ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ಜಾವಾ ಬೈಕುಗಳು

ಭಾರತದಲ್ಲಿ ಕರೋನಾ ವೈರಸ್ ಆರ್ಭಟ ಇಳಿಮುಖವಾಗುತ್ತಿರುವಾಗ ವಾಹನಗಳ ಮಾರಾಟದಲ್ಲಿ ಹಲವು ತಿಂಗಳು ಬಳಿಕ ಚೇತರಿಕೆಯನ್ನು ಕಾಣುತ್ತಿದೆ. ವರ್ಷಾಂತ್ಯದಲ್ಲಿ ಹಲವು ವಾಹನ ತಯಾರಕ ಕಂಪನಿಗಳು ತಮ್ಮ ಸರಣಿಯಲ್ಲಿರುವ ಮಾದರಿಗಳ ಮೇಲೆ ಆಫರ್ ನೀಡುವ ಮೂಲಕ ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ.

ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ಜಾವಾ ಬೈಕುಗಳು

ಆದರೆ ವೆಚ್ಚ ನಿರ್ವಹಣೆಗಾಗಿ ಹಲವು ವಾಹನ ತಯಾರಕ ಕಂಪನಿಗಳು ತಮ್ಮ ಸರಣಿಯಲ್ಲಿರುವ ವಿವಿಧ ಮಾದರಿಗಳ ಬೆಲೆಯನ್ನು ಹೆಚ್ಚಿಸಲು ಮುಂದಾಗಿದೆ. ಇದರ ನಡುವೆ ಕಚ್ಚಾ ವಸ್ತುಗಳ ಬೆಲೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇದನ್ನು ಸರಿದೂಗಿಸಲು ಜನವರಿ 1 ರಿಂದ ತನ್ನ ಸರಣಿಯಲ್ಲಿರುವ ಎಲ್ಲಾ ಜಾವಾ ಬೈಕುಗಳ ಬೆಲೆಯನ್ನು ಹೆಚ್ಚಿಸಲು ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ನಿರ್ಧರಿಸಿದೆ ಎಂದು ವರದಿಗಳಾಗಿದೆ.

ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ಜಾವಾ ಬೈಕುಗಳು

ಇದರಿಂದಾಗಿ ಕಾವಾ ಬೈಕುಗಳನ್ನು ಖರೀದಿಸಲು ಬಯಸುವವರಿಗೆ ಈ ತಿಂಗಳು ಖರೀದಿಸಬಹುದಾಗಿದೆ. ಮುಂದಿನ ಹೊಸ ವರ್ಷದಿಂದ ಜನಪ್ರಿಯ ಜಾವಾ ಬೈಕುಗಳು ದುಬಾರಿಯಾಗಿರಲಿವೆ. ಆದರೆ ವರ್ಷದ ಕೊನೆಯಲ್ಲಿ ಬೈಕು ಖರೀದಿಸಿದಾಗ 2020ರ ಮಾಡೆಲ್ ಎಂದೇ ಆಗಿರುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ಜಾವಾ ಬೈಕುಗಳು

ಈ ಕಾರಣದಿಂದ ಕೆಲವರು ವರ್ಷಾಂತ್ಯ ಬೈಕುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ. ಅದರೆ ಮುಂದಿನ ವರ್ಷದಿಂದ ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ತಮ್ಮ ಸರಣಿಯಲ್ಲಿರುವ ಎಲ್ಲಾ ಮಾದರಿಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದೆ.

ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ಜಾವಾ ಬೈಕುಗಳು

ಭಾರತೀಯ ಮಾರುಕಟ್ಟೆಯಲ್ಲಿ ಜಾವಾ ಬೈಕುಗಳನ್ನು ತಯಾರಿಸಿ ಮಾರಾಟ ಮಾಡುವ ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ಇತ್ತೀಚೆಗೆ ಸಾಧಿಸಿದೆ. ಕೇವಲ 12 ತಿಂಗಳ ಅವಧಿಯಲ್ಲಿ ಕ್ಲಾಸಿಕ್ ಲೆಜೆಂಡ್ಸ್ 50,000 ಜಾವಾ ಬೈಕುಗಳನ್ನು ಮಾರಾಟ ಮಾಡಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ಜಾವಾ ಬೈಕುಗಳು

ಲಾಕ್‌ಡೌನ್ ಸಡಿಲಿಕೆ ಮಾಡಿದ ಬಳಿಕ ಜಾವಾ ಮೋಟಾರ್‌ಸೈಕಲ್ ಕಂಪನಿಯ ಬೈಕುಗಳ ಮಾರಾಟದಲ್ಲಿ ಗಮನಾರ್ಹ ಚೇತರಿಕೆ ಕಂಡಿದೆ. ಇದರಿಂದ ಜಾವಾ ಮೋಟಾರ್‌ಸೈಕಲ್ ಕಂಪನಿಯು ಕೂಡ ಭಾರತೀಯ ಮಾರುಕಟ್ಟೆಯ ದ್ವಿಚಕ್ರ ವಿಭಾಗದಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ.

ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ಜಾವಾ ಬೈಕುಗಳು

ಪ್ರಸ್ತುತ ಕಂಪನಿಯು ದೇಶದಲ್ಲಿ 105 ಶೋ ರೂಂಗಳನ್ನು ಹೊಂದಿವೆ. ಲಾಕ್‌ಡೌನ್ ತೆರವಿನ ಬಳಿಕ 58 ಹೊಸ ಡೀಲರ್‌ಶಿಪ್ ಅನ್ನು ಪ್ರಾರಂಭಿಸಿದ್ದಾರೆ. ಜಾವಾ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ನೇರವಾಗಿ ರಾಯಲ್ ಎನ್‍ಫೀಲ್ಡ್ಬ್ ಮಾದರಿಗಳಿಗೆ ಪೈಪೋಟಿ ನೀಡುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ಜಾವಾ ಬೈಕುಗಳು

2020ರ ಡಿಸೆಂಬರ್ ವೇಳೆಗೆ ತನ್ನ ಡೀಲರ್‌ಶಿಪ್ ಸಂಖ್ಯೆಯನ್ನು 205ಕ್ಕೆ ಏರಿಸುವುದಾಗಿ ಜಾವಾ ಮೋಟಾರ್‌ಸೈಕಲ್ ಹೇಳಿದೆ. ಹಬ್ಬದ ಸೀಸನ್ ಅಕ್ಟೋಬರ್‌ನಲ್ಲಿ ಮಾತ್ರ 2,000ಕ್ಕೂ ಹೆಚ್ಚು ಜಾವಾ ಪೆರಾಕ್ ಬೈಕುಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. ಜಾವಾ ಮೋಟಾರ್‌ಸೈಕಲ್ ಕಂಪನಿಯ ಕಸ್ಟಮ್ ಬಾಬರ್‌ ಎಂಬ ಕರ್ಖಾನೆಯಿಂದ 2,000ಕ್ಕೂ ಹೆಚ್ಚು ಜಾವಾ ಪೆರಾಕ್ ಬೈಕುಗಳನ್ನು ವಿತರಿಸಲಾಗಿದೆ.

ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ಜಾವಾ ಬೈಕುಗಳು

ಜಾವಾ ಮೋಟಾರ್‌ಸೈಕಲ್ ಕಂಪನಿಯು ಹಲವು ವರ್ಷಗಳ ನಂತರ 2018ರಲ್ಲಿ ದೇಶಿಯ ಮಾರುಕಟ್ಟೆಗೆ ಮತ್ತೆ ಕಾಲಿಟ್ಟಿತು. ಜಾವಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಜಾವಾ ಸ್ಟ್ಯಾಂಡರ್ಡ್, ಜಾವಾ 42 ಹಾಗೂ ಜಾವಾ ಪೆರಾಕ್ ಎಂಬ ಮೂರು ಮಾದರಿಗಳನ್ನು ಮಾರಾಟ ಮಾಡುತ್ತಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ಜಾವಾ ಬೈಕುಗಳು

ಜಾವಾ ಪೆರಾಕ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ. ಇನ್ನು ಜಾವಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಪಿಥಾಂಪುರದಲ್ಲಿ ಉತ್ಪಾದನಾ ಕೇಂದ್ರದಲ್ಲಿ ಜಾವಾ ಪೆರಾಕ್ ಬೈಕಿನ ಉತ್ಪಾದನೆಯನ್ನು ಹೆಚ್ಚಿಸಲಿದೆ.

ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ಜಾವಾ ಬೈಕುಗಳು

ದೇಶಾದ್ಯಂತ ಒಟ್ಟು ಡೀಲರುಗಳ ಸಂಖ್ಯೆಯನ್ನು ಹೆಚ್ಚಿಸಿದಾಗ ಕ್ಲಾಸಿಕ್ ಲೆಜೆಂಡ್ಸ್ ಜಾವಾ ಬೈಕುಗಳು ಗ್ರಾಹಕರಿಗೆ ಸುಲಭವಾಗಿ ಲಭ್ಯವಾಗುವಂತೆ ಆಗುತ್ತದೆ. ರೆಟ್ರೊ ಶೈಲಿಯ ಜಾವಾ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ.

ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ಜಾವಾ ಬೈಕುಗಳು

ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ತನ್ನ ಸರಣಿಯಲ್ಲಿರುವ ಜಾವಾ ಬೈಕುಗಳ ಬೆಲೆಯನ್ನು ಮುಂದಿನ ವರ್ಷದ ಆರಂಭದಿಂದಲೇ ಹೆಚ್ಚಿಸಲಿದೆ. ಆದರೆ ಜಾವಾ ಬೈಕುಗಳ ಬೆಲೆಯನ್ನು ಎಷ್ಟು ಪ್ರಮಾಣದವರೆಗೆ ಹೆಚ್ಚಿಸಲಿದೆ ಎಂಬುವುದನ್ನು ಬಹಿರಂಗಪಡಿಸಲಿಲ್ಲ.

More from DriveSpark

Article Published On: Monday, December 21, 2020, 9:25 [IST]
English summary
Jawa To Hike Prices Across Range From January 2021. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+