ಹಾರುವ ಬೈಕಿನ ಬುಕ್ಕಿಂಗ್ ಆರಂಭಿಸಿದ ALI ಟೆಕ್ನಾಲಜೀಸ್

ಹಾರುವ ಕಾರುಗಳ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಆದರೆ ಈಗ ಹಾರುವ ಬೈಕ್‌ಗಳ ಬಗ್ಗೆಯೂ ವರದಿಯಾಗಿದೆ. ಜಪಾನಿನ ಕಂಪನಿ ALI ಟೆಕ್ನಾಲಜೀಸ್ ಕಳೆದ ಕೆಲವು ವರ್ಷಗಳಿಂದ ಫ್ಲೈಯಿಂಗ್ ಬೈಕ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇತ್ತೀಚೆಗೆ ಕಂಪನಿಯ ಹಾರುವ ಬೈಕಿನ ವೀಡಿಯೊ ಬಹಿರಂಗವಾಗಿದೆ. ಕಂಪನಿಯ ಈ ಫ್ಲೈಯಿಂಗ್ ಬೈಕ್ ಅಥವಾ ಹೋವರ್‌ಬೋರ್ಡ್ ಅನ್ನು XTURISMO ಲಿಮಿಟೆಡ್ ಎಡಿಷನ್ ಎಂದು ಕರೆಯಲಾಗುತ್ತದೆ.

ಹಾರುವ ಬೈಕಿನ ಬುಕ್ಕಿಂಗ್ ಆರಂಭಿಸಿದ ALI ಟೆಕ್ನಾಲಜೀಸ್

ಕಂಪನಿಯು ಈ ಹಾರುವ ಬೈಕ್ ಅನ್ನು ಫಿಜಿಯಲ್ಲಿ ಪ್ರದರ್ಶಿಸಿತು. ಮಾಹಿತಿಯ ಪ್ರಕಾರ ALI ಟೆಕ್ನಾಲಜೀಸ್ ಅಕ್ಟೋಬರ್ 26 ರಿಂದ XTURISMO ಲಿಮಿಟೆಡ್ ಆವೃತ್ತಿಯ ಬುಕ್ಕಿಂಗ್ ಗಳನ್ನು ಆರಂಭಿಸಿದೆ. ಆದರೆ ಕಂಪನಿಯು ಈ ಬೈಕಿನ ಕೇವಲ 200 ಯೂನಿಟ್‌ಗಳನ್ನು ಮಾತ್ರ ಉತ್ಪಾದಿಸಿ ಮಾರಾಟ ಮಾಡುತ್ತಿರುವುದರಿಂದ ಈ ಹಾರುವ ಬೈಕ್ ಅನ್ನು ಬೆರಳಣಿಕೆಯಷ್ಟು ಜನರು ಮಾತ್ರ ಖರೀದಿಸಬಹುದು.

ಹಾರುವ ಬೈಕಿನ ಬುಕ್ಕಿಂಗ್ ಆರಂಭಿಸಿದ ALI ಟೆಕ್ನಾಲಜೀಸ್

XTURISMO ಲಿಮಿಟೆಡ್ ಆವೃತ್ತಿಯ ಬೆಲೆ ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ 77.7 ಮಿಲಿಯನ್ ಯೆನ್ ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ. 5.10 ಕೋಟಿಗಳಾಗಿದೆ. ಮಂಗಳವಾರ ನಡೆದ ಈ ಬೈಕಿನ ಪ್ರದರ್ಶನದ ಸಂದರ್ಭದಲ್ಲಿ, XTURISMO ಲಿಮಿಟೆಡ್ ಎಡಿಷನ್ ಫ್ಲೈಯಿಂಗ್ ಬೈಕ್, ಫ್ಯೂಜಿ ರೇಸಿಂಗ್ ಟ್ರ್ಯಾಕ್‌ನಲ್ಲಿರುವ ಗ್ರ್ಯಾಂಡ್‌ಸ್ಟ್ಯಾಂಡ್‌ನ ಮುಂಭಾಗದಲ್ಲಿ ಗಾಳಿಯಲ್ಲಿ ಟೇಕ್ ಆಫ್ ಆಗುತ್ತಿರುವುದು ಕಂಡುಬಂದಿದೆ.

ಹಾರುವ ಬೈಕಿನ ಬುಕ್ಕಿಂಗ್ ಆರಂಭಿಸಿದ ALI ಟೆಕ್ನಾಲಜೀಸ್

ಈ ವೇಳೆ ಈ ಹಾರುವ ಬೈಕ್ ನೆಲದಿಂದ ಸ್ವಲ್ಪ ಮೇಲಕ್ಕೆ ಹಾರುವುದನ್ನು ಪ್ರದರ್ಶಿಸಲಾಯಿತು. XTURISMO ಫ್ಲೈಯಿಂಗ್ ಬೈಕ್ ಪೆಟ್ರೋಲ್‌ನಲ್ಲಿ ಕಾರ್ಯನಿರ್ವಹಿಸುವ ಇಂಟರ್ನಲ್ ಕಂಬಸ್ಜನ್ ಎಂಜಿನ್‌ನಿಂದ ಚಾಲಿತವಾಗಿದೆ. ಈ ಬೈಕಿನ ಎಂಜಿನ್ ಎಲ್ಲಾ ನಾಲ್ಕು ರೋಟರ್‌ಗಳಿಗೆ ಶಕ್ತಿ ನೀಡುತ್ತದೆ. ಕಂಪನಿಯು ಈ ಹಾರುವ ಬೈಕಿನ ಎಲೆಕ್ಟ್ರಿಕ್ ಆವೃತ್ತಿಯನ್ನು 2025 ರ ವೇಳೆಗೆ ಬಿಡುಗಡೆಗೊಳಿಸಲಿದೆ.

ಹಾರುವ ಬೈಕಿನ ಬುಕ್ಕಿಂಗ್ ಆರಂಭಿಸಿದ ALI ಟೆಕ್ನಾಲಜೀಸ್

ಈ ಹಾರುವ ಬೈಕ್ ಸುಮಾರು 300 ಕೆ.ಜಿ ತೂಕವನ್ನು ಹೊಂದಿದೆ. ಈ ಹಾರುವ ಬೈಕ್‌ 3.7 ಮೀಟರ್ ಉದ್ದ, 2.4 ಮೀಟರ್ ಅಗಲ ಹಾಗೂ 1.5 ಮೀಟರ್ ಎತ್ತರವನ್ನು ಹೊಂದಿದೆ. ಈ ಬೈಕ್ ಅನ್ನು ಒಬ್ಬರು ಕುಳಿತು ಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಕಂಪನಿಯ ಪ್ರಕಾರ ಈ ಹಾರುವ ಬೈಕ್‌ನ ಪ್ರಯಾಣದ ಅವಧಿ 30 ರಿಂದ 40 ನಿಮಿಷಗಳಾಗಿದೆ. ಕಂಪನಿಯು ಈ ಹಾರುವ ಬೈಕಿನ ಗರಿಷ್ಠ ವೇಗವನ್ನು ಇನ್ನೂ ಬಹಿರಂಗಪಡಿಸಿಲ್ಲ.

ಹಾರುವ ಬೈಕಿನ ಬುಕ್ಕಿಂಗ್ ಆರಂಭಿಸಿದ ALI ಟೆಕ್ನಾಲಜೀಸ್

ಆದರೆ ಈ ಬೈಕ್ ಪ್ರದರ್ಶನದ ಸಮಯದಲ್ಲಿ ಸುಮಾರು 100 ಕಿ.ಮೀ ವೇಗದಲ್ಲಿ ಹಾರಾಟ ನಡೆಸಿತು. ALI ಟೆಕ್ನಾಲಜೀಸ್‌ನ ಅಧ್ಯಕ್ಷ ಹಾಗೂ ಸಿಇಒ ಡೈಸುಕೆ ಕಟಾನೊ ಮಾತನಾಡಿ, ನಾವು 2017 ರಲ್ಲಿ ಹಾರುವ ಬೈಕ್ ಅಭಿವೃದ್ಧಿಪಡಿಸುವುದನ್ನು ಆರಂಭಿಸಿದೆವು. ಭವಿಷ್ಯದಲ್ಲಿ ಈ ಬೈಕಿನ ವಾಯು ಚಲನಶೀಲತೆ ವಿಸ್ತರಿಸುವ ನಿರೀಕ್ಷೆಗಳಿವೆ. ಈ ಬೈಕ್ ಅನ್ನು ಮೊದಲು ಪರ್ವತ ಪ್ರದೇಶಗಳಲ್ಲಿ ಹಾಗೂ ವಿಪತ್ತು ನಿರ್ವಹಣೆಯಲ್ಲಿ ಬಳಸಲಾಗುವುದು ಎಂದು ಕಂಪನಿ ತಿಳಿಸಿದೆ. ಈ ಸೀಮಿತ ಆವೃತ್ತಿಯ ಫ್ಲೈಯಿಂಗ್ ಬೈಕಿನ ವಿತರಣೆಯು ಮುಂದಿನ ವರ್ಷದ ಮೊದಲಾರ್ಧದಿಂದ ಆರಂಭವಾಗಲಿದೆ.

ಹಾರುವ ಬೈಕಿನ ಬುಕ್ಕಿಂಗ್ ಆರಂಭಿಸಿದ ALI ಟೆಕ್ನಾಲಜೀಸ್

ಪ್ರಪಂಚದ ಹಲವೆಡೆ ಹಾರುವ ಕಾರುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಭಾರತದಲ್ಲಿಯೂ ಹಾರುವ ಕಾರುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಚೆನ್ನೈ ಮೂಲದ ವಿನತಾ ಏರೋಮೊಬಿಲಿಟಿ ಕಂಪನಿಯು ಭಾರತದ ಮೊದಲ ಹಾರುವ ಹೈಬ್ರಿಡ್ ಕಾರ್ ಅನ್ನು ಅಭಿವೃದ್ಧಿಪಡಿಸಿದೆ. ವಿನತಾ ಏರೋಮೊಬಿಲಿಟಿ ಕಂಪನಿಯು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.

ಹಾರುವ ಬೈಕಿನ ಬುಕ್ಕಿಂಗ್ ಆರಂಭಿಸಿದ ALI ಟೆಕ್ನಾಲಜೀಸ್

ಕಂಪನಿಯು ಭಾರತದ ಮೊದಲ ಹೈಬ್ರಿಡ್ ಹಾರುವ ಕಾರ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ವರದಿಯಾಗಿದೆ. ಈ ಕಾರು ಭಾರತದ ಮೊದಲ ಹೈಬ್ರಿಡ್ ಫ್ಲೈಯಿಂಗ್ ಕಾರು ಮಾತ್ರವಲ್ಲದೆ ಒಟ್ಟಾರೆಯಾಗಿ ಏಷ್ಯಾದ ಮೊದಲ ಹಾರುವ ಕಾರು ಎಂಬ ಹೆಗ್ಗಳಿಕೆಯನ್ನು ಕೂಡ ಹೊಂದಿದೆ. ವಿನತಾ ಹೈಬ್ರಿಡ್ ಹಾರುವ ಕಾರು ಡಿಜಿಟಲ್ ಉಪಕರಣದ ಪ್ಯಾನೆಲ್ ಗಳನ್ನು ಹೊಂದಿದೆ. ಇವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹೊಂದಿವೆ ಎಂಬುದು ಗಮನಾರ್ಹ.

ಹಾರುವ ಬೈಕಿನ ಬುಕ್ಕಿಂಗ್ ಆರಂಭಿಸಿದ ALI ಟೆಕ್ನಾಲಜೀಸ್

ಇವುಗಳಿಂದ ಈ ಹೈಬ್ರಿಡ್ ಕಾರಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ವಿಭಿನ್ನ ಅನುಭವವನ್ನು ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಹೈಬ್ರಿಡ್ ಕಾರಿನಲ್ಲಿ ಐಷಾರಾಮಿ ಕಾರುಗಳಲ್ಲಿರುವಂತಹ ವಿಶೇಷ ಸೌಲಭ್ಯಗಳು ಇರಲಿವೆ ಎಂದು ವರದಿಯಾಗಿದೆ. ಇದರ ಜೊತೆಗೆ ಈ ಹಾರುವ ಕಾರಿನಲ್ಲಿ ಕೆಲವು ಜಿಪಿಎಸ್ ಟ್ರ್ಯಾಕರ್ ಹಾಗೂ ಫೀಚರ್ ಗಳನ್ನು ತೋರಿಸಲಾಗಿದೆ. ಈ ಕಾರಿನಲ್ಲಿ ಪನೋರಾಮಿಕ್ ವಿಂಡೋಗಳನ್ನು ಸಹ ನೀಡಲಾಗಿದೆ.

ಹಾರುವ ಬೈಕಿನ ಬುಕ್ಕಿಂಗ್ ಆರಂಭಿಸಿದ ALI ಟೆಕ್ನಾಲಜೀಸ್

ಇದರಿಂದ ಪ್ರಯಾಣಿಕರು 300 ಡಿಗ್ರಿ ವೀಕ್ಷಿಸಲು ಸಾಧ್ಯವಾಗಲಿದೆ. 1,100 ಕೆ.ಜಿ ತೂಕವನ್ನು ಹೊಂದಿರುವ ಈ ಹೈಬ್ರಿಡ್ ಹಾರುವ ಕಾರು 1,300 ಕೆ.ಜಿ ತೂಕವನ್ನು ಹೊರುವ ಸಾಮರ್ಥ್ಯವನ್ನು ಹೊಂದಿದೆ. ಈ ಹೈಬ್ರಿಡ್ ಹಾರುವ ಕಾರು ಲಂಬವಾಗಿ ತೆಗೆಯುವ ಹಾಗೂ ಇಳಿಯುವ ಸೌಲಭ್ಯವನ್ನು ಹೊಂದಿದೆ. ಈ ಉದ್ದೇಶಕ್ಕಾಗಿ ಸಹ ಅಕ್ಷೀಯ ಕ್ವಾಡ್ ರೋಟರ್ ಅನ್ನು ಬಳಸಲಾಗುತ್ತದೆ.

ಹಾರುವ ಬೈಕಿನ ಬುಕ್ಕಿಂಗ್ ಆರಂಭಿಸಿದ ALI ಟೆಕ್ನಾಲಜೀಸ್

ವಿನತಾ ಏರೋಮೊಬಿಲಿಟಿ ಹಾರುವ ಹೈಬ್ರಿಡ್ ಕಾರು ವೇಗವು ಪ್ರತಿ ಗಂಟೆಗೆ 100 ಕಿ.ಮೀ ಆರಂಭಗೊಂಡು 120 ಕಿ.ಮೀ ವೇಗದಲ್ಲಿ ಹಾರಬಲ್ಲ ಸಾಮರ್ಥ್ಯವನ್ನು ನೀಡಿದೆ. ಈ ಹೈಬ್ರಿಡ್ ಹಾರುವ ಕಾರು ಗರಿಷ್ಠ 3,000 ಅಡಿಗಳಷ್ಟು ಎತ್ತರಕ್ಕೆ ಹಾರುವ ಸಾಮರ್ಥ್ಯವನ್ನು ಹೊಂದಿದೆ. ಜೈವಿಕ ಇಂಧನದ ಮೂಲಕ ಹಾರಾಟ ನಡೆಸುವಂತೆ ಈ ಹಾರುವ ಕಾರ್ ಅನ್ನು ವಿನ್ಯಾಸಗೊಳಿಸಿದೆ. ಸಣ್ಣ ಹನಿ ಕೂಡ ಈ ಹಾರುವ ಕಾರಿನಲ್ಲಿ ಯಾವುದೇ ತಪ್ಪುಗಳನ್ನು ಉಂಟು ಮಾಡುವುದಿಲ್ಲ ಎಂದು ಕಂಪನಿ ದೃಢಪಡಿಸಿದೆ.

ಹಾರುವ ಬೈಕಿನ ಬುಕ್ಕಿಂಗ್ ಆರಂಭಿಸಿದ ALI ಟೆಕ್ನಾಲಜೀಸ್

ಈ ಉದ್ದೇಶಕ್ಕಾಗಿ ಈ ಹಾರುವ ಹೈಬ್ರಿಡ್ ಕಾರಿನಲ್ಲಿ ವಿವಿಧ ಎಲೆಕ್ಟ್ರಿಕ್ ಮೋಟಾರ್‌ ಹಾಗೂ ಪ್ರೊಪಲ್ಶನ್ ಇಂಜಿನ್‌ಗಳನ್ನು ಬಳಸಲಾಗಿದೆ. ಇದರಿಂದ ಯಾವುದಾದರೂ ಒಂದು ವಿಫಲವಾದರೆ ಮತ್ತೊಂದು ಪ್ರಯಾಣಿಕರನ್ನು ಸುರಕ್ಷಿತವಾಗಿ ಗಮ್ಯ ಸ್ಥಾನಕ್ಕೆ ಕರೆದೊಯ್ಯಲಿದೆ. ಎಲೆಕ್ಟ್ರಿಕ್ ಸರಬರಾಜಿನಲ್ಲಿ ಅಸಮರ್ಪಕ ಕ್ರಿಯೆ ಉಂಟಾದ ಸಂದರ್ಭದಲ್ಲಿ, ಜನರೇಟರ್‌ಗಳು ಎಲೆಕ್ಟ್ರಿಕ್ ಮೋಟರ್‌ಗಳಿಗೆ ಪವರ್ ಸಪ್ಲೈ ಮಾಡುತ್ತವೆ. ಈ ಜನರೇಟರ್ ಜೈವಿಕ ಇಂಧನದಿಂದ ಚಾಲಿತವಾಗುತ್ತದೆ ಎಂಬುದು ಗಮನಾರ್ಹ.

Most Read Articles

Kannada
English summary
Ali technologies unveils xturismo flying bike details
Story first published: Wednesday, October 27, 2021, 19:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X