ಬಿಡುಗಡೆಯಾಯ್ತು ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್

ಯಮಹಾ ಕಂಪನಿಯು ಎಕ್ಸ್‌ಎಸ್‌ಆರ್ 155 ರೆಟ್ರೊ-ಲುಕಿಂಗ್ ಬೈಕ್ ಅನ್ನು ಫಿಲಿಪೈನ್ಸ್‌ನಲ್ಲಿ ಬಿಡುಗಡೆಗೊಳಿಸಿದೆ. ಈ ಎಕ್ಸ್‌ಎಸ್‌ಆರ್ 155 ಮಾದರಿಯು ಯಮಹಾ ಸರಣಿಯಲ್ಲಿರುವ ಜನಪ್ರಿಯ ಬೈಕುಗಳಲ್ಲಿ ಒಂದಾಗಿದೆ.

ಬಿಡುಗಡೆಯಾಯ್ತು ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್

ಇನ್ನು ಯಮಹಾ ಕಂಪನಿಯು ರೆಟ್ರೊ ಲುಕ್ ಅನ್ನು ಹೊಂದಿರುವ ಈ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಕೊನೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಕರೋನಾ ಸೋಂಕಿನ ಭೀತಿಯಿಂದ ಈ ಬೈಕನ್ನು ಬಿಡುಗಡೆಗೊಳಿಸುವುದು ವಿಳಂಬವಾಗುತ್ತಿದೆ. ಎಕ್ಸ್‌ಎಸ್‌ಆರ್ 155 ಮಾದರಿಯು ಕಂಪನಿಯ ‘ಸ್ಪೋರ್ಟ್ ಹೆರಿಟೇಜ್' ಸರಣಿಯಲ್ಲಿ ವಿಶ್ವದಾದ್ಯಂತ ಮಾರಾಟವಾಗುವ ಅತ್ಯಂತ ಚಿಕ್ಕ ಬೈಕು ಆಗಿದೆ.

ಬಿಡುಗಡೆಯಾಯ್ತು ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್

ಈ ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್ ಕ್ಲಾಸಿಕ್-ರೆಟ್ರೊ ವಿನ್ಯಾಸ ಮತ್ತು ಆಧುನಿಕ ಸ್ಪರ್ಶವನ್ನು ನೀಡಿದೆ. ಈ ಬೈಕ್ ದುಂಡಗಿನ ಆಕಾರದ ಹೆಡ್‌ಲೈಟ್ ಮತ್ತು ವಿಭಿನ್ನ ಶೈಲಿಯ ಇಂಧನ ಟ್ಯಾಂಕ್ ಅನ್ನು ಹೊಂದಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಬಿಡುಗಡೆಯಾಯ್ತು ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್

ಇನ್ನು ಈ ಬೈಕಿನಲ್ಲಿ ವೃತ್ತಾಕಾರದ ಟೈಲ್-ಲೈಟ್, ಸಿಂಗಲ್-ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮತ್ತು ಸಿಂಗಲ್-ಪೀಸ್ ರಿಬ್ಬಡ್ ಸೀಟ್ ಅನ್ನು ಪಿಲಿಯನ್ ಗ್ರ್ಯಾಬ್ ಬೆಲ್ಟ್ ನೊಂದಿಗೆ ಮಧ್ಯದಲ್ಲಿ ಇರಿಸಲಾಗಿದೆ. ಇದು ಬೈಕಿನ ರೆಟ್ರೊ ಲುಕ್ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಬಿಡುಗಡೆಯಾಯ್ತು ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್

ಈ ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕಿನಲ್ಲಿನ ಸಿಂಗಲ್-ಪಾಡ್ ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸವಾರರಿಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ. ಇದರಲ್ಲಿ ಡಿಜಿಟಲ್ ಟ್ರಿಪ್ ಮೀಟರ್, ಫ್ಯೂಯಲ್ ಗೇಜ್, ಸ್ಪೀಡೋಮೀಟರ್, ಒಡಿಒ ಜೊತೆ ಗೇರ್ ಇಂಡಿಕೇಟರ್ ಮತ್ತು ಟ್ರಿಪ್ ಇಂಡಿಕೇಟರ್ ಅನ್ನು ಒಳಗೊಂಡಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಬಿಡುಗಡೆಯಾಯ್ತು ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್

ಈ ಯಮಹಾ ಎಕ್ಸ್‌ಎಸ್‌ಆರ್ 155 ಬೈಕಿನಲ್ಲಿ ಎಂಟಿ -15 ಮತ್ತು ಆರ್ 15ವಿ 3.0 ನಲ್ಲಿ ಅಳವಡಿಸುವರುವಂತಹ ಎಂಜಿನ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ವಿವಿಎ ತಂತ್ರಜ್ಞಾನದೊಂದಿಗೆ ಲಿಕ್ವಿಡ್-ಕೂಲ್ಡ್ ಸಿಂಗಲ್ ಸಿಲಿಂಡರ್ 155 ಸಿಸಿ ಎಂಜಿನ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್

ಈ ಎಂಜಿನ್ 18.9 ಬಿಹೆಚ್‍ಪಿ ಪವರ್ ಮತ್ತು 14.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಅಸಿಸ್ಟ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಬಿಡುಗಡೆಯಾಯ್ತು ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್

ಯಮಹಾ ಎಕ್ಸ್‌ಎಸ್‌ಆರ್ 155 ಸ್ಟೀಲ್-ಡೆಲ್ಟಾಬಾಕ್ಸ್ ಫ್ರೇಮ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಸಂಸ್ಪೆಕ್ಷನ್ ಗಾಗಿ ಮುಂಭಾಗದಲ್ಲಿ (ಯುಎಸ್‌ಡಿ) ಅಪ್‌ಸೈಡ್-ಡೌನ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್

ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ 282 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದ್ದಾರೆ. ಇದರೊಂದಿಗೆ ಅನ್ನು ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್

ಯಮಹಾ ಎಕ್ಸ್‌ಎಸ್‌ಆರ್ 155 ಬೈಕಿನಲ್ಲಿ ಕ್ಲಾಸಿಕ್-ರೆಟ್ರೊ ವಿನ್ಯಾಸ ಹೊಂದಿದೆ. ಇನ್ನು ಈ ಬೈಕ್ ಭಾರತದಲ್ಲಿ ಬಿಡುಗಡೆಯಾದ ಬಳಿಕ 150 ಸಿಸಿ ಸರಣಿಯಲ್ಲಿರುವ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
Read more on ಯಮಹಾ yamaha
English summary
Retro-Styled 2020 Yamaha XSR155 Launched In The Philippines. Read In Kannada.
Story first published: Monday, July 13, 2020, 20:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X