ಹೊಸ ಬಿಎಂಡಬ್ಲ್ಯು ಜಿ310 ಆರ್, ಜಿ310 ಜಿಎಸ್ ಬೈಕುಗಳ ಬಿಡುಗಡೆ ದಿನಾಂಕ ಬಹಿರಂಗ
ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಬಹುನಿರೀಕ್ಷಿತ 2021ರ ಜಿ 310ಆರ್ ನೇಕೆಡ್ ಸ್ಟ್ರೀಟ್ ಫೈಟರ್ ಮತ್ತು ಜಿ310 ಜಿಎಸ್ ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಬಿಎಂಡಬ್ಲ್ಯು ಕಂಪನಿಯು ಜಿ310 ಆರ್ ಮತ್ತು ಜಿ310 ಜಿಎಸ್ ಬೈಕುಗಳ ಬಿಡುಗಡೆ ದಿನಾಂಕ ಬಹಿರಂಗಗೊಳಿಸಿದೆ.

ಈ ಹೊಸ ಬಿಎಂಡಬ್ಲ್ಯು ಜಿ310 ಆರ್ ಮತ್ತು ಜಿ310 ಜಿಎಸ್ ಬೈಕುಗಳು ಮುಂದಿನ ತಿಂಗಳು 8ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಹೊಸ ಬಿಎಂಡಬ್ಲ್ಯು ಜಿ310 ಆರ್ ಮತ್ತು ಜಿ310 ಜಿಎಸ್ ಬೈಕುಗಳ ಪ್ರೀ ಬುಕ್ಕಿಂಗ್ ಈಗಾಗಲೇ ಪ್ರಾರಂಭವಾಗಿದೆ. ಬಿಎಂಡಬ್ಲ್ಯು ಜಿ310 ಆರ್ ಅಥವಾ ಜಿ310 ಜಿಎಸ್ ಬೈಕನ್ನು ಖರೀದಿಸಲು ಬಯಸುವವರು ಟೋಕನ್ ಮೊತ್ತ ರೂ.50,000 ಗಳವರೆಗೆ ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ವರದಿ ಪ್ರಕಾರ, ಈ ಹೊಸ ಹೊಸ ಬಿಎಂಡಬ್ಲ್ಯು ಜಿ310 ಆರ್ ಮತ್ತು ಜಿ310 ಜಿಎಸ್ ಬೈಕುಗಳ ವಿತರಣೆಯನ್ನು 2020ರ ಆಕ್ಟೋಬರ್2020ರ ಆಕ್ಟೋಬರ್ 10ರಿಂದ ಪ್ರಾರಂಭವಗಲಿದೆ. ಇನ್ನು ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ತನ್ನ ಜಿ310 ಆರ್ ಮತ್ತು ಜಿ310 ಜಿಎಸ್ ಬೈಕುಗಳನ್ನು ಖರೀದಿಸುವವರಿಗೆ ಆಕರ್ಷಕ ಇಎಂಐ ಆಫರ್ ಗಳನ್ನು ಇತ್ತೀಚೆಗೆ ಘೋಷಿಸಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಬಿಎಂಡಬ್ಲ್ಯು ಜಿ310 ಆರ್ ಮತ್ತು ಜಿ310 ಜಿಎಸ್ ಬೈಕುಗಳು ಬಿಡುಗಡೆಯಾಗುವ ಮೊದಲು, ಈ ಎರಡು ಬೈಕುಗಳಲ್ಲಿ ಯಾವುದಾದರೂ ಒಂದನ್ನು ಬುಕ್ಕಿಂಗ್ ಮಾಡಿದರೂ ರೂ.4,500 ರಿಂದ ಪ್ರಾರಂಭವಾಗುವ ಇಎಂಐ ಆಫರ್ ಅನ್ನು ಪಡೆಯಬಹುದಾಗಿದೆ.

ಈ ಹೊಸ ಬಿಎಂಡಬ್ಲ್ಯು ಜಿ310 ಆರ್ ಮತ್ತು ಜಿ310 ಜಿಎಸ್ ಬೈಕುಗಳ ಬೆಲೆಯನ್ನು ಬಿಡುಗಡೆಯ ಸಮಯದಲ್ಲಿ ಬಹಿರಂಗಪಡಿಸಲಾಗುತ್ತದೆ. ಭಾರತದಲ್ಲಿ ಇತ್ತೀಚೆಗೆ ಹೊಸ ಬಿಎಂಡಬ್ಲ್ಯು ಜಿ 310 ಆರ್ ನೇಕೆಡ್ ಸ್ಟ್ರೀಟ್ ಫೈಟರ್ ಮತ್ತು ಜಿ 310 ಜಿಎಸ್ ಬೈಕುಗಳು ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಹೊಸ ಬಿಎಂಡಬ್ಲ್ಯು ಜಿ310 ಟ್ವಿನ್ ಬೈಕುಗಳ ಟೀಸರ್ ಚಿತ್ರವನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಟೀಸರ್ ಚಿತ್ರದಲ್ಲಿ ಈ ಹೊಸ ಬಿಎಂಡಬ್ಲ್ಯು ಜಿ310 ಬೈಕುಗಳ ಅಲಾಯ್ ವ್ಹೀಲ್ ಮತ್ತು ಫ್ರೇಮ್ ಭಾಗಗಳು ಆರೇಂಜ್ ಬಣ್ಣಗಳಿಂದ ಕೂಡಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಈ ಹೊಸ ಬಿಎಂಡಬ್ಲ್ಯು ಜಿ310 ಟ್ವಿನ್ ಬೈಕುಗಳ ಹಿಂಭಾಗವು ಫೆಂಡರ್ ಕೆಟಿಎಂ ಮಾದರಿಗಳಿಂದ ಸ್ಪೂರ್ತಿ ಪಡೆದಿರುವ ರೀತಿ ಕಂಡು ಬಂದಿದೆ. ಈ ಹೊಸ ಬೈಕಿನ ಹಿಂಭಾಗವು ಕೆಟಿಎಂ ಮಾದರಿಗಳ ರೀತಿ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಹೊಸ ಬಿಎಂಡಬ್ಲ್ಯು ಜಿ310 ಆರ್ ಬೈಕ್ ನವೀಕರಿಸಿದ ಫ್ಯೂಯಲ್ ಟ್ಯಾಂಕ್ ಮತ್ತು ರೇಡಿಯೇಟರ್ ಜೊತೆಗೆ ಹೊಸ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಒಳಗೊಂಡಿದೆ. ಒಟ್ಟಾರೆಯಾಗಿ ಹೊಸ ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಹೆಚ್ಚಿನ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಈ ಹೊಸ ಬಿಎಂಡಬ್ಲ್ಯು ಜಿ310 ಆರ್ ಬೈಕ್ ಕೆಟಿಎಂ 390 ಡ್ಯೂಕ್ ಬೈಕಿಗೆ ಪೈಪೋಟಿಯನ್ನು ನೀಡುತ್ತದೆ. ಇನ್ನು 2021 ಬಿಎಂಡಬ್ಲ್ಯು ಜಿ 310 ಜಿಎಸ್ ಅಡ್ವೆಂಚರ್ ಟೂರರ್ ಬೈಕ್ ಕೂಡ ಹೊಸ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ.
MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಈ ಹೊಸ ಬಿಎಂಡಬ್ಲ್ಯು ಜಿ310 ಜಿಎಸ್ ಬೈಕಿನಲ್ಲಿ ಸ್ಪೋರ್ಟಿಯರ್ ನಿಲುವನ್ನು ಹೊಂದಲು ಬಿಎಂಡಬ್ಲ್ಯು ವಿನ್ಯಾಸಕರು ಟೂರರ್‌ನ ಸೆಮಿ-ಫೇರಿಂಗ್ ಅನ್ನು ಹೆಚ್ಚಿಸಿದ್ದಾರೆ. ಈ ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕೆಟಿಎಂ 390 ಅಡ್ವೆಂಚರ್ ಬೈಕಿಗೆ ಪೈಪೋಟಿ ನೀಡುತ್ತದೆ.

ಹೊಸ ಬಿಎಂಡಬ್ಲ್ಯು ಜಿ310 ಆರ್ ಮತ್ತು ಜಿ310 ಜಿಎಸ್ ಬೈಕುಗಳು 313 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಿದೆ. ಹೊಸ ಟ್ವಿನ್ ಬೈಕುಗಳು ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಪವರ್ ಫುಲ್ ಆಗಿರುತ್ತದೆ ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications








