ಹೊಸ ಬಣ್ಣಗಳ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಎಂವಿ ಅಗಸ್ಟಾ ಸೂಪರ್ ಬೈಕ್
ಎಂವಿ ಅಗಸ್ಟಾ ಕಂಪನಿಯು ಶೀಘ್ರದಲ್ಲೇ ತನ್ನ ಹೊಸ ಸೂಪರ್‌ವೆಲೋಸ್ 800 ಸೀರಿ ಓರೊ ಬೈಕನ್ನು ಬಿಡುಗಡೆಗೊಳಿಸಲಿದೆ. ಈ ಎಂವಿ ಅಗಸ್ಟಾ ಸೂಪರ್ ಬೈಕನ್ನು ಹೊಸ ಬಣ್ಣಗಳ ಆಯ್ಕೆಯೊಂದಿಗೆ ಬಿಡುಗಡೆಗೊಳಿಸಲಿದೆ.

ಈ ಎಂವಿ ಅಗಸ್ಟಾ ಕಂಪನಿಯು ತನ್ನ ಇಟಿಲಿಯಲ್ಲಿರುವ ಘಟಕದಲ್ಲಿ ಉತ್ಪಾದನಾ ಚಟುವಟಿಕೆಯು ಪುನಾರಂಭಿಸಿದೆ. ಎಂವಿ ಅಗಸ್ಟಾ ಸೂಪರ್‌ವೆಲೋಸ್ 800 ಸೆರಿ ಓರೊ ಬೈಕನ್ನು ಮಿಲಾನ್ ನಲ್ಲಿ ನಡೆದ 2018ರ ಇಐಸಿಎಂಎ ನಲ್ಲಿ ಪ್ರದರ್ಶಿಸಿದ್ದರು. ಈ ಬೈಕಿಗೆ ‘ಮೋಸ್ಟ್ ಬ್ಯೂಟಿಫುಲ್ ಬೈಕ್ ಆಫ್ ದಿ ಶೋ' ಎಂಬ ಪ್ರಶಸ್ತಿಯು ಲಭಿಸಿತು. ಈ ಮಾರ್ಡನ್ ರೆಟ್ರೊ ಇಟಾಲಿಯನ್ ಸ್ಪೋರ್ಟ್ಸ್ ಬೈಕು ಆಕರ್ಷಕ ಲುಕ್ ಅನ್ನು ಹೊಂದಿದೆ. ಸೆರಿ ಓರೊ ಎಂಬುದು ಬ್ರಾಂಡ್‌ನ ಸರಣಿಯಲ್ಲಿ ಸ್ಟ್ಯಾಂಡರ್ಡ್ ಸೂಪರ್‌ವೆಲೋಸ್ 800 ಬೈಕಿನ ಸೀಮಿತ ಆವೃತ್ತಿಯಾಗಿದೆ.

ಈ ವಿಶೇಷ ಆವೃತ್ತಿಯ ಬೈಕಿನಲ್ಲಿ ಅಪ್‌ಗ್ರೇಡ್ ಎಲೆಕ್ಟ್ರಾನಿಕ್ಸ್ ಸೇರಿದಂತೆ ಸ್ಟ್ಯಾಂಡರ್ಡ್ ಮಾದರಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಎಂವಿ ಅಗಸ್ಟಾ ಸೂಪರ್‌ವೆಲೋಸ್ 800 ಬೈಕ್ ಕಂಪನಿಯ ಸರಣಿಯಲ್ಲಿರುವ ಎಫ್3 800 ಮಾದರಿಗೆ ಆಧರಿಸಿ ಅಭಿವೃದ್ದಿಪಡಿಸಲಾಗಿದೆ. ಎಫ್3 800 ಮಾದರಿಯ ಚಾಸಿಸ್ ಅನ್ನು ಹೊಂದಿದೆ. ಸೂಪರ್‌ವೆಲೋಸ್ 800 ಬೈಕ್ 1970ರ ದಶಕದ ಹಿಂದಿನ ವಿಂಟೇಜ್ ವಿನ್ಯಾಸವನ್ನು ಹೊಂದಿದೆ, ವೃತ್ತಕಾರಾದ ಹೆಡ್‌ಲ್ಯಾಂಪ್ ಮತ್ತು ಬಬಲ್ ವಿಂಡ್‌ಸ್ಕ್ರೀನ್ ಅನ್ನು ಒಳಗೊಂಡಿದೆ.
MOST READ: ದುಬಾರಿಯಾಯ್ತು ಬಜಾಜ್ ಡೊಮಿನಾರ್ 400, ಅವೆಂಜರ್ ಕ್ರೂಸ್ 220 ಬೈಕುಗಳು

ಎಂವಿ ಅಗಸ್ಟಾ ಸೂಪರ್ ವೆಲೋಸ್ 800 ಸೆರಿ ಓರೊ ಬೈಕ್ 2018ರ ಇಐಸಿಎಂಎನಲ್ಲಿ ಪ್ರದರ್ಶಿಸಿದ ನಂತರ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.ಈ ಬೈಕ್ ಮಾರ್ಡಾನ್-ರೆಟ್ರೊ ವಿನ್ಯಾಸದಿಂದ ಅನೇಕ ಪ್ರಶಸ್ತಿಯನ್ನು ಗೆದ್ದಿದೆ. ಈ ಬೈಕ್ ವೃತ್ತಕಾರಾದ ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಟೇಲ್ ಲ್ಯಾಂಪ್ ಅನ್ನು ಹೊಂದಿದೆ. ಈ ಬೈಕಿನ ಮೊದಲ ರೂಪಾಂತರವು ಅಗೋ ರೆಡ್ ಮತ್ತು ಅಗೊ ಸಿಲ್ವರ್ ಡ್ಯುಯಲ್ ಬಣ್ಣಗಳ ಆಯ್ಕೆಯನ್ನು ಹೊಂದಿದ್ದರೆ, ಎರಡನೇ ರೂಪಾಂತರವು ಮೆಟಾಲಿಕ್ ಡಾರ್ಕ್ ಗ್ರೇನೊಂದಿಗೆ ಮೆಟಾಲಿಕ್ ಕಾರ್ಬನ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯನ್ನು ಹೊಂದಿರಲಿದೆ.

ಎಂವಿ ಅಗಸ್ಟಾ ಸೂಪರ್ ವೆಲೋಸ್ 800 ಸೆರಿ ಓರೊ ಬೈಕಿನಲ್ಲಿ ಕ್ರೂಸ್ ಕಂಟ್ರೋಲ್, ಗೋಲ್ಡ್ ಡಿಐಡಿ ಚೈನ್, ಜಿಪಿಎಸ್ ಸೆನ್ಸರ್, ಲೆದರ್ ಸ್ಟ್ರಾಪ್ ಹೊಂದಿರುವ ವಿಶಿಷ್ಟ ಫ್ಯೂಯಲ್ ಕ್ಯಾಪ್, ಅಲ್ಕಾಂಟರಾ-ಹೊದಿಕೆಯ ಸೀಟ್ ಮತ್ತು ಬೆಸ್‌ಪೋಕ್ ಕವರ್‌ಗಳು ಸೇರಿವೆ.
MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಈ ಬೈಕಿನಲ್ಲಿ 798 ಸಿಸಿ ಇನ್-ಲೈನ್ ಮೂರು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 13,000 ಆರ್‌ಪಿಎಂನಲ್ಲಿ 145 ಬಿಹೆಚ್‌ಪಿ ಪವರ್ ಮತ್ತು 10,600 ಆರ್‌ಪಿಎಂನಲ್ಲಿ 88 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಲ್ಲಿರುವ ಎಕ್ಸಾಸ್ಟ್ ಸಿಸ್ಟಂ 13,250 ಆರ್‌ಪಿಎಂನಲ್ಲಿ 150 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಈ ಬೈಕಿನ ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ಪರ್ ಅಸಿಸ್ಟ್ ಕ್ಲಚ್ ಮತ್ತು ಕ್ಲಚ್‌ಲೆಸ್ ಶಿಫ್ಟಿಂಗ್‌ಗಾಗಿ ಕ್ವಿಕ್ ಶಿಫ್ಟರ್ ಅನ್ನು ಅಳವಡಿಸಿದೆ. ಈ ಬೈಕ್ ಎಲೆಕ್ಟ್ರಾನಿಕ್ ರೈಡರ್ ಏಡ್ಸ್ ಅನ್ನು ಹೊಂದಿದೆ. ಇವುಗಳಲ್ಲಿ ನಾಲ್ಕು ಪವರ್ ಮೋಡ್‌ಗಳು, ಎಂಟು ಹಂತದ ಟ್ರಾಕ್ಷನ್ ಕಂಟ್ರೋಲ್, ಮತ್ತು ರೇಸ್ ಮೋಡ್ ಮತ್ತು ರೇರ್-ವೀಲ್ ಲಿಫ್ಟ್ ನೊಂದಿಗೆ ಬಾಷ್ 9 ಪ್ಲಸ್ ಎಬಿಎಸ್ ಸೇರಿವೆ.
MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಎಂವಿ ಅಗಸ್ಟಾ ಸೂಪರ್ ವೆಲೋಸ್ 800 ಸೆರಿ ಓರೊ ಬೈಕಿನಲ್ಲಿ ಸಸ್ಪೆಂಷನ್ ಗಾಗಿ 43 ಎಂಎಂ ಯುಎಸ್‌ಡಿ ಫೋರ್ಕ್ ಅನ್ನು ಅಳವಡಿಸಿದೆ. ರಿಬೌಂಡ್-ಡ್ಯಾಂಪಿಂಗ್ ಮತ್ತು ಸ್ಪ್ರಿಂಗ್-ಪ್ರೀಲೋಡ್‌ಗೆ ಹೊಂದಾಣಿಕೆ ಮತ್ತು ಹಿಂಭಾಗದಲ್ಲಿ ಸ್ಯಾಚ್ಸ್‌ನಿಂದ ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾದ ಮೊನೊ ಶಾಕ್ ಅನ್ನು ಹೊಂದಿದೆ.

ಈ ಬೈಕಿನಲ್ಲಿ 320 ಎಂಎಂ ಫ್ಲೋಟಿಂಗ್ ಡಿಸ್ಕ್ ಮತ್ತು ಮುಂಭಾಗದಲ್ಲಿ ರೇಡಿಯಲ್-ಮೌಂಟೆಡ್ ನಾಲ್ಕು-ಪಿಸ್ಟನ್ ಬ್ರೆಂಬೊ ಮೊನೊಬ್ಲಾಕ್ ಕ್ಯಾಲಿಪರ್ಸ್ ಮತ್ತು ಹಿಂಭಾಗದಲ್ಲಿ ಎರಡು-ಪಿಸ್ಟನ್ ಬ್ರೆಂಬೊ ಕ್ಯಾಲಿಪರ್ನೊಂದಿಗೆ 220 ಎಂಎಂ ಡಿಸ್ಕ್ ಅನ್ನು ಹೂಂದಿದೆ.


Click it and Unblock the Notifications








