ಬಿಡುಗಡೆಯಾಯ್ತು ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕ್
ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಬಹುನಿರೀಕ್ಷಿತ ಎಕ್ಸ್‌ಟ್ರಿಮ್ 160ಆರ್ ಬೈಕನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕನ್ನು ಫ್ರಂಟ್ ಡಿಸ್ಕ್ ಮತ್ತು ಡಬಲ್ ಡಿಸ್ಕ್ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕಿನ ಫ್ರಂಟ್ ಡಿಸ್ಕ್ ರೂಪಾಂತರದ ಬೆಲೆಯು ರೂ.99,950 ಗಳಾದರೆ, ಡಬಲ್ ಡಿಸ್ಕ್ ರೂಪಾಂತರದ ಬೆಲೆಯು ರೂ.1.03 ಲಕ್ಷಗಳಾಗಿದೆ. ಹೀರೋ ಎಕ್ಸ್‌ಟ್ರಿಮ್ 160ಆರ್ ಬ್ರ್ಯಾಂಡ್ ನ 1.ಆರ್ ಕಾನ್ಸೆಪ್ಟ್ ಮಾದರಿಯಿಂದ ಪ್ರೇರಣೆಯನ್ನು ಪಡೆದುಕೊಂಡಿದೆ. ಈ ಕಾನ್ಸೆಪ್ಟ್ ಮಾದರಿಯನ್ನು 2019ರ ಇಐಸಿಎಂಎನಲ್ಲಿ ಪ್ರದರ್ಶಿಸಿದ್ದರು. ಪ್ರೊಡಕ್ಷನ್-ರೆಡಿ ಮಾಡೆಲ್ ಭಾರತದಲ್ಲಿ ಮೊದಲ ಬಾರಿಗೆ ಫೆಬ್ರವರಿಯಲ್ಲಿ ರಾಜಸ್ಥಾನದ ಜೈಪುರದಲ್ಲಿ ನಡೆದ ಹೀರೋ ವರ್ಲ್ಡ್ ಕಾರ್ಯಕ್ರಮದಲ್ಲಿ ಪರಿಚಯಿಸಿದ್ದರು.

ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕನ್ನು ರಾಜಸ್ಥಾನದ ಜೈಪುರದಲ್ಲಿರುವ ಆರ್&ಡಿ ಘಟಕದಲ್ಲಿ ಸಂಪೂರ್ಣವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಬ್ರ್ಯಾಂಡ್‌ನಿಂದ ಪ್ರೀಮಿಯಂ 160 ಸಿಸಿ ಬಿಎಸ್ 6 ಎಂಜಿನ್ ಅನ್ನು ಈ ಬೈಕಿನಲ್ಲಿ ಅಳವಡಿಸಲಾಗಿದೆ. ಹೊಸ ಬೈಕಿಗೆ ಈ ಎಂಜಿನ್ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ.
MOST READ: ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಹೋಂಡಾ ಲಿವೊ ಬೈಕ್

ಬಿಎಸ್ 6 ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕಿನಲ್ಲಿ 163 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಆಳವಡಿಸಿಸಲಾಗಿದೆ. ಈ ಎಂಜಿನ್ 8500 ಆರ್‌ಪಿಎಂನಲ್ಲಿ 15 ಬಿಹೆಚ್‌ಪಿ ಪವರ್ ಮತ್ತು 6500 ಆರ್‌ಪಿಎಂನಲ್ಲಿ 14 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ,

ಈ ಎಂಜಿನ್ ಅನ್ನು ಐದು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಎಂಜಿನ್ ನಲ್ಲಿ ಹೀರೋನ ಪ್ರೋಗ್ರಾಮ್ ಮಾಡಲಾದ ಫ್ಯೂಯಲ್-ಇಂಜೆಕ್ಷನ್ ಸಿಸ್ಟಂ ಅನ್ನು ಸಹ ಹೊಂದಿದೆ. ಇದು ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ಒದಗಿಸುತ್ತದೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕ್ ಕೇವಲ 7 ಸೆಕೆಂಡುಗಳಲ್ಲಿ 0 - 60 ಕಿ.ಮೀ ಕ್ರಮಿಸುತ್ತದ ಎಂದು ಹೀರೋ ಹೇಳಿಕೊಂಡಿದೆ. ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕಿನ ಬೇಸ್ ಸ್ಪೆಕ್ ಮಾದರಿಯು ಕೇವಲ 138.5 ಕೆಜಿ ತೂಕವನ್ನು ಹೊಂದಿದೆ.

ಬಿಎಸ್ 6 ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಈ ಬೈಕ್ ಹಲವಾರು ಹೊಸ ಪ್ರೀಮಿಯಂ ಫೀಚರುಗಳನ್ನು ಹೊಂದಿದೆ. ಈ ಬೈಕಿನಲ್ಲಿ ಎಲ್‌ಇಡಿ ಹೆಡ್ ಲ್ಯಾಂಪ್, ಡಿಆರ್‌ಎಲ್ ಇಂಡೀಕೆಟರ್ ಮತ್ತು ಟೇಲ್ ಲೈಟ್ ಮತ್ತು ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.
MOST READ: ಬಿಎಸ್-6 ಎಂಜಿನ್‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 37 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳ ಸೆಟ್ ಮತ್ತು ಹಿಂಭಾಗದಲ್ಲಿ ಏಳು-ಹಂತದ ರೈಡರ್-ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಅಳವಡಿಸಲಾಗಿದೆ.

ಇನ್ನು ಈ ಹೊಸ ಬೈಕಿನಲ್ಲಿ ಬ್ರೇಕಿಂಗ್ ಸಿಸ್ಟಂಗಾಗಿ ಮುಂಭಾಗದಲ್ಲಿ 276 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಅಥವಾ 130 ಎಂಎಂ ಡ್ರಮ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಚಾನೆಲ್ ಎಬಿಎಸ್ ಅನ್ನು ನೀಡಿದೆ. ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಅಪಾಚೆ ಆರ್ಟಿಆರ್ 160 4ವಿ, ಬಜಾಜ್ ಪಲ್ಸರ್ ಎನ್ಎಸ್ 160 ಮತ್ತು ಸುಜುಕಿ ಜಿಕ್ಸರ್ 150 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications