ಅನಾವರಣವಾಯ್ತು ಹೊಸ ಹೋಂಡಾ ಫೋರ್ಜಾ 750 ಮ್ಯಾಕ್ಸಿ ಸ್ಕೂಟರ್

ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಕಂಪನಿಯು ತನ್ನ ಫೋರ್ಜಾ 750 ಮ್ಯಾಕ್ಸಿ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಹೋಂಡಾ ಕಂಪನಿಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್‌ಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಅನಾವರಣವಾಯ್ತು ಹೊಸ ಹೋಂಡಾ ಫೋರ್ಜಾ 750 ಮ್ಯಾಕ್ಸಿ ಸ್ಕೂಟರ್

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೋಂಡಾ ಫೋರ್ಜಾ 125 ಮತ್ತು ಫೋರ್ಜಾ 300 ಬಹಳ ಜನಪ್ರಿಯತೆಯನ್ನುಗಳಿಸಿದೆ. ಇದೇ ಕಾರಣದಿಂದ ಹೋಂಡಾ ಕಂಪನಿಯು ಹೊಸಫೋರ್ಜಾ 750 ಮ್ಯಾಕ್ಸಿ ಸ್ಕೂಟರ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದೆ. ಈ ಹಿಂದೆ ಹೋಂಡಾ ಕಂಪನಿಯು ಮೊದಲ ಟೀಸರ್ ಚಿತ್ರ ಬಿಡುಗಡೆಗೊಂಡಾಗ ಹೊಸ ಫೋರ್ಜಾ 350 ಸಿಸಿ ಮ್ಯಾಕ್ಸಿ ಸ್ಕೂಟರ್ ಎಂದು ವರದಿಗಳು ಪ್ರಕಟವಾಗಿತ್ತು.

ಅನಾವರಣವಾಯ್ತು ಹೊಸ ಹೋಂಡಾ ಫೋರ್ಜಾ 750 ಮ್ಯಾಕ್ಸಿ ಸ್ಕೂಟರ್

ಆದರೆ ಇತ್ತೀಚೆಗೆ ಹೋಂಡಾ ಕಂಪನಿಯು ಹೊಸ ಸ್ಕೂಟರ್ ಟೀಸರ್ ವೀಡಿಯೋವನ್ನು ಬಿಡುಗಡೆಗೊಳಿಸಿತ್ತು. ಟೀಸರ್ ವೀಡಿಯೋದಲ್ಲಿ ಇದು ಫೋರ್ಜಾ ಸರಣಿಯ ಮ್ಯಾಕ್ಸಿ-ಸ್ಕೂಟರ್‌ಗಳಿಗೆ ಸೇರ್ಪಡೆಗೊಳ್ಳುವ ಇತ್ತೀಚಿನ ಮಾದರಿ ಫೋರ್ಜಾ 750 ಎಂದು ಖಚಿತವಾಗಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಅನಾವರಣವಾಯ್ತು ಹೊಸ ಹೋಂಡಾ ಫೋರ್ಜಾ 750 ಮ್ಯಾಕ್ಸಿ ಸ್ಕೂಟರ್

ಹೊಸ ಫೋರ್ಜಾ 750 ಮ್ಯಾಕ್ಸಿ-ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಎಂಜಿನ್ ಸ್ಟ್ರಾಟ್/ಸ್ಟಾಪ್ ಬಟನ್ ಅನ್ನು ನೀಡಿದ್ದಾರೆ. ಇನ್ನು ಪುಲ್ ಡಿಜಿಟಲ್ ಮತ್ತು ಕಲರ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಜೊತೆಗೆ ಸ್ಪೀಡೋಮೀಟರ್, ರೆವ್ ಕೌಂಟರ್, ಫ್ಯೂಯಲ್ ಗೇಜ್, ಟ್ರಿಪ್ ಮೀಟರ್ ಮುಂತಾದ ಮಾಹಿತಿಯನ್ನು ನೀಡುತ್ತದೆ.

ಅನಾವರಣವಾಯ್ತು ಹೊಸ ಹೋಂಡಾ ಫೋರ್ಜಾ 750 ಮ್ಯಾಕ್ಸಿ ಸ್ಕೂಟರ್

ಹೊಸ ಹೋಂಡಾ ಫೋರ್ಜಾ 750 ಸ್ಕೂಟರ್‌ನಲ್ಲಿನ ಕ್ಲಸ್ಟರ್ ನೊಂದಿಗೆ ಸ್ಮಾರ್ಟ್ ಪೋನ್ ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದಾಗಿದೆ. ಇದರರ್ಥ ಫೋರ್ಜಾ 750 ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕರೆ ಮತ್ತು ಮ್ಯೂಸಿಕ್ ನಂತಹ ಫೀಚರ್ ಅನ್ನು ಹೊಂದಿರಲಿದೆ.

MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಅನಾವರಣವಾಯ್ತು ಹೊಸ ಹೋಂಡಾ ಫೋರ್ಜಾ 750 ಮ್ಯಾಕ್ಸಿ ಸ್ಕೂಟರ್

ಹೊಸ ಹೋಂಡಾ ಫೋರ್ಜಾ 750 ಸ್ಕೂಟರ್ ಎಲೆಕ್ಟ್ರಾನಿಕ್ ಥ್ರೊಟಲ್ ಅನ್ನು ಹೊಂದಿದ್ದು, ಸ್ಟ್ಯಾಂಡರ್ಡ್, ಸ್ಪೋರ್ಟ್ ಮತ್ತು ರೈನ್ ಎಂಬ ಮೂರು ರೈಡಿಂಗ್ ಮೋಡ್ ಗಳನ್ನು ಹೊಂದಿದೆ. ಹೆಚ್ಚುವರಿಯಾಗಿ, ಬಳಕೆದಾರ ಕಾನ್ಫಿಗರ್ ಮಾಡಬಹುದಾದ ನಾಲ್ಕನೇ ಮೋಡ್ ಇದೆ.

ಅನಾವರಣವಾಯ್ತು ಹೊಸ ಹೋಂಡಾ ಫೋರ್ಜಾ 750 ಮ್ಯಾಕ್ಸಿ ಸ್ಕೂಟರ್

ಇನ್ನು ಈ ಹೊಸ ಹೋಂಡಾ ಫೋರ್ಜಾ 750 ಸ್ಕೂಟರ್ ಡಿಸೈನ್ ಬಗ್ಗೆ ನೋಡುವುದಾರೆ, ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಹೊಂದಿಸಲಾದ ಟ್ವಿನ್-ಎಲ್ಇಡಿ ಹೆಡ್ಲ್ಯಾಂಪ್ ಮತ್ತು ಸ್ಟೈಲಿಶ್ ಎಲ್ಇಡಿ ಟೈಲ್ ಲ್ಯಾಂಪ್ ಸೇರಿದಂತೆ ಪೂರ್ಣ-ಎಲ್ಇಡಿ ಲೈಟಿಂಗ್ ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅನಾವರಣವಾಯ್ತು ಹೊಸ ಹೋಂಡಾ ಫೋರ್ಜಾ 750 ಮ್ಯಾಕ್ಸಿ ಸ್ಕೂಟರ್

ಹೋಂಡಾ ಫೋರ್ಜಾ 750 ಸ್ಕೂಟರ್ ನಲ್ಲಿ 745ಸಿಸಿ ಪ್ಯಾರೆಲೆಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6750 ಆರ್‌ಪಿಎಂನಲ್ಲಿ 58 ಬಿಹೆಚ್‌ಪಿ ಪವರ್ ಮತ್ತು 4750 ಆರ್‌ಪಿಎಂನಲ್ಲಿ 69 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ. ಇದರೊಂದಿಗೆ 6-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಅನಾವರಣವಾಯ್ತು ಹೊಸ ಹೋಂಡಾ ಫೋರ್ಜಾ 750 ಮ್ಯಾಕ್ಸಿ ಸ್ಕೂಟರ್

ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿಯು ಹೊಸ ಫೋರ್ಜಾ 750 ಸ್ಕೂಟರ್ ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿಲ್ಲ. ಆದರೆ ಭಾರತದಲ್ಲಿ ಸಣ್ಣ ಫೋರ್ಜಾ 300 ಸ್ಕೂಟರ್ ಅನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಬಹುದು.

Most Read Articles

Kannada
English summary
2021 Honda Forza 750 Maxi-scooter Unveiled. Read In Kannada.
Story first published: Thursday, October 15, 2020, 19:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X