Just In
- 6 min ago ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- 10 min ago 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- 12 min ago Honda: ಭಾರತ ನಿರ್ಮಿಸಿದ ಹೋಂಡಾ ಕಾರಿಗೆ ಮುಗಿಬಿದ್ದ ಜಪಾನ್ ಜನ!
- 22 min ago ಮತ್ತೆ ಅಖಾಡಕ್ಕೆ ಅಮೇರಿಕನ್ ಆಫ್ರೋಡ್ ಕಿಂಗ್: 2024 ಜೀಪ್ ರಾಂಗ್ಲರ್ ಫೇಸ್ಲಿಫ್ಟ್ ರಿವ್ಯೂ!
Don't Miss!
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೂ.3 ಲಕ್ಷ ಬೆಲೆಯ ಆರ್ಸಿ 900 ಸೈಕಲ್ ಬಿಡುಗಡೆಗೊಳಿಸಿದ ಸ್ಕಾಟ್ ಸ್ಪಾರ್ಕ್
ಕರೋನಾ ವೈರಸ್ ನಂತರ ಭಾರತದಲ್ಲಿ ಸೈಕಲ್ ಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಹಲವು ಕಂಪನಿಗಳು ತಮ್ಮ ಸೈಕಲ್ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ.
ಈಗ ಸ್ಕಾಟ್ ಸ್ಪಾರ್ಕ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಸ ಸೈಕಲ್ ಅನ್ನು ಬಿಡುಗಡೆಗೊಳಿಸಿದೆ. ಸ್ಕಾಟ್ ಸ್ಪಾರ್ಕ್ ಕಂಪನಿಯು ಆರ್ಸಿ 900 ಎಂಬ ಹೆಸರಿನ ಸೈಕಲ್ ಅನ್ನು ಬಿಡುಗಡೆಗೊಳಿಸಿದೆ. ಈ ಆಧುನಿಕ ಕ್ರಾಸ್ ಕಂಟ್ರಿ ಸೈಕಲಿನ ಬೆಲೆ ರೂ.3.70 ಲಕ್ಷಗಳಾಗಿದೆ. ಈ ಬೆಲೆಯು ಭಾರತದಲ್ಲಿ ಮಾರಾಟವಾಗುವ ಪ್ರೀಮಿಯಂ ಬೈಕ್ಗಳ ಬೆಲೆಗೆ ಸಮನಾಗಿದೆ.
ಈ ಸೈಕಲ್ ಬೈಕುಗಳಲ್ಲಿರುವಂತೆ ಹಲವಾರು ಫೀಚರ್ ಗಳನ್ನು ಹೊಂದಿದೆ. ಈ ಸೈಕಲ್ ನಲ್ಲಿ ಬೈಕ್ ಗಳಲ್ಲಿರುವಂತಹ ಸಸ್ಪೆಂಷನ್ ಅಳವಡಿಸಲಾಗಿದೆ. ಇದರ ಜೊತೆಗೆ ವಿವಿಧ ಫೀಚರ್ ಗಳನ್ನು ಹೊಂದಿದೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್
ಸ್ಪಾರ್ಕ್ ಆರ್ಸಿ 900 ಸೈಕಲ್ ನಲ್ಲಿ ಟ್ವಿನ್ ಲಾಕ್ ಸಸ್ಪೆಂಷನ್ ಸಿಸ್ಟಂ ಬಳಸಲಾಗಿದೆ. ಇದರ ಜೊತೆಗೆ 12-ಸ್ಪೀಡ್ ಸ್ಟ್ರೀಮ್ ಈಗಲ್ ಡ್ರೈವ್ಟ್ರೇನ್, ಶಿಮಾನೋ ಬ್ರೇಕ್, ಸಿಂಕ್ರೊಸ್ ಯುನಿಟ್ ಗಳನ್ನು ಈ ಸೈಕಲ್ ನಲ್ಲಿ ಅಳವಡಿಸಲಾಗಿದೆ. ಈ ಎಲ್ಲಾ ಫೀಚರ್ ಗಳು ಈ ಸೈಕಲ್ ಅನ್ನು ಟಾಪ್ ಎಂಡ್ ರೇಸ್ ಬೈಕಿನಂತೆ ಮಾಡಿವೆ.
ಸ್ಕಾಟ್ ಕಂಪನಿಯ ಪ್ರಕಾರ, ಸ್ಪಾರ್ಕ್ ಆರ್ಸಿ 900 ಸೈಕಲ್ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆದ್ದಿದೆ. ಈ ಸೈಕಲ್ ವಿಶ್ವಕಪ್ ಚಾಂಪಿಯನ್ ಹಾಗೂ ಒಲಿಂಪಿಕ್ ಚಾಂಪಿಯನ್ ಪ್ರಶಸ್ತಿಗಳನ್ನು ಜಯಿಸಿದೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ
ಈ ಸೈಕಲ್ ಬಿಡುಗಡೆಯ ನಂತರ ಮಾತನಾಡಿದ ಸ್ಕಾಟ್ ಸ್ಪೋರ್ಟ್ಸ್ ಇಂಡಿಯಾದ ಮ್ಯಾನೇಜರ್ ಜೈಮ್ ಶಾರವರು ವಿಶ್ವದಾದ್ಯಂತ ಪ್ರೀಮಿಯಂ ಸೈಕಲ್ ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಟೆಕ್ನಾಲಜಿ ಹಾಗೂ ಪರ್ಫಾಮೆನ್ಸ್ ನಲ್ಲಿ ಈ ಸೈಕಲ್ ಹಲವು ಪಟ್ಟು ಉತ್ತಮವಾಗಿದೆ ಎಂದು ಹೇಳಿದರು.
ಕಂಪನಿಯು ಹೊಸದಾಗಿ ಬಿಡುಗಡೆಗೊಳಿಸಿದ ಸೈಕಲ್ ಮಾರಾಟಕ್ಕಾಗಿ ಡೀಲರ್ ಗಳನ್ನು ನೇಮಿಸಿದೆ. ಇದರ ಜೊತೆಗೆ ಕಂಪನಿಯು ಕ್ರೀಡಾ ವ್ಯವಹಾರದಲ್ಲಿ ಕಾರ್ಯನಿರ್ವಹಿಸುವ ಕಂಪನಿಗಳ ಜೊತೆಗೆ ಸಹಭಾಗಿತ್ವವನ್ನು ಮಾಡಿಕೊಂಡಿದೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ
ಕಂಪನಿಯು ತನ್ನ ಅಧಿಕೃತ ವೆಬ್ಸೈಟ್ ಮೂಲಕ ಗ್ರಾಹಕರನ್ನು ಸ್ವಾಗತಿಸುತ್ತಿದೆ. ಈ ಸೈಕಲ್ ಲಾಂಗ್ ರೈಡ್ ಗಳಿಗೆ ಹಾಗೂ ಟ್ರೆಕ್ಕಿಂಗ್ ಗಳಿಗೆ ಸೂಕ್ತವಾಗಿದೆ ಎಂದು ಹೇಳಲಾಗಿದೆ.
ಈ ಸೈಕಲ್ ಚಾಲನೆ ಮಾಡುವ ಸವಾರನು ಅನೇಕ ಕಿ.ಮೀ ಚಲಿಸಿದರೂ ವಿಶ್ರಾಂತಿ ಪಡೆಯುವುದಿಲ್ಲ ಎಂದು ಹೇಳಲಾಗಿದೆ. ಇದಕ್ಕಾಗಿ ಸೈಕಲ್ ನಲ್ಲಿ ವಿಶೇಷ ಫೀಚರ್ ಗಳನ್ನು ಅಳವಡಿಸಲಾಗಿದೆ. ಈ ಕಾರಣಕ್ಕೆ ಈ ಸೈಕಲಿಗೆ ರೂ. 3.70 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು
ಹೊಸ ಸ್ಕಾಟ್ ಸ್ಪಾರ್ಕ್ ಆರ್ಸಿ 900 ಕ್ರಾಸ್ ಕಂಟ್ರಿ ಸೈಕಲಿನ ನಂತರ ಸ್ಕಾಟ್ ಕಂಪನಿಯು ಸ್ಪಾರ್ಕ್ ಸ್ಕಾಟ್ ಅಟ್ಟಿಕ್ ಆರ್ಸಿ ಸರಣಿಯಲ್ಲಿ ಹೊಸ ಸೈಕಲ್ ಗಳನ್ನು ಬಿಡುಗಡೆಗೊಳಿಸಲು ಬಯಸಿದೆ. ಈ ಸೈಕಲ್ ಗಳ ಬೆಲೆ ರೂ.5 ಲಕ್ಷದಿಂದ ರೂ.6 ಲಕ್ಷಗಳವರೆಗೆ ಇರುವ ಸಾಧ್ಯತೆಗಳಿವೆ. ಇದನ್ನು ಕಂಪನಿಯ ವ್ಯವಸ್ಥಾಪಕ ಜಮಿನ್ ಶಾ ಖಚಿತಪಡಿಸಿದ್ದಾರೆ.