ಟ್ರಯಂಫ್ ಟೈಗರ್ 900 ಬೈಕಿನ ಟೀಸರ್ ಬಿಡುಗಡೆ

ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ ತನ್ನ ಹೊಸ ಟ್ರಯಂಫ್ ಟೈಗರ್ 900 ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಟ್ರಯಂಫ್ ಕಂಪನಿಯು ಈ ಹೊಸ ಟೈಗರ್ 900 ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಟ್ರಯಂಫ್ ಟೈಗರ್ 900 ಬೈಕಿನ ಟೀಸರ್ ಬಿಡುಗಡೆ

ಈ ಹೊಸ ಟ್ರಯಂಫ್ ಟೈಗರ್ 900 ಬೈಕಿನ ಟೀಸರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬೈಕಿನ ಟೀಸರ್ ಚಿತ್ರವು ಆಕರ್ಷಕವಾಗಿದೆ. ಭಾರತದಲ್ಲಿ ಟ್ರಯಂಫ್ ಟೈಗರ್ 900 ಬೈಕ್ ಜಿಟಿ ಮತ್ತು ರ‌್ಯಾಲಿ ಪ್ರೊ ಎಂಬ ಎರಡೂ ರೂಪಾಂರಗಳಲ್ಲಿ ಲಭ್ಯವಿರಲಿದೆ. ಟ್ರಯಂಫ್ ಮೋಟಾರ್‍‍ಸೈಕಲ್ಸ್, ಹೊಸ ಟೈಗರ್ 900 ಬೈಕ್ ಅನ್ನು ಅಂತರರಾಷ್ಟೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಟ್ರಯಂಫ್ ಟೈಗರ್ 900 ಬೈಕ್ ಅನ್ನು ನವೀಕರಿಸಿದ ಚಾಸಿಸ್, ಸಸ್ಪೆಂಷನ್, ಹೊಸ ಎಂಜಿನ್ ಮತ್ತು ಹೊಸ ಎಂಜಿನ್‍‍‍ನೊಂದಿಗೆ ಬಿಡುಗಡೆಗೊಳಿಸಿದ್ದರು. ಭಾರತದಲ್ಲಿ ಟೈಗರ್ 800 ಬೈಕ್, ಅಡ್ವೆಂಚರ್ ಬೈಕ್‍‍ಗಳ ಸರಣಿಯಲ್ಲಿ ಉತ್ತಮ ಬೈಕ್ ಆಗಿದೆ.

ಟ್ರಯಂಫ್ ಟೈಗರ್ 900 ಬೈಕಿನ ಟೀಸರ್ ಬಿಡುಗಡೆ

ಹೊಸ ಟೈಗರ್ 900 ಬೈಕ್ ಹೆಚ್ಚು ಪವರ್‍‍ಫುಲ್ ಎಂಜಿನ್ ಅನ್ನು ಹೊಂದಿದೆ. ಹೊಸ ಟೈಗರ್ 900 ಬೈಕಿನಲ್ಲಿ ಬೋಲ್ಡ್ - ಆನ್ ಸಬ್ ಫ್ರೇಮ್, ಹೊಸ ಅಲ್ಯೂಮಿನಿಯಂ ಸ್ವಿಂಗಾರ್ಮ್, ಹೊಸ ಎಲ್‍ಇ‍ಡಿ ಹೆಡ್‍‍ಲ್ಯಾಂಪ್, ಡಿ‍ಆರ್‍ಎಲ್ ಮತ್ತು ಟಿಎಫ್‍ಟಿ ಸ್ಕ್ರೀನ್ ಅನ್ನು ಅಳವಡಿಸಲಾಗಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಟ್ರಯಂಫ್ ಟೈಗರ್ 900 ಬೈಕಿನ ಟೀಸರ್ ಬಿಡುಗಡೆ

ಹೊಸ ಬೈಕ್ ಟೈಗರ್ 800 ಬೈಕ್‍‍ಗಿಂತ ಹಗುರವಾಗಿದೆ. ಟೈಗರ್ 900 ಬೈಕ್ ಟೈಟರ್ ಫ್ಯೂಯಲ್ ಟ್ಯಾಂಕ್ ಹೊಂದಿರುವುದರಿಂದ ಬೈಕ್ ಅನ್ನು ಸುಲಭವಾಗಿ ರೈಡ್ ಮಾಡಲು ಸಹಕಾರಿಯಾಗಿದೆ.

ಟ್ರಯಂಫ್ ಟೈಗರ್ 900 ಬೈಕಿನ ಟೀಸರ್ ಬಿಡುಗಡೆ

ಇದು ಟೈಗರ್ 800 ಮಾದರಿಯ ಅಲ್ಯೂಮಿನಿಯಂ ಫಿನಿಶ್‍‍ಗೆ ಹೋಲಿಸಿದರೆ ಪ್ಲಾಸ್ಟಿಕ್‍‍ನಿಂದ ಮಾಡಲ್ಪಟ್ಟ ನವೀಕರಿಸಿದ ಫ್ರಂಟ್ ಫೆಂಡರ್, ವಿಂಡ್‍‍ಸ್ಕ್ರೀನ್ ಮತ್ತು ಸಂಪ್ ಗಾರ್ಡ್ ಅನ್ನು ಹೊಂದಿದೆ. ಟ್ರಯಂಫ್ ಟೈಗರ್ 800 ಬೈಕಿನ ಎಕ್ಸ್‌ಆರ್ ಮತ್ತು ಎಕ್ಸ್‌ಸಿ ರೂಪಾಂತರಗಳನ್ನು ಟ್ರೈಗರ್ 900ನಲ್ಲಿ ಜಿಟಿ ಮತ್ತು ರ್‍ಯಾಲಿ ಮಾದರಿಗಳೊಂದಿಗೆ ಬದಲಾಯಿಸಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಟ್ರಯಂಫ್ ಟೈಗರ್ 900 ಬೈಕಿನ ಟೀಸರ್ ಬಿಡುಗಡೆ

ಟ್ರಯಂಫ್ ಟೈಗರ್ 900 ಬೈಕಿನಲ್ಲಿ 888 ಸಿಸಿ ಇನ್‍‍ಲೈನ್ 3 ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಯುರೋ 5 ಮತ್ತು ಬಿಎಸ್-6 ಮಾಲಿನ್ಯ ನಿಯಮದ ಅನುಸಾರವಾಗಿದೆ. ಈ ಎಂಜಿನ್ 94 ಬಿ‍‍ಹೆಚ್‍‍ಪಿ ಪವರ್ ಮತ್ತು 86 ಎನ್‍‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಟ್ರಯಂಫ್ ಟೈಗರ್ 900 ಬೈಕಿನ ಟೀಸರ್ ಬಿಡುಗಡೆ

ಜಿಟಿ ರೂಪಾಂತರದಲ್ಲಿ ಸಸ್ಪೆಂಷನ್ ಮತ್ತು ಬ್ರೇಕಿಂಗ್ ಅನ್ನು 180 ಎಂಎಂ ಫ್ರಂಟ್ ಮತ್ತು 170 ರೇರ್ ಬ್ರೇಕ್‍ನೊಂದಿಗೆ ಅಡ್ಜೆಂಸ್ಟ್ ಮಾಡಬಹುದಾದ ಮೊನೊಶಾಕ್ ಹೊಂದಿದೆ. ಪ್ರೊ ಟ್ರೀಮ್ 9 ಹಂತದ ಡ್ಯಾಂಪಿಂಗ್ ಮತ್ತು 4 ಫ್ರೀಪಿಕ್ಸ್ ಪ್ರೀ ಲೋಡ್ ಸೆಟ್ಟಿಂಗ್‍‍ಗಳೊಂದಿಗೆ ಎಲೆಕ್ಟ್ರಾನಿಕ್ ಅಡ್ಜೆಂಸ್ಟ್ ಬಲ್ ಹೊಂದಿರುವ ಮೊನೊಶಾಕ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಟ್ರಯಂಫ್ ಟೈಗರ್ 900 ಬೈಕಿನ ಟೀಸರ್ ಬಿಡುಗಡೆ

ಈ ಬೈಕಿನಲ್ಲಿ ಮೆಟ್ಜೆಲರ್ ಟೂರನ್ಸ್ ನೆಕ್ಸ್ಟ್ ಟಯರ್‍‍ಗಳೊಂದಿಗೆ 19/17 ಅಲಾಯ್ ವ್ಹೀಲ್‍‍ಗಳನ್ನು ಹೊಂದಿದೆ. ಸ್ಟೈಲ್ಮಾ ಕ್ಯಾಲಿಪರ್‍‍ಗಳ ಮೂಲಕ ಬ್ರೇಕಿಂಗ್ ಹೊಂದಿದೆ. ಈ ಹೊಸ ಬೈಕ್ ಭಾರತದಲ್ಲಿ ರೂ.16 ಲಕ್ಷಗಳಿಂದ 16.5 ಲಕ್ಷಗಳಿಗೆ ಮಾರಾಟವಾಗಬಹುದು.

ಟ್ರಯಂಫ್ ಟೈಗರ್ 900 ಬೈಕಿನ ಟೀಸರ್ ಬಿಡುಗಡೆ

ಹೊಸ ಟ್ರಯಂಫ್ ಟೈಗರ್ 900 ಬೈಕ್ ಭಾರತದಲ್ಲಿ ಬಿಡುಗಡೆಯಾದ ಬಳಿಕ ಬಿಎಂಡಬ್ಲ್ಯು ಎಫ್ 850 ಜಿಎಸ್, ಹೊಸ ತಲೆಮಾರಿನ ಹೋಂಡಾ ಆಫ್ರಿಕಾ ಟ್ವಿನ್ ಮತ್ತು ಡುಕಾಟಿ ಮಲ್ಟಿಸ್ಟ್ರಾಡಾ 950 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Thursday, May 21, 2020, 12:33 [IST]
English summary
New Triumph Tiger 900 teased; India launch soon. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+