Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಹೊಸ ರಾಯಲ್ ಎನ್‍ಫೀಲ್ಡ್ ಬೈಕುಗಳು
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ತನ್ನ ಹೊಸ ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ರಾಯಲ್ ಎನ್‍ಫೀಲ್ಡ್ ಕಂಪನಿಯು ಒಂದೇ ಬಾರಿ ಹಲವು ಮಾದರಿಗಳನ್ನು ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದೆ.

ಹೊಸ ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಬೈಕಿನ ಜೊತೆ ಹಲವು ಹೊಸ ಮಾದರಿಗಳು ಸ್ಪಾಟ್ ಟೆಸ್ಟ್ ಅನ್ನು ನಡೆಸುತ್ತಿರುವುದನ್ನು ಯೂಟ್ಯೂಬ್ ವೀಡಿಯೋ ಒಂದು ಬಹಿರಂಗಪಡಿಸಿದೆ. ಇದರಲ್ಲಿ ಹೊಸ ಮೆಟಿಯೋರ್ 350 ಜೊತೆ ಹೊಸ ಇನ್ನೊಂದು 350 ಸಿಸಿಯ ಕ್ಲಾಸಿಕ್ ಮಾದರಿಯು ಕಾಣಿಸಿಕೊಂಡಿದೆ. ಇದರ ಜೊತೆಯಲ್ಲಿ ಶೆರ್ಪಾ ಅಥವಾ ಹಂಟರ್ ಎಂಬ ಇನ್ನೊಂದು ಹೊಸ ಮಾದರಿಯು ಕೂಡ ಸ್ಪಾಟ್ ಟೆಸ್ಟ್ ನಡೆಸುತ್ತಿರುವುದು ವೀಡಿಯೋದಲ್ಲಿ ಕಾಣಿಸಿಕೊಂಡಿದೆ.

ವೀಡಿಯೋದ ಕೊನೆಯಲ್ಲಿ 650ಸಿಸಿ ಬೈಕನ್ನು ಕೂಡ ಕಾಣಬಹುದಾಗಿದೆ. ಈ 650ಸಿಸಿಯ ಬೈಕ್ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಮಾದರಿಯಂತೆ ಕಾಣುತ್ತದೆ. ಆದರೆ ಇನ್ನು ಯಾವ ಮಾದರಿ ಎಂಬುವುದು ಸ್ಪಷ್ಟವಾಗಿಲ್ಲ.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಮೆಟಿಯೋರ್ 350 ಬೈಕ್ ಭಾರತದಲ್ಲಿ 2020ರ ಸೆಪ್ಟಂಬರ್ ತಿಂಗಳಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಹೊಸ ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.65 ಲಕ್ಷಗಳಾಗಿರಲಿದೆ ಎಂದು ನಿರೀಕ್ಷಿಸುತ್ತೇವೆ.

ಈ ಹೊಸ ಬೈಕ್ ಫೈರ್‌ಬಾಲ್, ಸ್ಟೆಲ್ಲಾರ್ ಮತ್ತು ಸೂಪರ್‌ನೊವಾ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಈ ಬೈಕಿನಲ್ಲಿ ಎರಡು ಡಿಸ್‌ಪ್ಲೇಯನ್ನು ಹೊಂದಿರುವ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರಲಿದೆ. ಈ ಡಿಜಿಟಲ್ ಕ್ಲಸ್ಟರ್ ಅನ್ನು ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದಾಗಿದೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಇನ್ನು ಈ ಹೊಸ ಬೈಕ್, ಫೈರ್‌ಬಾಲ್ ಯೆಲ್ಲೋ, ಫೈರ್‌ಬಾಲ್ ರೆಡ್, ಸ್ಟೆಲ್ಲಾರ್ ರೆಡ್ ಮೆಟಾಲಿಕ್, ಸ್ಟೆಲ್ಲಾರ್ ಬ್ಲ್ಯಾಕ್ ಮ್ಯಾಟ್, ಸ್ಟೆಲ್ಲಾರ್ ಬ್ಲೂ ಮೆಟಾಲಿಕ್, ಸೂಪರ್‌ನೊವಾ ಬ್ರೌನ್ ಬ್ರೌನ್ ಡ್ಯುಯಲ್-ಟೋನ್ ಮತ್ತು ಸೂಪರ್‌ನೊವಾ ಬ್ಲೂ ಡ್ಯುಯಲ್-ಟೋನ್ ಎಂಬ ಏಳು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ.

ವೀಡಿಯೋದಲ್ಲಿರುವ ಹೊಸ ತಲೆಮಾರಿನ ಕ್ಲಾಸಿಕ್ 350 ಬೈಕ್ ಮೆಟಿಯೋರ್ 350 ಮಾದರಿಯ ಅದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದರಿಂದ ಎರಡು ಮಾದರಿಯಲ್ಲಿ ಒಂದೇ ಮಾದರಿಯ ಎಂಜಿನ್ ಅನ್ನು ಹೊಂದಿರಬಹುದು ಎಂದು ನಿರೀಕ್ಷಿಸುತ್ತೇವೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್
ಇನ್ನು ಒಂದು ಬೈಕ್ ಶೆರ್ಪಾ ಅಥವಾ ಹಂಟರ್ ಎಂಬ ಮಾದರಿಯಾಗಿರಬಹುದು ಅಂದಾಜಿಸಲಾಗಿದೆ. ಇದು ಬ್ರ್ಯಾಂಡ್‌ನ ಹೊಸ ಎಂಟ್ರಿ ಲೆವೆಲ್ ಬೈಕುಗಳಾಗಿರಬಹುದು ಎಂದು ಕೆಲವು ವರದಿಗಳು ಪ್ರಕಟವಾಗಿದೆ. ಈ ಮಾದರಿಯನ್ನು ದೇಶದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಡೆಸಲಾಗಿದೆ.

ಇದರೊಂದಿಗೆ ಹೊಸ ತಲೆಮಾರಿನ ಕಾಂಟಿನೆಂಟಲ್ ಜಿಟಿ 650 ಬೈಕ್ ಕೂಡ ಕಾಣಿಸಿಕೊಂಡಿದೆ. ಈ ಹೊಸ ಕಾಂಟಿನೆಂಟಲ್ ಜಿಟಿ 650 ಬೈಕನ್ನು ಕೆಲವು ನವೀಕರಣಗಳನ್ನು ನಡೆಸಿಸಬಹುದು. ರಾಯಲ್ ಎನ್‍ಫೀಲ್ಡ್ ಕಂಪನಿಯು ಮೆಟಿಯೋರ್ 350 ಬೈಕನ್ನು ಹೊರತುಪಡಿಸಿ ಇತರ ಮಾದರಿಗಳ ಬಗ್ಗೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ.