ಹೊಸ ಬಗೆಯ ರೇಸಿನಲ್ಲಿ ಪಾಲ್ಗೊಳ್ಳಲಿದೆ ರಾಯಲ್ ಎನ್‌ಫೀಲ್ಡ್‌ನ ಈ ಬೈಕ್

ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಹಲವು ದೇಶಗಳಲ್ಲಿ ಜನಪ್ರಿಯವಾಗುತ್ತಿವೆ. ರಾಯಲ್ ಎನ್‌ಫೀಲ್ಡ್‌ನ ಇಂಟರ್‌ಸೆಪ್ಟರ್ 650 ಬೈಕ್ ಇಂಗ್ಲೆಂಡಿನಲ್ಲಿ ಹೆಚ್ಚು ಮಾರಾಟವಾದ ಬೈಕ್ ಆಗಿ ಮಾರ್ಪಟ್ಟಿದೆ ಎಂದು ಇತ್ತೀಚೆಗಷ್ಟೇ ಕಂಪನಿಯು ಹೇಳಿತ್ತು.

ಹೊಸ ಬಗೆಯ ರೇಸಿನಲ್ಲಿ ಪಾಲ್ಗೊಳ್ಳಲಿದೆ ರಾಯಲ್ ಎನ್‌ಫೀಲ್ಡ್‌ನ ಈ ಬೈಕ್

ರಾಯಲ್ ಎನ್‌ಫೀಲ್ಡ್ ಪ್ರಪಂಚದಲ್ಲಿರುವ ಅತ್ಯಂತ ಹಳೆಯ ಬೈಕ್ ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ಈಗ ರಾಯಲ್ ಎನ್‌ಫೀಲ್ಡ್ ಅಮೆರಿಕಾದ ಮೋಟಾರ್ ಸ್ಪೋರ್ಟ್ಸ್ ಶೋನಲ್ಲಿ ಭಾಗವಹಿಸುವ ಮೂಲಕ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುತ್ತಿದೆ. 2020ರ ಆಗಸ್ಟ್ ತಿಂಗಳಿನಲ್ಲಿ ಅಮೆರಿಕಾದಲ್ಲಿ ನಡೆಯಲಿರುವ ಅಮೆರಿಕನ್ ಫ್ಲಾಟ್ ಟ್ರ್ಯಾಕ್ ರೇಸ್ ನಲ್ಲಿ ಕಂಪನಿಯ ಬೈಕುಗಳು ಪಾಲ್ಗೊಳ್ಳುತ್ತಿವೆ.

ಹೊಸ ಬಗೆಯ ರೇಸಿನಲ್ಲಿ ಪಾಲ್ಗೊಳ್ಳಲಿದೆ ರಾಯಲ್ ಎನ್‌ಫೀಲ್ಡ್‌ನ ಈ ಬೈಕ್

ರಾಯಲ್ ಎನ್‌ಫೀಲ್ಡ್ ಕಂಪನಿಯ ಆಫ್ ರೋಡ್ ಬೈಕ್ ಆದ ಹಿಮಾಲಯನ್ ಈ ರೇಸ್ ಟ್ರ್ಯಾಕ್‌ನಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ಆದರೆ ಈ ಬೈಕ್ ಭಾರತದಲ್ಲಿ ಮಾರಾಟವಾಗುವ ಹಿಮಾಲಯನ್ ಬೈಕಿಗಿಂತ ವಿಭಿನ್ನವಾಗಿರಲಿದೆ. ರೇಸ್ ಟ್ರ್ಯಾಕ್ ಗಾಗಿ ಹಿಮಾಲಯನ್ ಬೈಕ್ ಅನ್ನು ಮಾಡಿಫೈಗೊಳಿಸಲಾಗಿದೆ.

MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ಹೊಸ ಬಗೆಯ ರೇಸಿನಲ್ಲಿ ಪಾಲ್ಗೊಳ್ಳಲಿದೆ ರಾಯಲ್ ಎನ್‌ಫೀಲ್ಡ್‌ನ ಈ ಬೈಕ್

ಈ ಬೈಕಿಗೆ ರಾಯಲ್ ಎನ್‌ಫೀಲ್ಡ್ ಎಫ್‌ಟಿ 411 ಎಂಬ ಹೆಸರನ್ನಿಡಲಾಗಿದೆ. ಫ್ಲಾಟ್ ಟ್ರ್ಯಾಕ್ ರೇಸ್ ಬೈಕ್ ಸಾಮಾನ್ಯ ಬೈಕಿಗಿಂತ ಭಿನ್ನವಾಗಿದೆ. ಈ ಸ್ಪರ್ಧೆಯಲ್ಲಿ ಬೈಕ್ ಸ್ಮೂಥ್ ಟ್ರ್ಯಾಕಿಗೆ ಬದಲು ರಫ್ ಟ್ರ್ಯಾಕಿನಲ್ಲಿ ಚಲಿಸಲಿದೆ. ಬೈಕ್ ಸವಾರನು ತನ್ನ ಬೈಕ್‌ ಅನ್ನು ಟಿಲ್ಟ್ ಮಾಡಿ ಡಯಾಗ್ನಲ್ ಆಗಿ ಚಲಾಯಿಸಬೇಕಾಗುತ್ತದೆ.

ಹೊಸ ಬಗೆಯ ರೇಸಿನಲ್ಲಿ ಪಾಲ್ಗೊಳ್ಳಲಿದೆ ರಾಯಲ್ ಎನ್‌ಫೀಲ್ಡ್‌ನ ಈ ಬೈಕ್

ಈ ಸ್ಲೈಡ್ ರೇಸ್ ಅನ್ನು 2019ರಲ್ಲಿ ನಮ್ಮ ಬೆಂಗಳೂರಿನಲ್ಲಿಯೂ ಆಯೋಜಿಸಲಾಗಿತ್ತು. ಆದರೆ ಅಮೆರಿಕಾದಲ್ಲಿ ನಡೆಯಲಿರುವ ಈ ಬೈಕ್ ರೇಸ್ ವಿಭಿನ್ನವಾಗಿರಲಿದೆ. ಈ ರೇಸಿಗೆ ವಿಭಿನ್ನ ಚಾಲನಾ ಕೌಶಲ್ಯಗಳು ಬೇಕಾಗುತ್ತವೆ. ಭಾರತದಲ್ಲಿ ಈ ರೀತಿಯ ಬೈಕ್ ರೇಸ್‌ಗಳನ್ನು ವೀಕ್ಷಿಸುವವರ ಸಂಖ್ಯೆ ತೀರಾ ಕಡಿಮೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಹೊಸ ಬಗೆಯ ರೇಸಿನಲ್ಲಿ ಪಾಲ್ಗೊಳ್ಳಲಿದೆ ರಾಯಲ್ ಎನ್‌ಫೀಲ್ಡ್‌ನ ಈ ಬೈಕ್

ಸ್ಲೈಡ್ ಟ್ರ್ಯಾಕ್ ರೇಸ್ ಗಾಗಿಯೇ ಹಿಮಾಲಯನ್ ಬೈಕ್ ಹೆಚ್ಚಿನ ಪ್ರಮಾಣದಲ್ಲಿ ಮಾಡಿಫೈಗೊಳಿಸಲಾಗಿದೆ. ಬೈಕ್ ಟ್ರ್ಯಾಕ್ ನಲ್ಲಿ ವೇಗವಾಗಿ ಚಲಿಸಲಿ ಎಂಬ ಕಾರಣಕ್ಕೆ ಬೈಕಿನ ತೂಕವನ್ನು ಕಡಿಮೆಗೊಳಿಸಲಾಗಿದ್ದು, ಹೆಚ್ಚು ತೂಕವಿದ್ದ ಕೆಲವು ಬಿಡಿ ಭಾಗಗಳನ್ನು ಕಡಿಮೆ ತೂಕದ ಬಿಡಿಭಾಗಗಳೊಂದಿಗೆ ಬದಲಿಸಲಾಗಿದೆ.

ಹೊಸ ಬಗೆಯ ರೇಸಿನಲ್ಲಿ ಪಾಲ್ಗೊಳ್ಳಲಿದೆ ರಾಯಲ್ ಎನ್‌ಫೀಲ್ಡ್‌ನ ಈ ಬೈಕ್

ರೇಸಿನ ನಿಯಮಗಳ ಪ್ರಕಾರ ಬೈಕಿನ ಮುಂಭಾಗದ ಬ್ರೇಕ್‌ಗಳನ್ನು ತೆಗೆದುಹಾಕಲಾಗಿದೆ. ಜೊತೆಗೆ ಮುಂಭಾಗ ಹಾಗೂ ಹಿಂಭಾಗದ ಟಯರ್‌ಗಳ ಮಡ್‌ಗಾರ್ಡ್‌ಗಳನ್ನು ತೆಗೆದುಹಾಕಲಾಗಿದೆ. ಬೈಕ್‌ನಲ್ಲಿದ್ದ ಸೈಡ್-ಮೌಂಟೆಡ್ ಸೈಲೆನ್ಸರ್ ಅನ್ನು ಚಿಕ್ಕದಾಗಿಸಿ ಹಿಂಭಾಗದ ಮಡ್‌ಗಾರ್ಡ್ ಒಳಗೆ ಅಳವಡಿಸಲಾಗಿದೆ. ಈ ಹೊಸ ರೀತಿಯ ರೇಸಿನಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

Most Read Articles

Kannada
English summary
Royal Enfield Himalayan to participate in flat track racing in USA. Read in Kannada.
Story first published: Friday, July 17, 2020, 13:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X