ಹೊಸ ಇವಿ ನೀತಿ: 2 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿ ಮೇಲೆ ಭರ್ಜರಿ ವಿನಾಯ್ತಿ

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ತೆಲಂಗಾಣ ಸರ್ಕಾರವು ಇದೀಗ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿದಾರರಿಗೆ ಭರ್ಜರಿ ಆಫರ್ ನೀಡಿದೆ.

2 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿ ಮೇಲೆ ವಿನಾಯ್ತಿ

ಕೇಂದ್ರ ಸರ್ಕಾರವು ಫೇಮ್ 2 ಯೋಜನೆ ಅಡಿ ಎಲೆಕ್ಟ್ರಿಕ್ ವಾಹನಗಳಿಗೆ ನೀಡುತ್ತಿರುವ ಸಬ್ಸಡಿ ಯೋಜನೆಯನ್ನು ಹೊರತುಪಡಿಸಿ ತೆಲಂಗಾಣ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ತೀವ್ರಗೊಳಿಸುವುದಕ್ಕಾಗಿ ಹೊಸ ಇವಿ ನೀತಿಯನ್ನು ಜಾರಿಗೆ ತಂದಿದ್ದು, ಹೊಸ ಎಲೆಕ್ಟ್ರಿಕ್ ವಾಹನಗಳ ನೀತಿ ಅಡಿಯಲ್ಲಿ ಬರೋಬ್ಬರಿ 2 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಶೇ.100ರಷ್ಟು ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕದಿಂದ ವಿನಾಯ್ತಿ ನೀಡಿದೆ.

2 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿ ಮೇಲೆ ವಿನಾಯ್ತಿ

ಹೊಸ ಇವಿ ಪಾಲಿಸಿ ಅಡಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಸುವ ಗ್ರಾಹಕರು ಕೇವಲ ಎಕ್ಸ್‌ಶೋರೂಂ ದರ ಪಾವತಿ ಮಾಡುವುದರ ಮೂಲಕ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕದಿಂದ ವಿನಾಯ್ತಿ ಪಡೆದುಕೊಳ್ಳಬಹುದಾಗಿದ್ದು, ಇದು ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೆಚ್ಚಿಸುವುದರ ಜೊತೆಗೆ ಮಾಲಿನ್ಯ ತಡೆಗೆ ಸಾಕಷ್ಟು ಸಹಕಾರಿಯಾಗಲಿದೆ.

2 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿ ಮೇಲೆ ವಿನಾಯ್ತಿ

ತೆಲಂಗಾಣ ಸರ್ಕಾರವು 2 ಲಕ್ಷ ವಾಹನಗಳ ಮೇಲೆ ಮಾತ್ರವೇ ಈ ವಿನಾಯ್ತಿ ನೀಡಿರುವುದರಿಂದ ಮೊದಲ 2 ಲಕ್ಷ ವಾಹನ ಮಾಲೀಕರಿಗೆ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕದಿಂದ ವಿನಾಯ್ತಿ ದೊರೆಯಲಿದ್ದು, ತ್ರಿ ಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳ ಮೇಲೆ ಯಾವುದೇ ವಿನಾಯ್ತಿಗಳನ್ನು ನೀಡಿಲ್ಲ.

2 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿ ಮೇಲೆ ವಿನಾಯ್ತಿ

ಆದರೆ ಕೇಂದ್ರ ಸರ್ಕಾರದ ಫೇಮ್ 2 ಯೋಜನೆ ಅಡಿ ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಪ್ರಮಾಣದ ಸಬ್ಸಡಿ ಜೊತೆಗೆ ತೆರಿಗೆ ಉಳಿತಾಯಕ್ಕೆ ಅವಕಾಶ ನೀಡಲಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ತೆಲಂಗಾಣ ಸರ್ಕಾರವು ಜಾರಿಗೆ ತಂದಿರುವ ಹೊಸ ಇವಿ ನೀತಿ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ.

2 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿ ಮೇಲೆ ವಿನಾಯ್ತಿ

ಇನ್ನು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರವು ಕೈಗೊಂಡಿರುವ ಕ್ರಮವು ದೇಶದಲ್ಲೇ ಅತ್ಯತ್ತಮ ಇವಿ ಪಾಲಿಸಿ ಆಗಿದ್ದು, ದೆಹಲಿ ಸರ್ಕಾರವು ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಹೊಸ ಇವಿ ನೀತಿ ಅಡಿಯಲ್ಲಿ ಗರಿಷ್ಠ ಮಟ್ಟದ ಸಬ್ಸಡಿ, ನೋಂದಣಿ ಶುಲ್ಕ ವಿನಾಯ್ತಿ ಮತ್ತು ರಸ್ಕೆ ತೆರಿಗೆಯಿಂದ ವಿನಾಯ್ತಿ ನೀಡಿದೆ.

2 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿ ಮೇಲೆ ವಿನಾಯ್ತಿ

ದೆಹಲಿ ಸರ್ಕಾರವು ಎಲ್ಲಾ ಮಾದರಿಯ ಎಲೆಕ್ಟ್ರಿಕ್ ವಾಹನಗಳಿಗೆ ಗರಿಷ್ಠ ಮಟ್ಟದ ಸಬ್ಸಡಿ, ರಸ್ತೆ ತೆರಿಗೆ ವಿನಾಯ್ತಿ ಮತ್ತು ನೋಂದಣಿ ಶುಲ್ಕದಿಂದ ವಿನಾಯ್ತಿ ನೀಡುತ್ತಿದ್ದು, ಹೊಸ ಪಾಲಿಸಿ ಜಾರಿಗೆ ಬಂದ ಕೇವಲ 15 ದಿನಗಳ ಅವಧಿಯಲ್ಲಿ 3 ಸಾವಿರಕ್ಕೂ ಅಧಿಕ ಇವಿ ವಾಹನಗಳು ಮಾರಾಟಗೊಂಡಿದೆ.

2 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿ ಮೇಲೆ ವಿನಾಯ್ತಿ

ದೆಹಲಿ ಸರ್ಕಾರವು ಹೊಸ ಇವಿ ನೀತಿಯಡಿಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ಇ-ರಿಕ್ಷಾ ಮತ್ತು ಸರಕು ಸಾಗಾಣಿಕೆಯ ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲೆ ಗರಿಷ್ಠ ರೂ. 30 ಸಾವಿರ ತನಕ ಸಬ್ಸಡಿ ನೀಡುತ್ತಿದ್ದರೆ ಎಲೆಕ್ಟ್ರಿಕ್ ಕಾರುಗಳ ಖರೀದಿ ಮೇಲೆ ಗರಿಷ್ಠ ರೂ. 1.50 ಲಕ್ಷದಷ್ಟು ಸಬ್ಸಡಿ ನೀಡುತ್ತಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

2 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿ ಮೇಲೆ ವಿನಾಯ್ತಿ

ಸಬ್ಸಡಿ ಯೋಜನೆಯು ರೂ.15 ಲಕ್ಷದೊಳಗಿನ ವಾಹನ ಮಾದರಿಗಳಿಗೆ ಮಾತ್ರ ಅನ್ವಯವಾಗಲಿದ್ದು, ರೂ. 15 ಲಕ್ಷ ಮೇಲ್ಪಟ್ಟ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಡಿ ಲಭ್ಯವಿಲ್ಲವಾದರೂ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕದಿಂದ ವಿನಾಯ್ತಿ ನೀಡಲಾಗಿದ್ದು, ದೆಹಲಿ ಸರ್ಕಾರದ ಯೋಜನೆ ನಂತರ ಇದೀಗ ಇತರೆ ರಾಜ್ಯಗಳು ಕೂಡಾ ಹೊಸ ಇವಿ ಪಾಲಿಸಿ ಅಳವಡಿಸಿಕೊಳ್ಳುತ್ತಿರುವುದು ಅತ್ಯುತ್ತಮ ಯೋಜನೆಯಾಗಿದೆ.

2 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿ ಮೇಲೆ ವಿನಾಯ್ತಿ

ಕರ್ನಾಟಕ ಸರ್ಕಾರವು ಸಹ ಕಳೆದ ವರ್ಷವೇ ಹೊಸ ಇವಿ ಪಾಲಿಸಿ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣಕ್ಕಾಗಿ ಹೆಚ್ಚಿನ ಮಟ್ಟದ ಸಬ್ಸಡಿ ನೀಡುತ್ತಿದ್ದು, ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೂ ಕೆಲವು ವಿನಾಯ್ತಿಗಳನ್ನು ನೀಡಿದ್ದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯತ್ತ ವಾಹನ ಸವಾರರನ್ನು ಸೆಳೆಯಲು ಸಹಕಾರಿಯಾಗಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

2 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿ ಮೇಲೆ ವಿನಾಯ್ತಿ

ಪ್ರಸ್ತುತ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟಕ್ಕೆ ಹೋಲಿಕೆ ಮಾಡಿದ್ದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಪ್ರಮಾಣವು ತೀರಾ ಕೆಳಮಟ್ಟದಲ್ಲಿದ್ದು, ಎಲೆಕ್ಟ್ರಿಕ್ ಮಾರಾಟ ಉತ್ತೇಜಿಸಲು ಮತ್ತು ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಪ್ರಮುಖ ಅಂಶವಾಗಿರುವ ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಬೇಕಿರುವುದು ಅಷ್ಟೇ ಮುಖ್ಯವಾಗಿದೆ.

Most Read Articles

Kannada
English summary
Telangana New EV Policy: 100% Road Tax & Registration Fee Exempt For 2 Lakh Two-Wheeler EVs.
Story first published: Saturday, October 31, 2020, 15:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X