ಅನಾವರಣವಾಯ್ತು ಹೊಸ ಹೋಂಡಾ ಸಿಬಿ400ಎಕ್ಸ್ ಬೈಕ್

ಹೋಂಡಾ ಕಂಪನಿಯು ತನ್ನ ಹೊಸ ಜನಪ್ರಿಯ ಸಿಬಿ400ಎಕ್ಸ್ ಅಡ್ವೆಂಚರ್ ಟೂರರ್ ಬೈಕನ್ನು ಜಪಾನ್ ದೇಶದಲ್ಲಿ ಅನಾವರಣಗೊಳಿಸಲಾಗಿದೆ. ಈ ಹೊಸ ಹೋಂಡಾ ಸಿಬಿ400ಎಕ್ಸ್ ಬೈಕಿನಲ್ಲಿ ಯಾವುದೇ ಯಾಂತ್ರಿಕ ನವೀಕರಣಗಳನ್ನು ಮಾಡಲಾಗಿಲ್ಲ.

ಅನಾವರಣವಾಯ್ತು ಹೊಸ ಹೋಂಡಾ ಸಿಬಿ400ಎಕ್ಸ್ ಬೈಕ್

ಈ ಹೊಸ ಹೋಂಡಾ ಸಿಬಿ400ಎಕ್ಸ್ ಬೈಕ್ ಮ್ಯಾಟ್ ಬ್ಯಾಲಿಸ್ಟಿಕ್ ಬ್ಲ್ಯಾಕ್ ಮೆಟಾಲಿಕ್ ಮತ್ತು ಪರ್ಲ್ ಗ್ಲೇರ್ ವೈಟ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರಲಿದೆ. ಹೊಸ ಹೋಂಡಾ ಸಿಬಿ400ಎಕ್ಸ್ ಬೈಕಿನಲ್ಲಿ ರೆಡ್ ಎಕ್ಸೆಟ್ ಗಳನ್ನು ಹೊಂದಿದೆ. ಈ ಬೈಕಿನಲ್ಲಿ ಫುಲ್ ಎಲ್ಇಡಿ ಹೆಡ್ ಲ್ಯಾಂಪ್, ಎತ್ತರದ ವಿಂಡ್‌ಶೀಲ್ಡ್, 7-ಸ್ಪೋಕ್ ವ್ಜೀಲ್ಸ್, ಸಸ್ಪೆಂಕ್ಷನ್ ಯುನಿಟ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಇತರ ಫೀಚರುಗಳನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಹೋಂಡಾ ಸಿಬಿ400ಎಕ್ಸ್ ಬೈಕ್

ಹೊಸ ಹೋಂಡಾ ಸಿಬಿ400ಎಕ್ಸ್ ಬೈಕ್ ಡ್ಯುಯಲ್-ಔಟ್ ಲೆಟ್ ಎಕ್ಸಾಸ್ಟ್ ಸ್ಲಿಪ್ಪರ್ ಕ್ಲಚ್, ಡ್ಯುಯಲ್-ಚಾನೆಲ್ ಎಬಿಎಸ್ ಮತ್ತು 5-ಹಂತದ ಹೊಂದಾಣಿಕೆ ಮಾಡಬಹುದಾದ ಫ್ರಂಟ್ ಬ್ರೇಕ್ ಲಿವರ್ ಅನ್ನು ಹೊಂದಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಅನಾವರಣವಾಯ್ತು ಹೊಸ ಹೋಂಡಾ ಸಿಬಿ400ಎಕ್ಸ್ ಬೈಕ್

ಈ ಹೊಸ ಹೋಂಡಾ ಸಿಬಿ400ಎಕ್ಸ್ ಬೈಕ್ ಅಡ್ವೆಂಚರ್ ಟೂರರ್ 150 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ, ಈ ಹೊಸ ಹೋಂಡಾ ಸಿಬಿ400ಎಕ್ಸ್ ಬೈಕಿನ ಸೀಟ್ 800 ಎಂಎಂ ಎತ್ತರವನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಹೋಂಡಾ ಸಿಬಿ400ಎಕ್ಸ್ ಬೈಕ್

ಈ ಮೊದಲೇ ಹೇಳಿದಂತೆ ಯಾಂತ್ರಿಕ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೊಸ ಹೋಂಡಾ ಸಿಬಿ400ಎಕ್ಸ್ ಬೈಕಿನಲ್ಲಿ 399 ಸಿಸಿ ಲಿಕ್ವಿಡ್-ಕೂಲ್ಡ್ ಡಿಒಹೆಚ್‌ಸಿ ಟ್ವಿನ್-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಅನಾವರಣವಾಯ್ತು ಹೊಸ ಹೋಂಡಾ ಸಿಬಿ400ಎಕ್ಸ್ ಬೈಕ್

ಈ ಎಂಜಿನ್ ನೊಂದಿಗೆ ಕಂಪನಿಯ ‘ಪಿಜಿಎಂ-ಫೈ' ತಂತ್ರಜ್ಞಾನವನ್ನು ಹೊಂದಿದೆ. ಈ ಎಂಜಿನ್ 9,000 ಆರ್‌ಪಿಎಂನಲ್ಲಿ 45 ಬಿಹೆಚ್‍ಪಿ ಪವರ್ ಮತ್ತು 7,500 ಆರ್‌ಪಿಎಂನಲ್ಲಿ 38 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಅನಾವರಣವಾಯ್ತು ಹೊಸ ಹೋಂಡಾ ಸಿಬಿ400ಎಕ್ಸ್ ಬೈಕ್

ಇನ್ನು ಹೋಂಡಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಎಸ್-6 ಲಿವೊ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಂಡಾ ಕಂಪನಿಯು ಬಿಎಸ್-6 ಲಿವೊ ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಅನಾವರಣವಾಯ್ತು ಹೊಸ ಹೋಂಡಾ ಸಿಬಿ400ಎಕ್ಸ್ ಬೈಕ್

ಬಿಎಸ್-6 ಹೋಂಡಾ ಲಿವೊ ಬೈಕಿನ ಟೀಸರ್ ವೀಡಿಯೋದಲ್ಲಿ ಕೆಲವು ಮಾಹಿತಿಗಳು ಬಹಿರಂಗವಾಗಿದೆ. ಹೊಸ ಹೋಂಡಾ ಲಿವೊ ಬೈಕ್ ಅದೇ 110 ಸಿಸಿ ಎಂಜಿನ್‌ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

ಅನಾವರಣವಾಯ್ತು ಹೊಸ ಹೋಂಡಾ ಸಿಬಿ400ಎಕ್ಸ್ ಬೈಕ್

ಭಾರತೀಯ ಮಾರುಕಟ್ಟೆಯಲ್ಲಿ ಸಿಂಗಲ್-ಸಿಲಿಂಡರ್ ಡ್ಯುಯಲ್-ಸ್ಪೋರ್ಟ್ ಬೈಕುಗಳಿಗೆ ಉತ್ತಮ ಬೇಡಿಕೆಯನ್ನು ಹೊಂದಿದೆ. ಆದರೆ ಹೋಂಡಾ ಕಂಪನಿಯು ಈ ಹೊಸ ಸಿಬಿ400ಎಕ್ಸ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಯಾವುದೇ ಮಾಹಿತಿಗಳಲ್ಲ.

Most Read Articles

Kannada
English summary
2020 Honda CB400X Adventure Tourer Motorcycle Unveiled In Japan Details. Read In Kannada.
Story first published: Friday, June 26, 2020, 19:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X