ದಸರಾ ಹಬ್ಬದಂದು 1,200 ಬೈಕುಗಳನ್ನು ವಿತರಿಸಿದ ರಾಯಲ್ ಎನ್‍ಫೀಲ್ಡ್

ಲಾಕ್‌ಡೌನ್ ಸಡಿಲಿಕೆ ಮಾಡಿದ ಬಳಿಕ ಚೆನ್ನೈ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ಮಾರಾಟದಲ್ಲಿ ಗಮನಾರ್ಹ ಚೇತರಿಕೆ ಕಂಡಿದೆ. ರಾಯಲ್ ಎನ್‌ಫೀಲ್ಡ್ ದಸರಾ ಹಬ್ಬದ ಸಂದರ್ಭದಲ್ಲಿ 1200 ಬೈಕುಗಳನ್ನು ಮುಂಬೈನ ಗ್ರಾಹಕರಿಗೆ ವಿತರಿಸಲಾಗಿದೆ.

ದಸರಾ ಹಬ್ಬದಂದು 1200 ಬೈಕುಗಳನ್ನು ವಿತರರಿಸಿದ ರಾಯಲ್ ಎನ್‍ಫೀಲ್ಡ್

ಒಂದೇ ದಿನದಲ್ಲಿ ಗ್ರಾಹಕರಿಗೆ ಭಾರೀ ಪ್ರಮಾಣದಲ್ಲಿ ಬೈಕುಗಳನ್ನು ರಾಯಲ್ ಎನ್‌ಫೀಲ್ಡ್ ವಿತರಿಸಲಾಗಿದೆ. ಮಹಾರಾಷ್ಟ್ರದ ಹಬ್ಬದ ಅವಧಿಯಲ್ಲಿ 3,700 ಬೈಕುಗಳನ್ನು ಬ್ರ್ಯಾಂಡ್ ಮಾರಾಟ ಮಾಡಿದೆ. ಇನ್ನು ಮುಂಬೈನಲ್ಲಿ ವಿತರಿಸಲಾದ ಬೈಕ್‌ಗಳು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಅನ್ನು ಒಳಗೊಂಡಿವೆ, ಇದು ಕಂಪನಿಯ ಜನಪ್ರಿಯ ಬೈಕ್ ಆಗಿ ಮುಂದುವರೆದಿದೆ. ಜೊತೆಗೆ ಬುಲೆಟ್ 350, ಹಿಮಾಲಯನ್ ಮತ್ತು 650 ಟ್ವಿನ್ಸ್ ಬೈಕುಗಳು ಕೂಡ ಒಳಗೊಂಡಿದೆ.

ದಸರಾ ಹಬ್ಬದಂದು 1200 ಬೈಕುಗಳನ್ನು ವಿತರರಿಸಿದ ರಾಯಲ್ ಎನ್‍ಫೀಲ್ಡ್

ಮಹಾರಾಷ್ಟ್ರದಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 92 ಮಳಿಗೆಗಳನ್ನು ಹೊಂದಿದೆ. ಇನ್ನು ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಗ್ರಾಹಕರಿಗೆ ಅನೇಕ ರೀತಿಯ ಸೇವೆ ಮತ್ತು ಸೌಕರ್ಯಗಳನ್ನು ಒದಗಿಸುತ್ತಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ದಸರಾ ಹಬ್ಬದಂದು 1200 ಬೈಕುಗಳನ್ನು ವಿತರರಿಸಿದ ರಾಯಲ್ ಎನ್‍ಫೀಲ್ಡ್

ಇದರಲ್ಲಿ ಸರ್ವಿಸ್ ಆನ್ ವ್ಹೀಲ್, ಸಂಪರ್ಕವಿಲ್ಲದ ಖರೀದಿ ಮತ್ತು ಸೇವೆ, ಹೋಂ ಟೆಸ್ಟ್ ರೈಡ್ಸ್, ಇ-ಪಾವತಿ ಆಯ್ಕೆಗಳು ಮತ್ತು ಸೇವಾ ಸೌಲಭ್ಯಗಳು ಒಳಗೊಂಡಿದೆ. ರಾಯಲ್ ಎನ್‌ಫೀಲ್ಡ್ ಮುಂಬೈನಲ್ಲಿ ಮಾತ್ರ 262 ಸರ್ವಿಸ್ ಆನ್ ವ್ಹೀಲ್ಸ್ ಬೈಕುಗಳನ್ನು ನಿಯೋಜಿಸಿದೆ,

ದಸರಾ ಹಬ್ಬದಂದು 1200 ಬೈಕುಗಳನ್ನು ವಿತರರಿಸಿದ ರಾಯಲ್ ಎನ್‍ಫೀಲ್ಡ್

ಚೆನ್ನೈ ಮೂಲದ ಬೈಕು ತಯಾರಕರು ತನ್ನ ಡಿಜಿಟಲ್ ಸೇವೆಗಳನ್ನು ಆರಂಭಿಸುವುದರಿಂದ ಹೆಚ್ಚಿನ ಸಂಖ್ಯೆಯ ಬುಕ್ಕಿಂಗ್ ಪಡೆಯಲು ಕಾರಣವಾಯ್ತು ಎಂದು ಹೇಳಬಹುದು. ಹಬ್ಬದ ಸೀಸನ್ ನಲ್ಲಿ ರಾಯಲ್ ಎನ್‌ಫೀಲ್ಡ್ ಬೈಕುಗಳ ಮಾರಾಟದಲ್ಲಿ ಉತ್ತಮ ಬೆಳವಣೆಗೆಯನ್ನು ಕಂಡಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ದಸರಾ ಹಬ್ಬದಂದು 1200 ಬೈಕುಗಳನ್ನು ವಿತರರಿಸಿದ ರಾಯಲ್ ಎನ್‍ಫೀಲ್ಡ್

ರಾಯಲ್ ಎನ್‍ಫೀಲ್ಡ್ ತನ್ನ ಮೆಟಿಯೋರ್ 350 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಮಾದರಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಬೈಕುಗಳಲ್ಲಿ ಒಂದಾಗಿದೆ.

ದಸರಾ ಹಬ್ಬದಂದು 1200 ಬೈಕುಗಳನ್ನು ವಿತರರಿಸಿದ ರಾಯಲ್ ಎನ್‍ಫೀಲ್ಡ್

ಈ ಹಿಂದೆ ಹೊಸ ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಬೈಕ್ ಇದೇ ತಿಂಗಳು ಬಿಡುಗಡೆಯಾಗಲಿದೆ ಎಂದು ವರದಿಗಳು ಪ್ರಕಟವಾಗಿತ್ತು. ಆದರೆ ಹೊಸ ವರದಿಗಳ ಪ್ರಕಾರ, ಹೊಸ ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಬೈಕ್ ಬಿಡುಗಡೆಯು ಮತ್ತೆ ಮುಂದೂಡಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ದಸರಾ ಹಬ್ಬದಂದು 1200 ಬೈಕುಗಳನ್ನು ವಿತರರಿಸಿದ ರಾಯಲ್ ಎನ್‍ಫೀಲ್ಡ್

ಹೊಸ ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಬೈಕ್ ದೀಪಾವಳಿ ಹಬ್ಬದ ವೇಳೆಯಲ್ಲಿ ಬಿಡುಗಡೆಯಾಗುವುದಿಲ್ಲ. ದೀಪಾವಳಿ ಹಬ್ಬದ ಶುಭ ಸಮಯದಲ್ಲಿ ಬಿಡುಗಡೆಯಾಗದಿರುವುದು ರಾಯಲ್ ಎನ್‍ಫೀಲ್ಡ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಹೊಸ ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.65 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.

ದಸರಾ ಹಬ್ಬದಂದು 1200 ಬೈಕುಗಳನ್ನು ವಿತರರಿಸಿದ ರಾಯಲ್ ಎನ್‍ಫೀಲ್ಡ್

ರಾಯಲ್ ಎನ್‍ಫೀಲ್ಡ್ ಯುವಕರ ಕನಸಿನ ಬೈಕ್. ರಾಯಲ್ ಎನ್‍ಫೀಲ್ಡ್ ತನ್ನ ವಿಶಿಷ್ಟವಾದ ಲುಕ್ ಮತ್ತು ಆಕರ್ಷಕ ವಿನ್ಯಾಸದಿಂದ ಎಲ್ಲರ ಗಮನಸೆಳೆದ ಬೈಕ್. ಆರೇಳು ದಶಕಗಳಿಂದಲೂ ಅದೇ ಕ್ರೇಜ್‌, ಅದೇ ಟ್ರೆಂಡ್‌ ಉಳಿಸಿಕೊಂಡು ಬಂದಿರುವುದು ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳ ಹೆಗ್ಗಳಿಕೆ.

Most Read Articles

Kannada
English summary
Royal Enfield Delivers 1200 Motorcycles In A Single Day For Dussehra In Mumbai. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X