ಅನಾವರಣವಾಯ್ತು ಬಹುನಿರೀಕ್ಷಿತ 2021ರ ಯಮಹಾ ಎಂಟಿ-09 ಬೈಕ್

ಯಮಹಾ ಕಂಪನಿಯು ತನ್ನ 2021ರ ಎಂಟಿ-09 ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ 2021ರ ಯಮಹಾ ಎಂಟಿ-09 ಬೈಕ್ ಹೊಸ ವಿನ್ಯಾಸ, ಹೊಸ ಫೀಚರ್ ಗಳು ಮತ್ತು ಹೊಸ ಎಂಜಿನ್ ಆಯ್ಕೆಯಲ್ಲಿ ಅನಾವರಣಗೊಂಡಿದೆ.

ನಾವರಣವಾಯ್ತು ಬಹುನಿರೀಕ್ಷಿತ 2021ರ ಯಮಹಾ ಎಂಟಿ-09 ಬೈಕ್

2021ರ ಯಮಹಾ ಎಂಟಿ-09 ಬೈಕಿನಲ್ಲಿ ಹೊಸ 890ಸಿಸಿ, ಮೂರು-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಹಿಂದಿನ ಮಾದರಿಯಲ್ಲಿದ್ದ 847ಸಿಸಿ ಎಂಜಿನ್ ಅನ್ನು ಬದಲಾಯಿಸಲಾಗಿದೆ. ಈ 847ಸಿಸಿ ಎಂಜಿನ್ 111 ಬಿಹೆಚ್‌ಪಿ ಪವರ್ ಮತ್ತು 88 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತಿತ್ತು. ಇನ್ನು ಈ ಹೊಸ 890ಸಿಸಿ ಎಂಜಿನ್ 10,000 ಆರ್‌ಪಿಎಂನಲ್ಲಿ 115 ಬಿಹೆಚ್‌ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 93 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ನಾವರಣವಾಯ್ತು ಬಹುನಿರೀಕ್ಷಿತ 2021ರ ಯಮಹಾ ಎಂಟಿ-09 ಬೈಕ್

ಯಮಹಾ ಕಂಪನಿಯ ಪ್ರಕಾರ, ಹೊಸ ಎಂಜಿನ್ ಬದಲಾಯಿಸಿದ ಬಳಿಕ ತೂಕ ತುಸು ಕಡಿಮೆಯಾಗಿದೆ. ಹೊಸ ಪಿಸ್ಟನ್‌ಗಳು, ಹೊಸ ಕನೆಕ್ಟಿವಿಟಿ ರಾಡ್ ಗಳು, ಕ್ಯಾಮ್‌ಶಾಫ್ಟ್‌ಗಳು ಮತ್ತು ಕ್ರ್ಯಾಂಕ್‌ಕೇಸ್‌ಗಳನ್ನು ಪಡೆಯುತ್ತದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ನಾವರಣವಾಯ್ತು ಬಹುನಿರೀಕ್ಷಿತ 2021ರ ಯಮಹಾ ಎಂಟಿ-09 ಬೈಕ್

ಇನ್ನು ಹೊಸ ಯಮಹಾ ಬೈಕಿನಲ್ಲಿ ಸಿಲಿಂಡರ್‌ಗಳ ಬೋರ್ 78ಎಂಎಂ ಬದಲಾಗದೆ ಉಳಿದಿದೆ, ಆದರೆ ಸ್ಟ್ರೋಕ್ 62.1 ಎಂಎಂ ಉದ್ದವಾಗಿದೆ. ಇನ್ನು ಎಂಜಿನ್ ನೊಂದಿಗೆ ಅಸಿಸ್ಟ್ ಕ್ಲಚ್‌ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಹೊಸ ಬೈಕ್ ಸ್ಟ್ಯಾಂಡರ್ಡ್ ಅಪ್ / ಡೌನ್ ಕ್ವಿಕ್‌ಶಿಫ್ಟರ್. ಅನ್ನು ಒಳಗೊಂಡಿದೆ. ಈ ಹೊಸ ಬೈಕಿನ ಫ್ರೇಮ್ ಈಗ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟ ಡಿಕಾಸ್ಟ್ ಡೆಲ್ಟಾಬಾಕ್ಸ್ ವಿನ್ಯಾಸವಾಗಿದೆ,

ನಾವರಣವಾಯ್ತು ಬಹುನಿರೀಕ್ಷಿತ 2021ರ ಯಮಹಾ ಎಂಟಿ-09 ಬೈಕ್

ಇನ್ನು ಸಬ್ ಫ್ರೇಮ್ ಮತ್ತು ಹೊಸ ಸ್ವಿಂಗಾರ್ಮ್ ಅನ್ನು ಸಹ ಅಲ್ಯೂಮಿನಿಯಂನಿಂದ ತಯಾರಿಸಲಾಗುತ್ತದೆ, ಇವೆಲ್ಲವೂ 2021ರ ಯಮಹಾ ಎಂಟಿ-09 ಬೈಕಿಗೆ ಕಡಿಮೆ ತೂಕವನ್ನು ನೀಡುತ್ತದೆ. ಈ ಹೊಸ ಯಮಹಾ ಎಂಟಿ-09 ಬೈಕ್ 189 ಕೆಜಿ ತೂಕವನ್ನು ಹೊಂದಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ನಾವರಣವಾಯ್ತು ಬಹುನಿರೀಕ್ಷಿತ 2021ರ ಯಮಹಾ ಎಂಟಿ-09 ಬೈಕ್

ಯಮಹಾ ಎಂಟಿ-09 ಬೈಕಿನ ಕೆವೈಬಿ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಫೋರ್ಕ್‌ಗಳೊಂದಿಗೆ, ಹಿಂಭಾಗದ ಶಾಕ್ ಪ್ರಿ ಲೋಡ್ ಸೆಟಪ್ ಅನ್ನು ಹೊಂದಿದೆ.

ನಾವರಣವಾಯ್ತು ಬಹುನಿರೀಕ್ಷಿತ 2021ರ ಯಮಹಾ ಎಂಟಿ-09 ಬೈಕ್

ಇನ್ನು ಈ ಹೊಸ ಯಮಹಾ ಎಂಟಿ-09 ಬೈಕಿನ ಬ್ರೇಕಿಂಗ್ ಸಿಸ್ಟಂ ಉತ್ತಮವಾಗಿದೆ. ಬ್ರೇಕಿಂಘ್ ಸಿಸ್ಟಂಗಾಗಿ ನಿಸ್ಸಿನ್ ಕ್ಯಾಲಿಪರ್‌ಗಳು ರೇಡಿಯಲ್ ಮಾಸ್ಟರ್ ಸಿಲಿಂಡರ್ ಮತ್ತು ಮುಂಭಾಗದ ಚಕ್ರದಲ್ಲಿ ಡ್ಯುಯಲ್ 298ಎಂಎಂ ಡಿಸ್ಕ್ ಮತ್ತು ಹಿಂಬದಿ ಚಕ್ರದಲ್ಲಿ ಒಂದೇ 245ಎಂಎಂ ಡಿಸ್ಕ್ ಬ್ರೇಕ್ ಗಳನ್ನು ನೀಡಿದೆ, ಇನ್ನು ಎರಡು ಕಡೆಗಳಲ್ಲಿ ಎಬಿಎಸ್ ಅನ್ನು ಕೂಡ ನೀಡಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ನಾವರಣವಾಯ್ತು ಬಹುನಿರೀಕ್ಷಿತ 2021ರ ಯಮಹಾ ಎಂಟಿ-09 ಬೈಕ್

2021ರ ಯಮಹಾ ಎಂಟಿ-09 ಬೈಕ್ ಮತ್ತೊಂದು ಗಮನಾರ್ಹ ಸುಧಾರಣೆಯೆಂದರೆ ಹೊಸ ಎಲೆಕ್ಟ್ರಾನಿಕ್ಸ್ ಪ್ಯಾಕೇಜ್ ಅನ್ನು ಹೊಂದಿದೆ. ಇದರಲ್ಲಿ ಲೀನ್ ಅಸಿಸ್ಟ್ಸ್ ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ, ಸ್ಲೈಡ್ ಕಂಟ್ರೋಲ್, ಕಾರ್ನಿರಿಂಗ್ ಎಬಿಎಸ್ ಮತ್ತು ರೇರ್ ವ್ಹೀಲ್ ಲಿಪ್ಟ್ ಮಿಟಿಗೇಷನ್ ಅನ್ನು ಒಳಗೊಂಡಿದೆ.

ನಾವರಣವಾಯ್ತು ಬಹುನಿರೀಕ್ಷಿತ 2021ರ ಯಮಹಾ ಎಂಟಿ-09 ಬೈಕ್

ಹೊಸ ಯಮಹಾ ಎಂಟಿ-09 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಯಮಹಾ ಎಂಟಿ-09 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದರೆ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ಎಸ್ ನಂತಹ ಬೈಕುಗಳಿಗೆ ಪೈಪೋಟಿ ನೀಡುತ್ತದೆ

Article Published On: Wednesday, October 28, 2020, 18:26 [IST]
English summary
2021 Yamaha MT-09 Unveiled With New Engine. Read In Kannada.
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+