ಬಿಡುಗಡೆಯಾಯ್ತು ಬಿಎಸ್-6 ಹೀರೋ ಗ್ಲ್ಯಾಮರ್ ಬ್ಲೇಜ್ ಎಡಿಷನ್

ಹೀರೋ ಮೋಟೊಕಾರ್ಪ್ ತನ್ನ ಬಿಎಸ್-6 ಗ್ಲ್ಯಾಮರ್ ಬೈಕಿನ ಬ್ಲೇಜ್ ಎಂಬ ಹೊಸ ಸ್ಪೆಷಲ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಬಿಎಸ್-6 ಹೀರೋ ಗ್ಲ್ಯಾಮರ್ ಬ್ಲೇಜ್ ಸ್ಪೆಷಲ್ ಎಡಿಷನ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.72,200 ಗಳಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಹೀರೋ ಗ್ಲ್ಯಾಮರ್ ಬ್ಲೇಜ್ ಎಡಿಷನ್

ಹೊಸ ಹೀರೋ ಗ್ಲ್ಯಾಮರ್ ಬ್ಲೇಜ್ ಬೈಕ್ ಕಾಸ್ಮೆಟಿಕ್ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಲಾಗಿದೆ. ಈ ಹೊಸ ಸ್ಪೆಷಲ್ ಎಡಿಷನ್ ಆಕರ್ಷಕ ಕೊಡುಗೆಯಾಗಿದೆ. ಭಾರತದ ಹಬ್ಬದ ಸೀಸನ್ ನಲ್ಲಿ ಮಾರಾಟವನ್ನು ಸುಧಾರಿಸಲು, ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಹೀರೋ ಮೋಟೊಕಾರ್ಪ್ ತನ್ನ ಬಿಎಸ್-6 ಗ್ಲ್ಯಾಮರ್ ಬೈಕಿನ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆಗೊಳಿಸಲಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಹೀರೋ ಗ್ಲ್ಯಾಮರ್ ಬ್ಲೇಜ್ ಎಡಿಷನ್

ಬಿಎಸ್-6 ಹೀರೋ ಗ್ಲ್ಯಾಮರ್ ಬ್ಲೇಜ್ ಸ್ಪೆಷಲ್ ಎಡಿಷನ್ ಹೊಸ ‘ಮ್ಯಾಟರ್ ವರ್ನಿಯರ್ ಗ್ರೇ ಬಣ್ಣದಿಂದ ಕೂಡಿದೆ. ಹೊಸ ಬಣ್ಣವನ್ನು ಹೊರತುಪಡಿಸಿ ಗ್ಲ್ಯಾಮರ್ ಬ್ಲೇಜ್ ಎಡಿಷನ್ ಹ್ಯಾಂಡಲ್‌ಬಾರ್‌ನಲ್ಲಿ ಯುಎಸ್‌ಬಿ ಚಾರ್ಜರ್ ಮತ್ತು ‘ಫಂಕ್-ಲೈಮ್ ಬಣ್ಣದಲ್ಲಿ ಹೊಸ ಬಾಡಿ ಗ್ರಾಫಿಕ್ಸ್‌ ಅನ್ನು ಒಳಗೊಂಡಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಬಿಡುಗಡೆಯಾಯ್ತು ಬಿಎಸ್-6 ಹೀರೋ ಗ್ಲ್ಯಾಮರ್ ಬ್ಲೇಜ್ ಎಡಿಷನ್

ಮೇಲಿನ ನವೀಕರಣಗಳನ್ನು ಹೊರತುಪಡಿಸಿ, ಇತರ ಯಾವುದೇ ಪ್ರಮುಖ ಬದಲಾವಣೆಗಳನ್ನು ಹೊಂದಿಲ್ಲ. ಬಿಎಸ್-6 ಹೀರೋ ಗ್ಲ್ಯಾಮರ್ ಬ್ಲೇಜ್ ಸ್ಪೆಷಲ್ ಎಡಿಷನ್ ನಲ್ಲಿ 124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಹೀರೋ ಗ್ಲ್ಯಾಮರ್ ಬ್ಲೇಜ್ ಎಡಿಷನ್

ಈ ಎಂಜಿನ್ 7500 ಆರ್‌ಪಿಎಂನಲ್ಲಿ 10.7 ಬಿಹೆಚ್‌ಪಿ ಪವರ್ ಮತ್ತು 6000 ಆರ್‌ಪಿಎಂನಲ್ಲಿ 10.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಬಿಡುಗಡೆಯಾಯ್ತು ಬಿಎಸ್-6 ಹೀರೋ ಗ್ಲ್ಯಾಮರ್ ಬ್ಲೇಜ್ ಎಡಿಷನ್

ಬಿಎಸ್-6 ಹೀರೋ ಗ್ಲ್ಯಾಮರ್ ಬ್ಲೇಜ್ ಸ್ಪೆಷಲ್ ಎಡಿಷನ್ (ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಂ) ಅನ್ನು ಹೊಂದಿದೆ. ಹೀರೋ ಗ್ಲ್ಯಾಮರ್ ಬ್ಲೇಜ್ ಬೈಕ್ 180 ಎಂಎಂ ಗ್ರೌಂಡ್ ಕ್ಲಿಯರನ್ಸ್ ಅನ್ನು ಹೊಂದಿರುತ್ತದೆ.

ಬಿಡುಗಡೆಯಾಯ್ತು ಬಿಎಸ್-6 ಹೀರೋ ಗ್ಲ್ಯಾಮರ್ ಬ್ಲೇಜ್ ಎಡಿಷನ್

ಇನ್ನು ಹೀರೋ ಗ್ಲ್ಯಾಮರ್ ಬ್ಲೇಜ್ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ ಗಳನ್ನು ಹೊಂದಿದೆ. ಇನ್ನು ಈ ಹೊಸ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ನೋಡುವುದಾದರೆ, ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಿಡುಗಡೆಯಾಯ್ತು ಬಿಎಸ್-6 ಹೀರೋ ಗ್ಲ್ಯಾಮರ್ ಬ್ಲೇಜ್ ಎಡಿಷನ್

ಹೀರೋ ಮೋಟೊಕಾರ್ಪ್ ಸೇಲ್ಸ್ ವಿಭಾಗದ ಮುಖ್ಯಸ್ಥ ನವೀನ್ ಚೌಹಾನ್ ಅವರು ಮಾತನಾಡಿ, ಗ್ಲ್ಯಾಮರ್ ದೇಶಾದ್ಯಂತ ಹೆಚ್ಚು ಜನಪ್ರಿಯ ಬ್ರ್ಯಾಂಡ್ ಆಗಿದೆ ಮತ್ತು ಹೆಚ್ಚು ಕಾರ್ಯಕ್ಷಮತೆಯನ್ನು ಹೊಂದಿದೆ. ಹೊಸ ಗ್ಲ್ಯಾಮರ್ ಬ್ಲೇಜ್ ಹೆಚ್ಚಾಗಿ ಯುವ ಗ್ರಾಹರಣನ್ನು ಸೆಳೆಯುತ್ತದೆ. ಹೆಚ್ಚಿನ ಪವರ್ ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತದೆ ಎಂದು ಹೇಳಿದರು.

ಬಿಡುಗಡೆಯಾಯ್ತು ಬಿಎಸ್-6 ಹೀರೋ ಗ್ಲ್ಯಾಮರ್ ಬ್ಲೇಜ್ ಎಡಿಷನ್

ಹೀರೋ ಗ್ಲ್ಯಾಮರ್ ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ನಿಂದ ಜನಪ್ರಿಯ ಪ್ರೀಮಿಯಂ ಕಮ್ಯೂಟರ್ ಬೈಕ್ ಆಗಿದೆ. ಗ್ಲ್ಯಾಮರ್ ಬೈಕಿನ ಬ್ಲೇಜ್ ಎಂಬ ಹೊಸ ಸ್ಪೆಷಲ್ ಎಡಿಷನ್ ಹಲಾವಾರು ಕಾಸ್ಮೆಟಿಕ್ ನವೀಕರಣಗಳನ್ನು ಹೊಂದಿವೆ. ಹೀರೋ ಮೋಟೊಕಾರ್ಪ್ ಕಂಪನಿಗೆ ಹಬ್ಬದ ಸೀಸನ್ ನಲ್ಲಿ ಮಾರಾಟವನ್ನು ಹೆಚ್ಚಿಸಲು ಹೊಸ ಬೈಕ್ ಸಹಕಾರಿಯಾಗಿರುತ್ತದೆ.

Most Read Articles

Kannada
English summary
Hero Glamour ‘Blaze’ Edition Launched In India. Read In Kannada.
Story first published: Tuesday, October 13, 2020, 14:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X