ಹೊಸ ಕೆಟಿಎಂ 390 ಅಡ್ವೆಂಚರ್ ಬೈಕಿನ ಮೇಲೆ ಭರ್ಜರಿ ಆಫರ್

ಕೆಟಿಎಂ ಇಂಡಿಯಾ ಕಂಪನಿಯು ಭಾರತಿಯ ಮಾರುಕಟ್ಟೆಯಲ್ಲಿ ಬಿಎಸ್-6 390 ಅಡ್ವೆಂಚರ್ ಬೈಕಿನ ಮೇಲೆ ಭರ್ಜರಿ ಫೈನಾನ್ಸ್ ಆಫರ್ ಅನ್ನು ಘೋಷಿಸಿದೆ. ಇದರೊಂದಿಗೆ ರೂ.6,999 ಗಳಿಂದ ಪ್ರಾರಂಭವಾಗುವ ಇಎಂಐ ಆಫರ್ ಅನ್ನು ಕೂಡ ನೀಡಿದೆ.

ಹೊಸ ಕೆಟಿಎಂ 390 ಅಡ್ವೆಂಚರ್ ಬೈಕಿನ ಮೇಲೆ ಭರ್ಜರಿ ಆಫರ್

ಕೆಟಿಎಂ 390 ಅಡ್ವೆಂಚರ್ ಬೈಕಿನ ಆನ್ ರೋಡ್ ಬೆಲೆಯ ಶೇ.80 ರಷ್ಟು ಹಣವನ್ನು ಫೆನಾನ್ಸ್ ಆಫರ್ ಅಲ್ಲಿ ನೀಡಲಾಗುತ್ತದೆ. ಇದನ್ನು ಮರುಪಾವತಿಸಲು ಐದು ವರ್ಷಗಳ ಕಾಲಾವಧಿಯನ್ನು ನೀಡಲಾಗುತ್ತದೆ. ಈ ಕೆಟಿಎಂ ಅಡ್ವೆಂಚರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.3.04 ಲಕ್ಷಗಳಾಗಿದೆ. ಇನ್ನು ಗ್ರಾಹಕರು ಬಜಾಜ್ ಫೈನಾನ್ಸ್ ಲಿಮಿಟೆಡ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ನೀಡುವ ಶೇ.95 ರಷ್ಟು ಹಣಕಾಸು ಪ್ಯಾಕೇಜ್ ಅಥವಾ ಇನ್ನಿತರ ಹಣಕಾಸು ಆಫರ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಹೊಸ ಕೆಟಿಎಂ 390 ಅಡ್ವೆಂಚರ್ ಬೈಕಿನ ಮೇಲೆ ಭರ್ಜರಿ ಆಫರ್

ಇದರಲ್ಲಿ ಸಂಸ್ಥೆಯು ಕಡಿಮೆ ಬಡ್ಡಿದರ ಮತ್ತು ಹೆಚ್ಚಿನ ಮರುಪಾವತಿ ಅವಧಿಯ ಆಯ್ಕೆಯನ್ನು ಹೊಂದಿರುತ್ತದೆ. ಇನ್ನು ಕೆಟಿಎಂ ಡೀಲರ್ ಗಳ ಬಳಿ ಎಕ್ಸ್‌ಚೇಂಜ್ ಅಫರ್ ಕೂಡ ಲಭ್ಯವಿರಲಿದೆ.

MOST READ: ಹೊಸ ಮಹೀಂದ್ರಾ ಮೊಜೊ 300 ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಕೆಟಿಎಂ 390 ಅಡ್ವೆಂಚರ್ ಬೈಕಿನ ಮೇಲೆ ಭರ್ಜರಿ ಆಫರ್

ಕೆಟಿಎಂ 390 ಅಡ್ವೆಂಚರ್ ಬೈಕ್ ಆಫ್ ರೋಡ್ ಟೂರರ್ ಆಗಿದ್ದು, ಈ ಬೈಕ್ 390 ಡ್ಯೂಕ್ ಸ್ಟ್ರೀಟ್ ಫೈಟರ್ ಅನ್ನು ಆಧರಿಸಿದೆ. ಈ ಬೈಕ್ ಕೆಟಿಎಂ 790 ಅಡ್ವೆಂಚರ್ ಬೈಕಿನಿಂದಲೂ ವಿನ್ಯಾಸದ ಕೆಲವು ಅಂಶಗಳನ್ನು ಎರವಲು ಪಡೆದಿದೆ.

ಹೊಸ ಕೆಟಿಎಂ 390 ಅಡ್ವೆಂಚರ್ ಬೈಕಿನ ಮೇಲೆ ಭರ್ಜರಿ ಆಫರ್

ಕೆಟಿಎಂ 390 ಅಡ್ವೆಂಚರ್ ಬೈಕಿನಲ್ಲಿ ಎಡಿವಿ ಸ್ಪೋರ್ಟ್ಸ್ ಸ್ಪ್ಲಿಟ್ ಎಲ್‍ಇಡಿ ಹೆಡ್‍‍ಲ್ಯಾಂಪ್‍, ಎಲ್‍ಇಡಿ ಟರ್ನ್‍ ಇಂಡಿಕೇಟರ್‍‍‍ಗಳು ಮತ್ತು ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೊಂದಿರುವ ಬಣ್ಣದಿಂದ ಕೂಡಿದ ಆಕರ್ಷಕ ಟಿಎಫ್‍‍ಟಿ ಡಿಸ್‍‍ಪ್ಲೇ ಅನ್ನು ಅಳವಡಿಸಲಾಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಹೊಸ ಕೆಟಿಎಂ 390 ಅಡ್ವೆಂಚರ್ ಬೈಕಿನ ಮೇಲೆ ಭರ್ಜರಿ ಆಫರ್

ಕೆಟಿಎಂ 390 ಅಡ್ವೆಂಚರ್ ಬೈಕಿನಲ್ಲಿ ಅಲ್ಯೂಮಿನಿಯಂ ಹ್ಯಾಂಡಲ್‍‍ಬಾರ್‍‍ಗಳು ಸ್ಪ್ಲಿಟ್ ಸೀಟುಗಳು ಮತ್ತು ಫ್ಯೂಯಲ್ ಟ್ಯಾಂಕ್ ಸ್ಪಾಯ್ಲರ್‍‍ಗಳನ್ನು ಕೂಡ ಅಳವಡಿಸಲಾಗಿದೆ. ಫ್ಯೂಯಲ್ ಟ್ಯಾಂಕ್‍‍ನ ಸೀಟು‍‍ಗಳು ವಿಸ್ತರಿಸಿದಾಗ ಹ್ಯಾಂ‍ಡಲ್ ಬಾರ್‍‍ಗಳನ್ನು ಹೆಚ್ಚಿಸಲಾಗಿದೆ.

ಹೊಸ ಕೆಟಿಎಂ 390 ಅಡ್ವೆಂಚರ್ ಬೈಕಿನ ಮೇಲೆ ಭರ್ಜರಿ ಆಫರ್

ಕೆಟಿಎಂ 390 ಅಡ್ವೆಂಚರ್ ಬೈಕಿನಲ್ಲಿ 200 ಗ್ರೌಂಡ್ ಕ್ಲಿಯರೆನ್ಸ್ ಎಂಎಂ ಮತ್ತು 855 ಸೀಟ್ ಎತ್ತರವನ್ನು ಹೊಂದಿದೆ. ಈ ಬೈಕಿನಲ್ಲಿ ಡ್ಯೂಕ್ 390 ಬೈಕಿನಲ್ಲಿರುವಂತಹ 373.2 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 43 ಬಿ‍‍ಹೆಚ್‍‍ಪಿ ಪವರ್ ಹಾಗೂ 37 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಹೊಸ ಕೆಟಿಎಂ 390 ಅಡ್ವೆಂಚರ್ ಬೈಕಿನ ಮೇಲೆ ಭರ್ಜರಿ ಆಫರ್

ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಎಂಜಿನ್‍ನೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ. ಎಬಿಎಸ್ ಆಫ್ ರೋಡ್ ಮೋಡ್ ಅನ್ನು ಹೊಂದಿದೆ.

ಹೊಸ ಕೆಟಿಎಂ 390 ಅಡ್ವೆಂಚರ್ ಬೈಕಿನ ಮೇಲೆ ಭರ್ಜರಿ ಆಫರ್

ಈ ಬಿಎಸ್-6 ಕೆಟಿಎಂ 390 ಅಡ್ವೆಂಚರ್ ಬೈಕ್ ಟ್ರಾ ಕ್ಷನ್ ಕಂಟ್ರೂಲ್ ಮತ್ತು ಎಬಿಎಸ್ ನಂತಹ ಹೊಸ ಫೀಚರ್ಸ್‍‍ಗಳನ್ನು ಹೊಂದಿದೆ. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಹಾಗೂ ಬಿ‍ಎಂ‍‍ಡಬ್ಲ್ಯು ಮೋಟೊರಾಡ್ ಜಿ310ಜಿ‍ಎಸ್ ಬೈಕುಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Monday, July 27, 2020, 18:05 [IST]
English summary
KTM 390 Adventure Finance Offer Announced With EMIs Starting From Rs 6,999. Read In Kannada.
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+