ಬಿಎಸ್-6 ಕವಾಸಕಿ ನಿಂಜಾ 650, ಝಡ್650 ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಕವಾಸಕಿ ಕಂಪನಿಯು ತನ್ನ ಬಿಎಸ್-6 ನಿಂಜಾ 650 ಮತ್ತು ಝಡ್650 ಬೈಕುಗಳ ಖರೀದಿಗೆ ಬುಕ್ಕಿಂಗ್ ಅನ್ನು ಆರಂಭಿಸಿದೆ. ಕವಾಸಕಿ ಕಂಪನಿಯು ಶೀಘ್ರದಲ್ಲೇ ಈ ಹೊಸ ನಿಂಜಾ 650 ಮತ್ತು ಝಡ್650 ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಬಿಎಸ್-6 ಕವಾಸಕಿ ನಿಂಜಾ 650, ಝಡ್650 ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಈ ಹೊಸ ನಿಂಜಾ 650 ಮತ್ತು ಝಡ್650 ಬೈಕುಗಳು ಕಳೆದ ಏಪ್ರಿಲ್ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕರೋನಾ ವೈರಸ್ ಭೀತಿಯಿಂದ ಈ ಬೈಕಿನ ಬಿಡುಗಡೆಯನ್ನು ಮುಂದೂಡಲಾಗಿದೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾದ ನಿಂಜಾ 650 ಮತ್ತು ಝಡ್650 ಬೈಕುಗಳಿಗಾಗಿ ತನ್ನ ಆಧಿಕೃತ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ಅನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ.

ಬಿಎಸ್-6 ಕವಾಸಕಿ ನಿಂಜಾ 650, ಝಡ್650 ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಕವಾಸಕಿ ಕಂಪನಿಯು ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಹೊಸ ಝಡ್650 ಬೈಕನ್ನು ಅನಾವರಣಗೊಳಿಸಿದ್ದರು. ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋಶೋರೂಂ ಪ್ರಕಾರ ರೂ,6.25 ಲಕ್ಷದಿಂದ ರೂ.6.50 ಲಕ್ಷಗಳಾಗಿರಬಹುದು. ಇನ್ನು ನಿಂಜಾ 650 ಬೈಕನ್ನು ಈ ವರ್ಷದ ಜನವರಿ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಾಗಿತ್ತು ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋಶೋರೂಂ ಪ್ರಕಾರ ರೂ,6.65 ಲಕ್ಷದಿಂದ 6.79 ಲಕ್ಷಗಳಾಗಿದೆ.

MOST READ: 25 ಸಾವಿರ ಗಡಿ ದಾಟಿದ ಯಮಹಾ ಎಂಟಿ-15 ಬೈಕಿನ ಮಾರಾಟ

ಬಿಎಸ್-6 ಕವಾಸಕಿ ನಿಂಜಾ 650, ಝಡ್650 ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಝಡ್ 650 ಬೈಕಿನಲ್ಲಿ 649 ಸಿಸಿಯ ಲಿಕ್ವಿಡ್ ಕೂಲ್ಡ್ ಟ್ವಿನ್ ಬಿ‍ಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8,000 ಆರ್‍‍ಪಿ‍ಎಂನಲ್ಲಿ 68 ಬಿ‍ಹೆಚ್‍‍ಪಿ ಪವರ್ ಹಾಗೂ 6,700 ಆರ್‍‍ಪಿ‍ಎಂನಲ್ಲಿ 64 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಬಿಎಸ್-6 ಕವಾಸಕಿ ನಿಂಜಾ 650, ಝಡ್650 ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಈ ಬೈಕಿನಲ್ಲಿ ಎಲ್‍ಇ‍‍ಡಿ ಹೆಡ್‍‍ಲೈಟ್, 4.3 ಇಂಚಿನ ಟಿ‍ಎಫ್‍‍ಟಿ ಕಲರ್ ಇನ್ಸ್ ಟ್ರೂಮೆಂಟೆಷನ್, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಹಾಗೂ ಡನ್‍‍ಲಪ್ ಸ್ಪೋರ್ಟ್ಸ್ ಮ್ಯಾಕ್ಸ್ ರೋಡ್‍‍ಸ್ಪೋರ್ಟ್ ಟಯರ್‍‍ಗಳಿವೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಬಿಎಸ್-6 ಕವಾಸಕಿ ನಿಂಜಾ 650, ಝಡ್650 ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಈ ಬೈಕಿನಲ್ಲಿರುವ ಎಲ್‍ಇ‍‍ಡಿ ಹೆಡ್‍‍ಲೈಟ್ ಹಾಗೂ ಟಿಎಫ್‍‍ಟಿ ಇನ್ಸ್ ಟ್ರೂಮೆಂಟೆಷನ್ ಸ್ಕ್ರೀನ್‍‍ಗಳು ಈ ಬೈಕಿನ ಲುಕ್ ಅನ್ನು ಮತ್ತಷ್ಟು ಹೆಚ್ಚಿಸುತ್ತವೆ. ಈ ಬೈಕಿನಲ್ಲಿ ಕಡಿಮೆ ತೂಕದ ಚಾಸೀಸ್ ಹಾಗೂ ಆರಾಮದಾಯಕವಾದ ಸೀಟುಗಳನ್ನು ಅಳವಡಿಸಲಾಗಿದೆ.

ಬಿಎಸ್-6 ಕವಾಸಕಿ ನಿಂಜಾ 650, ಝಡ್650 ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಸಸ್ಪೆಂಷನ್‍ಗಳಿಗಾಗಿ ಈ ಬೈಕಿನಲ್ಲಿ ಮುಂಭಾಗದಲ್ಲಿ 41 ಎಂಎಂ‍‍ನ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍‍ಗಳಿವೆ. ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ 300 ಎಂಎಂನ ಪೆಟಲ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ 200 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿರಲಿದೆ.

MOST READ: ಏಪ್ರಿಲ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ಬಿಎಸ್-6 ಕವಾಸಕಿ ನಿಂಜಾ 650, ಝಡ್650 ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಇನ್ನು ಹೊಸ ನಿಂಜಾ 650 ಬೈಕಿನಲ್ಲಿ 646 ಸಿಸಿ ಪ್ಯಾರೆಲಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಿದ್ದಾರೆ ಈ ಎಂಜಿನ್ 8000 ಆರ್‌ಪಿಎಂನಲ್ಲಿ 66.4 ಬಿಹೆಚ್‌ಪಿ ಪವರ್ ಮತ್ತು 6700 ಆರ್‌ಪಿಎಂನಲ್ಲಿ 64 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಎಸ್-6 ಕವಾಸಕಿ ನಿಂಜಾ 650, ಝಡ್650 ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಈ ಎರಡು ಹೊಸ ಬೈಕುಗಳಲ್ಲಿ ಫಿಚರ್ಸ್ ಗಳು ಹೆಚ್ಚಾಗಿ ಒಂದೇ ಮಾದರಿಯಲ್ಲಿ ಇರಲಿದೆ. ಹೂಸ ನಿಂಜಾ 650 ಬೈಕ್ ಲೈಮ್ ಗ್ರೀನ್ ಎಬೊನಿ ಮತ್ತು ಪರ್ಲ್ ಫ್ಲಾಟ್ ಸ್ಟಾರ್‌ಡಸ್ಟ್ ವೈಟ್ ಎರಡು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಹೊಸ ಝಡ್650 ಬೈಕ್ ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಎಂಬ ಒಂದೇ ಬಣ್ಣದಲ್ಲಿ ಲಭ್ಯವಿರಲಿದೆ.

Most Read Articles

Kannada
English summary
Kawasaki Ninja 650 & Z650 Bookings Open. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X