ಆಗಸ್ಟ್ ತಿಂಗಳಿನಲ್ಲಿ ಭರ್ಜರಿ ಏರಿಕೆ ಕಂಡ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ

ರಾಯಲ್ ಎನ್‌ಫೀಲ್ಡ್ ಕಂಪನಿಯ ಮಾರಾಟವು ಚೇತರಿಸಿಕೊಳ್ಳುತ್ತಿದೆ. ಜುಲೈ ತಿಂಗಳಿಗೆ ಹೊಲಿಸಿದರೆ ರಾಯಲ್ ಎನ್‌ಫೀಲ್ಡ್ ಕಂಪನಿಯ ಆಗಸ್ಟ್ ತಿಂಗಳ ಮಾರಾಟವು 25.43%ನಷ್ಟು ಏರಿಕೆ ಕಂಡಿದೆ. ಜುಲೈ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯ 37,925 ಯುನಿಟ್ ವಾಹನಗಳನ್ನು ಮಾರಾಟ ಮಾಡಲಾಗಿತ್ತು.

ಆಗಸ್ಟ್ ತಿಂಗಳಿನಲ್ಲಿ ಭರ್ಜರಿ ಏರಿಕೆ ಕಂಡ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ

ಆಗಸ್ಟ್‌ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಒಟ್ಟು 50,144 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. 2019ರ ಆಗಸ್ಟ್‌ ತಿಂಗಳಿನಲ್ಲಿ 52,904 ಯುನಿಟ್‌ ವಾಹನಗಳನ್ನು ಮಾರಾಟ ಮಾಡಲಾಗಿತ್ತು. ದೇಶಿಯ ಮಾರುಕಟ್ಟೆಯಲ್ಲಿನ ಮಾರಾಟವು 2%ನಷ್ಟು ಕುಸಿದಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 48,751 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ವರ್ಷ ಈ ಪ್ರಮಾಣವು 47,571 ಯುನಿಟ್ ಗಳಿಗೆ ತಲುಪಿದೆ.

ಆಗಸ್ಟ್ ತಿಂಗಳಿನಲ್ಲಿ ಭರ್ಜರಿ ಏರಿಕೆ ಕಂಡ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ

ರಫ್ತು ಪ್ರಮಾಣವು 38%ನಷ್ಟು ಕುಸಿತವನ್ನು ದಾಖಲಿಸಿದೆ. ಈ ವರ್ಷ ಕಂಪನಿಯು 2,573 ಯುನಿಟ್ ವಾಹನಗಳನ್ನು ಮಾರಾಟ ಮಾಡಿದ್ದರೆ, ಕಳೆದ ವರ್ಷ 4,152 ಯುನಿಟ್ ಗಳನ್ನು ಮಾರಾಟ ಮಾಡಿತ್ತು.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಆಗಸ್ಟ್ ತಿಂಗಳಿನಲ್ಲಿ ಭರ್ಜರಿ ಏರಿಕೆ ಕಂಡ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ

ಕಂಪನಿಯು ಈ ವರ್ಷದ ಏಪ್ರಿಲ್ - ಆಗಸ್ಟ್ ನಡುವೆ 1,47,747 ಯುನಿಟ್ ಬೈಕುಗಳನ್ನು ಮಾರಾಟ ಮಾಡಿದೆ. 2019ರ ಏಪ್ರಿಲ್ - ಆಗಸ್ಟ್ ಅವಧಿಯಲ್ಲಿ 2,90,798 ಯುನಿಟ್ ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಕಳೆದ ವರ್ಷಕ್ಕೆ ಹೊಲಿಸಿದರೆ ಈ ವರ್ಷ 49%ನಷ್ಟು ಕುಸಿತವಾಗಿದೆ. ಕಳೆದ ವರ್ಷ ದೇಶಿಯ ಮಾರುಕಟ್ಟೆಯಲ್ಲಿ 2,72,364 ಯುನಿಟ್ ಮಾರಾಟವಾಗಿದ್ದರೆ ಈ ವರ್ಷ 1,40,435 ಯುನಿಟ್ ವಾಹನಗಳು ಮಾರಾಟವಾಗಿವೆ.

ಆಗಸ್ಟ್ ತಿಂಗಳಿನಲ್ಲಿ ಭರ್ಜರಿ ಏರಿಕೆ ಕಂಡ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ

ಈ ಅವಧಿಯಲ್ಲಿ ರಫ್ತು ಪ್ರಮಾಣವು 18,434 ಯುನಿಟ್‌ಗಳಿಂದ 7,312 ಯೂನಿಟ್‌ಗಳಿಗೆ ಕುಸಿದಿದ್ದು, 60%ನಷ್ಟು ಇಳಿಕೆಯಾಗಿದೆ. ಕಂಪನಿಯ ಮಾರಾಟವು ಕಳೆದ ವರ್ಷಕ್ಕಿಂತ ಕಡಿಮೆಯಾಗಿದ್ದರೂ, ಈ ವರ್ಷ ತಿಂಗಳಿಂದ ತಿಂಗಳಿಗೆ ಉತ್ತಮಗೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನೂ ಉತ್ತಮವಾಗುವ ನಿರೀಕ್ಷೆಗಳಿವೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಆಗಸ್ಟ್ ತಿಂಗಳಿನಲ್ಲಿ ಭರ್ಜರಿ ಏರಿಕೆ ಕಂಡ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ

ಇತ್ತೀಚೆಗೆ ಕಂಪನಿಯು ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಬೈಕುಗಳನ್ನು ವಿತರಿಸಿತ್ತು. ಈ ಮೂಲಕ ಕಂಪನಿಯು ಮುಂಬರುವ ಹಬ್ಬದ ವೇಳೆಗೆ ಇನ್ನೂ ಹೆಚ್ಚಿನ ಪ್ರಮಾಣದ ಮಾರಾಟವನ್ನು ನಿರೀಕ್ಷಿಸುತ್ತಿದೆ. ಹೊಸ ಬೈಕುಗಳ ಬಿಡುಗಡೆಯು ಸಹ ಕಂಪನಿಗೆ ಇನ್ನಷ್ಟು ಲಾಭದಾಯಕವಾಗಿರಲಿದೆ.

ಆಗಸ್ಟ್ ತಿಂಗಳಿನಲ್ಲಿ ಭರ್ಜರಿ ಏರಿಕೆ ಕಂಡ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ

ರಾಯಲ್ ಎನ್‌ಫೀಲ್ಡ್ ತನ್ನ ಕ್ರೂಸರ್ ಬೈಕ್ ಆದ ಥಂಡರ್ ಬರ್ಡ್ ಬದಲಿಗೆ ಸೆಪ್ಟೆಂಬರ್‌ನಲ್ಲಿ ಹೊಸ ಮೆಟಿಯೊರ್ 350 ಬೈಕ್ ಅನ್ನು ಬಿಡುಗಡೆಗೊಳಿಸಲಿದೆ. ಮಾಹಿತಿಯ ಪ್ರಕಾರ, ಈ ಬೈಕ್ ಸೆಪ್ಟೆಂಬರ್ 25-30ರ ವೇಳೆಗೆ ಬಿಡುಗಡೆಯಾಗಲಿದೆ. ಕಂಪನಿಯು ಮೆಟಿಯೊರ್ 350 ಬೈಕಿನ ಎಂಜಿನ್ ಅನ್ನು ಹೊಸ ಪ್ಲಾಟ್ ಫಾರಂನಲ್ಲಿ ವಿನ್ಯಾಸಗೊಳಿಸಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಆಗಸ್ಟ್ ತಿಂಗಳಿನಲ್ಲಿ ಭರ್ಜರಿ ಏರಿಕೆ ಕಂಡ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ

ಮೆಟಿಯೊರ್ 350 ಬೈಕ್ ಅನ್ನು ಫೈರ್‌ಬಾಲ್, ಸ್ಟೆಲ್ಲಾರ್ ಹಾಗೂ ಸೂಪರ್ ನೋವಾ ಎಂಬ ಮೂರು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಮೆಟಿಯೊರ್ 350 ಬೈಕ್ ರಾಯಲ್ ಎನ್‌ಫೀಲ್ಡ್ ಕಂಪನಿಯ ಇತರ ಬೈಕ್‌ಗಳಿಗಿಂತ ಅಡ್ವಾನ್ಸ್ ಆಗಿರಲಿದೆ. ಈ ಬೈಕ್ ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ನ್ಯಾವಿಗೇಷನ್ ಸಿಸ್ಟಂ ನಂತಹ ಫೀಚರ್ ಗಳನ್ನು ಹೊಂದಿರಲಿದೆ.

Most Read Articles

Kannada
English summary
Royal Enfield sales increases in August 2020. Read in Kannada.
Story first published: Wednesday, September 2, 2020, 9:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X