಫ್ ನೇಕೆಡ್ ಸ್ಟ್ರೀಟ್‌ಫೈಟರ್ ಬೈಕ್ ಆಗಿದೆ. ಈ ಬೈಕಿನಲ್ಲಿ ಫೇರಿಂಗ್, ಹ್ಯಾಂಡಲ್‌ಬಾರ್ ಮತ್ತು ಹೆಡ್‌ಲ್ಯಾಂಪ್ ಯುನಿಟ್ ಅನ್ನು ಹೊರತುಪಡಿಸಿ ಉಳಿದಂತೆ ಎಲ್ಲವೂ ಸಿಬಿ500ಆರ್‌ನಂತೆಯೇ ಇರುತ್ತದೆ.

ಸಿಬಿ500ಎಕ್ಸ್ ಬೈಕ್ ಬಗ್ಗೆ ಹೇಳುವುದಾದರೆ, ಸಿಂಗಲ್ ಪೀಸ್ ಹ್ಯಾಂಡಲ್‌ಬಾರ್ ಹೊಂದಿದೆ. ಇದು ಅರ್ಧ-ಫೇರಿಂಗ್, ಎತ್ತರದ-ವಿಂಡ್‌ಸ್ಕ್ರೀನ್, ಹೆಡ್‌ಲ್ಯಾಂಪ್ ಅಡಿಯಲ್ಲಿ ಆಲ್-ಎಲ್ಇಡಿ ಲೈಟಿಂಗ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಎಲೆಕ್ಟ್ರಾನಿಕ್ ರೈಡಿಂಗ್ ಏಡ್‌ಗಳನ್ನು ನೀಡಲಾಗುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಎಲ್ಲಾ ಮೂರು ಬೈಕುಗಳಲ್ಲಿ 471 ಸಿಸಿ, ಲಿಕ್ವಿಡ್-ಕೂಲ್ಡ್, ಪ್ಯಾರೆಲಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 47 ಬಿಹೆಚ್‍ಪಿ ಪವರ್ ಮತ್ತು 4೧5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಹಿಂದೆ ಸಿಬಿಆರ್250ಆರ್ ಮತ್ತು ಸಿಬಿ300ಆರ್ ಬೈಕುಗಳನ್ನು ಸಿಕೆಡಿ ಮಾರ್ಗಗಳ ಮೂಲಕ ಭಾರತಕ್ಕೆ ತರಲಾಗಿತ್ತು, ಅದೇ ರೀತಿ ಹೊಸ 500ಸಿಸಿ ಸರಣಿಯ ಬೈಕುಗಳನ್ನು ಸಿಕೆಡಿ ಮಾರ್ಗಗಳ ಮೂಲಕ ತರಲಾಗಿತ್ತು.