ಬಿಎಸ್-4 ಕೆಟಿಎಂ ಡ್ಯೂಕ್ 250 ಬೈಕಿನ ಮೇಲೆ ಭರ್ಜರಿ ರಿಯಾಯಿತಿ
ಕೆಟಿಎಂ ಕಂಪನಿಯು ತಮ್ಮ ಜನಪ್ರಿಯ ಡ್ಯೂಕ್ 250 ನೇಕೆಡ್ ಬೈಕಿಗೆ ಭರ್ಜರಿ ಆಫರ್‍ಗಳನ್ನು ಘೋಷಿಸುವ ಮೂಲಕ ಡ್ಯೂಕ್ ಪ್ರಿಯರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಈ ಭರ್ಜರಿ ರಿಯಾಯಿತಿ ಕೇವಲ ಬಿಎಸ್-4 ಡ್ಯೂಕ್ 250 ಬೈಕಿಗೆ ಮಾತ್ರವಾಗಿದೆ.

ಬಿಎಸ್-6 ಮಾಲಿನ್ಯ ನಿಯಮ ಮುಂದಿನ ಏಪ್ರಿಲ್ ತಿಂಗಳಲ್ಲಿ ಜಾರಿಯಾಗಲಿದೆ. ಮಾರ್ಚ್ ಅಂತ್ಯದವರೆಗೆ ಮಾತ್ರ ಬಿಎಸ್-4 ವಾಹನಗಳನ್ನು ಮಾರಾಟ ಮಾಡಲು ಅವಕಾಶವಿದೆ. ಇದರಿಂದ ಬಿಎಸ್-4 ಕೆಟಿಎಂ ಡ್ಯೂಕ್ 250 ಬೈಕಿನ ಸ್ಟಾಕ್ ಗಳನ್ನು ಮಾರಾಟ ಮಾಡಲು ಈ ಭರ್ಜರಿ ರಿಯಾಯಿತಿಯನ್ನು ನೀಡಲಾಗಿದೆ. ಬಿಎಸ್-4 ಕೆಟಿಎಂ ಡ್ಯೂಕ್ 250 ಬೈಕಿನ ಮೇಲೆ ರೂ.40,000 ದಷ್ಟು ನಗದು ರಿಯಾಯಿತಿಯನ್ನು ಘೋಷಿಸಲಾಗಿದೆ ಎಂದು ಗಾಡಿವಾಡಿ ವರದಿಯನ್ನು ಪ್ರಕಟಿಸಿದೆ.

ಬಿಎಸ್-4 ಕೆಟಿಎಂ ಡ್ಯೂಕ್ 250 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ 1.97 ಲಕ್ಷಗಳಾಗಿದೆ. ಬಿಎಸ್-4 ಕೆಟಿಎಂ ಡ್ಯೂಕ್ 250 ಬೈಕ್ 248 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಎಂಜಿನ್ 9,000 ಆರ್‍ಪಿಎಂನಲ್ಲಿ 29.5 ಬಿಹೆಚ್‍ಪಿ ಪವರ್ ಮತ್ತು 7,500 ಆರ್‍ಪಿಎಂನಲ್ಲಿ 24 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಸ್ಲಿಪ್ ಅಸಿಸ್ಟೆಡ್ ಕ್ಲಚ್ ಜೋಡಿಸಲಾಗಿದೆ.

ಕೆಟಿಎಂ ಡ್ಯೂಕ್ 250 ಮುಂಭಾಗದಲ್ಲಿ 43 ಎಂಎಂ ಅಪ್‍ಸೈಡ್ ಡೌನ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಪೆಂಷನ್ ಹೊಂದಿದ್ದು, ಇವೆರಡನ್ನೂ ಡಬ್ಲ್ಯುಪಿ ಯಿಂದ ಎರವಲು ಪಡೆಯಲಾಗಿದೆ. ಬೈಕಿನಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ.

ಈ ಬೈಕಿನಲ್ಲಿ ಬ್ರೇಕ್‍ಗಳಿಗಾಗಿ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಯುನಿಟ್ ಅನ್ನು ಅಳವಡಿಸಲಾಗಿದೆ. ಸ್ಟ್ಯಾಂಡರ್ಡ್ ಡ್ಯುಯಲ್ ಚಾನೆಲ್ ಎಬಿಎಸ್ ಸಿಸ್ಟಂ ಅನ್ನು ಅಳವಡಿಸಿ ಇನ್ನಷ್ಟು ಸುರಕ್ಷತೆಯನ್ನು ಹೆಚ್ಚಿಸಲಾಗಿದೆ.

ಬಿಎಸ್-4 ಡ್ಯೂಕ್ 250 ದೊಡ್ಡ ಎಲ್ಇಡಿ ಹೆಡ್‍ಲ್ಯಾಂಪ್ ಅನ್ನು ಹೊಂದಿದೆ. ಡ್ಯೂಕ್ 200 ನಲ್ಲಿದ್ದಂತಹ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಕೆಟಿಎಂ ಡ್ಯೂಕ್ 250 ಆರೇಂಜ್ ಮತ್ತು ವೈಟ್ ಬಣ್ಣವನ್ನು ಹೊಂದಿದೆ.

ಹೊಸ 2020 ಕೆಟಿಎಂ ಡ್ಯೂಕ್ 250 ಬೈಕ್ ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಬೈಕಿನಲ್ಲಿ ಓಪನ್-ಕಾರ್ಟ್ರೆಡ್ಜ್ ಅಪ್‍ಸೈಡ್ ಡೌನ್ ಡಬ್ಲೂಪಿ ಫೋರ್ಕ್ಸ್, ಸ್ಲಿಪ್ಪರ್ ಕ್ಲಚ್ ಮತ್ತು ಲೋಡ್ ಅಡ್ಜೆಂಸ್ಟ್ ಮಾಡಬಹುದಾದ ಮೊನೊಶಾಕ್‍ಗಳನ್ನು ಹೊಂದಿದೆ.

ಬಿಎಸ್-6 ಕೆಟಿಎಂ ಡ್ಯೂಕ್ 250 ಬೈಕಿನಲ್ಲಿ 248.8 ಸಿಸಿ ಸಿಂಗಲ್ ಸಿಲಿಂಡರ್ ನಾಲ್ಕು ವಾಲ್ವ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 29.5 ಬಿಹೆಚ್‍ಪಿ ಪವರ್ ಮತ್ತು 24 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಎಂಜಿನ್‍ನೊಂದಿಗೆ ಆರು-ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ 2,00,576 ಗಳಾಗಿದೆ.


Click it and Unblock the Notifications