ಹೆಚ್ಚಾದ ಮಾದಕವಸ್ತುಗಳ ಕಳ್ಳಸಾಗಣೆ, ಚೀನಾ ಬೈಕುಗಳನ್ನು ನಿಷೇಧಿಸಿದ ಸರ್ಕಾರ

ಚೀನಾದಲ್ಲಿ ತಯಾರಿಸಿದ ಕೆನ್ಬೋ ಬೈಕುಗಳನ್ನು ಮಿಜೋರಾಂ ಸರ್ಕಾರವು ನಿಷೇಧಿಸಿದೆ. ಚೀನಾದಲ್ಲಿ ತಯಾರಾದ ಈ ಬೈಕುಗಳು ಗಡಿ ಪ್ರದೇಶಗಳಲ್ಲಿ ದುಷ್ಕೃತ್ಯಗಳಿಗೆ ಬಳಕೆಯಾಗುತ್ತಿವೆ ಎಂದು ಮಿಜೋರಾಂ ಸರ್ಕಾರ ಹೇಳಿದೆ.

ಹೆಚ್ಚಾದ ಮಾದಕವಸ್ತುಗಳ ಕಳ್ಳಸಾಗಣೆ, ಚೀನಾ ಬೈಕುಗಳನ್ನು ನಿಷೇಧಿಸಿದ ಸರ್ಕಾರ

ಹೆಚ್ಚಿನ ಬೈಕುಗಳನ್ನು ರಿಜಿಸ್ಟ್ರೇಷನ್ ಇಲ್ಲದೇ ಬಳಸಲಾಗುತ್ತಿದೆ. ಚೀನಾ ದೇಶದ ಗಡಿ ಭಾಗಗಳಲ್ಲಿರುವ ರಾಜ್ಯಗಳಲ್ಲಿ ಮಾದಕವಸ್ತುಗಳ ಕಳ್ಳಸಾಗಣೆಗೆ ಈ ಬೈಕುಗಳನ್ನು ಬಳಸಲಾಗುತ್ತಿದೆ. ಚೀನಾದಲ್ಲಿ ತಯಾರಿಸಿದ ಬೈಕುಗಳನ್ನು ಮಿಜೋರಾಂನಲ್ಲಿ ರಿಜಿಸ್ಟ್ರೇಷನ್ ಮಾಡಿಲ್ಲವೆಂದು ಮಿಜೋರಾಂ ಸರ್ಕಾರ ಹೇಳಿದೆ. ಆದರೂ ಮಿಜೋರಾಂನಲ್ಲಿ ಈ ಬೈಕುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಲಾಗುತ್ತಿದೆ.

ಹೆಚ್ಚಾದ ಮಾದಕವಸ್ತುಗಳ ಕಳ್ಳಸಾಗಣೆ, ಚೀನಾ ಬೈಕುಗಳನ್ನು ನಿಷೇಧಿಸಿದ ಸರ್ಕಾರ

ಮ್ಯಾನ್ಮಾರ್‌ನ ಮಾದಕ ದ್ರವ್ಯ ಕಳ್ಳಸಾಗಾಣಿಕೆದಾರರು ಈ ಬೈಕುಗಳನ್ನು ಬಳಸುತ್ತಿದ್ದಾರೆ ಎಂದು ಮಿಜೋರಾಂ ಸರ್ಕಾರ ಮಾಹಿತಿ ನೀಡಿದೆ. ಮಿಜೋರಾಂ ರಾಜ್ಯವು ಬಾಂಗ್ಲಾದೇಶದೊಂದಿಗೆ 318 ಕಿ.ಮೀ ಹಾಗೂ ಮ್ಯಾನ್ಮಾರ್‌ನೊಂದಿಗೆ 404 ಕಿ.ಮೀ ತಡೆರಹಿತ ಗಡಿಯನ್ನು ಹೊಂದಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಹೆಚ್ಚಾದ ಮಾದಕವಸ್ತುಗಳ ಕಳ್ಳಸಾಗಣೆ, ಚೀನಾ ಬೈಕುಗಳನ್ನು ನಿಷೇಧಿಸಿದ ಸರ್ಕಾರ

ತಡೆರಹಿತ ಗಡಿ ಇರುವ ಕಾರಣಕ್ಕೆ ಡ್ರಗ್ಸ್ ಕಳ್ಳಸಾಗಾಣಿಕೆದಾರರು ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಕರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ತ್ರಿಪುರ, ಅಸ್ಸಾಂ, ಮಣಿಪುರದ ಜೊತೆಗೆ ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್‌ನ ಗಡಿಗಳನ್ನು ಬಂದ್ ಮಾಡಲಾಗಿದೆ.

ಹೆಚ್ಚಾದ ಮಾದಕವಸ್ತುಗಳ ಕಳ್ಳಸಾಗಣೆ, ಚೀನಾ ಬೈಕುಗಳನ್ನು ನಿಷೇಧಿಸಿದ ಸರ್ಕಾರ

ಗಡಿಗಳನ್ನು ಬಂದ್ ಮಾಡಿದ ನಂತರವೂ ಮಾದಕವಸ್ತುಗಳ ಕಳ್ಳಸಾಗಣೆ ಮುಂದುವರೆದಿದೆ. ಮೆಥಾಂಫೆಟಮೈನ್ ಮಾತ್ರೆಗಳು ಹೆಚ್ಚು ಸಾಗಿಸಲ್ಪಟ್ಟಿವೆ ಎಂದು ಸರ್ಕಾರ ಹೇಳಿದೆ. ಇದರ ಜೊತೆಗೆ ಅನೇಕ ವಿದೇಶಿ ವಸ್ತುಗಳನ್ನು, ಸಿಗರೇಟ್ ಹಾಗೂ ಶಸ್ತ್ರಾಸ್ತ್ರಗಳನ್ನು ಸಹ ಕಳ್ಳಸಾಗಣೆ ಮಾಡಲಾಗುತ್ತಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಹೆಚ್ಚಾದ ಮಾದಕವಸ್ತುಗಳ ಕಳ್ಳಸಾಗಣೆ, ಚೀನಾ ಬೈಕುಗಳನ್ನು ನಿಷೇಧಿಸಿದ ಸರ್ಕಾರ

ಗಡಿ ಭದ್ರತಾ ಪಡೆ ಸಿಬ್ಬಂದಿಗಳು ಬಾಂಗ್ಲಾದೇಶದ ಪಕ್ಕದ ಪ್ರದೇಶಗಳನ್ನು ನೋಡಿಕೊಳ್ಳುತ್ತಿದ್ದರೆ, ಮ್ಯಾನ್ಮಾರ್‌ನ ಪಕ್ಕದ ಪ್ರದೇಶಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅಸ್ಸಾಂ ರೈಫಲ್ಸ್ ಸಿಬ್ಬಂದಿಗೆ ವಹಿಸಲಾಗಿದೆ. ಈ ಗಡಿ ಭಾಗದಲ್ಲಿ ಜುಲೈನಿಂದ ಇದುವರೆಗೂ ರೂ.29 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಹೆಚ್ಚಾದ ಮಾದಕವಸ್ತುಗಳ ಕಳ್ಳಸಾಗಣೆ, ಚೀನಾ ಬೈಕುಗಳನ್ನು ನಿಷೇಧಿಸಿದ ಸರ್ಕಾರ

ಮೆಥಾಂಫೆಟಮೈನ್ ಟ್ಯಾಬ್ಲೆಟ್ ಗಳನ್ನು ಯಾಬಾ ಟ್ಯಾಬ್ಲೆಟ್ ಅಥವಾ ಪಾರ್ಟಿ ಟ್ಯಾಬ್ಲೆಟ್ ಎಂದು ಕರೆಯಲಾಗುತ್ತದೆ. ಇದು ಮೆಥಾಂಫೆಟಮೈನ್ ಹಾಗೂ ಕೆಫೀನ್ ನಿಂದ ತಯಾರಾಗುವ ಒಂದು ರೀತಿಯ ಔಷಧಿ. ಇದೊಂದು ಅಪಾಯಕಾರಿ ಔಷಧವಾಗಿದ್ದು, ಅತಿಯಾದ ಸೇವನೆಯಿಂದ ಸಾವು ಸಂಭವಿಸುತ್ತದೆ.

Most Read Articles

Kannada
English summary
Mizoram government bans China made motorcycles used for smuggling. Read in Kannada.
Story first published: Thursday, September 10, 2020, 18:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X