ಕರೋನಾ ವೈರಸ್ ಆರ್ಭಟದ ಮಧ್ಯೆಯೂ ಚೇತರಿಕೆ ಕಂಡ ಟಿವಿಎಸ್ ಕಂಪನಿ ವಾಹನಗಳ ಮಾರಾಟ

ಭಾರತದ ಪ್ರಮುಖ ದ್ವಿಚಕ್ರ ವಾಹನ ಕಂಪನಿಯಾದ ಟಿವಿಎಸ್ ಮೋಟಾರ್ ತನ್ನ 2020-21ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಮಾರಾಟವಾದ ದ್ವಿಚಕ್ರ ವಾಹನಗಳ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದೆ.

ಕರೋನಾ ವೈರಸ್ ಆರ್ಭಟದ ಮಧ್ಯೆಯೂ ಚೇತರಿಕೆ ಕಂಡ ಟಿವಿಎಸ್ ಕಂಪನಿ ವಾಹನಗಳ ಮಾರಾಟ

ತಮಿಳುನಾಡು ಮೂಲದ ಟಿವಿಎಸ್ ಮೋಟಾರ್ ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಒಟ್ಟು 8.34 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.ಕಳೆದ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ 8.42 ಲಕ್ಷ ಟಿವಿಎಸ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಪ್ರಮಾಣವು 0.95%ನಷ್ಟು ಕಡಿಮೆಯಾಗಿದೆ.

ಕರೋನಾ ವೈರಸ್ ಆರ್ಭಟದ ಮಧ್ಯೆಯೂ ಚೇತರಿಕೆ ಕಂಡ ಟಿವಿಎಸ್ ಕಂಪನಿ ವಾಹನಗಳ ಮಾರಾಟ

ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳುಗಳು ಸೇರಿವೆ. ಟಿವಿಎಸ್ ಕಂಪನಿಯು 2020ರ ಜುಲೈ ತಿಂಗಳಿನಲ್ಲಿ ಒಟ್ಟು 2.44 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕರೋನಾ ವೈರಸ್ ಆರ್ಭಟದ ಮಧ್ಯೆಯೂ ಚೇತರಿಕೆ ಕಂಡ ಟಿವಿಎಸ್ ಕಂಪನಿ ವಾಹನಗಳ ಮಾರಾಟ

ಆಗಸ್ಟ್ ತಿಂಗಳಿನಲ್ಲಿ 2.77 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದ್ದರೆ, ಸೆಪ್ಟೆಂಬರ್ ತಿಂಗಳಿನಲ್ಲಿ 3.13 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದೆ.

ಕರೋನಾ ವೈರಸ್ ಆರ್ಭಟದ ಮಧ್ಯೆಯೂ ಚೇತರಿಕೆ ಕಂಡ ಟಿವಿಎಸ್ ಕಂಪನಿ ವಾಹನಗಳ ಮಾರಾಟ

2020ರ ಸೆಪ್ಟೆಂಬರ್ 30ರವರೆಗೆ ಮಾರಾಟವಾದ ಒಟ್ಟು 8.34 ಲಕ್ಷ ಟಿವಿಎಸ್ ದ್ವಿಚಕ್ರ ವಾಹನಗಳಲ್ಲಿ 3.66 ಲಕ್ಷ ಬೈಕುಗಳು ಮಾರಾಟವಾಗಿವೆ. ಈ ಪ್ರಮಾಣವು 2019ಕ್ಕೆ ಹೋಲಿಸಿದರೆ 5.25%ನಷ್ಟು ಹೆಚ್ಚಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕರೋನಾ ವೈರಸ್ ಆರ್ಭಟದ ಮಧ್ಯೆಯೂ ಚೇತರಿಕೆ ಕಂಡ ಟಿವಿಎಸ್ ಕಂಪನಿ ವಾಹನಗಳ ಮಾರಾಟ

2019ರಲ್ಲಿ 3.42 ಲಕ್ಷ ಟಿವಿಎಸ್ ಬೈಕುಗಳು ಮಾರಾಟವಾಗಿದ್ದವು. ಈ ಮಧ್ಯೆ ಕಂಪನಿಯ ಸ್ಕೂಟರ್‌ಗಳ ಮಾರಾಟ ಪ್ರಮಾಣದಲ್ಲಿ ಸ್ವಲ್ಪ ಪ್ರಮಾಣದ ಇಳಿಕೆ ಕಂಡು ಬಂದಿದೆ. 2020ರ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಟಿವಿಎಸ್ ಕಂಪನಿಯ 2.70 ಲಕ್ಷ ಸ್ಕೂಟರ್ ಗಳು ಮಾರಾಟವಾಗಿವೆ.

ಕರೋನಾ ವೈರಸ್ ಆರ್ಭಟದ ಮಧ್ಯೆಯೂ ಚೇತರಿಕೆ ಕಂಡ ಟಿವಿಎಸ್ ಕಂಪನಿ ವಾಹನಗಳ ಮಾರಾಟ

ಕಳೆದ ವರ್ಷ ಇದೇ ಅವಧಿಯಲ್ಲಿ 3.33 ಲಕ್ಷ ಸ್ಕೂಟರ್‌ಗಳು ಮಾರಾಟವಾಗಿದ್ದವು. ಕಳೆದ ವರ್ಷದ ಎರಡನೇ ತ್ರೈಮಾಸಿಕದ ಮಾರಾಟಕ್ಕಿಂತ ಈ ವರ್ಷದ ಎರಡನೇ ತ್ರೈಮಾಸಿಕ ಮಾರಾಟ ಪ್ರಮಾಣವು 18.92%ನಷ್ಟು ಕಡಿಮೆಯಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕರೋನಾ ವೈರಸ್ ಆರ್ಭಟದ ಮಧ್ಯೆಯೂ ಚೇತರಿಕೆ ಕಂಡ ಟಿವಿಎಸ್ ಕಂಪನಿ ವಾಹನಗಳ ಮಾರಾಟ

ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ 1.98 ಲಕ್ಷ ಟಿವಿಎಸ್ ಮೊಪೆಡ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಪ್ರಮಾಣವು 2019ರ ಎರಡನೇ ತ್ರೈಮಾಸಿಕಕ್ಕೆ ಹೋಲಿಸಿದರೆ 17.82%ನಷ್ಟು ಹೆಚ್ಚಾಗಿದೆ.

ಕರೋನಾ ವೈರಸ್ ಆರ್ಭಟದ ಮಧ್ಯೆಯೂ ಚೇತರಿಕೆ ಕಂಡ ಟಿವಿಎಸ್ ಕಂಪನಿ ವಾಹನಗಳ ಮಾರಾಟ

ದೇಶಿಯ ಮಾರುಕಟ್ಟೆಯಲ್ಲಿನ ಮಾರಾಟ ಮಾತ್ರವಲ್ಲದೇ ವಿದೇಶಕ್ಕೆ ರಫ್ತು ಮಾಡುವ ದ್ವಿಚಕ್ರ ವಾಹನಗಳ ಪ್ರಮಾಣವು 7.8%ನಷ್ಟು ಹೆಚ್ಚಾಗಿದೆ ಎಂದು ಟಿವಿಎಸ್ ಮೋಟಾರ್ ಕಂಪನಿ ತಿಳಿಸಿದೆ.

Most Read Articles

Kannada
English summary
TVS company vehicle sales increased during second quarter of the financial year. Read in Kannada.
Story first published: Monday, November 2, 2020, 16:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X