ಬಿಡುಗಡೆಯಾಯ್ತು ಹೊಸ ಹೋಂಡಾ ಸಿಬಿಆರ್600ಆರ್‌ಆರ್ ಬೈಕ್

ಜನಪ್ರಿಯ ದ್ವಿಚಕ ವಾಹನ ತಯಾರಕ ಕಂಪನಿಯಾದ ಹೋಂಡಾ ತನ್ನ ಹೊಸ ಸಿಬಿಆರ್600ಆರ್‌ಆರ್ ಬೈಕಿನ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಇದೀಗ ಹೋಂಡಾ ಕಂಪನಿಯು ಹೊಸ ಸಿಬಿಆರ್600ಆರ್‌ಆರ್ ಬೈಕನ್ನು ಜಪಾನ್‌ನಲ್ಲಿ ಬಿಡುಗಡೆಗೊಳಿಸಿದೆ.

ಬಿಡುಗಡೆಯಾಯ್ತು ಹೊಸ ಹೋಂಡಾ ಸಿಬಿಆರ್600ಆರ್‌ಆರ್ ಬೈಕ್

ಈ ಹೊಸ ಹೋಂಡಾ ಸಿಬಿಆರ್600ಆರ್‌ಆರ್ ಬೈಕಿನ ಬೆಲೆಯು ಭಾರತೀಯ ಕರೆನ್ಸಿಗೆ ಅನುವಾದಿಸಿದಾಗ ರೂ.11.40 ಲಕ್ಷಗಳಾಗಿದೆ. ಆದರೆ ಕೆಲವು ವರದಿಗಳ ಪ್ರಕಾರ ಹೊಸ ಸೂಪರ್‌ಸ್ಪೋರ್ಟ್ಸ್ ಮಿಡಲ್ ವೇಟ್ ಹೋಂಡಾ ಸಿಬಿಆರ್600ಆರ್‌ಆರ್ ಬೈಕನ್ನು ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ. ಈ ಹೊಸ ಹೋಂಡಾ ಸಿಬಿಆರ್600ಆರ್‌ಆರ್ ಬೈಕನ್ನು ಯುರೋ 5 ಅಥವಾ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುವುದಿಲ್ಲ.

ಬಿಡುಗಡೆಯಾಯ್ತು ಹೊಸ ಹೋಂಡಾ ಸಿಬಿಆರ್600ಆರ್‌ಆರ್ ಬೈಕ್

ಇದರಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ. ಜಪಾನ್ ಮಾರುಕಟ್ಟೆಯಲ್ಲಿ ಯುರೋ 4 ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲಾಗಿದೆ. ಅಮೇರಿಕಾದಲ್ಲಿಯು ಕೂಡ ಇದೇ ಮಾದರಿಯನ್ನು ಬಿಡುಗಡೆಗೊಳಿಸಲಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬಿಡುಗಡೆಯಾಯ್ತು ಹೊಸ ಹೋಂಡಾ ಸಿಬಿಆರ್600ಆರ್‌ಆರ್ ಬೈಕ್

ಈ ಹೊಸ ಹೋಂಡಾ ಸಿಬಿಆರ್600ಆರ್‌ಆರ್ ಬೈಕಿನಲ್ಲಿ 599 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಡಿಒಹೆಚ್‌ಸಿ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 114,000 ಆರ್‌ಪಿಎಂನಲ್ಲಿ 119.3 ಬಿಹೆಚ್‌ಪಿ ಪವರ್ ಮತ್ತು 64 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು ಹೊಸ ಹೋಂಡಾ ಸಿಬಿಆರ್600ಆರ್‌ಆರ್ ಬೈಕ್

ಇದರ ಹಿಂದಿನ ಮಾದರಿಯು 114.5 ಬಿಹೆಚ್‍ಪಿ ಪವರ್ ಮತ್ತು 66 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತಿತ್ತು. ಪರ್ಫಾಮೆನ್ಸ್ ಮಾದರಿಯಾಗಿರುವುದರಿಂದ ಈ ಬೈಕಿನಲ್ಲಿ ಹಲವು ರೈಡಿಂಗ್ ಮೋಡ್‌ಗಳನ್ನು ಹೊಂದಿರಬಹುದು.

MOST READ: ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಬಿಡುಗಡೆಯಾಯ್ತು ಹೊಸ ಹೋಂಡಾ ಸಿಬಿಆರ್600ಆರ್‌ಆರ್ ಬೈಕ್

ಈ ಬೈಕಿನಲ್ಲಿ ಬೈ-ಡೈರಕ್ಷನಲ್ ಕ್ವಿಕ್‌ಶಿಫ್ಟರ್ ಮತ್ತು ಎಬಿಎಸ್ ಅನ್ನು ಹೊಂದಿದೆ, ಈ ಹೋಂಡಾ ಸಿಬಿಆರ್600ಆರ್‌ಆರ್ ಬೈಕಿನಲ್ಲಿ ಸಸ್ಪೆಕ್ಷನ್ ಗಾಗಿ ಮುಂಭಾಗದಲ್ಲಿ ಶೋವಾ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ,

ಬಿಡುಗಡೆಯಾಯ್ತು ಹೊಸ ಹೋಂಡಾ ಸಿಬಿಆರ್600ಆರ್‌ಆರ್ ಬೈಕ್

ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ ಟೋಕಿಕೊ ರೇಡಿಯಲ್ ಕ್ಯಾಲಿಪರ್‌ಗಳೊಂದಿಗೆ ಡ್ಯುಯಲ್ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಸಿಂಗಲ್-ಪಿಸ್ಟನ್ ಕ್ಯಾಲಿಪರ್ ಹೊಂದಿರುವ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಬಿಡುಗಡೆಯಾಯ್ತು ಹೊಸ ಹೋಂಡಾ ಸಿಬಿಆರ್600ಆರ್‌ಆರ್ ಬೈಕ್

ಈ ಹೊಸ ಸಿಬಿಆರ್600ಆರ್‌ಆರ್ ಬೈಕ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕವಾಸಕಿ ಝಡ್ಎಕ್ಸ್ -6ಆರ್ ಮತ್ತು ಯಮಹಾ ವೈಜೆಡ್ಎಫ್-ಆರ್6 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ. ಹೋಂಡಾ ಕಂಪನಿಯು ಶೀಘ್ರದಲ್ಲೇ ಈ ಹೊಸ ಬೈಕನ್ನು ಅಮೆರಿಕಾದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ

ಬಿಡುಗಡೆಯಾಯ್ತು ಹೊಸ ಹೋಂಡಾ ಸಿಬಿಆರ್600ಆರ್‌ಆರ್ ಬೈಕ್

ಇನ್ನು ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಹೊಸ ಸೂಪರ್ ಬೈಕ್ ಮಾದರಿಗಳಾದ ಸಿಬಿಆರ್1000ಆರ್‌ಆರ್-ಆರ್ ಫೈರ್‌ಬ್ಲೇಡ್ ಮತ್ತು ಫೈರ್‌ಬ್ಲೇಡ್ ಎಸ್‌ಪಿ ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

Article Published On: Saturday, August 22, 2020, 13:41 [IST]
English summary
2020 Honda CBR600RR Launched In Japan. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+