Just In
- 1 hr ago
ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಫೇಮ್ 2 ಮಾನ್ಯತಾ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ
- 3 hrs ago
ಫೋಕ್ಸ್ವ್ಯಾಗನ್ ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ
- 3 hrs ago
ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್
- 5 hrs ago
ಹೆರ್ಮೆಸ್ 75 ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಕಬೀರಾ ಮೊಬಿಲಿಟಿ
Don't Miss!
- Sports
ಐಪಿಎಲ್ 2021: ಡೆಲ್ಲಿ ವೇಗಿ ಅನ್ರಿಕ್ ನಾರ್ಕಿಯಾಗೆ ಕೊರೊನಾ ವೈರಸ್: ವರದಿ
- News
ಮೊದಲು ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ಕೊನೆಗೆ ನೀವು ಗೆಲ್ಲುತ್ತೀರ; ರಾಹುಲ್ ಗಾಂಧಿ
- Movies
ಬಾಲಿವುಡ್ ಸ್ಟಾರ್ ಜೊತೆ ಸಿನಿಮಾ ಘೋಷಿಸಿದ ಶಂಕರ್: ಚಿರು ಪುತ್ರನ ಚಿತ್ರ ಏನಾಯ್ತು?
- Lifestyle
ಬೆಳಿಗ್ಗೆ ಎದ್ದ ಕೂಡಲೇ ನೀವು ಯಾಕೆ ಸುಸ್ತಾಗುತ್ತೀರಿ? ಈ ಪರಿಹಾರಗಳಿಂದ ನಿಮ್ಮ ಸುಸ್ತು ದೂರವಾಗುತ್ತೆ!
- Finance
ಸತತ 15ದಿನಗಳಿಂದ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸವಿಲ್ಲ
- Education
NEET PG Admit Card 2021: ನೀಟ್ ಪಿಜಿ ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರೂ. 2 ಸಾವಿರ ಬೆಲೆ ಅಂತರದಲ್ಲಿ ಖರೀದಿ ಮಾಡಬಹುದಾದ ಅತ್ಯುತ್ತಮ ಹೆಲ್ಮೆಟ್‌ಗಳಿವು!
ಬೈಕ್ ಸವಾರಿಗೆ ಹೆಲ್ಮೆಟ್ ಬಳಕೆ ಕಡ್ಡಾಯವಾಗಿದ್ದರೂ ಬಹುತೇಕ ಸವಾರರು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವುದು ಮಾತ್ರ ತಪ್ಪಿಲ್ಲ. ಇನ್ನು ಕೆಲವರು ಹೆಲ್ಮೆಟ್ ಬಳಕೆ ಮಾಡಿದರೂ ಸಹ ಪೊಲೀಸರ ಭಯದಿಂದ ಯಾವುದೋ ಒಂದು ಅಗ್ಗದ ಬೆಲೆಯ ಹೆಲ್ಮೆಟ್ ಬಳಕೆ ಮಾಡುತ್ತಿರುತ್ತಾರೆ. ಆದರೆ ನೆನಪಿಡಿ ಹೆಲ್ಮೆಟ್ ಬಳಕೆಯು ನಿಯಮ ಪಾಲನೆಗಾಗಿ ಮಾತ್ರವಲ್ಲ ನಿಮ್ಮ ಜೀವ ರಕ್ಷಕ ಕೂಡಾ ಎಂಬುವುದನ್ನು ಮರೆಯಬೇಡಿ.

ಇತ್ತೀಚೆಗೆ ಜಾರಿಗೆ ಬಂದ ಹೊಸ ಮೋಟಾರ್ ಕಾಯ್ದೆ ನಂತರ ದಂಡದ ಪ್ರಮಾಣವು ಹೆಚ್ಚಳವಾಗಿರುವುದು ಕೂಡಾ ಟ್ರಾಫಿಕ್ ನಿಯಮಗಳ ಪಾಲನೆಯಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ಬಹುತೇಕ ಬೈಕ್ ಸವಾರರು ಜೀವರಕ್ಷಕ ಹೆಲ್ಮೆಟ್ ಅನ್ನು ಬಳಕೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಂದ್ರೆ ತಪ್ಪಾಗುವುದಿಲ್ಲ. ಆದ್ರೆ ಕೇವಲ ದಂಡದಿಂದ ಬಚಾವ್ ಆಗಲು ಖರೀದಿ ಮಾಡಲಾಗುವ ಅಗ್ಗದ ಬೆಲೆಯ ಹೆಲ್ಮೆಟ್ ಬಳಕೆಯ ಬಗೆಗೆ ಎಚ್ಚರವಹಿಸದೇ ಇದ್ದಲ್ಲಿ ಅದರಿಂದಾಗುವ ಲಾಭಕ್ಕಿಂತ ನಷ್ಟವೇ ಹೆಚ್ಚು.

ಹೌದು, ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಗ್ಗಿಸುವ ಸಂಬಂಧ ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಮತ್ತು ಹಿಂಬದಿಯ ಸವಾರರಿಗೆ ಹೆಲ್ಮೆಟ್ ಬಳಕೆಯನ್ನು ಕಡ್ಡಾಯಗೊಳಿಸಿದ್ದು, ಇದರಿಂದ ಸಂಚಾರಿ ನಿಯಮವನ್ನು ಪಾಲಿಸಬೇಕೆಂಬ ಒಂದೇ ಒಂದು ಕಾರಣಕ್ಕೆ ನಕಲಿ ಹೆಲ್ಮೆಟ್ ಬಳಕೆಯು ಹೆಚ್ಚುತ್ತಿದೆ.

ಈ ಹಿನ್ನೆಲೆಯಲ್ಲಿ ನಕಲಿ ಹೆಲ್ಮೆಟ್‌ಗಳ ಬಳಕೆಯಿಂದಾಗುವ ದುಷ್ಪರಿಣಾಮಗಳು ಮತ್ತು ಬ್ರಾಂಡ್ ಹೆಸರಿನಲ್ಲಿ ಮಾರಾಟಗೊಳ್ಳುವ ಹೆಲ್ಮೆಟ್‌ಗಳ ಆಯ್ಕೆಯ ಕುರಿತಾಗಿ ಸಾಕಷ್ಟು ಎಚ್ಚರವಹಿಸಬೇಕಿರುವ ವಾಹನ ಸವಾರರು ಉತ್ತಮ ಗುಣಗುಣಮಟ್ಟದ ಹೆಲ್ಮೆಟ್‌ಗಳನ್ನು ಆಯ್ಕೆ ಮಾಡಬೇಕು.

ಸಾವಿರಾರು ರೂಪಾಯಿ ಬೆಲೆ ತೆತ್ತು ಬೈಕ್ ಮತ್ತು ಸ್ಕೂಟರ್‌ಗಳನ್ನು ಖರೀದಿಸುವ ಅನೇಕ ವಾಹನ ಸವಾರರು ಉತ್ತಮವಾದ ಒಂದು ಹೆಲ್ಮೆಟ್ ಆಯ್ಕೆ ಮಾಡುವ ಬದಲು ರೂ.200 ಅಥವಾ ರೂ.300 ಬೆಲೆಯಲ್ಲಿ ದೊರೆಯುವ ಕಳಪೆ ಹೆಲ್ಮೆಟ್ ಖರೀದಿಸುವುದೇ ಹೆಚ್ಚು. ಆದರೆ ಅದರಿಂದ ಅಪಾಯವೇ ಹೆಚ್ಚು ಅನ್ನುವುದನ್ನು ಅರಿಯಬೇಕಿರುವ ವಾಹನ ಸವಾರರು ಕೈಗೆಟುವ ಬೆಲೆಯಲ್ಲಿ ದೊರೆಯಬಹುದಾದ ಒಂದು ಉತ್ತಮ ಹೆಲ್ಮೆಟ್ ಖರೀದಿ ಮಾಡುವುದು ಉತ್ತಮ.

ಈ ಹಿನ್ನಲೆ ರೂ.2 ಸಾವಿರ ಅಂತರ ಖರೀದಿ ಲಭ್ಯವಿರುವಂತಹ ಐದು ಪ್ರಮುಖ ಹೆಲ್ಮೆಟ್‌ಗಳನ್ನು ನಾವು ಪಟ್ಟಿ ಮಾಡಿದ್ದು, ಇವು ಬಹುತೇಕ ವಾಹನ ಸವಾರರು ಖರೀದಿ ಮಾಡಬಹುದಾದ ಬೆಲೆಯಲ್ಲಿ ಲಭ್ಯವಿರುವಂತಹ ಹೆಲ್ಮೆಟ್ ಮಾದರಿಗಳಾಗಿವೆ. ಸದ್ಯ ಮಾರುಕಟ್ಟೆಯಲ್ಲಿ ಲಕ್ಷ ಬೆಲೆಗೂ ಲಭ್ಯವಿರುವ ಅನೇಕ ಹೆಲ್ಮೆಟ್ ಮಾದರಿಗಳಿವೆ. ಆದರೆ ಬಹುತೇಕ ಬೈಕ್ ಸವಾರರು ಖರೀದಿ ಮಾಡಬಹುದಾದ ಉತ್ತಮ ಗುಣಮಟ್ಟದ ಹೆಲ್ಮೆಟ್ ಮಾದರಿಗಳು ರೂ. 2 ಸಾವಿರ ಬೆಲೆ ಅಂತರದಲ್ಲೂ ಖರೀದಿಗೆ ಲಭ್ಯವಿವೆ.

01. ವೆಗಾ ಕ್ರಕ್ಸ್ ಡ್ಯುಯಲ್ ಪರ್ಪಸ್ ಹೆಲ್ಮೆಟ್
ಹೆಲ್ಮೆಟ್ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ವೆಗಾ ಕಂಪನಿಯ ಡ್ಯಯಲ್ ಪರ್ಪಸ್ ಕ್ರಕ್ಸ್ ಹೆಲ್ಮೆಟ್ ಮಾದರಿಯು ಉತ್ತಮ ಬೇಡಿಕೆಯಲ್ಲಿರುವ ಮಾದರಿಯಾಗಿದ್ದು, ಈ ಹೆಲ್ಮೆಟ್ ಗಾತ್ರದ ಆಧಾರದ ಮೇಲೆ ರೂ. 1,200 ರಿಂದ ರೂ.1,300 ಬೆಲೆ ಹೊಂದಿದೆ. ಇದರಲ್ಲಿ ಲೆದರ್ ಫಿನಿಷಿಂಗ್, ಏರೋ ಡೈನಾಮಿಕ್ ವಿನ್ಯಾಸವಿದ್ದು, ಸ್ಕ್ರ್ಯಾಚ್ ರೆಸಿಸ್ಟಂಟ್‌ನೊಂದಿಗೆ ಫ್ಲಿಪ್ ಅಪ್ ಪ್ರೆಸ್ ಬಟನ್ ಸೌಲಭ್ಯ ಹೊಂದಿದೆ.

02. ಸ್ಟಡ್ಸ್ ಕ್ಯೂಬ್ 07
ಪ್ರೀಮಿಯಂ ಲುಕ್ ಹೊಂದಿರುವ ಹಾಫ್-ಫೇಸ್ ಸ್ಟಡ್ಸ್ ಕ್ಯೂಬ್ 07 ಹೆಲ್ಮೆಟ್ ಮಾದರಿಯು ನೋಡಲು ಆಕರ್ಷಕವಾಗಿದ್ದು, ಸುರಕ್ಷಾ ಮಾನದಂಡದಲ್ಲೂ ಇದು ಉತ್ತಮ ಮಾದರಿಯಾಗಿ ಹೊರಹೊಮ್ಮಿದೆ. ಹಾಫ್ ಫೇಸ್ ವಿನ್ಯಾಸವಿದ್ದರೂ ಮುಂಭಾಗದಲ್ಲಿ ಕವರ್ ಮಾಡಲಾದ ಪಾಲಿಕಾರ್ಬೊನೇಟ್ ವಿಜನರ್ ಪ್ರಮುಖವಾಗಿದೆ. ಹಾಗೆಯೇ ಹೆಲ್ಮೆಟ್‌ನಲ್ಲಿ ಆ್ಯಂಟಿ ಅಲರ್ಜಿಕ್ ಕನ್ಕ್ಯುಶನ್ ಪ್ಯಾಡಿಂಗ್ ಜೋಡಿಸಲಾಗಿದೆ. ಇದು ಪ್ರಮುಖ 3 ಬಣ್ಣಗಳ ಆಯ್ಕೆ ಹೊಂದಿದ್ದು, ರೂ. 1,175ಕ್ಕೆ ಖರೀದಿಗೆ ಲಭ್ಯವಿದೆ.
MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

03. ಸ್ಟೀಲ್‌ಬರ್ಡ್ ಏರ್ ಎಸ್‌ಬಿಎ-1 ಬಿಸ್ಟ್
ಮೋಟಾರ್‌ಸೈಕಲ್ ಸವಾರಿಗೆ ಇದೊಂದು ಉತ್ತಮ ಆಯ್ಕೆಯಾಗಿದ್ದು, ಮಲ್ಟಿ ಲೆಯರ್ ಇಪಿಎಸ್ ಕುಷನ್‌ನೊಂದಿಗೆ ಯುರೋಪಿಯನ್ ಸುರಕ್ಷಾ ಮಾನದಂಡಗಳನ್ನು ಹೊಂದಿದೆ. ಹೆಲ್ಮೆಟ್ ಒಳಗೆ ಗಾಳಿಯಾಡುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಇದು ಧೀರ್ಘಾವಧಿಯ ಬಳಕೆಯಲ್ಲೂ ಬೈಕ್ ಸವಾರರಿಗೆ ಅರಾಮದಾಯಕ ಎನ್ನಿಸಲಿದೆ. ಇದು ಮಾರುಕಟ್ಟೆಯಲ್ಲಿ ಸದ್ಯ ರೂ. 2 ಸಾವಿರ ಬೆಲೆ ಹೊಂದಿದ್ದು, ಮೌತ್ ಗಾರ್ಡ್‌ನೊಂದಿಗೆ ವಿವಿಧ ಬಗೆಗೆ ಗ್ರಾಫಿಕ್ಸ್ ವಿನ್ಯಾಸ ಹೊಂದಿದೆ.

04. ಸ್ಟೀಲ್‌ಬರ್ಡ್ ವಿಷನ್ ಹಂಕ್
ಇದು ಯುರೋಪಿಯನ್ ಸುರಕ್ಷಾ ಮಾನದಂಡಗಳ ಪ್ರಕಾರ ಅಭಿವೃದ್ದಿಗೊಂಡಿದ್ದು, ವಿಶೇಷ ಒಳವಿನ್ಯಾಸದಿಂದಾಗಿ ಬೈಕ್ ಸವಾರರಿಗೆ ಧೀರ್ಘಾವಧಿಯ ಸವಾರಿಯಲ್ಲೂ ಯಾವುದೇ ಕಿರಿಕಿರಿ ಉಂಟು ಮಾಡುವುದಿಲ್ಲ.
MOST READ: ಹೋಂಡಾ ಆಕ್ಟೀವಾ ಸ್ಕೂಟರ್‌ಗಿಂತಲೂ ದುಬಾರಿ ಈ ಹೆಲ್ಮೆಟ್ ಬೆಲೆ..!

ಹೆಲ್ಮೆಟ್ ಒಳಗೆ ಗಾಳಿಯಾಡುವಂತೆ ಏರ್ ಬೂಸ್ಟರ್ ಸಿಸ್ಟಂ ಜೋಡಿಸಲಾಗಿದ್ದು, ಹೆಲ್ಮೆಟ್ ಬಳಕೆ ಮಾಡಿದರೆ ಕೂದಲು ಉದುರುವಿಕೆ ಹೆಚ್ಚುತ್ತೆ ಎನ್ನುವ ಭಯ ದೂರುಮಾಡಿದೆ. ಈ ಹೆಲ್ಮೆಟ್ ಸದ್ಯ ಮಾರುಕಟ್ಟೆಯಲ್ಲಿ ರೂ.1,900 ಬೆಲೆ ಹೊಂದಿದ್ದು, ವಿವಿಧ ಗಾತ್ರಗಳಲ್ಲಿ ಖರೀದಿ ಮಾಡಬಹುದು.

05. ಸ್ಟಡ್ಸ್ ಕ್ರೊಮ್ ಸೂಪರ್ ಡಿ1
ಸ್ಟಡ್ಸ್ ಮೋಟಾರ್‌ರ್ಸ್ಪೋರ್ಟ್ಸ್ ಕ್ರೊಮ್ ಸೂಪರ್ ಡಿ1 ಹೆಲ್ಮೆಟ್ ಸಹ ಸದ್ಯ ಮಾರುಕಟ್ಟೆಯಲ್ಲಿ ಖರೀದಿ ಲಭ್ಯವಿರುವ ಉತ್ತಮ ಮಾದರಿಯ ಹೆಲ್ಮೆಟ್‌ಗಳಲ್ಲಿ ಒಂದಾಗಿದ್ದು, ಫುಲ್ ಫೇಸ್ ವಿನ್ಯಾಸದೊಂದಿಗೆ ಆಕರ್ಷಕ ಗ್ರಾಫಿಕ್ಸ್ ಪಡೆದುಕೊಂಡಿದೆ.
MOST READ: ಹೆಲ್ಮೆಟ್‌ಗೂ ಬಂತೂ ವೈಪರ್, ಐಡಿಯಾ ಸೂಪರ್ರೋ ಸೂಪರ್..!

ಸದ್ಯ ಮಾರುಕಟ್ಟೆಯಲ್ಲಿ ಈ ಹೆಲ್ಮೆಟ್ ರೂ.1,080 ಬೆಲೆ ಹೊಂದಿದ್ದು, ಥರ್ಮೋಪ್ಲಾಸ್ಟಿಕ್ ವಸ್ತುಗಳಿಂದ ತಯಾರಿ ಮಾಡಲಾಗಿದೆ. ಇದು ಐಎಸ್ಐ ಮಾನದಂಡಗಳನ್ನು ಹೊಂದಿದ್ದು, ಆ್ಯಂಟಿ ಅಲರ್ಜಿಕ್ ಕುಷನ್ ಜೋಡಣೆ ಹೊಂದಿದೆ.