ಬಿಡುಗಡೆಯಾಗಲಿದೆ 59 ಕಿ.ಮೀ ಮೈಲೇಜ್ ನೀಡುವ ಹೋಂಡಾ ಸ್ಕೂಪಿ ಸ್ಕೂಟರ್

ಇಂಡೋನೇಷ್ಯಾದ ಮಾರುಕಟ್ಟೆಯಲ್ಲಿ ಹೋಂಡಾ ಸ್ಕೂಪಿ ಸ್ಕೂಟರ್ ಮಾರಟದಲ್ಲಿ ಹೊಸ ಸಂಚಲವನ್ನು ಸೃಷ್ಟಿಸಿತ್ತು. ಇದೀಗ ಜಪಾನ್ ಮೂಲದ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಸ್ಕೂಪಿ ಸ್ಕೂಟರಿನ ನ್ಯೂ ಜನರಷನ್ ಮಾದರಿಯನ್ನು ಇಂಡೋನೇಷ್ಯಾದಲ್ಲಿ ಪರಿಚಯಿಸಿದೆ.

ಬಿಡುಗಡೆಯಾಗಲಿದೆ 59 ಕಿ.ಮೀ ಮೈಲೇಜ್ ನೀಡುವ ಹೋಂಡಾ ಸ್ಕೂಪಿ ಸ್ಕೂಟರ್

ಇಂಡೋನೇಷ್ಯಾದಲ್ಲಿ ಹೋಂಡಾ ಸ್ಕೂಪಿ ಸ್ಕೂಟರ್ 2010ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿತ್ತು. ಇಂಡೋನೇಷ್ಯಾದಲ್ಲಿ 4.5 ದಶಲಕ್ಷಕ್ಕೂ ಹೆಚ್ಚಿನ ಹೋಂಡಾ ಸ್ಕೂಪಿ ಸ್ಕೂಟರ್ ಗಳು ಮಾರಾಟವಾಗಿವೆ. ಇದೀಗ ಹೋಂಡಾ ಕಂಪನಿಯು ಕೆಲವು ಕಾಸ್ಮೆಟಿಕ್ ಬದಲಾವಣೆ ಮತ್ತು ಹೊಸ ಫೀಚರ್ ಗಳೊಂದಿಗೆ ನ್ಯೂ ಜನರಷನ್ ಸ್ಕೂಪಿ ಸ್ಕೂಟರ್ ಅನ್ನು ಜಾಗತಿಕವಾಗಿ ಬಿಡುಗಡೆಗೊಳಿಸಲಿದೆ. ಈ ಹೊಸ ಹೋಂಡಾ ಸ್ಕೂಪಿ ಸ್ಕೂಟರ್ ಅಂದಾಜು ಬೆಲೆಯು ರೂ.1.05 ಲಕ್ಷಗಳಾಗಿರಬಹುದು.

ಬಿಡುಗಡೆಯಾಗಲಿದೆ 59 ಕಿ.ಮೀ ಮೈಲೇಜ್ ನೀಡುವ ಹೋಂಡಾ ಸ್ಕೂಪಿ ಸ್ಕೂಟರ್

2021ರ ಹೋಂಡಾ ಸ್ಕೂಪಿ ಸ್ಕೂಟರ್ ಹಿಂದಿನ ಮಾದರಿಗಿಂತ ಹೆಚ್ಚು ಆಕರ್ಷಕವಾಗಿದೆ. ಈ ಸ್ಕೂಟರ್ ಅನ್ನು ಯುವ ಪೀಳಿಗೆಯ ಸ್ಟೈಲಿಂಗ್ ಅಗತ್ಯಗಳಿಗೆ ಅನುಗುಣವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಹೊಸ ಹೋಂಡಾ ಸ್ಕೂಪಿ ಸ್ಕೂಟರಿನಲ್ಲಿ ಅಂಡಾಕಾರದ ಆಕಾರದ ಹೆಡ್‌ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಅನ್ನು ಅಳವಡಿಸಲಾಗಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಬಿಡುಗಡೆಯಾಗಲಿದೆ 59 ಕಿ.ಮೀ ಮೈಲೇಜ್ ನೀಡುವ ಹೋಂಡಾ ಸ್ಕೂಪಿ ಸ್ಕೂಟರ್

ಹೊಸ ಹೆಡ್ ಲ್ಯಾಂಪ್ ಎಲ್ಇಡಿ ಪ್ರೊಜೆಕ್ಟರ್ ಲೈಟಿಂಗ್ ಸಿಸ್ಟಂ ಅನ್ನು ಹೊಂದಿರಲಿದೆ. ಹೊಸ ಹೋಂಡಾ ಸ್ಕೂಫಿ ಸ್ಕೂಟರ್ ಸ್ಪೋರ್ಟಿ, ಫ್ಯಾಶನ್, ಸ್ಟೈಲಿಶ್ ಮತ್ತು ಪ್ರೆಸ್ಟೀಜ್ ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿರಲಿದೆ.

ಬಿಡುಗಡೆಯಾಗಲಿದೆ 59 ಕಿ.ಮೀ ಮೈಲೇಜ್ ನೀಡುವ ಹೋಂಡಾ ಸ್ಕೂಪಿ ಸ್ಕೂಟರ್

ಹೊಸ ಹೋಂಡಾ ಸ್ಕೂಫಿ ಸ್ಕೂಟರ್ 15.4 ಲೀಟರ್ ದೊಡ್ಡದಾದ ಉಪಯುಕ್ತತೆಯವಾದ ಅಂಡರ್ ಸ್ಟ್ರೋರೆಜ್ ಸ್ಪೇಸ್ ಅನ್ನು ಹೊಂದಿದೆ. ಇನ್ನು ಕನ್ಸೋಲ್ ಬಾಕ್ಸ್‌ಗೆ ಯುಎಸ್‌ಬಿ ಚಾರ್ಜರ್ ಅನ್ನು ಸೇರಿಸಲಾಗಿದೆ, ಹೆಚ್ಚುವರಿ ಅಡಾಪ್ಟರ್ ಅಗತ್ಯವಿಲ್ಲದೇ ಬಳಕೆದಾರರು ತಮ್ಮ ಮೊಬೈಲ್ ಅನ್ನು ಚಾರ್ಜ್ ಮಾಡಬಹುದು.

ಬಿಡುಗಡೆಯಾಗಲಿದೆ 59 ಕಿ.ಮೀ ಮೈಲೇಜ್ ನೀಡುವ ಹೋಂಡಾ ಸ್ಕೂಪಿ ಸ್ಕೂಟರ್

ಸುರಕ್ಷತೆಯ ದೃಷ್ಟಿಯಿಂದ ಈ ಹೊಸ ಸ್ಕೂಟರಿನಲ್ಲಿ ಹಲವಾರು ಫೀಚರ್ ಗಳನ್ನು ನೀಡಲಾಗಿದೆ. ಹೊಸ ಸ್ಕೂಪಿಯಲ್ಲಿ ಸ್ಮಾರ್ಟ್ ಕೀಗಳನ್ನು ಅಳವಡಿಸಲಾಗಿದ್ದು, ಆಂಟಿ-ಥೆಫ್ಟ್ ಅಲಾರಂ ನೀಡಲಾಗಿದೆ. ಇದು ಟ್ಯೂಬ್‌ಲೆಸ್ ಟೈರ್ ಮತ್ತು ಬ್ರೇಕ್ ಲಾಕ್ ಲಿವರ್ ಅನ್ನು ಸಹ ಪಡೆಯುತ್ತದೆ.

MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಬಿಡುಗಡೆಯಾಗಲಿದೆ 59 ಕಿ.ಮೀ ಮೈಲೇಜ್ ನೀಡುವ ಹೋಂಡಾ ಸ್ಕೂಪಿ ಸ್ಕೂಟರ್

ಹೊಸ ಹೋಂಡಾ ಸ್ಕೂಫಿ ಸ್ಕೂಟರ್ 110 ಸಿಸಿ, ಎಸ್‌ಒಹೆಚ್‌ಸಿ, ಪ್ರೋಗ್ರಾಮ್ ಮಾಡಲಾದ ಫ್ಯೂಯಲ್ ಇಂಜೆಕ್ಷನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 9 ಬಿಹೆಚ್‍ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 9.3 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಬಿಡುಗಡೆಯಾಗಲಿದೆ 59 ಕಿ.ಮೀ ಮೈಲೇಜ್ ನೀಡುವ ಹೋಂಡಾ ಸ್ಕೂಪಿ ಸ್ಕೂಟರ್

ಇದು ಇಎಸ್ಪಿ (ವರ್ಧಿತ ಸ್ಮಾರ್ಟ್ ಪವರ್) ನೊಂದಿಗೆ ಬರುತ್ತದೆ, ಇದು ಕಾರ್ಯಕ್ಷಮತೆಯನ್ನು ಹೆಚ್ಚಿಸುವುದಲ್ಲದೆ ಮೈಲೇಜ್ ಸುಧಾರಿಸುತ್ತದೆ. ಸ್ಕೂಟರ್ ಎಸಿಜಿ ಸ್ಟಾರ್ಟರ್ ಅನ್ನು ಸಹ ಪಡೆಯುತ್ತದೆ.

ಬಿಡುಗಡೆಯಾಗಲಿದೆ 59 ಕಿ.ಮೀ ಮೈಲೇಜ್ ನೀಡುವ ಹೋಂಡಾ ಸ್ಕೂಪಿ ಸ್ಕೂಟರ್

ಮತ್ತೊಂದು ಉತ್ತಮ ಫೀಚರ್ ಅಂದರೆ ಸುಧಾರಿತ ಐಡ್ಲಿಂಗ್ ಸ್ಟಾಪ್ ಸಿಸ್ಟಂ(ಐಎಸ್ಎಸ್) ಅದು 3 ಸೆಕೆಂಡುಗಳಿಗಿಂತ ಹೆಚ್ಚು ಕಾಲ ನಿಷ್ಕ್ರಿಯವಾಗಿದ್ದಾಗ ಎಂಜಿನ್ ಅನ್ನು ಆಫ್ ಮಾಡುತ್ತದೆ. ಹೊಸ ಸ್ಕೂಪಿ 4.2 ಲೀಟರ್ ಸಾಮರ್ಥ್ಯದ ದೊಡ್ಡ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.

ಬಿಡುಗಡೆಯಾಗಲಿದೆ 59 ಕಿ.ಮೀ ಮೈಲೇಜ್ ನೀಡುವ ಹೋಂಡಾ ಸ್ಕೂಪಿ ಸ್ಕೂಟರ್

ಹೊಸ ಹೋಂಡಾ ಸ್ಕೂಫಿ ಸ್ಕೂಟರ್ ಪ್ರತಿ ಲೀಟರ್‌ಗೆ 59 ಕಿ.ಮೀ ಮೈಲೇಜ್ ನೀಡುತ್ತದೆ. ಹೊಸ ಸ್ಕೂಪಿ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತದೆಯೇ ಎಂಬುದು ಖಚಿತವಾಗಿಲ್ಲ. ಅಲ್ಲದೇ ಹೋಂಡಾ ಕಂಪನಿಯು ಭಾರತದಲ್ಲಿ ಈಗಾಗಲೇ ತನ್ನ ಪೋರ್ಟ್ಫೋಲಿಯೊದಲ್ಲಿ ಹೆಚ್ಚು ಮಾರಾಟವಾದ ಆಕ್ಟಿವಾವನ್ನು ಹೊಂದಿದೆ. ಇದರಿಂದ ಸೀಮಿತ ಸಂಖ್ಯೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ.

Most Read Articles

Kannada
English summary
2021 Honda Scoopy 110cc Scooter Unveiled. Read In Kannada.
Story first published: Monday, November 16, 2020, 14:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X