ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಿವಿಎಸ್ ಅಪಾಚೆ ಸರಣಿಯ ಬೈಕುಗಳು

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಅಪಾಚೆ ಸರಣಿಯ ಬೈಕುಗಳ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಟಿವಿಎಸ್ ಅಪಾಚೆ ಸರಣಿಯ ಆರಂಭವಾದಾಗಿನಿಂದ ಇಲ್ಲಿಯವರೆಗೆ 4 ಮಿಲಿಯನ್ ಯು‍‍ನಿ‍‍ಟ್‍ಗಳು ಮಾರಾಟವಾಗಿವೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಿವಿಎಸ್ ಅಪಾಚೆ ಸರಣಿಯ ಬೈಕುಗಳು

ಟಿವಿಎಸ್ ಅಪಾಚೆ ಸರಣಿಯನ್ನು 2005ರಲ್ಲಿ ಹೊಸೂರು ಮೂಲದ ದ್ವಿಚಕ್ರ ವಾಹನ ತಯಾರಕರು ಭಾರತದಲ್ಲಿ ಪ್ರಾರಂಭಿಸಿದರು. ಇಂದು ಟಿವಿಎಸ್ ಅಪಾಚೆ ಸರಣಿಯು ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರೀಮಿಯಂ ಬೈಕುಗಳ ಸರಣಿ ಎಂದು ಹೇಳಬಹುದು. ಈ ಅಪಾಚೆ ಸರಣಿಯಲ್ಲಿ ನೇಕೆಡ್ ಮತ್ತು ಸೂಪರ್ ಸ್ಪೋರ್ಟ್ ಮಾದರಿಗಳನ್ನು ಒಳಗೊಂಡಿದೆ. ಸರಣಿಯ ಅಡಿಯಲ್ಲಿ ನೇಕೆಡ್ ಸ್ಟ್ರೀಟ್‌ಫೈಟರ್ ಮಾದರಿಗಳು ಆರ್‌ಟಿಆರ್ ಸರಣಿಯ ಮಾದರಿಗಳನ್ನು ಒಳಗೊಂಡಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಿವಿಎಸ್ ಅಪಾಚೆ ಸರಣಿಯ ಬೈಕುಗಳು

ಇದರಲ್ಲಿ ಆರ್‌ಟಿಆರ್ 160, ಆರ್‌ಟಿಆರ್ 160 4ವಿ, ಆರ್‌ಟಿಆರ್ 180 ಮತ್ತು ಆರ್‌ಟಿಆರ್ 200 4ವಿ ಮಾದರಿಗಳನ್ನು ಒಳಗೊಂಡಿದೆ. ಸೂಪರ್‌ಸ್ಪೋರ್ಟ್ ಸರಣಿಯನ್ನು 2017ರಲ್ಲಿ ಆರ್‌ಆರ್310 ಮಾದರಿಗಳನ್ನು ಪ್ರಾರಂಭಿಸಲಾಯಿತು.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಿವಿಎಸ್ ಅಪಾಚೆ ಸರಣಿಯ ಬೈಕುಗಳು

ಟಿವಿಎಸ್ ಅಪಾಚೆ ಆರ್ಆರ್310 ಬೈಕ್ ಸರಣಿಯಲ್ಲಿ ಪ್ರಮುಖ ಮಾದರಿಯಾಗಿದೆ. ಟಿವಿಎಸ್ ಅಪಾಚೆ ಆರ್ಆರ್310 ಬೈಕ್ ಹಲವಾರು ಫೀಚರ್ ಗಳನ್ನು ಮತ್ತು ತಂತ್ರಜ್ಞಾನಗಳನ್ನು ಒಳಗೊಂಡಿದೆ. ಈ ವಿಭಾಗದಲ್ಲಿ ಅತ್ಯಂತ ಯಶಸ್ವಿ ಮಾದರಿಗಳಲ್ಲಿ ಒಂದಾಗಿದೆ,

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಿವಿಎಸ್ ಅಪಾಚೆ ಸರಣಿಯ ಬೈಕುಗಳು

ಟಿವಿಎಸ್ ಮೋಟಾರ್ ಕಂಪನಿಯ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಧಾಕೃಷ್ಣನ್ ಅವರು ಮಾತನಾಡಿ, ಟಿವಿಎಸ್ ಮೋಟಾರ್ ಕಂಪನಿಗೆ ಇದು ಮಹತ್ವದ ದಿನವಾಗಿದೆ, ಏಕೆಂದರೆ ನಮ್ಮ ಪ್ರೀಮಿಯಂ ಬೈಕುಗಳ ಬ್ರ್ಯಾಂಡ್ ಟಿವಿಎಸ್ ಅಪಾಚೆಗಾಗಿ ನಾವು 4 ಮಿಲಿಯನ್ ಮಾರಾಟದ ಮೈಲಿಗಲ್ಲನ್ನು ಸಾಧಿಸಿದ್ದೇವೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಿವಿಎಸ್ ಅಪಾಚೆ ಸರಣಿಯ ಬೈಕುಗಳು

ವರ್ಷಗಳಲ್ಲಿ ಯುವ ರೈಡರ್ ಗಳು ಕಾರ್ಯಕ್ಷಮತೆ-ಆಧಾರಿತ, ಪ್ರೀಮಿಯಂ ಬೈಕುಗಳಲ್ಲಿ ತೀವ್ರ ಆಸಕ್ತಿಯನ್ನು ತೋರಿಸಿದ್ದಾರೆ ಇದರ ಪರಿಣಾಮವಾಗಿ ಟಿವಿಎಸ್ ಅಪಾಚೆ ಬ್ರ್ಯಾಂಡ್ ಜಾಗತಿಕವಾಗಿ ರೈಡರ್ ಗಳ ನಡುವೆ ಜನಪ್ರಿಯತೆಯನ್ನು ಗಳಿಸಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಿವಿಎಸ್ ಅಪಾಚೆ ಸರಣಿಯ ಬೈಕುಗಳು

160ಸಿಸಿ ಯಿಂದ 310ಸಿಸಿವರೆಗಿನ ಬೈಕುಗಳಲ್ಲಿ ಆರ್‌ಟಿ-ಫೈ ಎಂಜಿನ್ ಟೆಕ್, ಜಿಟಿಟಿ (ಗ್ಲೈಡ್) ಸೇರಿದಂತೆ ಅನೇಕ ಇತ್ತಮ-ದರ್ಜೆಯ ತಂತ್ರಜ್ಞಾನಗಳನ್ನು ನೀಡಲು ಕಾರಣವಾಗಿದೆ. ಈ ಬೈಕುಗಳು ರೈಡ್ ಮೋಡ್‌ಗಳು, ಸ್ಮಾರ್ಟ್‌ಕನೆಕ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಅನ್ನು ಒಳಗೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಿವಿಎಸ್ ಅಪಾಚೆ ಸರಣಿಯ ಬೈಕುಗಳು

ಹೊಸ ಮೈಲಿಗಲ್ಲನ್ನು ಆಚರಿಸಲು ಟಿವಿಎಸ್ ಮೋಟಾರ್ ಕಂಪನಿ ಟಿವಿಎಸ್ ಅಪಾಚೆ ಗ್ರಾಹಕರ ಸಹಯೋಗದೊಂದಿಗೆ ‘ಅತಿ ಉದ್ದದ ಚೆಕ್ಡ್ ಫ್ಲ್ಯಾಗ್' ಅನ್ನು ರಚಿಸಿತು. ಈ ಫ್ಲ್ಯಾಗ್' ಅನ್ನು ಮೈಸೂರಿನ ಬ್ರ್ಯಾಂಡ್‌ನ ಕಾರ್ಖಾನೆಯಲ್ಲಿ ತಯಾರಿಸಲಾಗಿದ್ದು, ಅಧಿಕೃತವಾಗಿ ಏಷ್ಯಾ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಪ್ರವೇಶಿಸಿದೆ. ಈ ಫ್ಲ್ಯಾಗ್ ನಲ್ಲಿ 2000ಕ್ಕೂ ಹೆಚ್ಚು ಚಿತ್ರಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ,

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಿವಿಎಸ್ ಅಪಾಚೆ ಸರಣಿಯ ಬೈಕುಗಳು

ಟಿವಿಎಸ್ ಅಪಾಚೆ ಸರಣಿ ಬೈಕುಗಳು 15 ವರ್ಷಗಳಿಂದ ಮಾರಾಟವಾಗುತ್ತಿವೆ. ವರ್ಷಗಳಿಂದ ವರ್ಷಗಳಿಗೆ ಸಾಕಷ್ಟು ಬೆಳವಣಿಗೆಯನ್ನು ಸಾಧಿಸಿದೆ. ವಿಎಸ್ ಅಪಾಚೆ ಆರ್‌ಟಿಆರ್ ಸರಣಿಯ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ ಸರಣಿಯ ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
TVS Apache Global Sales Milestone Achieved. Read In Kannada.
Story first published: Monday, October 12, 2020, 18:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X