ಜಪಾನ್ ನಂತರ ಥೈಲ್ಯಾಂಡ್‌ನಲ್ಲೂ ಬಿಡುಗಡೆಯಾಗಲಿದೆ ಹೋಂಡಾ ಸಿಟಿ125

ಜಪಾನ್ ಬ್ರಾಂಡ್ ಹೋಂಡಾ ಮೋಟಾರ್‌ಸೈಕಲ್ ವಿಭಾಗವು ಈಗಾಗಲೇ ಹಲವಾರು ದುಬಾರಿ ಬೈಕ್ ಮತ್ತು ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಮೊದಲ ಬಾರಿಗೆ ಆಫ್-ರೋಡ್ ವೈಶಿಷ್ಟ್ಯತೆಯ ಐಷಾರಾಮಿ ಮೊಪೆಡ್ ಮಾದರಿಯೊಂದನ್ನು ಅಭಿವೃದ್ದಿಗೊಳಿಸಿ ಹಂತ ಹಂತವಾಗಿ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಪರಿಚಯಿಸುತ್ತಿದೆ.

ಜಪಾನ್ ನಂತರ ಥೈಲ್ಯಾಂಡ್‌ನಲ್ಲೂ ಬಿಡುಗಡೆಯಾಗಲಿದೆ ಹೋಂಡಾ ಸಿಟಿ125

ಹೋಂಡಾ ಕಂಪನಿಯ ಈಗಾಗಲೇ ಸೂಪರ್ ಕ್ಲಬ್ ಸಿ125, ಪಿಸಿಎಕ್ಸ್ 150, ಮಂಕಿ 125 ಮತ್ತು ಸಿಆರ್‌ಎಫ್125ಎಫ್ ಡರ್ಕ್ ಬೈಕ್ ಮಾದರಿಗಳನ್ನು ಹೊಂದಿದ್ದರು ಸಹ ಇದೀಗ ಬಿಡುಗಡೆ ಮಾಡಲಾಗಿರುವ ಸಿಟಿ125 ಮೊಪೆಡ್ ಮಾದರಿಯು ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಸದ್ಯ ಜಪಾನ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರುವ ಸಿಟಿ 125 ಮಾದರಿಯು ಇದೀಗ ಥೈಲ್ಯಾಂಡ್‌ನಲ್ಲೂ ಬಿಡುಗಡೆಯಾಗುತ್ತಿದ್ದು, ಹೊಸ ವಾಹನದ ಹೆಸರಿನಲ್ಲಿ ತುಸು ಬದಲಾವಣೆ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.

ಜಪಾನ್ ನಂತರ ಥೈಲ್ಯಾಂಡ್‌ನಲ್ಲೂ ಬಿಡುಗಡೆಯಾಗಲಿದೆ ಹೋಂಡಾ ಸಿಟಿ125

ಥೈಲ್ಯಾಂಡ್‌ನಲ್ಲಿ ಬಿಡುಗಡೆಯಾಗಲಿರುವ ಸಿಟಿ125 ಮೊಪೆಡ್ ಮಾದರಿಯು ಸಿಟಿ125 ಹಂಟರ್ ಕ್ಲಬ್ ಹೆಸರಿನಲ್ಲಿ ಬಿಡುಗಡೆಯಾಗಲಿದ್ದು, ಬೆಲೆ ಇಳಿಕೆಗಾಗಿ ತುಸು ಪ್ರೀಮಿಯಂ ಫೀಚರ್ಸ್‌ಗಳನ್ನು ಇಳಿಕೆ ಮಾಡಬಹುದಾಗಿದೆ.

ಜಪಾನ್ ನಂತರ ಥೈಲ್ಯಾಂಡ್‌ನಲ್ಲೂ ಬಿಡುಗಡೆಯಾಗಲಿದೆ ಹೋಂಡಾ ಸಿಟಿ125

ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಈ ಮೊಪೆಡ್ ಬೆಲೆಯು ಸದ್ಯ ರೂ.3 ಲಕ್ಷ (440,000 ಜಪಾನೀಸ್ ಯೆನ್) ಬೆಲೆ ಪಡೆದುಕೊಂಡಿದ್ದು, 125ಸಿಸಿ ಸ್ಕೂಟರ್ ಮತ್ತು ಬೈಕ್ ಮಾದರಿಗಳಲ್ಲೇ ಇದು ಅತಿ ದುಬಾರಿ ಬೆಲೆ ವಾಹನ ಮಾದರಿಯಾಗಿದೆ.

ಜಪಾನ್ ನಂತರ ಥೈಲ್ಯಾಂಡ್‌ನಲ್ಲೂ ಬಿಡುಗಡೆಯಾಗಲಿದೆ ಹೋಂಡಾ ಸಿಟಿ125

ಸಿಟಿ125 ಮೊಪೆಡ್ ಮಾದರಿಯನ್ನು ವಿಶೇಷವಾಗಿ ಆಫ್-ರೋಡ್ ಸಾಹಸ ಪ್ರದರ್ಶನಕ್ಕಾಗಿಯೇ ನಿರ್ಮಾಣ ಮಾಡಲಾಗಿದ್ದು, ರಗಡ್ ಲುಕ್ ನೀಡುವುದಕ್ಕಾಗಿ ಹೈ ಮೌಂಟೆಡ್ ಎಕ್ಸಾಸ್ಟ್ ಮತ್ತು ಪರ್ಫಾಮೆನ್ಸ್ ಬೈಕ್ ಮಾದರಿಯಲ್ಲಿ ನೀಡಲಾಗುವ ಏರ್ ಇನ್ ಟೆಕ್ ಡಟ್ ಸೌಲಭ್ಯವು ಈ ಮೊಪೆಡ್‌ನಲ್ಲಿದೆ.

ಜಪಾನ್ ನಂತರ ಥೈಲ್ಯಾಂಡ್‌ನಲ್ಲೂ ಬಿಡುಗಡೆಯಾಗಲಿದೆ ಹೋಂಡಾ ಸಿಟಿ125

125-ಸಿಸಿ ಫಿಜಿಎಂಐ ಎಫ್ಐ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಸಿಟಿ125 ಮೊಪೆಡ್ ಮಾದರಿಯು 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 8.8-ಬಿಎಚ್‌ಪಿ ಮತ್ತು 11-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, 5.4-ಲೀಟರ್ ಫ್ಯೂಲ್ ಟ್ಯಾಂಕ್ ಸೌಲಭ್ಯವಿದೆ.

ಜಪಾನ್ ನಂತರ ಥೈಲ್ಯಾಂಡ್‌ನಲ್ಲೂ ಬಿಡುಗಡೆಯಾಗಲಿದೆ ಹೋಂಡಾ ಸಿಟಿ125

ಮೇಲ್ನೊಟಕ್ಕೆ ಟಿವಿಎಸ್ ಎಕ್ಸ್ಎಲ್100 ಮಾದರಿಯಂತೆ ಕಂಡರೂ ತಾಂತ್ರಿಕವಾಗಿ ಬಲಿಷ್ಠವಾಗಿರುವ ಸಿಟಿ125 ಮೊಪೆಡ್ ಮಾದರಿಯು ಒಟ್ಟು 120ಕೆ.ಜಿ ತೂಕ ಹೊಂದಿದ್ದು, ಅಡ್ವೆಂಚರ್ ಚಾಲನೆಗೆ ಅತ್ಯುತ್ತಮ ಮೊಪೆಡ್ ಮಾದರಿಯಾಗಿದೆ.

MOST READ: ದುಬಾರಿ ಬೆಲೆಯೊಂದಿಗೆ ಬಿಡುಗಡೆಗೊಂಡ ವೆಸ್ಪಾ ಬಿಎಸ್-6 ನೊಟ್ಟೆ 125

ಜಪಾನ್ ನಂತರ ಥೈಲ್ಯಾಂಡ್‌ನಲ್ಲೂ ಬಿಡುಗಡೆಯಾಗಲಿದೆ ಹೋಂಡಾ ಸಿಟಿ125

ಆಫ್-ರೋಡ್ ಕೌಶಲ್ಯಕ್ಕೆ ಅನುಕೂಕರವಾದ 165-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಪಡೆದುಕೊಂಡಿದ್ದು,ಇದು ಎಕ್ಸ್ಎಲ್ 100 ಮೊಪೆಡ್‌ಗಿಂತಲೂ 40 ಕೆ.ಜಿ ಹೆಚ್ಚು ತೂಕ ಪಡೆದುಕೊಂಡಿದೆ.

ಹಾಗೆಯೇ ಹೊಸ ಸಿಟಿ125 ಮೊಪೆಡ್‌ನಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಜೊತೆ ಎರಡು ಬದಿಯ ಚಕ್ರದಲ್ಲೂ ಡಿಸ್ಕ್ ಬ್ರೇಕ್, ಆಫ್ ರೋಡ್ ಟೈರ್, ಸ್ಟಿಲ್ ಫೆಂಡರ್, ಕ್ರ್ಯಾಶ್ ಗಾರ್ಡ್, ಹಿಟ್ ಪ್ರೋಟೆಕ್ಟರ್, ಡಿಜಿಟಲ್ ಸ್ಪೀಡೋ ಮೀಟರ್, ಫುಲ್ ಎಲ್ಇಡಿ ಲೈಟ್ಸ್, ಸೇರಿದಂತೆ ಹಲವು ಸುರಕ್ಷಾ ಸೌಲಭ್ಯಗಳಿವೆ.

MOST READ: ರೂ. 2 ಸಾವಿರ ಬೆಲೆ ಅಂತರದಲ್ಲಿ ಖರೀದಿ ಮಾಡಬಹುದಾದ ಅತ್ಯುತ್ತಮ ಹೆಲ್ಮೆಟ್‌ಗಳಿವು!

ಜಪಾನ್ ನಂತರ ಥೈಲ್ಯಾಂಡ್‌ನಲ್ಲೂ ಬಿಡುಗಡೆಯಾಗಲಿದೆ ಹೋಂಡಾ ಸಿಟಿ125

ಈ ಮೂಲಕ ಆಫ್-ರೋಡ್ ವೈಶಿಷ್ಟ್ಯತೆಯ ಎಂಟ್ರಿ ಲೆವಲ್ ಬೈಕ್ ಮಾದರಿಗಳಿಂತಲೂ ದುಬಾರಿ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಸಿಟಿ125 ಮೊಪೆಡ್ ಮಾದರಿಯ ಸದ್ಯ ಜಪಾನ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಹಲವು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುವ ಸಿದ್ದತೆಯಲ್ಲಿದೆ.

Article Published On: Saturday, June 6, 2020, 19:43 [IST]
English summary
Honda Reveals CT 125 Hunter Cub In New Promo Video. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+