ಕರೋನಾ ಎಫೆಕ್ಟ್: ಸ್ವಂತ ಬಳಕೆಯ ವಾಹನ ಮಾರಾಟ ಹೆಚ್ಚಳದಿಂದ ಹೋಂಡಾ ದ್ವಿಚಕ್ರ ವಾಹನಗಳಿಗೆ ಭಾರೀ ಬೇಡಿಕೆ

ಲಾಕ್‌ಡೌನ್‌ನಿಂದಾಗಿ ಸಂಪೂರ್ಣವಾಗಿ ನೆಲಕಚ್ಚಿದ್ದ ಹೊಸ ವಾಹನ ಮಾರಾಟವು ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಭಾರೀ ಏರಿಕೆ ಕಾಣುತ್ತಿದ್ದು, ವೈರಸ್ ಭೀತಿ ಹಿನ್ನಲೆಯಲ್ಲಿ ಹೋಂಡಾ ದ್ವಿಚಕ್ರ ವಾಹನಗಳು ಭರ್ಜರಿ ಬೇಡಿಕೆ ಪಡೆದುಕೊಂಡಿವೆ.

ಕರೋನಾ ಎಫೆಕ್ಟ್: ಸ್ವಂತ ಬಳಕೆಯ ವಾಹನ ಮಾರಾಟ ಹೆಚ್ಚಳ

ಇದೇ ವರ್ಷದ ಜೂನ್ ಅವಧಿಯಲ್ಲಿ 2.02 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದ ಹೋಂಡಾ ಕಂಪನಿಯು ಜುಲೈ ಅವಧಿಯಲ್ಲಿ ಬರೋಬ್ಬರಿ 3.21 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ 1 ಲಕ್ಷ ಅಧಿಕ ವಾಹನಗಳು ಹೆಚ್ಚುವರಿಯಾಗಿ ಬೇಡಿಕೆ ಪಡೆದುಕೊಂಡಿದ್ದು, ಆಟೋ ತಜ್ಞರ ಅಭಿಪ್ರಾಯದಂತೆ ಕರೋನಾ ವೈರಸ್ ಪರಿಣಾಮದಿಂದಾಗಿ ಸ್ವಂತ ವಾಹನಗಳ ಬಳಕೆಯು ದಿನದಿಂದಕ್ಕೆ ದ್ವಿಗುಣಗೊಳ್ಳುತ್ತಿದೆ.

ಕರೋನಾ ಎಫೆಕ್ಟ್: ಸ್ವಂತ ಬಳಕೆಯ ವಾಹನ ಮಾರಾಟ ಹೆಚ್ಚಳ

ಇನ್ನು ಹೊಸ ಎಮಿಷನ್ ಜಾರಿ ನಂತರ ಬಹುತೇಕ ವಾಹನ ಮಾದರಿಗಳು ಹೊಸ ಎಂಜಿನ್ ಮಾದರಿಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಕೂಡಾ ಹೊಸ ನಿಯಮ ಅಧಿಕೃತವಾಗಿ ಜಾರಿಗೆ ಬರುವ ಮುನ್ನವೇ ಬಿಎಸ್-6 ಎಂಜಿನ್ ಪ್ರೇರಿತ ದ್ವಿಚಕ್ರ ವಾಹನಗಳ ಮಾರಾಟಕ್ಕೆ ಚಾಲನೆ ನೀಡಿತ್ತು.

ಕರೋನಾ ಎಫೆಕ್ಟ್: ಸ್ವಂತ ಬಳಕೆಯ ವಾಹನ ಮಾರಾಟ ಹೆಚ್ಚಳ

ಹೊಸ ವಾಹನ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿರುವ ಹೋಂಡಾ ಕಂಪನಿಯು ಕರೋನಾ ವೈರಸ್ ಭೀತಿ ನಡುವೆಯೂ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡಿದ್ದು, ಬಿಎಸ್-6 ಎಂಜಿನ್ ಪ್ರೇರಿತ 11 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಕರೋನಾ ಎಫೆಕ್ಟ್: ಸ್ವಂತ ಬಳಕೆಯ ವಾಹನ ಮಾರಾಟ ಹೆಚ್ಚಳ

ಹೋಂಡಾ ನಿರ್ಮಾಣದ ಆಕ್ಟಿವಾ 6ಜಿ, ಆಕ್ಟಿವಾ 125 ಎಫ್ಐ, ಡಿಯೋ, ಗ್ರಾಜಿಯಾ, ಎಸ್‌ಪಿ 125 ಮತ್ತು ಶೈನ್ ಬೈಕ್ ಮಾದರಿಗಳು ಬಿಎಸ್-6 ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಎಂಜಿನ್ ನಂತರ ಮೈಲೇಜ್ ವಿಚಾರವಾಗಿ ಮತ್ತಷ್ಟು ಗ್ರಾಹಕರನ್ನು ಸೆಳೆಯುತ್ತಿವೆ.

ಕರೋನಾ ಎಫೆಕ್ಟ್: ಸ್ವಂತ ಬಳಕೆಯ ವಾಹನ ಮಾರಾಟ ಹೆಚ್ಚಳ

ಲಾಕ್‌ಡೌನ್ ಸಂದರ್ಭದಲ್ಲಿ ಇಳಿಕೆಯಾದ ವಾಹನ ಮಾರಾಟ ಪ್ರಮಾಣವನ್ನು ಸರಿದಾರಿಗೆ ತರಲು ಹಲವು ಯೋಜನೆಗಳನ್ನ ಜಾರಿಗೆ ತಂದಿದ್ದ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಆಕರ್ಷಕ ಇಎಂಐ ಸೌಲಭ್ಯಗಳನ್ನು ನೀಡಿದ್ದು ಸಹ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಕರೋನಾ ಎಫೆಕ್ಟ್: ಸ್ವಂತ ಬಳಕೆಯ ವಾಹನ ಮಾರಾಟ ಹೆಚ್ಚಳ

ಹೆಚ್‌ಡಿಎಫ್‌ಪಿ, ಎಸ್‌ಬಿಐ ಮತ್ತು ಐಡಿಎಫ್‌ಸಿ ಬ್ಯಾಂಕ್‌ಗಳ ಜೊತೆಗೂಡಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಸಹ ಶೇ.95 ರಷ್ಟು ಆನ್ ರೋಡ್ ಸಾಲಸೌಲಭ್ಯಗಳನ್ನು ಒದಗಿಸುತ್ತಿದ್ದು, ಎಸ್‌ಬಿಐ ಕ್ರೆಡಿಕ್ ಕಾರ್ಡ್ ಮೂಲಕ ಹೊಸ ದ್ವಿಚಕ್ರ ವಾಹನ ಖರೀದಿಸುವ ಗ್ರಾಹಕರಿಗೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿದೆ.

ಕರೋನಾ ಎಫೆಕ್ಟ್: ಸ್ವಂತ ಬಳಕೆಯ ವಾಹನ ಮಾರಾಟ ಹೆಚ್ಚಳ

ಜೊತೆಗೆ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಸೀಮಿತ ಅವಧಿಯೊಳಗೆ ಸ್ಕೂಟರ್ ಮತ್ತು ಬೈಕ್ ಖರೀದಿಸುವ ಗ್ರಾಹಕರಿಗೆ ಅತಿ ಸರಳವಾಗ ಇಎಂಐ ಆಫರ್ ಸಹ ನೀಡುತ್ತಿದ್ದು, ಗ್ರಾಹಕರು ಹೊಸ ವಾಹನ ಖರೀದಿ ಮಾಡಿದ ಮೊದಲ 3 ತಿಂಗಳು ಕೇವಲ ಶೇ.50ರಷ್ಟು ಐಎಂಐ ಮಾತ್ರ ಮರುಪಾವತಿಗೆ ಅವಕಾಶ ನೀಡಲಾಗಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಯಾಗಿರುವ ಹೊಸ ವಿಮಾ ನೀತಿ..

ಕರೋನಾ ಎಫೆಕ್ಟ್: ಸ್ವಂತ ಬಳಕೆಯ ವಾಹನ ಮಾರಾಟ ಹೆಚ್ಚಳ

ಮೂರು ತಿಂಗಳ ನಂತರ ವಿನಾಯ್ತಿ ನೀಡಲಾದ ಸಾಲ ಮೊತ್ತವು ಕೂಡಾ ಸೇರ್ಪಡೆಯಾಗುವುದರೊಂದಿಗೆ ಇಎಂಐ ದರಗಳನ್ನು ವಿಧಿಸಲಿದ್ದು, ಲಾಕ್‌ಡೌನ್ ಸಮಯದಲ್ಲಿ ಹೊಸ ವಾಹನ ಖರೀದಿಸಿ ಇಎಂಐ ಮರುಪಾವತಿ ಸಾಧ್ಯವಿಲ್ಲ ಎನ್ನುವ ಗ್ರಾಹಕರಿಗೆ ಇದು ಸಾಕಷ್ಟು ಅನುಕೂಲವಾಗಿದೆ.

Article Published On: Sunday, August 2, 2020, 8:45 [IST]
English summary
Honda 2Wheeler India crosses 3 lac unit sales in July 2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+