ಹೊಸ ಬೈಕಿನ ಟೀಸರ್ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

ಭಾರತೀಯ ಮಾರುಕಟ್ಟೆಯಲ್ಲಿ 150-200 ಸಿಸಿ ಬೈಕುಗಳು ಉತ್ತಮವಾಗಿ ಮಾರಾಟವಾಗುತ್ತಿದೆ. ಇದರಿಂದ ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಭಾರತದಲ್ಲಿ ಹೊಸ 200ಸಿಸಿಯ ಬೈಕನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

ಹೊಸ ಬೈಕಿನ ಟೀಸರ್ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿಯು ಸಿಬಿ ಹಾರ್ನೆಟ್ 160ಆರ್ ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿಲ್ಲ. ಇದರರ್ಥ ಜಪಾನಿನ ಕಂಪನಿಯು ಅದನ್ನು ಹೊಸ 200ಸಿಸಿ ಮಾದರಿಯೊಂದಿಗೆ ಬದಲಾಯಿಸಲು ಗಮನಹರಿಸಿದೆ. ಈ ಹೊಸ ಬೈಕನ್ನು ಸಿಬಿ ಹಾರ್ನೆಟ್ 200 ಆರ್ ಎಂದು ಕರೆಯಬಹುದು ಎಂದು ನಿರೀಕ್ಷಿಸುತ್ತೇವೆ. ಆದರೆ ಬಿಡುಗಡೆಯಾಗಲಿರುವ ಸಿಬಿ ಹಾರ್ನೆಟ್ 200ಆರ್ ಬೈಕಿನ ಬಗ್ಗೆ ಯಾವುದೇ ಅಧಿಕೃತವಾಗಿ ಮಾಹಿತಿ ಬಹಿರಂಗವಾಗಿಲ್ಲ.

ಹೊಸ ಬೈಕಿನ ಟೀಸರ್ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

ಈ ಹೊಸ ಬೈಕ್ ಹೋಂಡಾ ಸಿಬಿಎಫ್ 190ಆರ್ ಮಾದರಿಯನ್ನು ಆಧರಿಸಿರಬಹುದು. ಇದೀಗ ಹೋಂಡಾ ಕಂಪನಿಯು ಈ ಹೊಸ ಬೈಕಿನ 15 ಸೆಕೆಂಡುಗಳ ಟೀಸರ್ ವೀಡಿಯೋವನ್ನು ಬಿಡುಗಡೆಗೊಳಿಸಿದೆ.

MOST READ: ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಬೈಕಿನ ಟೀಸರ್ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

ಟೀಸರ್ ವೀಡಿಯೋದಲ್ಲಿ ಈ ಹೊಸ ಹೋಂಡಾ ಬೈಕಿನಲ್ಲಿ ಮಸ್ಕ್ಯುಲರ್ ಟ್ಯಾಂಕ್, ಅಗ್ರೇಸಿವ್ ಎಲ್ಇಡಿ ಹೆಡ್‌ಲೈಟ್,ಅಪ್ ಅಪ್ ಸೈಡ್ ಡೌನ್ ಫೋರ್ಕ್ ಮತ್ತು ಡ್ಯುಯಲ್ ಟೋನ್ ಬಣ್ಣಗಳ ಆಯ್ಜೆಯನ್ನು ಹೊಂದಿದೆ.

ಹೊಸ ಬೈಕಿನ ಟೀಸರ್ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

ಟೀಸರ್ ವಿಡಿಯೋದಲ್ಲಿ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಸಹ ಪ್ರದರ್ಶಿಸಿದೆ. ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟೆಡ್ ಏರ್ ಕೂಲ್ಡ್ ಎಂಜಿನ್ ಆಗಿರಲಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಬೈಕಿನ ಟೀಸರ್ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

ಹೋಂಡಾ ಕಂಪನಿಯು ಇದೇ ತಿಂಗಳ 27 ರಂದು ಹೊಸ ಕಾರ್ಯಕ್ರಮಕ್ಕೆ ಮಾಧ್ಯಮಗಳನ್ನು ಆಹ್ವಾನಿಸಿದೆ. ಇದೇ ಕಾರ್ಯಕ್ರಮದಲ್ಲಿ ಹೊಸ 200ಸಿಸಿಯ ಬೈಕನ್ನು ಹೋಂಡಾ ಕಂಪನಿಯು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ಬೈಕಿನ ಟೀಸರ್ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

ಹೋಂಡಾ ಕಂಪನಿಯು ಈಗಾಗಲೇ ಸಿಬಿಎಫ್ 190ಆರ್ ಬೈಕಿನ ಪೇಟೆಂಟ್ ಪಡೆದಿದೆ. ಈ ಹೊಸ ಬೈಕಿನಲ್ಲಿ 184 ಸಿಸಿ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 16.86 ಬಿಹೆಚ್‍ಪಿ ಪವರ್ ಮತ್ತು 16.3 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದೇ ಎಂಜಿನ್ ಅನ್ನು ಹೊಸ ಬೈಕಿನಲ್ಲಿ ಅಳವಡಿಸಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಹೋಂಡಾ ಸಿಬಿ ಹಾರ್ನೆಟ್ 200ಆರ್ ವಿನ್ಯಾಸಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ವಿನ್ಯಾಸವನ್ನು ಸಿಬಿಎಫ್ 190ಆರ್ ಮಾದರಿಯಿಂದ ಎರವಲು ಪಡೆಯಬಹುದು. ಸಿಬಿ ಹಾರ್ನೆಟ್ 200ಆರ್ ಬೈಕಿಗೆ ಸ್ಪರ್ಧಾತ್ಮಕ ಬೆಲೆಯನ್ನು ನಿಗಧಿಪಡಿಸಬಹುದು.

ಹೊಸ ಬೈಕಿನ ಟೀಸರ್ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

ಹೋಂಡಾ ಕಂಪನಿಯು ಈ ಹೊಸ ಸಿಬಿ ಹಾರ್ನೆಟ್ 200ಆರ್ ಬೈಕನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕೆಟಿಎಂ 200 ಡ್ಯೂಕ್, ಬಜಾಜ್ ಪಲ್ಸರ್ ಎನ್ಎಸ್ 200, ಮತ್ತು ಟಿವಿಎಸ್ ಅಪಾಚೆ ಆರ್‌ಟಿಆರ್‌ 200 4ವಿ ಬೈಕುಗಳನ್ನು ಪೈಪೋಟಿಯನ್ನು ನೀಡುತ್ತದೆ

Most Read Articles

Kannada
English summary
Honda Teases New 200 cc Motorcycle; Launch Soon. Read In Kannada.
Story first published: Saturday, August 22, 2020, 9:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X