ಬಿಎಸ್-6 ಯೂನಿಕಾರ್ನ್ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಈಗಾಗಲೇ ತನ್ನ ಪ್ರಮುಖ ದ್ವಿಚಕ್ರ ವಾಹನಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದ್ದು, ಇದೀಗ ಹೊಸ ವಾಹನಗಳ ಬೆಲೆಯಲ್ಲಿ ಎರಡನೇ ಹಂತದಲ್ಲಿ ಬೆಲೆ ಏರಿಕೆ ಪ್ರಕಟಿಸಿದೆ.

ಬಿಎಸ್-6 ಯೂನಿಕಾರ್ನ್ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಬಿಎಸ್-6 ಎಂಜಿನ್‌ನೊಂದಿಗೆ ಭಾರೀ ಪ್ರಮಾಣದ ಬೆಲೆ ಏರಿಕೆ ಕಂಡಿದ್ದ ಹೋಂಡಾ ದ್ವಿಚಕ್ರ ವಾಹನಗಳು ಇದೀಗ ಲಾಕ್‌ಡೌನ್ ಸಂಕಷ್ಟದಿಂದಾಗಿ ವೆಚ್ಚ ನಿರ್ವಹಣಾ ಭಾಗವಾಗಿ ಎರಡನೇ ಬಾರಿಗೆ ದುಬಾರಿ ಬೆಲೆ ಪಡೆದುಕೊಳ್ಳುತ್ತಿದ್ದು, ಹೊಸ ದರಪಟ್ಟಿಯಲ್ಲಿ ಯೂನಿಕಾರ್ನ್ ಬೈಕ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 955 ಹೆಚ್ಚಳದೊಂದಿಗೆ ರೂ.94,548 ಆರಂಭಿಕ ಬೆಲೆ ಪಡೆದುಕೊಂಡಿದೆ.

ಬಿಎಸ್-6 ಯೂನಿಕಾರ್ನ್ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಯೂನಿಕಾರ್ನ್ ಮಾದರಿಯು ಹೋಂಡಾ ಕಂಪನಿಯು ಭಾರತದಲ್ಲಿ ಪರಿಚಯಿಸಿದ ಮೊದಲ ಬೈಕ್ ಮಾದರಿಯಾಗಿದ್ದು, ಹಲವಾರು ಭಾರೀ ಮಾರಾಟದಿಂದ ಸ್ಥಗಿತಗೊಂಡರು ಗ್ರಾಹಕರ ಬೇಡಿಕೆ ಮೇರೆಗೆ ಹೊಸ ಬದಲಾವಣೆಯೊಂದಿಗೆ ಮರುಬಿಡುಗಡೆಯಾಗುತ್ತಿದೆ.

ಬಿಎಸ್-6 ಯೂನಿಕಾರ್ನ್ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಇದೀಗ ಬಿಡುಗಡೆಯಾಗಿರುವ ಹೊಸ ಯೂನಿಕಾರ್ನ್ ಮಾದರಿಯು ಈ ಹಿಂದಿನ ಸಿಬಿ ಯೂನಿಕಾರ್ನ್ ಮತ್ತು ಸಿಬಿ ಯೂನಿಕಾರ್ನ್ 160 ಮಾದರಿಗಿಂತಲೂ ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಬಿಎಸ್-6 ಯೂನಿಕಾರ್ನ್ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಸದ್ಯ ಸಿಬಿ ಯೂನಿಕಾರ್ನ್ ಮತ್ತು ಸಿಬಿ ಯೂನಿಕಾರ್ನ್ 160 ಬೈಕ್ ಮಾದರಿಗಳನ್ನು ಸ್ಥಗಿತಗೊಳಿಸಿರುವ ಹೋಂಡಾ ಕಂಪನಿಯು ಕೇವಲ ಯೂನಿಕಾರ್ನ್ ಹೆಸರಿನೊಂದಿಗೆ ಹೊಸ ಬೈಕ್ ಮಾದರಿಯನ್ನು ಮಾರಾಟ ಮಾಡುತ್ತಿದ್ದು, ಬಿಎಸ್-6 ವೈಶಿಷ್ಟ್ಯತೆಯ 162.7 ಸಿಸಿ ಸಿಂಗಲ್ ಸಿಲಿಂಡರ್, ಫ್ಯೂಲ್ ಇಂಜೆಕ್ಷೆಡ್ ಎಂಜಿನ್ ಸಾಮರ್ಥ್ಯದೊಂದಿಗೆ 12.73-ಬಿಎಚ್‌ಪಿ ಮತ್ತು 14-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಎಸ್-6 ಯೂನಿಕಾರ್ನ್ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಹೊಸ ಎಂಜಿನ್ ಸಾಮರ್ಥ್ಯವು ಈ ಹಿಂದಿನ 150 ಸಿಸಿ ಎಂಜಿನ್‌ಗೆ ಸಮವಾಗಿದ್ದರೂ ಕೂಡಾ ಇಂಧನ ದಕ್ಷತೆ ಹೆಚ್ಚಿಸಲು ಮತ್ತು ಮಾಲಿನ್ಯ ತಡೆಯುವುದಕ್ಕಾಗಿ ಬಿಎಚ್‌ಪಿ ಉತ್ಪಾದನಾ ಪ್ರಮಾಣವನ್ನು ತಗ್ಗಿಸಿರುವುದು ಪ್ರಮುಖ ಬದಲಾವಣೆಯಾಗಿದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಬಿಎಸ್-6 ಯೂನಿಕಾರ್ನ್ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಇನ್ನು ಹೊಸ ಎಂಜಿನ್ ನಂತರ ಇದೀಗ ಬಹುತೇಕ ಆಟೋ ಕಂಪನಿಗಳು ತಮ್ಮ ಪ್ರಮುಖ ವಾಹನಗಳ ಬೆಲೆ ಉನ್ನತೀಕರಿಸುತ್ತಿದ್ದು, ವಾಹನ ಮಾರಾಟ ಪ್ರಮಾಣವು ಕುಸಿತ ಕಂಡಿದ್ದರೂ ವೆಚ್ಚ ನಿರ್ವಹಣೆಯ ಸಂದರ್ಭದ ಬೆಲೆ ಏರಿಕೆ ನಿರ್ಣಯ ಪ್ರಕಟಿಸಿವೆ.

ಬಿಎಸ್-6 ಯೂನಿಕಾರ್ನ್ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಇದರ ಜೊತೆಗೆ ಕರೋನಾ ವೈರಸ್ ಪರಿಣಾಮ ಕುಸಿದಿರುವ ವಾಹನ ಮಾರಾಟ ಪ್ರಮಾಣವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಆಟೋ ಕಂಪನಿಗಳು ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿರುವುದಲ್ಲದೆ ಸುಲಭ ಸಾಲಸೌಲಭ್ಯಗಳನ್ನು ಒದಗಿಸುತ್ತಿವೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಬಿಎಸ್-6 ಯೂನಿಕಾರ್ನ್ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಕಂಪನಿಯು ಸಹ ದ್ವಿಚಕ್ರ ವಾಹನಗಳನ್ನು ಖರೀದಿಸುವ ಗ್ರಾಹಕರು ಹೊಸ ವಾಹನ ಖರೀದಿ ಮಾಡಿದ ಮೊದಲ 3 ತಿಂಗಳು ಶೇ.50ರಷ್ಟು ಐಎಂಐ ಮಾತ್ರ ಪಾವತಿಸಲು ಅವಕಾಶ ನೀಡಲಾಗಿದ್ದು, ಮೂರು ತಿಂಗಳ ನಂತರ ಸಾಮಾನ್ಯ ದರದಲ್ಲೇ ಇಎಂಐ ಪಾವತಿಸುವ ಅವಕಾಶ ನೀಡುತ್ತಿದೆ.

Article Published On: Monday, July 13, 2020, 11:01 [IST]
English summary
Honda Unicorn BS6 Price Hiked. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+