ಹೊಸ ಬಣ್ಣಗಳ ಆಯ್ಕೆಯನ್ನು ಪಡೆಯಲಿವೆ ಸುಜುಕಿ ಜಿಕ್ಸರ್ ಬೈಕುಗಳು

ಜಪಾನ್ ಮೂಲದ ಬೈಕ್ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ತನ್ನ ಜಿಕ್ಸರ್ ಸರಣಿಯ ಬೈಕುಗಳು ಹೊಸ ಬಣ್ಣಗಳ ಆಯ್ಕೆಯನ್ನು ಪಡೆಯಲಿವೆ. ಇದರ ಕುರಿತು ಸುಜುಕಿ ಕಂಪನಿಯು ಸಾಮಾಜಿಕ ಜಾಲತಾಣಗಳಲ್ಲಿ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆಯಲಿವೆ ಸುಜುಕಿ ಜಿಕ್ಸರ್ ಬೈಕುಗಳು

ಟೀಸರ್ ಚಿತ್ರದಲ್ಲಿ #BornOfGreatness ಎಂಬ ಹ್ಯಾಶ್ ಟ್ಯಾಗ್ ಅನ್ನು ಹಾಕಿ ಶೀಘ್ರದಲ್ಲೇ ಹೊಸ ಬಣ್ಣಗಳಲ್ಲಿ ಬರಲಿದೆ ಎಂದು ಹೇಳಿದ್ದಾರೆ. ಭಾರತದಲ್ಲಿ ಜಿಕ್ಸರ್ ಬ್ರ್ಯಾಂಡ್‌ನ 100ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಹೊಸ ಬಣ್ಣಗಳಲ್ಲಿ ಜಿಕ್ಸರ್ ಬೈಕುಗಳನ್ನು ಹೊರತರಲಾಗುತ್ತದೆ . ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಜಿಕ್ಸರ್ ಸರಣಿಯಲ್ಲಿ ನಾಲ್ಕು ಬೈಕುಗಳು ಮತ್ತು ಎರಡು ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆಯಲಿವೆ ಸುಜುಕಿ ಜಿಕ್ಸರ್ ಬೈಕುಗಳು

ಇದರಲ್ಲಿ ಜಿಕ್ಸರ್ ಮತ್ತು ಜಿಕ್ಸರ್ ಎಸ್‌ಎಫ್ 155ಸಿಸಿ ಎಂಜಿನ್ ಹೊಂದಿದ್ದರೆ, ಜಿಕ್ಸರ್ 250 ಮತ್ತು ಜಿಕ್ಸರ್ ಎಸ್‌ಎಫ್ 250 ಬೈಕುಗಳು 249 ಸಿಸಿ ಎಂಜಿನ್ ಅನ್ನು ಹೊಂದಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಹೊಸ ಬಣ್ಣಗಳ ಆಯ್ಕೆಯನ್ನು ಪಡೆಯಲಿವೆ ಸುಜುಕಿ ಜಿಕ್ಸರ್ ಬೈಕುಗಳು

ಜಿಕ್ಸರ್ ಸರಣಿಯ ಬೈಕುಗಳ ಪಡೆಯಲಿರುವ ಹೊಸ ಬಣ್ಣಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಸುಜುಕಿ ಕಂಪನಿಯು ಬಹಿರಂಗಪಡಿಸಿಲ್ಲ. ಜಿಕ್ಸರ್ ಸರಣಿಯಲ್ಲಿರುವ ನಾಲ್ಕು ಬೈಕುಗಳು ಬ್ರ್ಯಾಂಡ್ ಹೊಸ ಬಣ್ಣದ ಆಯ್ಕೆಯನ್ನು ಪಡೆಯಲಿವೆ ಎಂದು ನಿರೀಕ್ಷಿಸುತ್ತೇವೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆಯಲಿವೆ ಸುಜುಕಿ ಜಿಕ್ಸರ್ ಬೈಕುಗಳು

ಸದ್ಯ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ಸುಜುಕಿ ಜಿಕ್ಸರ್ ಅನ್ನು ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್, ಮೆಟಾಲಿಕ್ ಸೋನಿಕ್ ಸಿಲ್ವರ್ ಮತ್ತು ಮೆಟಾಲಿಕ್ ಟ್ರೈಟಾನ್ ಬ್ಲೂ ಎಂಬ ಮೂರು ಬಣ್ಣಗಳಲ್ಲಿ ನೀಡಲಾಗುತ್ತಿದೆ. ಗ್ಲಿಕ್ಸ್ ಸ್ಪಾರ್ಕಲ್ ಬ್ಲ್ಯಾಕ್, ಮೆಟಾಲಿಕ್ ಸೋನಿಕ್ ಸಿಲ್ವರ್ ಮತ್ತು ಮೋಟೋ ಜಿಪಿ ಆವೃತ್ತಿಯ ಮೂರು ಬಣ್ಣದ ಆಯ್ಕೆಗಳಲ್ಲಿ ಎಸ್‌ಎಫ್ ಅನ್ನು ನೀಡಲಾಗುತ್ತಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಬಣ್ಣಗಳ ಆಯ್ಕೆಯನ್ನು ಪಡೆಯಲಿವೆ ಸುಜುಕಿ ಜಿಕ್ಸರ್ ಬೈಕುಗಳು

ಬಿಎಸ್-6 ಜಿಕ್ಸರ್ 250 ಮತ್ತು ಜಿಕ್ಸರ್ ಎಸ್‍ಎಫ್ 250 ಬೈಕುಗಳಲ್ಲಿ 249 ಸಿಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 26.1 ಬಿಹೆಚ್‌ಪಿ ಪವರ್ ಮತ್ತು 22.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆಯಲಿವೆ ಸುಜುಕಿ ಜಿಕ್ಸರ್ ಬೈಕುಗಳು

ಪ್ರಸ್ತುತ ನೇಕೆಡ್ ಆವೃತ್ತಿಯ ಸುಜುಕಿ ಜಿಕ್ಸರ್ 250 ಹೊಸದಾಗಿ ವಿನ್ಯಾಸಗೊಳಿಸಲಾದ ಟ್ಯಾಂಕಿನ ಮೇಲೆ ವಿಶಿಷ್ಟವಾದ ಬಾಡಿ ಗ್ರಾಫಿಕ್ಸ್ ಗಳಿದ್ದು, ಇದರ ಜೊತೆಗೆ ಒವಲ್ ಆಕಾರಾದ ಎಲ್ಇಡಿ ಹೆಡ್‌ಲ್ಯಾಂಪ್ ಯೂನಿಟ್‍‍ಗಳಿವೆ. ಜಿಕ್ಸರ್ 250 ಬೈಕಿನಲ್ಲಿ ಟಯರ್ ಹಗ್ಗರ್, ಸ್ಪ್ಲಿಟ್ ಸೀಟ್, ಕಪ್ಪು ಬಣ್ಣದ ಅಲಾಯ್ ವ್ಹೀಲ್ ಹಾಗೂ ಕ್ರೋಮ್ ಅಂಶಗಳನ್ನು ಹೊಂದಿರುವ ಡ್ಯುಯಲ್ ಮಫ್ಲರ್ ಅಂಶಗಳಿವೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಬಣ್ಣಗಳ ಆಯ್ಕೆಯನ್ನು ಪಡೆಯಲಿವೆ ಸುಜುಕಿ ಜಿಕ್ಸರ್ ಬೈಕುಗಳು

ಸುಜುಕಿ ಜಿಕ್ಸರ್ ಮತ್ತು ಜಿಕ್ಸರ್ ಎಸ್‌ಎಫ್ 155 ಬೈಕುಗಳಲ್ಲಿ 55 ಸಿಸಿ, ಏರ್-ಕೂಲ್ಡ್, ಇಂಧನ-ಇಂಜೆಕ್ಟ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 13.4 ಬಿಹೆಚ್‍ಪಿ ಪವರ್ ಮತ್ತು 13.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆಯಲಿವೆ ಸುಜುಕಿ ಜಿಕ್ಸರ್ ಬೈಕುಗಳು

ಸುಜುಕಿ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಜಿಕ್ಸರ್ ಬ್ರ್ಯಾಂಡ್‌ನ 100ನೇ ವಾರ್ಷಿಕೋತ್ಸವದ ಭಾಗವಾಗಿ ಇದರ ಅಡಿಯಲ್ಲಿ ಬರುವ ಎಲ್ಲಾ ಬೈಕುಗಳು ಹೊಸ ಬಣ್ಣಗಳ ಆಯ್ಕೆಗಳನ್ನು ಪಡೆಯಲಿವೆ. ಇದರಿಂದ ಖರೀದಿದಾರರಿಗೆ ಹೆಚ್ಚಿನ ಆಯ್ಕೆಯನ್ನು ನೀಡುತ್ತದೆ.

More from DriveSpark

Article Published On: Friday, September 25, 2020, 19:34 [IST]
English summary
Suzuki Gixxer Range To Recieve New Colours. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+