ಕರೋನಾ ವೈರಸ್ ಪರಿಣಾಮ ದ್ವಿಚಕ್ರ ವಾಹನ ಖರೀದಿಗೆ ಹೆಚ್ಚಿದ ಬೇಡಿಕೆ

ಕರೋನಾ ವೈರಸ್ ಪರಿಣಾಮ ಲಾಕ್‌ಡೌನ್ ವಿಧಿಸಿದ್ದರಿಂದ ಆಟೋ ಉದ್ಯಮವು ಭಾರೀ ಪರಿಣಾಮ ನಷ್ಟ ಅನುಭವಿಸಿದ್ದು, ಇದೀಗ ಲಾಕ್‌ಡೌನ್ ಸಡಿಲಿಕೆಯ ನಂತರ ಹೊಸ ವಾಹನ ಮಾರಾಟದಲ್ಲಿ ನಿಧಾನಗತಿಯಲ್ಲಿ ಚೇತರಿಕೆ ಕಾಣುತ್ತಿದೆ.

ಕರೋನಾ ವೈರಸ್ ಪರಿಣಾಮ ದ್ವಿಚಕ್ರ ವಾಹನ ಖರೀದಿಗೆ ಹೆಚ್ಚಿದ ಬೇಡಿಕೆ

ಲಾಕ್‌ಡೌನ್ ಸಡಿಲಿಕೆ ನಂತರ ಹೊಸ ವಾಹನಗಳ ಬೇಡಿಕೆಯು ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಕಾರು ಮಾರಾಟ ಪ್ರಮಾಣಕ್ಕಿಂತ ದ್ವಿಚಕ್ರ ವಾಹನಗಳ ಬೇಡಿಕೆಯು ಕೆಲವೇ ದಿನಗಳಲ್ಲಿ ಭಾರೀ ಬದಲಾವಣೆಯಾಗಿದೆ. ಮೇ 4ರ ನಂತರ ಲಾಕ್‌ಡೌನ್ ತೆರವುಗೊಳಿಸಿದ ನಂತರ ಮಂದಗತಿಯಲ್ಲಿದ್ದ ಹೊಸ ವಾಹನ ಮಾರಾಟವು ಈ ತಿಂಗಳ ಜೂನ್ ಆರಂಭದಿಂದ ಸತತ ಏರಿಕೆಯಲ್ಲಿದ್ದು, ದ್ವಿಚಕ್ರ ವಾಹನಗಳ ಖರೀದಿಗಾಗಿ ಸಾಮಾನ್ಯ ದಿನಗಳಲ್ಲಿದ್ದ ಬೇಡಿಕೆಯ ಶೇ.70ರಷ್ಟು ಪ್ರಮಾಣದ ಬುಕ್ಕಿಂಗ್ ಇದೀಗ ದಾಖಲಾಗಿದೆ.

ಕರೋನಾ ವೈರಸ್ ಪರಿಣಾಮ ದ್ವಿಚಕ್ರ ವಾಹನ ಖರೀದಿಗೆ ಹೆಚ್ಚಿದ ಬೇಡಿಕೆ

ಇದರಿಂದ ಮುಂಬರುವ ತಿಂಗಳು ಮತ್ತಷ್ಟು ಬೇಡಿಕೆ ಹರಿದುಬರುವ ಸಾಧ್ಯತೆಗಳಿದ್ದು, ಕರೋನಾ ವೈರಸ್ ಪರಿಣಾಮ ಬಹುತೇಕ ಗ್ರಾಹಕರು ಸಾರ್ವಜನಿಕ ಸಾರಿಗೆ ಬಳಕೆಯಿಂದ ಹಿಂದೆ ಸರಿದು ಸ್ವಂತ ವಾಹನ ಬಳಕೆಗೆ ಆದ್ಯತೆ ನೀಡುತ್ತಿದ್ದಾರೆ.

ಕರೋನಾ ವೈರಸ್ ಪರಿಣಾಮ ದ್ವಿಚಕ್ರ ವಾಹನ ಖರೀದಿಗೆ ಹೆಚ್ಚಿದ ಬೇಡಿಕೆ

ಆದರೆ ಲಾಕ್‌ಡೌನ್ ಪರಿಣಾಮ ಆರ್ಥಿಕ ಸಂಕಷ್ಟ ಎದುರಾಗಿದ್ದರೂ ವೈರಸ್ ಭೀತಿಯಿಂದಾಗಿ ಸ್ವಂತ ವಾಹನಗಳ ಬಳಕೆ ಆದ್ಯತೆ ನೀಡಲಾಗುತ್ತಿದ್ದು, ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಿದಂತೆ ಕಾರುಗಳ ಮಾರಾಟ ಪ್ರಮಾಣದಲ್ಲಿ ಅಷ್ಟಾಗಿ ಹೆಚ್ಚಳವಾಗಿಲ್ಲ.

ಕರೋನಾ ವೈರಸ್ ಪರಿಣಾಮ ದ್ವಿಚಕ್ರ ವಾಹನ ಖರೀದಿಗೆ ಹೆಚ್ಚಿದ ಬೇಡಿಕೆ

ಆದರೂ ಕೂಡಾ ಲಾಕ್‌ಡೌನ್ ಸಡಿಲಿಕೆಯ ನಂತರ ಬಹುತೇಕ ವಾಹನ ಮಾದರಿಗಳ ಬೇಡಿಕೆ ಪ್ರಮಾಣವು ನಿಧಾನವಾಗಿ ಏರಿಕೆ ಕಾಣುತ್ತಿದ್ದು, ಮುಂಬರುವ ದಿನಗಳಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಪ್ರಮಾಣವು ಗಣನೀಯವಾಗಿ ಹೆಚ್ಚಳವಾಗುವ ನೀರಿಕ್ಷೆಯಿದೆ.

MOST READ: ಹೆಚ್ಚಿದ ಕರೋನಾ ಭೀತಿ: ವಾಹನ ದಾಖಲೆಗಳ ಮಾನ್ಯತಾ ಅವಧಿಯು ಮತ್ತೊಮ್ಮೆ ವಿಸ್ತರಣೆ

ಕರೋನಾ ವೈರಸ್ ಪರಿಣಾಮ ದ್ವಿಚಕ್ರ ವಾಹನ ಖರೀದಿಗೆ ಹೆಚ್ಚಿದ ಬೇಡಿಕೆ

ಸದ್ಯ ವೈರಸ್ ಭೀತಿ ನಡುವೆಯೂ ಹೊಸ ಸುರಕ್ಷಾ ಮಾರ್ಗಸೂಚಿಗಳೊಂದಿಗೆ ವ್ಯಾಪಾರ ವಹಿವಾಟು ಕೈಗೊಂಡಿರುವ ಆಟೋ ಕಂಪನಿಗಳು ಮೇ ಅವಧಿಯಲ್ಲಿ ಕನಿಷ್ಠ ಪ್ರಮಾಣದ ವಾಹನ ಮಾರಾಟ ಪ್ರಮಾಣವನ್ನು ದಾಖಲಿಸಿದ್ದು, ಬಹುತೇಕ ವಾಹನಗಳ ಮಾರಾಟದಲ್ಲಿ ಶೇ.70ರಿಂದ ಶೇ.97ರಷ್ಟು ಕುಸಿತ ಕಂಡುಬಂದಿದೆ.

ಕರೋನಾ ವೈರಸ್ ಪರಿಣಾಮ ದ್ವಿಚಕ್ರ ವಾಹನ ಖರೀದಿಗೆ ಹೆಚ್ಚಿದ ಬೇಡಿಕೆ

ವೈರಸ್ ಭೀತಿ ಹಿನ್ನಲೆಯಲ್ಲಿ ಹೊಸ ವಾಹನ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದ್ದು, ಮುಂಬರುವ ದಿನಗಳಲ್ಲಿ ಮಾರಾಟ ಮಾರಾಟದಲ್ಲಿ ಚೇತರಿಕೆ ಕಾಣಬಹುದು ಎನ್ನಲಾಗಿದೆ.

MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಕರೋನಾ ವೈರಸ್ ಪರಿಣಾಮ ದ್ವಿಚಕ್ರ ವಾಹನ ಖರೀದಿಗೆ ಹೆಚ್ಚಿದ ಬೇಡಿಕೆ

ಇನ್ನು ಹೊಸ ವಾಹನಗಳ ಬೇಡಿಕೆ ಹೆಚ್ಚಿಸಲು ವಾಹನ ಖರೀದಿದಾರರಿಗೆ ಇಎಂಐ ತಗ್ಗಿಸಿ ಅತಿ ಸುಲಭವಾದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದ್ದರೂ ವಾಹನ ಮಾರಾಟವು ಮಂದಗತಿಯಲ್ಲಿ ಸಾಗಿದ್ದು, ಲಾಕ್‌ಡೌನ್‌ಗೂ ಮೊದಲು ಬುಕ್ಕಿಂಗ್ ಮಾಡಿ ವಾಹನ ಖರೀದಿಯ ಸಂಭ್ರಮದಲ್ಲಿದ್ದ ಗ್ರಾಹಕರು ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿರುವುದು ಆಟೋ ಕಂಪನಿಗಳನ್ನು ಚಿಂತೆಗೀಡು ಮಾಡಿದೆ.

More from DriveSpark

Article Published On: Sunday, June 14, 2020, 8:45 [IST]
English summary
Two-Wheelers Face Rising Demand Post Lockdown. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+