ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಗೊಂಡ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಕ್ರೂಸರ್ ಬೈಕ್

ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಹೊಚ್ಚ ಹೊಸ ಮಿಟಿಯೊರ್ 350 ಕ್ರೂಸರ್ ಬೈಕ್ ಮಾದರಿಯನ್ನು ಇಂದು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾರಾಟಕ್ಕೆ ನಮ್ಮ ಬೆಂಗಳೂರಿನಲ್ಲೂ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಗೊಂಡ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350

ಬೆಂಗಳೂರಿನ ಕಲ್ಯಾಣನಗರದಲ್ಲಿರುವ ಸಿವಿಎಸ್ ಶೋರೂಂನಲ್ಲಿ ಹೊಸ ಬೈಕ್ ಅನಾವರಣಗೊಳಿಸುವ ಮೂಲಕ ಅಧಿಕೃತವಾಗಿ ಮಾರಾಟಕ್ಕೆ ಚಾಲನೆ ನೀಡಲಾಗಿದ್ದು, ಹೊಸ ಬೈಕ್ ಮಾದರಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳೊಂದಿಗೆ ಪ್ರಮುಖ ಮೂರು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದೆ. ತಾಂತ್ರಿಕವಾಗಿ ಥಂಡರ್‌ಬರ್ಡ್ ಎಕ್ಸ್ ಮಾದರಿಗಿಂತಲೂ ಸಾಕಷ್ಟು ವಿಭಿನ್ನತೆಗಳನ್ನು ಹೊಂದಿರುವ ಹೊಸ ಮಿಟಿಯೊರ್ 350 ಬೈಕ್ ಮಾದರಿಯು ಫೈರ್‌ಬಾಲ್, ಸ್ಟೆಲ್ಲಾರ್ ಮತ್ತು ಸೂಪರ್‌ನೊವಾ ಎಂಬ ಮೂರು ವೆರಿಯೆಂಟ್‌ಗಳನ್ನು ಹೊಂದಿದೆ.

ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಗೊಂಡ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350

ಥಂಡರ್‌ಬರ್ಡ್ ಎಕ್ಸ್ ಬೈಕ್ ಮಾರಾಟ ಸ್ಥಗಿತಗೊಳಿಸಿದ ನಂತರ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಪ್ಲ್ಯಾಟ್‌ಫಾರ್ಮ್ ಮೇಲೆ ಅಭಿವೃದ್ದಿಗೊಳಿಸಲಾದ ಮಿಟಿಯೊರ್ 350 ಬೈಕ್ ಮಾದರಿಯನ್ನು ಬಿಡುಗಡೆ ಮಾಡಲಾಗಿದೆ.

ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಗೊಂಡ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350

ಬೆಂಗಳೂರಿನಲ್ಲಿ ಹೊಸ ಮಿಟಿಯೊರ್ 350 ಬೈಕ್ ಮಾದರಿಯು ಆರಂಭಿಕವಾಗಿ ಆನ್‌ರೋಡ್ ಪ್ರಕಾರ ರೂ.2.18 ಲಕ್ಷ (ಫೈರ್‌ಬಾಲ್), ರೂ. 2.36 ಲಕ್ಷ (ಸ್ಟೆಲ್ಲಾರ್) ಮತ್ತು ಹೈ ಎಂಡ್ ಮಾದರಿಯಾದ ಸೂಪರ್‌ನೊವಾ ಮಾದರಿಯು ರೂ. 2.25 ಲಕ್ಷ ಬೆಲೆ ಹೊಂದಿದೆ.

ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಗೊಂಡ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350

ಮಿಟಿಯೊರ್ 350 ಆರಂಭಿಕ ಮಾದರಿಯಾದ ಫೈರ್‌ಬಾಲ್‌ನಲ್ಲಿ ಬ್ಲ್ಯಾಕ್ ಔಟ್ ಕಾಂಪೊನೆಟ್ಸ್, ಸಿಂಗಲ್ ಟೋನ್ ಗ್ರಾಫಿಕ್ಸ್ ನೊಂದಿಗೆ ಫ್ಯೂಯಲ್ ಟ್ಯಾಂಕ್, ಬ್ಲ್ಯಾಕ್ ಔಟ್ ಎಂಜಿನ್ ಮತ್ತು ಕಲರ್ ರಿಮ್ ಟೇಪ್ ಅಳವಡಿಸಲಾಗಿದ್ದು, ಎರಡನೇ ಮಾದರಿಯಾದ ಸ್ಟೆಲ್ಲಾರ್ ರೂಪಾಂತರದಲ್ಲಿ ಬ್ಯಾಡ್ಜ್‌ಗಳು, ಕ್ರೋಮ್ ಎಕ್ಸಾಸ್ಟ್, ಕ್ರೋಮ್ ಹ್ಯಾಂಡಲ್‌ಬಾರ್ ಮತ್ತು ಕ್ರೋಮ್ ಇಎಫ್‌ಐ ಕವರ್ ಪಡೆದುಕೊಂಡಿದ್ದು, ಇದರಲ್ಲಿ ಬ್ಯಾಕ್ ರೆಸ್ಟ್ ಸಹ ಒಳಗೂಂಡಿದೆ.

ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಗೊಂಡ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350

ಹೈ ಎಂಡ್ ಮಾದರಿಯಾದ ಸೂಪರ್‌ನೊವಾದಲ್ಲಿ ಡ್ಯುಯಲ್-ಟೋನ್ ಬಣ್ಣದ ಆಯ್ಕೆಯನ್ನು ಹೊಂದಿದ್ದು, ಇದು ಪ್ರೀಮಿಯಂ ಸೀಟ್ ಫಿನಿಶಿಂಗ್, ವಿಂಡ್‌ಸ್ಕ್ರೀನ್ ಮತ್ತು ಕ್ರೋಮ್ ಇಂಡಿಕೇಟರ್ ಸಹ ಹೊಂದಿದೆ. ಜೊತೆಗೆ ಹೊಸ ಬೈಕಿನಲ್ಲಿ ಟಿಪ್ಲರ್ ಸ್ಕ್ರೀನ್ ಒಳಗೊಂಡಿರುವ ಟರ್ನ್-ಬೈ-ಟರ್ನ್ ಗೂಗಲ್ ನ್ಯಾವಿಗೇಷನ್, ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದಾದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಪಡೆದುಕೊಂಡಿದೆ.

ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಗೊಂಡ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350

ಹಾಗೆಯೇ ಡಬಲ್ ಡೌನ್‌ಟ್ಯೂಬ್ ಕ್ರೆಡಲ್ ಫ್ರೇಮ್ ಮೇಲೆ ಅಭಿವೃದ್ದಿಗೊಂಡಿರುವ ಹೊಸ ಬೈಕ್ ಮಾದರಿಯು ಥಂಡರ್‌ಬರ್ಡ್ ಮಾದರಿಗಿಂತಲೂ ಹೆಚ್ಚು ಅರಾಮದಾಯಕ ರೈಡಿಂಗ್ ಒದಗಿಸಲಿದ್ದು, ಮುಂಭಾಗದಲ್ಲಿ 41-ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ 6 ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಟ್ವಿನ್ ಶಾಕ್‌ ಅಬ್ಸಾರ್ಬರ್‌ ನೀಡಲಾಗಿದೆ.

ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಗೊಂಡ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350

ಹೊಸ ಬೈಕಿನಲ್ಲಿ ಮತ್ತೊಂದು ಪ್ರಮುಖ ಬದಲಾವಣೆ ಎಂದರೆ ಥಂಡರ್‌ಬರ್ಡ್ ಎಕ್ಸ್ ಮಾದರಿಗಿಂತಲೂ 6 ಕೆ.ಜಿ ಕಡಿಮೆ ತೂಕ ಹೊಂದಿರುವ ಹೊಸ ಮಿಟಿಯೊರ್ 350 ಬೈಕ್ ಮಾದರಿಯು 1,400-ಎಂಎಂ ವೀಲ್ಹ್‌ಬೆಸ್, 170-ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆದುಕೊಂಡಿದೆ.

ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಗೊಂಡ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಮಿಟಿಯೊರ್ 350 ಬೈಕ್ ಮಾದರಿಯು ಹೊಸದಾಗಿ ಅಭಿವೃದ್ದಿಗೊಳಿಸಲಾದ ಜೆ-ಸೀರಿಸ್ ಮಾದರಿಯ 349-ಸಿಸಿ ಫ್ಯೂಲ್ ಇಂಜೆಕ್ಷೆಡ್ ಸಿಂಗಲ್ ಸಿಲಿಂಡರ್ ಹೊಂದಿದ್ದು, 5-ಸ್ಪೀಡ್ ಗೇ‌ರ್‌ಬಾಕ್ಸ್‌ನೊಂದಿಗೆ 20.2-ಬಿಎಚ್‌ಪಿ ಮತ್ತು 27-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಗೊಂಡ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350

ಈ ಮೂಲಕ ಕ್ಲಾಸಿಕ್ ಬೈಕ್ ಖರೀದಿದಾರರನ್ನು ತನ್ನದೆಯಾದ ವೈಶಿಷ್ಟ್ಯತೆಗಳೊಂದಿಗೆ ಗಮನಸೆಳೆಯಲಿರುವ ಮಿಟಿಯೊರ್ 350 ಬೈಕ್ ಮಾದರಿಯು ಇತ್ತೀಚೆಗೆ ಬಿಡುಗಡೆಯಾಗಿರುವ ಹಲವು ಕ್ಲಾಸಿಕ್ ಬೈಕ್ ಮಾದರಿಗಳಿಗೆ ಪೈಪೋಟಿ ನೀಡಲಿದ್ದು, ಹೊಸ ಬೈಕ್ ಖರೀದಿಗಾಗಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಇಂದಿನಿಂದಲೇ ಬುಕ್ಕಿಂಗ್ ಆರಂಭಿಸುವ ಮೂಲಕ ಹೊಸ ಬೈಕ್ ಖರೀದಿ ಮೇಲೆ 3 ವರ್ಷಗಳ ವಾರಂಟಿ ನೀಡುತ್ತಿದೆ.

Most Read Articles

Kannada
English summary
Royal Enfield Meteor 350 Launched In Bengaluru. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X