ಡೀಲರ್ ಬಳಿ ತಲುಪಿದ ಹೊಸ ಹೀರೋ ಎಕ್ಸ್‌ಟ್ರಿಮ್ 200ಎಸ್ ಬೈಕ್
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ಕೊನೆಗೂ ತನ್ನ ಬಿಎಸ್-6 ಎಕ್ಸ್‌ಟ್ರಿಮ್ 200ಎಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಹೀರೋ ಎಕ್ಸ್‌ಟ್ರಿಮ್ 200ಎಸ್ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.16 ಲಕ್ಷಗಳಾಗಿದೆ.

ಇದೀಗ ಈ ಹೊಸ ಹೀರೋ ಎಕ್ಸ್‌ಟ್ರಿಮ್ 200ಎಸ್ ಬೈಕ್ ಡೀಲರ್ ಅನ್ನು ತಲುಪಿದೆ. ಬಿಳಿ ಬಣ್ಣದ ಬಿಎಸ್-6 ಎಕ್ಸ್‌ಟ್ರಿಮ್ 200ಎಸ್ ಬೈಕ್ ಡೀಲರ್ ಬಳಿ ತಲುಪಿರುವುದನ್ನು ಯೂಟ್ಯೂಬ್ ಚಾನೆಲ್ ಬಹಿರಂಗ ಪಡಿಸಿದೆ. ಹೊಸ ಹೀರೋ ಎಕ್ಸ್‌ಟ್ರಿಮ್ 200ಎಸ್ ಬೈಕಿನಲ್ಲಿ ಹಲವಾರು ಹೊಸ ಫೀಚರ್ ಗಳು, ಹೆಚ್ಚುವರಿ ಉಪಕರಣಗಳು ಮತ್ತು ವಿನ್ಯಾಸದಲ್ಲಿ ಸ್ವಲ್ಪ ನವೀಕರಣಗಳನ್ನು ನಡೆಸಲಾಗಿದೆ. ಹೊಸ ಎಕ್ಸ್‌ಟ್ರಿಮ್ 200ಎಸ್ ಬೈಕ್ ಟ್ವಿನ್ ಎಲ್ಇಡಿ ಹೆಡ್ ಲ್ಯಾಂಪ್ ಗಳು, ಎಲ್ಇಡಿ ಟೈಲ್ ಲೈಟ್ ಗಳು, ಹಿಂಭಾಗದ ಕೌಲ್ ವಿನ್ಯಾಸ, ಆಂಟಿ-ಸ್ಲಿಪ್ ಸೀಟುಗಳು ಮತ್ತು ಇತರ ನವೀಕರಣಗಳನ್ನು ಪಡೆದುಕೊಂಡಿವೆ.

ಹೊಸ ಎಕ್ಸ್‌ಟ್ರಿಮ್ 200ಎಸ್ ಬೈಕ್ ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಸಂಪೂರ್ಣ ಡಿಜಿಟಲ್ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದರಲ್ಲಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಗೇರ್ ಇಂಡಿಕೇಟರ್, ಟ್ರಿಪ್ ಮೀಟರ್ ಮತ್ತು ಸರ್ವಿಸ್ ರಿಮೈಂಡರ್ ಮತ್ತು ಇತರ ಮಾಹಿತಿಗಳನ್ನು ಒದಗಿಸುತ್ತದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಫೀಚರ್ ಗಳ ಸುದೀರ್ಘ ಪಟ್ಟಿಯ ಜೊತೆಗೆ, ಹೊಸ ಎಕ್ಸ್‌ಟ್ರಿಮ್ 200ಎಸ್ ಬೈಕ್ ಸಹ ಹೊಚ್ಚ ಹೊಸ ಬಣ್ಣದ ಆಯ್ಕೆಯೊಂದಿಗೆ ಬರುತ್ತದೆ. ಇದನ್ನು ಪರ್ಲ್ ಫೇಡ್ಲೆಸ್ ವೈಟ್ ಎಂದು ಕರೆಯಲಾಗುತ್ತದೆ. ಸ್ಪೋರ್ಟ್ಸ್ ರೆಡ್ ಮತ್ತು ಪ್ಯಾಂಥರ್ ಬ್ಲ್ಯಾಕ್‌ನ ಇತರ ಎರಡು ಸ್ಟ್ಯಾಂಡರ್ಡ್ ಆಯ್ಕೆಗಳೊಂದಿಗೆ ಈ ಹೊಸ ಬಣ್ಣದ ಆಯ್ಕೆಯು ಲಭ್ಯವಿರುತ್ತದೆ.

ಬೈಕಿನ ಹೃದಯ ಭಾಗ ಎಂದೇ ಹೇಳಬಹುದಾದ ಎಂಜಿನ್ ಬಗ್ಗೆ ಹೇಳುವುದಾದರೆ, ಹೊಸ ಎಕ್ಸ್‌ಟ್ರಿಮ್ 200ಎಸ್ ಬೈಕಿನಲ್ಲಿ ಅದೇ 199 ಸಿಸಿ ಸಿಂಗಲ್-ಸಿಲಿಂಡರ್ ಆಯಿಲ್-ಕೂಲ್ಡ್ ಫ್ಯೂಯಲ್ -ಇಂಜೆಕ್ಟ್ ಎಂಜಿನ್ ಅನ್ನು ನವೀಕರಿಸಿ ಅಳವಡಿಸಲಾಗಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಈ ಎಂಜಿನ್ 8500 ಆರ್‌ಪಿಎಂನಲ್ಲಿ 17.8 ಬಿಹೆಚ್‌ಪಿ ಪವರ್ ಮತ್ತು 6500 ಆರ್‌ಪಿಎಂನಲ್ಲಿ 16.4 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಹೊಸ ಎಕ್ಸ್‌ಟ್ರಿಮ್ 200ಎಸ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಸ್ಟ್ಯಾಂಡರ್ಡ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 7-ಹಂತದ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಸೆಟಪ್ ಅನ್ನು ನೀಡಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಅತಿ ಪ್ರಮುಖವಾಗಿ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 276 ಎಂಎಂ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಳಾಗಿದೆ. ಇದರೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಕೂಡ ನೀಡಿದೆ.

ಈ ಹೊಸ ಹೀರೋ ಎಕ್ಸ್‌ಟ್ರಿಮ್ 200ಎಸ್ ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ ಆರ್‍ಎಸ್ 200 ಮತ್ತು ಕೆಟಿಎಂ ಆರ್‍ಸಿ 200 ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಬಿಎಸ್-6 ಹೀರೋ ಎಕ್ಸ್‌ಟ್ರಿಮ್ 200ಎಸ್ ಬೈಕ್ ಡೀಲರ್ ಬಳಿ ತಲುಪಿರುವುದರಿಂದ ಶೀಘ್ರದಲ್ಲೇ ವಿತರಣೆಯನ್ನು ಪ್ರಾರಂಭಿಸಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications