ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಹಸ್ಕ್‌ವರ್ನಾ ಸ್ವಾರ್ಟ್‍ಪಿಲೆನ್ 200 ಬೈಕ್
ಬೈಕ್ ತಯಾರಕ ಕಂಪನಿಯಾದ ಹಸ್ಕ್‌ವರ್ನಾ ಈ ವರ್ಷದ ಆರಂಭದಲ್ಲಿ ಸ್ವಾರ್ಟ್‍ಪಿಲೆನ್ 250 ಹಾಗೂ ವಿಟ್‍ಪಿಲೆನ್ 250 ಬೈಕ್‍ಗಳನ್ನು ಭಾರತದಲ್ಲೊ ಬಿಡುಗಡೆಗೊಳಿಸಿತ್ತು. ಇದೀಗ ಹಸ್ಕ್‌ವರ್ನಾ ಕಂಪನಿಯು ಹೊಸ ಸ್ವಾರ್ಟ್‍ಪಿಲೆನ್ 200 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಇದರ ಭಾಗವಾಗಿ ಹಸ್ಕ್‌ವರ್ನಾ ಸ್ವಾರ್ಟ್‍ಪಿಲೆನ್ 200 ಬೈಕ್ ಈಗಾಗಲೇ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡಿಸಿದೆ. ಈ ಹೊಸಹಸ್ಕ್‌ವರ್ನಾ ಸ್ವಾರ್ಟ್‍ಪಿಲೆನ್ 200 ಬೈಕ್ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದು ಎಂದು ವರದಿಗಳಾಗಿದೆ. ಈ ಹೊಸ ಹಸ್ಕ್‌ವರ್ನಾ ಸ್ವಾರ್ಟ್‍ಪಿಲೆನ್ 200 ಬೈಕಿನಲ್ಲಿ ಕೆಟಿಎಂ ಡ್ಯೂಕ್ 200 ಬೈಕಿನಲ್ಲಿರುವಂತಹ 199 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿರಬಹುದು. ಈ ಎಂಜಿನ್ ಡ್ಯೂಕ್ ಬೈಕಿನಲ್ಲಿ 25 ಬಿಹೆಚ್‍ಪಿ ಪವರ್ ಮತ್ತು 19 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನು ಹಸ್ಕ್‌ವರ್ನಾ ಸ್ವಾರ್ಟ್‍ಪಿಲೆನ್ 200 ಬೈಕ್ ಕೂಡ ಇದೇ ಮಾದರಿಯಲ್ಲಿ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಹಸ್ಕ್‌ವರ್ನಾ ಸ್ವಾರ್ಟ್‍ಪಿಲೆನ್ 200 ಬೈಕಿನಲ್ಲಿ ಹಲವಾರು ಹೊಸ ಫೀಚರುಗಳನ್ನು ಹೊಂದಿರಲಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹಸ್ಕ್‌ವರ್ನಾ ಸ್ವಾರ್ಟ್‍ಪಿಲೆನ್ 200 ಬೈಕಿನಲ್ಲಿ ಆಲ್-ಎಲ್ಇಡಿ ಲೈಟಿಂಗ್ ಸಿಸ್ಟಂ, ಅಪ್ ಸೈಡ್-ಫೋರ್ಕ್ಸ್, ಡ್ಯುಯಲ್-ಚಾನೆಲ್ ಎಬಿಎಸ್(ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಇತರ ಫೀಚರುಗಳನ್ನು ಹೊಂದಿರಲಿದೆ.

ಈ ಬೈಕಿಗೆ ಸ್ಕ್ರ್ಯಾಂಬ್ಲರ್ ರೀತಿಯ ವಿನ್ಯಾಸವನ್ನು ನೀಡಲಾಗಿದೆ. ಮುಂಭಾಗದಲ್ಲಿ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿರುವ ಸರ್ಕ್ಯುಲರ್ ಹೆಡ್‌ಲ್ಯಾಂಪ್‍ಗಳಿವೆ. ಅದರ ಮೇಲೆ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಈ ಹೊಸ ಹಸ್ಕ್‌ವರ್ನಾ ಸ್ವಾರ್ಟ್‍ಪಿಲೆನ್ 200 ಬೈಕನ್ನು ಭಾರತದಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆ ಗೊಳಿಸಬಹುದು. ಬಜಾಜ್ ಡೋಮಿನಾರ್ ಬೈಕನ್ನು ಎಕ್ಸ್ ಶೋರೂಂ ಪ್ರಕಾರ ರೂ.1.60 ಲಕ್ಷಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಇದರಿಂದ ಈ ಹೊಸ ಹಸ್ಕ್‌ವರ್ನಾ ಸ್ವಾರ್ಟ್‍ಪಿಲೆನ್ 200 ಬೈಕನ್ನು ಎಕ್ಸ್ ಶೋರೂಂ ಪ್ರಕಾರ ರೂ.1.50 ಲಕ್ಷ ಬೆಲೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಂಡ ಸ್ವಾರ್ಟ್‌ಪಿಲೆನ್ 250, ವಿನ್ಯಾಸದಲ್ಲಿ ಸ್ವಾರ್ಟ್‌ಪಿಲೆನ್ 401 ಬೈಕ್ ಅನ್ನು ಹೋಲುತ್ತದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಫ್ಯೂಯಲ್ ಟ್ಯಾಂಕ್ ಮಸ್ಕುಲರ್ ಆಗಿದ್ದು, ದೊಡ್ಡದಾಗಿದ್ದರೆ, ಬೈಕಿನ ಹಿಂಭಾಗದ ತುದಿಯು ಚಿಕ್ಕದಾಗಿದೆ. ಸ್ವಾರ್ಟ್‌ಪಿಲೆನ್ 401 ಬೈಕ್ ವೈರ್ ಸ್ಪೋಕ್ ವ್ಹೀಲ್‌ಗಳನ್ನು ಹೊಂದಿದ್ದರೆ, 250 ಬೈಕ್ 8 ಸ್ಪೋಕ್ ಅಲಾಯ್ ವ್ಹೀಲ್‍ಗಳನ್ನು ಹೊಂದಿದೆ. ಈ ಬೈಕ್ ಸ್ಕ್ರ್ಯಾಂಬ್ಲರ್ ಸ್ಟೈಲಿಂಗ್ ಅನ್ನು ಹೆಚ್ಚಿಸುವ ಡ್ಯುಯಲ್ ಪರ್ಪಸ್ ಟಯರ್‍ಗಳನ್ನು ಹೊಂದಿದೆ.

ಹಸ್ಕ್‌ವರ್ನಾ ಸ್ವಾರ್ಟ್‍ಪಿಲೆನ್ 200 ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 43 ಎಂಎಂ ಇನವರ್ಟಡ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ. ಈ ಬೈಕಿನಲ್ಲಿ 320 ಎಂಎಂ ಫ್ರಂಟ್ ಮತ್ತು 230 ಎಂಎಂ ರಿಯರ್ ಡಿಸ್ಕ್ ಅನ್ನು ಡ್ಯುಯಲ್-ಚಾನೆಲ್ ಎಬಿಎಸ್ ಹೊಂದಿದೆ.

ಇನ್ನು ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಸ್ಪರ್ಧಾತ್ಮಕ ಬೆಲೆಯಲ್ಲಿ ಈ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಬಹುದು. ವಿಭಿನ್ನವಾದ ಕೆಫೆ ರೇಜರ್ ಬೈಕ್ ಆದ ವಿಟ್‍ಪಿಲೆನ್ 200 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿದೆ.


Click it and Unblock the Notifications








