ಬಿಡುಗಡೆಯಾಯ್ತು ಹೊಸ ಹೋಂಡಾ ಸಿಬಿಆರ್150ಆರ್ ಬೈಕ್
ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ತನ್ನ ಸಿಬಿಆರ್150ಆರ್ ಬೈಕನ್ನು ಥೈಲ್ಯಾಂಡ್‌ನಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೋಂಡಾ ಸಿಬಿಆರ್150ಆರ್ ಬೈಕ್ ಬ್ರ್ಯಾಂಡ್ನ ಸಿಬಿಆರ್1000ಆರ್ಆರ್-ಆರ್ ಮಾದರಿಯಿಂದ ಸ್ಫೂರ್ತಿ ಪಡೆದುಕೊಂಡಿದೆ.

ಹೊಸ ಹೋಂಡಾ ಸಿಬಿಆರ್150ಆರ್ ಬೈಕ್ ಆಕರ್ಷಕ ಸ್ಟೈಲಿಂಗ್ ಅನ್ನು ಹೊಂದಿದೆ. ಈ ಸಿಬಿಆರ್150ಆರ್ ಬೈಕ್ ರೆಡ್ ಗ್ರಾಫಿಕ್ಸ್ ಅನ್ನು ಒಳಗೊಂಡಿರುವ ಮ್ಯಾಟ್ ಬ್ಲ್ಯಾಕ್ ಬಣ್ಣದಿಂದ ಒಳಗೊಂಡಿದೆ. ಮುಂಭಾಗದ ಟಯರ್ ರೆಡ್ ಬಣ್ಣದೊಂದಿಗೆ , ರೆಡ್ ಅಂಡರ್ಬೆಲ್ಲಿ ಕೌಲ್ ಮತ್ತು ಗ್ರೇ ಬಣ್ಣವನ್ನು ಹೊಂದಿರುವ ಸ್ಪೋರ್ಟಿ ಗ್ರಾಫಿಕ್ಸ್ ಅನ್ನು ಒಳಗೊಂಡಿದೆ.

ಹೊಸ ಹೋಂಡಾ ಸಿಬಿಆರ್150ಆರ್ ಬೈಕಿನ ಎಂಜಿನ್ ಹಿಂದಿನ ಮಾದರಿಯಲ್ಲಿರುವಂತಹ ಅದೇ ಎಂಜಿನ್ ಅನ್ನು ಹೊಂದಿದೆ. ಯಾವುದೆ ಬದಲಾವಣೆಯನ್ನು ಮಾಡಲಾಗಿಲ್ಲ, ಇದು 149 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಆಗಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಈ ಎಂಜಿನ್ 17.1 ಬಿಹೆಚ್‌ಪಿ ಪವರ್ ಮತ್ತು 14.4 ಎನ್ಎಂ ಟಾರ್ಕ್ ಉತ್ಪಾದಿಸಲು ಟ್ಯೂನ್ ಮಾಡಲಾಗಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಹೊಸ ಹೋಂಡಾ ಸಿಬಿಆರ್150ಆರ್ ಬೈಕ್ ಈ ಆವೃತ್ತಿಯು ಭಾರತದಲ್ಲಿ ಒಂದೆರಡು ವರ್ಷಗಳ ಹಿಂದೆ ಲಭ್ಯವಿರುವುದಕ್ಕಿಂತ ಭಿನ್ನವಾಗಿದೆ. ಅಗ್ರೇಸಿವ್ ಲುಕ್ ಹೊಂದಿರುವ ಹೊಸ ಹೋಂಡಾ ಸಿಬಿಆರ್150ಆರ್ ಬೈಕ್ ಬ್ರ್ಯಾಂಡ್ನ ಸಿಬಿಆರ್1000ಆರ್ಆರ್-ಆರ್ ಮಾದರಿಯಿಂದ ಸ್ಫೂರ್ತಿ ಪಡೆದುಕೊಂಡಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಈ ಹೊಸ ಹೋಂಡಾ ಸಿಬಿಆರ್150ಆರ್ ಬೈಕ್ ಫುಲ್-ಎಲ್ಇಡಿ ಹೆಡ್ ಲೈಟ್ ಅನ್ನು ಹೊಂದಿದೆ. ಆದರೆ ಇಂಡಿಯನ್ ಸ್ಪೆಕ್ ಹೋಂಡಾ ಸಿಬಿಆರ್150ಆರ್ ಬೈಕಿನಲ್ಲಿ ಫುಲ್-ಎಲ್ಇಡಿ ಹೆಡ್ ಲೈಟ್ ಅನ್ನು ನೀಡರಿಲಿಲ್ಲ.

ಈ ಹೊಸ ಹೋಂಡಾ ಸಿಬಿಆರ್150ಆರ್ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಶೋವಾ ಬಿಗ್ ಪಿಸ್ಟನ್ ಅಪ್ ಸೈಡ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸೆಟಪ್ ಅನ್ನು ನೀಡಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಹೋಂಡಾ ಸಿಬಿ125ಆರ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ನಿಸ್ಸಿನ್ ಕ್ಯಾಲಿಪರ್ ಅಪ್ 296 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಒಳಗೊಂಡಿದೆ.

ಇನ್ನು ಹೋಂಡಾ ಮೋಟಾರ್‌ಸೈಕಲ್ ತನ್ನ 2021 ಸಿಬಿ125ಆರ್ ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇತ್ತೀಚೆಗೆ ಅನಾವರಣಗೊಳಿಸಿತ್ತು. 2021ರ ಹೋಂಡಾ ಸಿಬಿ125ಆರ್ ಬೈಕಿನಲ್ಲಿ 125 ಸಿಸಿ ಡಿಒಹೆಚ್‌ಸಿ, 4 ವಿ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 14.7 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಹಿಂದಿನ ಮಾದರಿಗೆ ಹೋಲಿಸಿದರೆ 1.6 ಬಿಹೆಚ್‌ಪಿ ಪವರ್ ರಷ್ಟು ಹೆಚ್ಚಾಗಿದೆ.

ಹೊಸ ಹೋಂಡಾ ಸಿಬಿಆರ್150ಆರ್ ಥೈಲ್ಯಾಂಡ್ ಮಾರುಕಟ್ಟೆಯಲ್ಲಿ ಯಮಹಾ ಆರ್15 ವಿ3 ಬೈಕಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಹೋಂಡಾ ಸಿಬಿಆರ್150ಆರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗುವುದಿಲ್ಲ.


Click it and Unblock the Notifications