ಹೊಸ ಸ್ಮಾರ್ಟ್ ಇ-ಸೈಕಲ್ ಸರಣಿಯನ್ನು ಬಿಡುಗಡೆಗೊಳಿಸಿದ ಮೊಟೊವೊಲ್ಟ್

ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯಾದ ಮೊಟೊವೊಲ್ಟ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಮೊಟೊವೊಲ್ಟ್ ಹೆಸರಿನ ಸ್ಮಾರ್ಟ್ ಇ-ಸೈಕಲ್ ಸರಣಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಹೊಸ ಸ್ಮಾರ್ಟ್ ಇ-ಸೈಕಲ್ ಸರಣಿಯನ್ನು ಬಿಡುಗಡೆಗೊಳಿಸಿದ ಮೊಟೊವೊಲ್ಟ್

ಹೊಸ ಇ-ಸೈಕಲ್ ಬಿಡುಗಡೆ ಸಮಾರಂಭದಲ್ಲಿ ಖ್ಯಾತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಕೋಲ್ಕತ್ತಾದ ಮೆಟ್ರೋ ಹೋಲ್ ಸೇಲ್ ಶಾಪ್'ನಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮೊಟೊವೊಲ್ಟ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್‌ನ ಸ್ಥಾಪಕ ನಿರ್ದೇಶಕ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ತುಷಾರ್ ಚೌಧರಿ ಉಪಸ್ಥಿತರಿದ್ದರು.

ಹೊಸ ಸ್ಮಾರ್ಟ್ ಇ-ಸೈಕಲ್ ಸರಣಿಯನ್ನು ಬಿಡುಗಡೆಗೊಳಿಸಿದ ಮೊಟೊವೊಲ್ಟ್

ಈ ಸಮಾರಂಭದಲ್ಲಿ ಅವರು ಮೊಟೊವೊಲ್ಟ್ ಸ್ಮಾರ್ಟ್ ಇ-ಸೈಕಲ್‌ಗಳ ಪೂರ್ಣ ಸರಣಿಯನ್ನು ಬಿಡುಗಡೆಗೊಳಿಸಿದರು. ಮೊಟೋವೊಲ್ಟ್ ಇ-ಸೈಕಲ್ ಗಳನ್ನು ಸವಾರರಿಗೆ ಆರಾಮದಾಯಕ ಸವಾರಿಯನ್ನು ಒದಗಿಸಲು ಹಾಗೂ ಸವಾರಿ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ವಾಸಾರ್ಹವಾಗಿ ಹಾಗೂ ಪರಿಣಾಮಕಾರಿಯಾಗಿರುವಂತೆ ವಿನ್ಯಾಸಗೊಳಿಸಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹೊಸ ಸ್ಮಾರ್ಟ್ ಇ-ಸೈಕಲ್ ಸರಣಿಯನ್ನು ಬಿಡುಗಡೆಗೊಳಿಸಿದ ಮೊಟೊವೊಲ್ಟ್

ಈ ಎಲ್ಲಾ ಇ-ಸೈಕಲ್‌ಗಳು ಈ ಸೆಗ್ ಮೆಂಟಿನಲ್ಲಿ ಹೆಚ್ಚು ಬಾಳಿಕೆ ಬರುತ್ತವೆ. ಈ ಸೈಕಲ್'ಗಳಲ್ಲಿರುವ ಬ್ಯಾಟರಿ ಹಾಗೂ ಎಲೆಕ್ಟ್ರಿಕ್ ಡ್ರೈವ್ ಘಟಕಗಳನ್ನು ಸ್ಥಳೀಯವಾಗಿ ಉತ್ಪಾದಿಸಲಾಗಿದೆ.

ಹೊಸ ಸ್ಮಾರ್ಟ್ ಇ-ಸೈಕಲ್ ಸರಣಿಯನ್ನು ಬಿಡುಗಡೆಗೊಳಿಸಿದ ಮೊಟೊವೊಲ್ಟ್

ಈ ಸೈಕಲ್'ಗಳ ಬ್ಯಾಟರಿ ಹಾಗೂ ಎಲೆಕ್ಟ್ರಿಕ್ ಡ್ರೈವ್ ಘಟಕಗಳನ್ನು ದೀರ್ಘವಾದ ಹಾಗೂ ಸ್ಥಿರವಾದ ಪರ್ಫಾಮೆನ್ಸ್ ನೀಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಮೊಟೊವೊಲ್ಟ್ ಸರಣಿಯ ವಾಹನಗಳು ಸ್ಮಾರ್ಟ್ ಫೋನ್ ಆಧಾರಿತ ಕನೆಕ್ಟೆಡ್ ಫೀಚರ್'ಗಳನ್ನು ಹೊಂದಿರುತ್ತವೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹೊಸ ಸ್ಮಾರ್ಟ್ ಇ-ಸೈಕಲ್ ಸರಣಿಯನ್ನು ಬಿಡುಗಡೆಗೊಳಿಸಿದ ಮೊಟೊವೊಲ್ಟ್

ಈ ಫೀಚರ್ ಗಳನ್ನು ಈ ಸೆಗ್ ಮೆಂಟಿನಲ್ಲಿ ಮೊದಲ ಬಾರಿಗೆ ನೀಡಲಾಗುತ್ತಿದೆ. ಹೊಸ ಸೈಕಲ್ ಬಿಡುಗಡೆಯ ನಂತರ ಮಾತನಾಡಿದ ಮೊಟೊವೊಲ್ಟ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್‌ನ ಸ್ಥಾಪಕ ನಿರ್ದೇಶಕ ತುಷಾರ್ ಚೌಧರಿ, ಮೊಟೊವೊಲ್ಟ್ ಸೈಕಲ್‌ಗಳು ಈಗಾಗಲೇ ಇರುವ ಗ್ರಾಹಕರನ್ನು ಮಾತ್ರವಲ್ಲದೇ ಹೊಸ ಗ್ರಾಹಕರನ್ನು ಸಹ ಸೆಳೆಯಲಿವೆ.

ಹೊಸ ಸ್ಮಾರ್ಟ್ ಇ-ಸೈಕಲ್ ಸರಣಿಯನ್ನು ಬಿಡುಗಡೆಗೊಳಿಸಿದ ಮೊಟೊವೊಲ್ಟ್

ಈ ಸೈಕಲ್‌ಗಳ ಬೆಲೆ ರೂ.25,000ಗಳಿಂದ ರೂ.40,000ಗಳಾಗಿದೆ. ಈ ಸೈಕಲ್‌ಗಳನ್ನು ಅಗತ್ಯಕ್ಕೆ ತಕ್ಕಂತೆ ಕಸ್ಟಮೈಸ್ ಮಾಡುವ ಆಯ್ಕೆಯನ್ನು ಸಹ ನೀಡಲಾಗುವುದು. ನಾವು ಪರಿಸರ ಸ್ನೇಹಿ ಜಗತ್ತಿಗೆ ನಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದೇವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹೊಸ ಸ್ಮಾರ್ಟ್ ಇ-ಸೈಕಲ್ ಸರಣಿಯನ್ನು ಬಿಡುಗಡೆಗೊಳಿಸಿದ ಮೊಟೊವೊಲ್ಟ್

ಫಿಸಿಕಲ್ ಹಾಗೂ ಡಿಜಿಟಲ್ ಚಾನೆಲ್‌ಗಳ ಮೂಲಕ ಈ ಸಂಪೂರ್ಣ ಸರಣಿಯ ಉತ್ಪನ್ನಗಳು ಹಾಗೂ ಆಕ್ಸೆಸರಿಸ್'ಗಳು ಲಭ್ಯವಿರಲಿವೆ ಎಂದು ಹೇಳಿದರು. ಮಾಹಿತಿಗಳ ಪ್ರಕಾರ, ಮೊಟೊವೊಲ್ಟ್ ಮೊದಲ ಹಂತದಲ್ಲಿ ಭಾರತದಲ್ಲಿ ರೂ.100 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ.

ಹೊಸ ಸ್ಮಾರ್ಟ್ ಇ-ಸೈಕಲ್ ಸರಣಿಯನ್ನು ಬಿಡುಗಡೆಗೊಳಿಸಿದ ಮೊಟೊವೊಲ್ಟ್

ಕಂಪನಿಯು ಕೋಲ್ಕತ್ತಾದಲ್ಲಿ ವಿಶ್ವ ದರ್ಜೆಯ ಆರ್ ಅಂಡ್ ಡಿ ಕೇಂದ್ರ ಹಾಗೂ ಉತ್ಪಾದನಾ ಸೌಲಭ್ಯ ಘಟಕವನ್ನು ಹೊಂದಿದೆ. ಇದರ ಜೊತೆಗೆ ನಮ್ಮ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ವಿನ್ಯಾಸ ಹಾಗೂ ಮೂಲಮಾದರಿಯ ಘಟಕವನ್ನೂ ಸಹ ಹೊಂದಿದೆ.

Most Read Articles

Kannada
English summary
Motovolt electric mobility launches new smart e cycle range in India. Read in Kannada.
Story first published: Monday, December 14, 2020, 16:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X